Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಹಾಲಿನ ದರದಲ್ಲಿ 5 ರೂಪಾಯಿ ಏರಿಕೆ! ರೈತರಿಗೆ ಸಚಿವ ರಾಜಣ್ಣ ಕಡೆಯಿಂದ ಸಿಹಿ ಸುದ್ದಿ!

5 rupees increase in the price of milk! Good news for farmers from Minister Rajanna!

ರೈತರ ಹಿತವನ್ನು ಕಾಪಾಡಲು ಹಾಲಿನ ದರವನ್ನು ಲೀಟರ್ ಗೆ ಐದು ರೂಪಾಯಿಯಂತೆ ಹೆಚ್ಚಳ ಮಾಡಲು ಚಿಂತನೆ ನಡೆಸುತ್ತಿದ್ದೇವೆ ಎಂದು ಸಹಕಾರ ಸಂಘದ ಸಚಿವರಾದ ರಾಜಣ್ಣನವರು ಹೇಳಿಕೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಹಾಲಿನ ದರ ಹೆಚ್ಚಿನ ಕುರಿತಾಗಿ ಶುಕ್ರವಾರ ದಿನದಂದು ಮಾಧ್ಯಮದ ಜೊತೆ ಮಾತನಾಡಿರುವ ಅವರು ಹಾಲಿನ ಬೆಲೆ ಜಾಸ್ತಿ ಮಾಡಬೇಕು ಎನ್ನುವುದು ಅದು ಸರ್ಕಾರದ ನಿರ್ಧಾರವಲ್ಲ, ಅದು ನನ್ನ ಅಭಿಪ್ರಾಯ ರೈತರಿಗೆ ತಗಲುವ ವೆಚ್ಚ ಜಾಸ್ತಿ ಇರುವುದರಿಂದ ಪ್ರತಿ ಲೀಟರ್ಗೆ ಐದು ರೂಪಾಯಿ ಹೆಚ್ಚಳ ಮಾಡುವುದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ನನ್ನ ಅಭಿಪ್ರಾಯ ಎಂದು ತಿಳಿಸಿದ್ದಾರೆ.

ರೈತರ ಬಗ್ಗೆ ಯಾರು ಮಾತನಾಡುತ್ತಿಲ್ಲ ಕೇವಲ ಗ್ರಾಹಕರ ಕುರಿತಾಗಿ ಮಾತನಾಡುತ್ತಾರೆ ರೈತರಹಿತ ಕಾಪಾಡುವುದು ಮುಖ್ಯ ಈಗಾಗಲೇ ಜಾನುವಾರುಗಳ ಆಹಾರದ ಪದಾರ್ಥದ ಬೆಲೆ ಹೆಚ್ಚಾಗಿದೆ. ಹಲವಾರು ರೋಗದಿಂದ ಜಾನುವಾರುಗಳು ಕೂಡ ಮೃತಪಟ್ಟು ರೈತರು ಕೂಡ ಸಂಕಷ್ಟಕ್ಕೀಡಾಗಿ ನೋವನ್ನು ಅನುಭವಿಸಿದ್ದಾರೆ ಎಂದು ರಾಜಣ್ಣನವರು ಹೇಳಿದರು. ಅಕ್ಕಿ ವಿಚಾರವಾಗಿ ಕುರಿತು ಮಾತನಾಡಿದ ಅವರು ಈ ವಿಷಯ ಕುರಿತಾಗಿ ನಾವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಒಂದು ದಿನ ಅಕ್ಕಿ ಕೊಡುತ್ತೇವೆ ಎಂದು ಪತ್ರವನ್ನು ಕೊಟ್ಟು ಮತ್ತೊಂದು ದಿನ ಕೊಡಲ್ಲ ಎಂದರೆ ಏನು ಅರ್ಥ.

ಖಂಡಿತವಾಗಿಯೂ ರಾಜಕೀಯ ಇದೆ ಇದನ್ನು ನಾನು ಖಂಡಿಸುತ್ತೇನೆ. ಹಾಗಾಗಿ ನಾವು ಛತ್ತೀಸ್ಗಢ ಮತ್ತು ಪಂಜಾಬ್ ನಿಂದ ಅಕ್ಕಿಯನ್ನು ಖರೀದಿ ಮಾಡಿ ಜನರಿಗೆ ಕೊಟ್ಟೆ ಕೊಡುತ್ತೇವೆ. 2 ಕೆಜಿ ಜೋಳ ಎಲ್ಲಾ ಸೇರಿಸಿ ಅನ್ನಭಾಗ್ಯದಡಿ 20 ಕೆ.ಜಿ ಆಹಾರ ಧಾನ್ಯ ಕೊಟ್ಟೆ ಕೊಡುತ್ತೇವೆ ಎಂದು ಹೇಳಿದರು. ಕೆಎಂಎಫ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನೆಲೆ ಭೀಮನಾಯಕ್ ಮತ್ತು ಸಹಕಾರ ಸಚಿವ ರಾಜಣ್ಣ ಅವರು ನಂದಿನಿ ಹಾಲಿನ ಬೆಲೆ ಹೆಚ್ಚಳದ ಸುಳಿವನ್ನು ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಎಂಎಫ್ ಅಧ್ಯಕ್ಷರಾದ ಭೀಮನಾಯಕ್ ಅವರು ರಾಜ್ಯ ಸರ್ಕಾರ ಹಾಲು ಉತ್ಪಾದಕರಾದ ರೈತರಿಗೆ ಪ್ರೋತ್ಸಾಹ ಧನವಾಗಿ ಪ್ರತಿ ಲೀಟರ್ಗೆ 5ರು ನೀಡುತ್ತಿದೆ.

ಇದರ ಜೊತೆಗೆ ರೂ. 2 ಹೆಚ್ಚಳ ಮಾಡುವ ತೀರ್ಮಾನ ಕೂಡ ಮಾಡಿದೆ. ಪ್ರಸ್ತುತವಾಗಿ ಎಲ್ಲಾ ಹಾಲುಗಳ ಒಕ್ಕೂಟ ಲೀಟರ್ಗೆ 5ರಂತೆ ಹೆಚ್ಚಳಕ್ಕೆ ಮಾಡುವ ಮನವಿಯನ್ನು ಸಲ್ಲಿಸಿರುವ ಕಾರಣದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚಿಸಿ ಶೀಘ್ರದಲ್ಲೇ ಈ ಕ್ರಮವನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ. ಕೆಎಂಎಫ್ ಹಿರಿಯರ ಸಹಕಾರದಿಂದ ಈ ಮಟ್ಟಕ್ಕೆ ಬೆಳೆದು ನಿಂತಿದೆ. ನಂದಿನಿ ರಾಷ್ಟ್ರಮಟ್ಟದ ಬೇಡಿಕೆಯಾಗಿದ್ದು ಇದರಲ್ಲಿ ಸಂಸ್ಥೆಗೆ ಬೆಂಬಲ ನೀಡುವ ಕಾರ್ಯ ನಮ್ಮದಾಗಿದೆ. ಸರ್ಕಾರದ ಮಾರ್ಗದರ್ಶನದ ಜೊತೆಗೆ ರೈತರು ಹಾಗೂ ಗ್ರಾಹಕರ ಸಹಕಾರ ಪಡೆದು ಕೆಎಂಎಫ್ ಅಭಿವೃದ್ಧಿಗೆ ಮುಂದಿನ ಹೆಜ್ಜೆಯಾಗುತ್ತೇವೆ. ಕೆಲವು ತಿಂಗಳುಗಳಿಂದ ರಾಸುಗಳಿಗೆ ಚರ್ಮ ಗಂಟು ರೋಗ ಬಂದಿದ್ದರಿಂದ ಹಾಲು ಉತ್ಪಾದನೆ ಕಡಿಮೆಯಾಗಿತ್ತು.

ಹೀಗಾಗಿ ತುಪ್ಪದ ಕೊರತೆಗೆ ಹೆಚ್ಚಾಗಿತ್ತು. ಈಗ ಮಳೆಗಾಲ ಶುರ್ವಾಗಿದ್ದು ಹಸಿರು ನೀವು ಬಹಳ ಹೆಚ್ಚಾಗಿ ಸಿಗುವುದರಿಂದ ಹಾಲಿನ ಉತ್ಪಾದನೆ ಜಾಸ್ತಿ ಆಗಲಿದೆ ಎಂದು ಹೇಳಿದರು. ರಾಜ್ಯದಲ್ಲಿ ಖಾಸಗಿ ಹಾಲು ಸಂಸ್ಥೆಗಳು ರೈತರಿಗೆ ಖರೀದಿ ಮಾಡುತ್ತಿದೆ ಹೀಗಾಗಿ ನಾವು ಕೂಡ ಹೈನುಗಾರಿಕೆಗೆ ಹೆಚ್ಚು ಹಣವನ್ನು ಕೊಡಬೇಕಾಗುತ್ತದೆ. ಹಾಗಾಗಿ ಹಾಲು ಉತ್ಪಾದಕರಿಗೆ ಕೊಡುವ ಮೊತ್ತವನ್ನು ಹೆಚ್ಚಳ ಮಾಡುವಂತೆ ಚಿಂತನೆ ನಡೆಸಲಾಗುತ್ತದೆ. ರೈತರಿಂದ ಖರೀದಿಸುವ ಹಾಲಿನ ಬೆಲೆಗೆ ಚಿಂತನೆ ನಡೆಸುತ್ತಿದ್ದು ರೈತರಿಗೆ ಹೆಚ್ಚಿನ ಲಾಭವನ್ನು ಕೊಡಿಸುವ ಕಡೆಗೆ ಗಮನ ಹರಿಸುತ್ತಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ರೈತರಿಗೆ ಅನುಕೂಲವಾಗುವಂತೆ ಮಾಡುತ್ತೇವೆ. ಗ್ರಾಹಕರು ಖರೀದಿಸುವ ನಂದಿನಿ ಹಾಲಿನ ಬಗೆಯು ಕೂಡ ಚರ್ಚೆಯಾಗುತ್ತಿದೆ ಎಂದು ತಿಳಿಸಿದ್ದಾರೆ…
PhotoGrid Site 1690706294365

Leave a comment