Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Raita Siri Yojane: ಈ ಒಂದು ಯೋಜನೆಯ ಮೂಲಕ ರೈತರಿಗೆ ಸಿಗಲಿದೆ ₹10,000! ಸ್ವಂತ ಜಮೀನು ಇದ್ರೆ ಸಾಕು!

ಪರಿಹಾರ ನಿಧಿ ಮಾತ್ರವಲ್ಲದೆ ರೈತರಿಗೆ ಆರ್ಥಿಕವಾಗಿ ಸಹಾಯ ಆಗಲಿ ಎಂದು ಮತ್ತೊಂದು ಹೊಸ ಯೋಜನೆಯನ್ನು ಸರ್ಕಾರ ಜಾರಿಗೆ ತರಲಿದ್ದು, ಈ ಯೋಜನೆಯ ಮೂಲಕ ರೈತರಿಗೆ ₹10,000 ಸಹಾಯ ಧನ ನೀಡಲು ಮುಂದಾಗಿದೆ ಸರ್ಕಾರ.

Raita Siri Yojane: ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡು ಕೂಡ ರೈತರಿಗೆ ಅನುಕೂಲ ಅಗುವಂಥ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತದೆ. ರೈತರಿಗೆ ಹಣಕಾಸಿನ ವಿಚಾರದಲ್ಲಿ ಸಹಾಯ ಬೇಕು. ಏಕೆಂದರೆ ಮಳೆ ಇಲ್ಲದೇ, ಬೆಳೆ ಸರಿಯಾಗಿ ಸಿಗದೆ ರೈತರು ಕಷ್ಟ ಅನುಭವಿಸುತ್ತಿದ್ದಾರೆ. ಮತ್ತೆ ಕೃಷಿ ಶುರು ಮಾಡಲು ಅವರಿಗೆ ಹೆಚ್ಚು ಕಷ್ಟವಾಗುತ್ತದೆ. ಅದಕ್ಕಾಗಿ ರಾಜ್ಯ ಸರ್ಕಾರವು ಈಗಾಗಲೇ ಬರ ಪರಿಹಾರ ನಿಧಿಯನ್ನು ಬಿಡುಗಡೆ ಮಾಡಿದೆ…

Raita Siri Yojane

ಪರಿಹಾರ ನಿಧಿ ಮಾತ್ರವಲ್ಲದೆ ರೈತರಿಗೆ ಆರ್ಥಿಕವಾಗಿ ಸಹಾಯ ಆಗಲಿ ಎಂದು ಮತ್ತೊಂದು ಹೊಸ ಯೋಜನೆಯನ್ನು ಸರ್ಕಾರ ಜಾರಿಗೆ ತರಲಿದ್ದು, ಈ ಯೋಜನೆಯ ಮೂಲಕ ರೈತರಿಗೆ ₹10,000 ಸಹಾಯ ಧನ ನೀಡಲು ಮುಂದಾಗಿದೆ ಸರ್ಕಾರ. ಇದು ರೈತ ಸಿರಿ ಯೋಜನೆ ಆಗಿದೆ. ಈ ಯೋಜನೆಯ ಸೌಲಭ್ಯ ಪಡೆಯಲು ರೈತರ ಬಳಿ ಸ್ವಂತ ಜಮೀನು ಇದ್ರೆ ಸಾಕು, ಹಾಗಿದ್ದಲ್ಲಿ ಈ ಯೋಜನೆಯ ಮೂಲಕ ರೈತರು ಹೇಗೆ ಸರ್ಕಾರದ ಸಹಾಯ ಪಡೆಯಬಹುದು ಎಂದು ತಿಳಿಸುತ್ತೇವೆ ನೋಡಿ..

ರೈತ ಸಿರಿ ಯೋಜನೆ-2024:

ಸರ್ಕಾರವು ರೈತ ಸಿರಿ ಯೋಜನೆಯನ್ನು 2019-20ನೇ ಸಾಲಿನಲ್ಲಿ ಈ ಯೋಜನೆಯನ್ನು ಶುರು ಮಾಡಿತ್ತು, ಆದರೆ ಈ ಯೋಜನೆಯನ್ನು ನಿಲ್ಲಿಸಲಾಗಿತ್ತು. ಆದರೆ ಇದೀಗ 2024 ರ ವರ್ಷದಲ್ಲಿ ಮತ್ತೊಮ್ಮೆ ರೈತ ಸಿರಿ ಯೋಜನೆಯನ್ನು ಮತ್ತೆ ರೈತ ಸಿರಿ ಯೋಜನೆಯನ್ನು ಶುರು ಮಾಡುತ್ತಿದೆ. ಈಗ ನಮ್ಮಲ್ಲಿ ಮಳೆಯ ಸಮಸ್ಯೆ ಇರುವ ಕಾರಣ ರೈತರಿಗೆ ಸರಿಯಾಗಿ ಕೃಷಿ ಚಟುವಟಿಕೆ ಮಾಡಲು ನೀರು ಸಿಗುತ್ತಿಲ್ಲ. ಹಾಗಾಗಿ ಸರ್ಕಾರವು ರೈತರಿಗೆ ಅನುಕೂಲ ಮಾಡಿಕೊಡಲು ನೀರಾವರಿ ಕೆರೆಗಳನ್ನು ನಿರ್ಮಿಸುವ ನಿರ್ಧಾರ ಮಾಡಿದೆ.

ಇಸ್ರಾಯೆಲ್ ದೇಶದಲ್ಲಿ ಇರುವ ಹಾಗೆ ನಮ್ಮ ರಾಜ್ಯದಲ್ಲಿ ಸಹ ಸೂಕ್ಷ್ಮ ನೀರಾವರಿ ಸೌಲಭ್ಯ ಒದಗಿಸಿ ಕೊಡುವುದಕ್ಕೆ ಮುಂದಾಗಿದ್ದು, ಇದಕ್ಕಾಗಿ 250 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿ ಸರ್ಕಾರ ಸಿದ್ಧವಾಗಿದೆ. ರೈತ ಸಿರಿ ಯೋಜನೆಯ ಮೂಲಕ ರೈತರಿಗೆ ಬೇಕಾಗುವಂಥ ಅನುಕೂಲತೆಗಳನ್ನು ನೀಡಲು ಸರ್ಕಾರ ಮುಂದಾಗಿದೆ. ರೈತರು ಕೃಷಿ ಹೊಂಡ ನಿರ್ಮಿಸಲು, ಸೂಕ್ಷ್ಮ ನೀರಾವರಿ ಯೋಜನೆ, ಮತ್ತು ಇನ್ನು ಹಲವು ಸೌಲಭ್ಯಗಳನ್ನು ರೈತರಿಗೆ ನೀಡಲಾಗುತ್ತದೆ.

ರೈತ ಸಿರಿ ಯೋಜನೆಗೆ ಅರ್ಹತೆ:

*ನಮ್ಮ ರಾಜ್ಯದವರೇ ಆಗಿರಬೇಕು
*ವ್ಯವಸಾಯ ಮಾಡುವವರೇ ಆಗಿರಬೇಕು
*ರಾಗಿ ಬೆಳೆಯುವವರಿಗೆ ಮಾತ್ರ ಈ ಸೌಲಭ್ಯ
*ಅರ್ಜಿ ಹಾಕುವ ರೈತನ ಬಳಿ ಮಿನಿಮಮ್ 1 ಹೆಕ್ಟರ್ ಜಮೀನು ಇರಬೇಕು.

ಮುಖ್ಯವಾದ ದಾಖಲೆಗಳು:

*ಆಧಾರ್ ಕಾರ್ಡ್
*ಭೂಮಿಯ ದಾಖಲೆ ಪತ್ರ
*ವಾಸಸ್ಥಳ ದೃಡೀಕರಣ ಪತ್ರ
*ಇನ್ಕಮ್ ಸರ್ಟಿಫಿಕೇಟ್
*ರೇಷನ್ ಕಾರ್ಡ್
*ಬ್ಯಾಂಕ್ ಅಕೌಂಟ್ ಡೀಟೇಲ್ಸ್
*ಪಾಸ್ ಪೋರ್ಟ್ ಸೈಜ್ ಫೋಟೋ

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

*ಮೊದಲಿಗೆ ನೀವು ಸರ್ಕಾರದ ರೈತ ಕೃಷಿ (KSDA) ವೆಬ್ಸೈಟ್ ಗೆ ಭೇಟಿ ನೀಡಬೇಕು.
*ಹೋಮ್ ಪೇಜ್ ನಲ್ಲಿರುವ ಸೇವೆಗಳು ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.
*ಇಲ್ಲಿ ನಿಮಗೆ ರೈತ ಕೃಷಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು.
*ಇನ್ನು ಕೂಡ ಆನ್ಲೈನ್ ಅರ್ಜಿ ಸಲ್ಲಿಕೆ ಶುರುವಾಗಿಲ್ಲ.
*ಇನ್ನು ಹೆಚ್ಚಿನ ಮಾಹಿತಿ ಪಡೆಯಲು, ನಿಮ್ಮ ಹತ್ತಿರ ಇರುವ ರೈಗ ಕೃಷಿ ಕಚೇರಿಗೆ ಭೇಟಿ ನೀಡಿ

Also Read: PMVVY : ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (PMVVY) ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ…

Leave a comment