Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Hassan District: ಹಾಸನ ಜಿಲ್ಲೆಯ ಸರ್ಕಾರೀ ಆಸ್ಪತ್ರೆಗಳಲ್ಲಿ ಕಂಡುಬಂದ ಔಷಧಿ ಅವ್ಯವಹಾರ, ಆಸ್ಪತ್ರೆಯ ವೈದ್ಯರ ವಿರುದ್ಧ ಧ್ವನಿ, ಸ್ಥಳೀಯರಿಂದ ಸರ್ಕಾರಕ್ಕೆ ಪತ್ರ.

ಹಾಸನ ಜಿಲ್ಲೆಯಲ್ಲಿ ಕೆಲವು ಆಸ್ಪತ್ರೆಗಳು ಫಾರ್ಮಸಿಸ್ಟ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ರೋಗಿಗಳಿಗೆ ಔಷಧಿ ಬರೆದು ಕೊಡುವುದು

Hassan District: ಇವರಿಗೆ – ಎ.ಐ.ಸಿ.ಸಿ.ಮಾನವಹಕ್ಕು ಹಾಸನ ಜಿಲ್ಲೆ
ಹಾಸನ ಜಿಲ್ಲಾ ಕಾಂಗ್ರೆಸ್ ಸಮಿತಿ
ಶ್ರೀ ವರುಣ್ ಚಕ್ರವರ್ತಿ ಮಾಜಿ ಜಿಲ್ಲಾ ಅಧ್ಯಕ್ಷರು ಹಾಸನ Ref.ಸಂಖ್ಯೆ 528,
ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಹಾಸನ ಜಿಲ್ಲೆ (DHO)
Ph : 9743929407

ವಿಷಯ: ಸರ್ಕಾರಿ ಆಸ್ಪತ್ರೆಗಳು ಹೊರಗೆ ಔಷಧಿ ಖರೀದಿಸಲು ಸರಕಾರಿ ವೈದ್ಯರು ಚೀಟಿ ಬರೆದು ಕಳುಹಿಸುತ್ತಿದ್ದಾರೆ, ಇದರ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಕ್ರಮ ಕೈಗೊಳ್ಳುವ ಬಗ್ಗೆ

ಮಾನ್ಯರೇ,
ಎಲ್ಲಾ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸರಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ಎಲ್ಲಾ ಔಷಧಿಗಳನ್ನು ಆರೋಗ್ಯ ಇಲಾಖೆಯ ಔಷಧಾಲಯದಿಂದ ಜಿಲ್ಲೆಗೆ ಸರಬರಾಜು ಮಾಡಲಾಗುತ್ತಿದೆ. ಹೇಗಿದ್ದರೂ ಹೊರಗಡೆ ಔಷಧಿ ಖರೀದಿಸಲು ಸರ್ಕಾರಿ ವೈದ್ಯದ ಚೀಟಿ ಬರೆದು ಕಳುಹಿಸುತ್ತಿದ್ದಾರೆ. ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಸಾರ್ವಜನಿಕರು ಆ ಎಲ್ಲಾ ತಾಲ್ಲೂಕಿನಲ್ಲಿ ನಮಗೆ ತಿಳಿಸಿರುವುದರಿಂದ ತಾವುಗಳು ಕ್ರಮ ಜರುಗಿಸಬೇಕು ಹಾಗೂ ಹೊರಗಡೆ ಔಷಧಿಯನ್ನು ಖರೀದಿಸಲು ಸರ್ಕಾರಿ ವೈದ್ಯರು ಬರೆದು ಕೊಡುವುದನ್ನು ಸರ್ಕಾರ ನಿಷೇಧಿಸಿದೆ.

ಹಾಸನ ಜಿಲ್ಲೆಯಲ್ಲಿ ಕೆಲವು ಆಸ್ಪತ್ರೆಗಳು ಫಾರ್ಮಸಿಸ್ಟ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ರೋಗಿಗಳಿಗೆ ಔಷಧಿ ಬರೆದು ಕೊಡುವುದು ಹಾಗೂ ಹೊರಗಿನಿಂದ ಖರೀದಿಸಲು ಒತ್ತಾಯಿಸುತ್ತಿರುವುದು ತಿಳಿದು ಬಂದಿರುವುದರಿಂದ ತಾವುಗಳು ದಯಮಾಡಿ ಪ್ರತಿಯೊಂದು ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ವಿಚಾರಿಸಬೇಕು. ರೋಗಿಗಳು ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲೂ ಕೂಡ ತೊಂದರೆ ಆಗಬಾರದು. ಮತ್ತು ವೈದ್ಯಾಧಿಕಾರಿಗಳು ಸಹ ಹೊರಗಿನ ಮೆಡಿಕಲ್ ಗಳಲ್ಲಿ ಔಷಧಿಗಳನ್ನು ಬರೆಯಬಾರದು. ಇದರ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ.

ವಂದನೆಗಳೊಂದಿಗೆ
ಇಂತಿ ನಿಮ್ಮ ವರುಣ್ ಚಕ್ರವರ್ತಿ..

Misconduct found in government hospitals in Hassan district, voice against hospital doctors, letter from locals to government
Misconduct found in government hospitals in Hassan district, voice against hospital doctors, letter from locals to government
Leave a comment