Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gruhalakshmi Yojane : ಮಹಿಳೆಯರಿಗೆ ಖುಷಿಯ ಸುದ್ದಿ! ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಸಿಗಲಿದೆ 4 ಸಾವಿರ ರೂಪಾಯಿ.

Gruhalakshmi Yojane : ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳಿನ ಮಹಿಳೆಯರಿಗೆ ನೀಡುವ 2,000 ಸಹಾಯಧನವನ್ನು ನೀಡುವ ವಿಚಾರ ಎಲ್ಲರಿಗೂ ಗೊತ್ತಿದೆ.

Gruhalakshmi Yojane : ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳಿನ ಮಹಿಳೆಯರಿಗೆ ನೀಡುವ 2,000 ಸಹಾಯಧನವನ್ನು ನೀಡುವ ವಿಚಾರ ಎಲ್ಲರಿಗೂ ಗೊತ್ತಿದೆ ಅದರ ಈಗ ಹೊಸದಾಗಿ ಮತ್ತೆ 2,000 ರೂಪಾಯಿ ನೀಡುವುದಾಗಿ ಸಂಸದ ಡಿ.ಕೆ. ಸುರೇಶ್ ಅವರು ಹೇಳಿದ್ದಾರೆ. ಈ ಬಗ್ಗೆ ಸಂಸದರು ಕುದೂರು ಗ್ರಾಮದಲ್ಲಿ ಕಾಂಗ್ರೆಸ್ ಸರ್ಕಾರವು ಏರ್ಪಡಿಸಿದ್ದ ಹೋಬಳಿ ಮಟ್ಟದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿದ ನಂತರ ತಮ್ಮ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರು.

Gruhalakshmi Yojane

ಯಾವಾಗ ಸಿಗಲಿದೆ ಗೃಹ ಲಕ್ಷ್ಮಿ ಯೋಜನೆಯ 4,000 ರೂಪಾಯಿ ?

ರಾಜ್ಯದ ಹಣವನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸಲಾಗುತ್ತಿದೆ. ಇದರಿಂದ ನಮ್ಮ ರಾಜ್ಯದ ಅಭಿವೃದ್ಧಿಗೆ ಏನಾಗಬಹುದು ಎಂಬ ಆತಂಕ ಮೂಡಿದೆ. ರಾಜ್ಯ ಸರ್ಕಾರವು ಮಹಿಳೆಯರಿಗೆ ನೀಡಿರುವ ಶಕ್ತಿ ಯೋಜನೆಯಿಂದ ಮಹಿಳೆಯರು ದಿನನಿತ್ಯ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಾ ಇದ್ದಾರೆ. ನಮ್ಮ ರಾಜ್ಯದ ತೆರಿಗೆಯ ಹಣವನ್ನು ನಮ್ಮ ರಾಜ್ಯಕ್ಕೆ ನೀಡಿ ಎಂದು ಕೇಳಿದರೆ ನಾವು ಕೇಳಿದರೆ ನನ್ನನ್ನು ವಿಲನ್ ರೀತಿಯಲ್ಲಿ ಭಾವಿಸುತ್ತಾರೆ. ಕೇಂದ್ರ ಸರ್ಕಾರವು ನಮ್ಮ ತೆರಿಗೆ ಹಣವನ್ನು ನಮಗೆ ವಾಪಸ್ ನೀಡಿದರೆ ಮಹಿಳೆಯರಿಗೆ 2 ಸಾವಿರದ ಹಣದ ಜೊತೆಗೆ ಇನ್ನೆರಡು ಸಾವಿರ ಸೇರಿಸಿ 4 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

Also Read: Blue Aadhar Card : UIDAI ನಲ್ಲಿ ಬಾರಿ ಬದಲಾವಣೆ, ಬಿಳಿ ಬಣ್ಣದ ಆಧಾರ್ ಕಾರ್ಡ್ ಬದಲಾಗಿ, ನೀಲಿ ಬಣ್ಣದ ಆಧಾರ್ ಕಾರ್ಡ್ ವಿತರಣೆ, ಎನಿದರೆ ವಿಶೇಷತೆ ಗೊತ್ತಿದೆಯೇ??

ಈ ಹಿಂದೆ ತೆರಿಕೆ ಬಗ್ಗೆ d.k. ಸುರೇಶ್ ಅವರು ಹೇಳಿದ ಮಾತೇನು ?

ಕೇಂದ್ರ ಸರ್ಕಾರದಿಂದ ಜಿಎಸ್‌ಟಿ ಹಾಗೂ ತೆರಿಗೆ ಹಣವನ್ನು ಉತ್ತರ ಭಾರತಕ್ಕೆ ನೀಡಲಾಗುತ್ತಿದೆ. ದಕ್ಷಿಣ ರಾಜ್ಯಗಳಿಗೆ ಇದರಿಂದ ಅನ್ಯಾಯ ಆಗುತ್ತಿದೆ. ಈ ಅಸಮಾನ ಹಂಚಿಕೆಯಿಂದಾಗಿ ದಕ್ಷಿಣ ರಾಜ್ಯಗಳ ಆರ್ಥಿಕ ಅಭಿವೃದ್ಧಿಗೆ ತೊಡಕಾಗುತ್ತದೆ. ನಾವು ಒಂದು ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಇರುವುದರಿಂದ, ದೇಶದ ಎಲ್ಲಾ ರಾಜ್ಯಗಳಿಗೂ ಸಮಾನವಾಗಿ ತೆರಿಗೆ ಹಂಚಿಕೆ ಮಾಡ್ಬೇಕು. ಇಲ್ಲವಾದರೆ ರಾಷ್ಟ್ರವನ್ನು ಪ್ರತ್ಯೇಕ ಗೊಳಿಸಬೇಕು ಎಂದು ಹೇಳಿದ್ದರು

ಸುರೇಶ್ ಅವರ ಹೇಳಿಕೆಗೆ ರಾಷ್ಟ್ರದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು:-

ಸುರೇಶ್ ಅವರು ರಾಷ್ಟ್ರ ವಿಭಜನೆಯ ಬಗ್ಗೆ ನೀಡಿರುವ ಹೇಳಿಕೆಯನ್ನು ವಿರೋಧಿಸಿದ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಬೀಬ್ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ನಾಯಕರುಗಳು ದೇಶದ ಏಕತೆಯ ಹೊರತಾಗಿ ಪ್ರತ್ಯೇಕತೆಯ ಬಗ್ಗೆ ಹೆಚ್ಚು ಮಾತಾಡುತ್ತಾರೆ. ಭಾರತದಲ್ಲಿ ಕೇಂದ್ರದ ಎನ್‌ಡಿಎ ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸಿ ಎಲ್ಲರಿಗೂ ಎಲ್ಲಾ ಯೋಜೆಂಗಳಿ ಸಿಗಬೇಕು ಎಂದು ರಾಷ್ಟ್ರದ ಅಭಿವೃದ್ದಿಯ ಬಗ್ಗೆ ಯೋಚಿಸುತ್ತಾ ಇದೆ. ಈ ಸಮಯದಲ್ಲಿ ಕೇಂದ್ರವು ಯಾವುದೇ ರಾಜ್ಯಗಳನ್ನು ಕಡೆಗಣಿಸಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದರು. ಹಾಗೇನೇ ಮುಂದುವರೆದು ಸುರೇಶ್ ವಿರುದ್ಧ ದೇಶದ್ರೋಹದ ಪ್ರಕರಣದಲ್ಲೀ ಇವರನ್ನು ಜೈಲಿಗೆ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುರೇಶ್ ಅವರನ್ನು ಕಾಂಗ್ರೆಸ್‌ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂಬುದಾಗಿ ಕೇಂದ್ರ ಸಂಸದೀಯ ವ್ಯವಹಾರ ಸಚಿವರಾದ ಪ್ರಲ್ಹಾದ ಜೋಶಿ ಅವರು ಹೇಳಿಕೆ ನೀಡಿದರು.

Also Read: Labor Card : ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ನೋಂದಣಿ ಅಭಿಯಾನ ಆರಂಭ, ಆಸಕ್ತರು ಬೇಗ ಈ ರೀತಿ ಅರ್ಜಿ ಸಲ್ಲಿಸಿ.

Leave a comment