Gruhalakshmi yojane: ಗೃಹಲಕ್ಷ್ಮಿ ಅರ್ಜಿ ಫಾರ್ಮ್ ಬಿಡುಗಡೆ ಅರ್ಜಿ ಜೊತೆಗೆ ಈ ದಾಖಲೆಗಳನ್ನು ಸಲ್ಲಿಸಲೆ ಬೇಕು !!
These documents should be submitted along with Gruhahakshmi application.
ಮೇ 10ರಂದು ನಡೆದಂತಹ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾದಂತಹ ಸಿದ್ದರಾಮಯ್ಯರವರು(CM Siddaramaiah ) ಐದು ಗ್ಯಾರಂಟಿ ಭರವಸೆ ಗಳೊಂದಿಗೆ ಅತಿಹೆಚ್ಚಿನ ವೋಟುಗಳನ್ನು ಪಡೆದುಕೊಂಡು ಮುಖ್ಯಮಂತ್ರಿಯಾಗಿದ್ದಾರೆ. ಹಾಗೂ ಇವರು ನೀಡಿರುವಂತಹ ಭರವಸೆ ಗಳಲ್ಲಿ ಮುಖ್ಯವಾದುದು ಎಂದರೆ ಗೃಹಲಕ್ಷ್ಮಿಗೆ ಯೋಜನೆ (Gruhalakshmi yojane), ಮನೆಯ ಹಿರಿಯ ಒಡತಿಗೆ ಪ್ರತಿ ತಿಂಗಳು 2000 ಅಕೌಂಟಿಗೆ ಬೀಳುತ್ತದೆ ಎಂದು.
ನೀವು ಈ ಎರಡು ಸಾವಿರ ರೂಪಾಯಿ ಹಣವನ್ನು ಪಡೆಯುವುದಕ್ಕೆ ಫಾರ್ಮನ್ನು ಬಿಡುಗಡೆ ಮಾಡಿದ್ದಾರೆ. ಆಫ್ಲೈನ್ ನಿಂದ ಮಾಡುವುದಾದರೆ ನೀವು ಅಂಗನವಾಡಿ ಅಥವಾ ಪಂಚಾಯಿತಿ ಕೇಂದ್ರಗಳಿಗೆ ಹೋಗಿ ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಯೋಜನೆ ಎಂಬ ಫಾರ್ಮ್ ಅನ್ನು ತೆಗೆದುಕೊಂಡು ಅದರಲ್ಲಿ ಮಹಿಳೆಯರ ವಿಷಯ ಹಾಗೂ ಪತಿಯ ವಿವರಗಳನ್ನು ತುಂಬಬೇಕು.
ಅಷ್ಟೇ ಅಲ್ಲದೆ ಇದಕ್ಕೆ ಕಡ್ಡಾಯವಾಗಿ ಬ್ಯಾಂಕ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು(Bank and aadhar card link). ಇದರ ಜೊತೆಗೆ ನೀವು ಯಾವ ಕೆಟಗರಿ ಅಂದರೆ ಯಾವ ಜಾತಿ ವರ್ಗ ಮತ್ತು ಕ್ಯಾಸ್ಟ್ ಸರ್ಟಿಫಿಕೇಟ್(Cast certificate ) ಇನ್ಕಮ್ ಸರ್ಟಿಫಿಕೇಟ್(Income certificate) ಮತ್ತು ರೇಷನ್ ಕಾರ್ಡ್(Ration card) ಹೀಗೆ ಹಲವಾರು ರೀತಿಯ ದಾಖಲೆಗಳನ್ನು ನೀವು ನೀಡಬೇಕು.
ಸಾಲ ಪಡೆಯಲು ಕೊಟ್ಟಿರುವ ಕಾಲಿ ಚೆಕ್ ಮೇಲೆ ಎಷ್ಟು ಹಣ ಬರೆಯಬಹುದು, ಎಷ್ಟು ಎಂದು ತಿಳಿದುಕೊಳ್ಳಿ!!
ಒಂದು ವೇಳೆ ನೀವು ಆಫ್ಲೈನ್ ಬೇಡ ಆನ್ಲೈನ್ ಬೇಕು ಎಂದುಕೊಂಡರೆ ಜೂನ್ 15ರಿಂದ ಸೇವಾ ಸಿಂಧು ಎಂಬ ವೆಬ್ಸೈಟ್ನಲ್ಲಿ(Seva Sindhu website )ನೀವು ಅರ್ಜಿಯನ್ನು ಸಲ್ಲಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಇದು ಮನೆಯಲ್ಲಿರುವ ಒಂದು ಮಹಿಳೆಗೆ ಮಾತ್ರ ಅನ್ವಯಿಸುತ್ತದೆ.
ಈ ರೀತಿಯಾಗಿ ನೀವು ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿಕೊಳ್ಳಬಹುದು. ಒಂದು ವೇಳೆ ನೀವು ಆಫ್ಲೈನ್ ಬೇಕು ಎಂದುಕೊಂಡರೆ ಕಾಯಬೇಕಾಗುತ್ತದೆ. ಅಷ್ಟೇ ಇಲ್ಲದೆ ಇದಕ್ಕೆ ಕಡ್ಡಾಯವಾಗಿ ವೋಟರ್ ಐಡಿ(Voter ID )ಮತ್ತು ಬ್ಯಾಂಕ್ ಅಕೌಂಟ್(Bank account) ಫೋನ್ ನಂಬರ್ ಇರಲೇಬೇಕು.
ಈ ಕಂಡೀಷನ್ಗೆ ಹು ಎಂದರೆ ಸಾಕು 200 ಯೂನಿಟ್ ವಿದ್ಯುತ್ ಉಚಿತವಾಗಿ ದೊರೆಯುತ್ತದೆ!!
ಇನ್ನು ಉಳಿದಂತಹ ಗ್ಯಾರೆಂಟಿ ಭರವಸೆ ಗಳು ಯಾವಾಗ ಅಪ್ಲೈ ಮಾಡುತ್ತಾರೆ ಎಂಬುದನ್ನು ಕಾದುನೋಡೇಕಿದೆ. ಅಷ್ಟು ಹೊತ್ತಿಗೆ ನಿಮ್ಮ ಮನೆಯಲ್ಲಿ ಇರುವಂತಹ ಗೃಹಿಣೀಯರ ಕೈಯಲ್ಲಿ ಈ ಯೋಜನೆಯನ್ನು ಅಪ್ಲೈ ಮಾಡಿಸಿ ಹಾಗೂ ತಿಂಗಳಿಗೆ 2000ಗಳನ್ನು ಪಡೆದುಕೊಳ್ಳಿ. ಇಂದೇ ತಡ ಮಾಡದೆ ನೀವು ಸಹ ಗೃಹಿಣಿ ಯಾಗಿದ್ದರೆ ಮಕ್ಕಳ ಹಾಗೂ ಮಹಿಳಾ ಕಲ್ಯಾಣ(Child and women welfare) ಯೋಜನೆಯ ಒಂದು ಫಾರ್ಮ್ ಅನ್ನು ಫಿಲ್ ಮಾಡಿ ಅರ್ಜಿಯನ್ನು ಸಲ್ಲಿಸಿ.