Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

India Rains : ಭಾರತದಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಮಳೆ ಮತ್ತು ಹಿಮಪಾತದ ಸಾಧ್ಯತೆ

ಭಾರತದ ಹಲವೆಡೆ ಮುಂದಿನ ನಾಲ್ಕು ದಿನಗಳಲ್ಲಿ ಮಳೆ ಮತ್ತು ಹಿಮಪಾತದ ಸಾಧ್ಯತೆ ಇದೆ. ಇಲ್ಲಿ ಒಣ ಹವೆಯ ಪರಿಸ್ಥಿತಿ ಇದೆ, ಫೆಬ್ರವರಿ 21 ರಿಂದ ಮಳೆ ಪ್ರಾರಂಭವಾಗುವ ನಿರೀಕ್ಷೆಯಿದೆ.

India Rains : ಭಾರತದ ಹಲವೆಡೆ ಮುಂದಿನ ನಾಲ್ಕು ದಿನಗಳಲ್ಲಿ ಮಳೆ ಮತ್ತು ಹಿಮಪಾತದ ಸಾಧ್ಯತೆ ಇದೆ. ಇಲ್ಲಿ ಒಣ ಹವೆಯ ಪರಿಸ್ಥಿತಿ ಇದೆ, ಫೆಬ್ರವರಿ 21 ರಿಂದ ಮಳೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಭಾರತದ ಹಲವು ರಾಜ್ಯಗಳಲ್ಲಿ ಗುಡುಗು ಸಹಿತ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

India Rains

ಭಾರತದ ಯಾವ ಯಾವ ರಾಜ್ಯಗಳಲ್ಲಿ ಮೇಲೆ ಬೀಳುವ ಸಾಧ್ಯತೆ ಇದೆ.?

ಜಮ್ಮು ಮತ್ತು ಕಾಶ್ಮೀರ ,ಲಡಾಕ್ , ಹಿಮಾಚಲ ಪ್ರದೇಶದಲ್ಲಿ ಇಂದು ಮತ್ತು ನಾಳೆ ಹಿಮಪಾತ ಮತ್ತು ಮಳೆ ಬೀಳುವ ಸಾಧ್ಯತೆ ಇದೆ. ಜಮ್ಮು ಮತ್ತು ಹಿಮಾಚಲ ಪ್ರದೇಶದಲ್ಲು ಆಲಿಕಲ್ಲು ಮಳೆ ಬೀಳುವ ಸಾಧ್ಯತೆ ಇದೆ. ಮಧ್ಯಪ್ರದೇಶ ದೆಹಲಿ ಅಲ್ಲಿ ಸಹ ಗುಡುಗು ಸಹಿತ ಮಳೆ ಬೀಳುವ ಸಾಧ್ಯತೆ ಇದೆ.

ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಗಳು:

ಹವಾಮಾನ ವೈಪರಿತ್ಯಗಳು ಯಾವುದೇ ಸಮಯದಲ್ಲಿ ಸಂಭವಿಸಬಹುದು ಮತ್ತು ಜೀವಹಾನಿ ಮತ್ತು ಆಸ್ತಿಪಾಸ್ತಿಗೆ ಹಾನಿಯನ್ನುಂಟುಮಾಡಬಹುದು. ಈ ಘಟನೆಗಳಿಗೆ ಸಿದ್ಧರಾಗಿರುವುದು ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುವುದು ಮುಖ್ಯ. ಹಾಗೆಯೇ ಹವಾಮಾನ ಇಲಾಖೆ ಕೆಲವು ಸಲಹೆಗಳನ್ನು ನೀಡಿದೆ.

*ಈ ಪ್ರದೇಶಗಳಲ್ಲಿ ಪ್ರಯಾಣಿಸುವವರು ಹವಾಮಾನ ಮುನ್ಸೂಚನೆಯನ್ನು ಗಮನಿಸಬೇಕು.
*ಚಳಿಗಾಲದ ಬಟ್ಟೆ ಮತ್ತು ಅಗತ್ಯ ವಸ್ತುಗಳನ್ನು ಜೊತೆಯಲ್ಲಿಟ್ಟುಕೊಳ್ಳಬೇಕು.
*ಕೆಟ್ಟ ಹವಾಮಾನದ ಸಂದರ್ಭದಲ್ಲಿ ಸುರಕ್ಷಿತ ಸ್ಥಳದಲ್ಲಿ ವಾಸ್ತವ್ಯ ಮಾಡಬೇಕು.
*ಶಾಂತವಾಗಿರಿ ಮತ್ತು ಭಯಭೀತರಾಗಬೇಡಿ.
*ಸುರಕ್ಷಿತ ಸ್ಥಳಕ್ಕೆ ತೆರಳಿ.
*ತುರ್ತು ಸೇವೆಗಳನ್ನು ಸಂಪರ್ಕಿಸಿ.

ಕರ್ನಾಟಕದಲ್ಲಿ ಮುಂದಿನ ಮೂರು ದಿನಗಳ ಹವಾಮಾನ ವರದಿ ಹೀಗಿದೆ.
ಹವಾಮಾನ ಇಲಾಖೆಯ ಪ್ರಕಾರ

* ಫೆಬ್ರುವರಿ 21 ಬುಧವಾರವು ಸಹ ವಣ ಹವೆ ಮುಂದುವರಿಯಲಿದ್ದು , ಗರಿಷ್ಠ ತಾಪಮಾನ 33°C
ಹಾಗೂ ಕನಿಷ್ಠ ತಾಪಮಾನ: 19°C ದಾಖಲಾಗುವ ಸಾಧ್ಯತೆ ಇದೆ. ಮಳೆಯ ಬರುವ ಸಾಧ್ಯತೆ ಇಲ್ಲ.
*ಫೆಬ್ರುವರಿ 22 ಗುರುವಾರ ವಣ ಹವೆ ಇರಲಿದ್ದು , ಗರಿಷ್ಠ ತಾಪಮಾನ 33°C
ಹಾಗೂ ಕನಿಷ್ಠ ತಾಪಮಾನ: 18°C ದಾಖಲಾಗುವ ಸಾಧ್ಯತೆ ಇದೆ. ಮಳೆಯ ಬರುವ ಸಾಧ್ಯತೆ ಇಲ್ಲ.
*ಫೆಬ್ರುವರಿ 23 ಶುಕ್ರವಾರ ವಣ ಹವೆ ಇರಲಿದ್ದು , ಗರಿಷ್ಠ ತಾಪಮಾನ 34°C
ಹಾಗೂ ಕನಿಷ್ಠ ತಾಪಮಾನ: 18°C ದಾಖಲಾಗುವ ಸಾಧ್ಯತೆ ಇದೆ. ಮಳೆಯ ಬರುವ ಸಾಧ್ಯತೆ ಇಲ್ಲ.

ಭಾರತೀಯ ಹವಾಮಾನ ಇಲಾಖೆಯು ಭಾರತದ ರಾಷ್ಟ್ರೀಯ ಹವಾಮಾನ ಸೇವೆಯಾಗಿದೆ. ಇದು ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. IMD ಹವಾಮಾನ ಮುನ್ಸೂಚನೆಗಳು, ಎಚ್ಚರಿಕೆಗಳು ಮತ್ತು ಇತರ ಹವಾಮಾನ ಸಂಬಂಧಿತ ಮಾಹಿತಿಯನ್ನು ಒದಗಿಸುತ್ತದೆ. ಇದು ನೀಡುವ ಮಾಹಿತಿ ಒಂದು ಅಂದಾಜಿನ ಪ್ರಕಾರ ಹಾಗೂ ಕೆಲವು ಮಾಪನದ ಮೂಲಕ ಹೇಳಲಾಗುತ್ತದೆ. ಆದರೆ ಏಷ್ಟೋ ಸಲ ಹವಾಮಾನ ಇಲಾಖೆಯ ಸೂಚನೆಗಳು ಸರಿಯಾಗಿ ಇರುತ್ತದೆ. ಹಾಗಂತ ಭಯ ಪಡುವ ಅಗತ್ಯ ಇಲ್ಲ. ಹವಾಮಾನ ಇಲಾಖೆ ಸೂಚಿಸಿದ ಎಚ್ಚರಿಕೆ ಕ್ರಮಗಳನ್ನು ಪಾಲಿಸಿ.

ಹೆಚ್ಚಿನ ಮಾಹಿತಿಗಾಗಿ:

ಭಾರತೀಯ ಹವಾಮಾನ ಇಲಾಖೆಯ ವೆಬ್‌ಸೈಟ್ ಸಂಪರ್ಕಿಸಿ https://maus.imd.gov.in/ ಇಲ್ಲವೇಭಾರತೀಯ ಹವಾಮಾನ ಇಲಾಖೆಯ (IMD) ಫೋನ್ ಸಂಖ್ಯೆ ಗೆ ಕರೆ ಮಾಡಿ. 1800220161.

Also Read: Weather Report Today : ಫೆಬ್ರವರಿ 21ರ ಹವಾಮಾನ ವರದಿ! ಎಲ್ಲಿ ಮಳೆ? ಎಲ್ಲಿ ಬಿಸಿಲು? ಫುಲ್ ಡೀಟೇಲ್ಸ್!

Leave a comment