Government Scheme : ಬಡವರ ಬಂಧು ಒಂದು ದಿನದಲ್ಲಿ ಸಾಲ ಯೋಜನೆ!! ಸಿಎಂ ನಿಂದ ಭರ್ಜರಿ ಚಾಲನೆ
Government Scheme : ಕರ್ನಾಟಕ ಬಡವರ ಬಂಧು ಒಂದು ದಿನದ ಸಾಲ ಯೋಜನೆಯನ್ನು ರಾಜ್ಯ ಸರ್ಕಾರವು ನಗರ ಬಡ ವರ್ಗದ (ಬೀದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು, ಪಾದಚಾರಿ ಬೀದಿ ಬದಿ ವ್ಯಾಪಾರಿಗಳು) ಎಲ್ಲರಿಗೂ ಸಹಾಯ ಆಗಲಿ ಎಂಬ ದೃಷ್ಠಿಯಿಂದ ರೂಪಿಸಿರುವ ಯೋಜನೆ ಆಗಿದೆ.
Government Scheme : ಕರ್ನಾಟಕ ಬಡವರ ಬಂಧು ಒಂದು ದಿನದ ಸಾಲ ಯೋಜನೆಯನ್ನು ರಾಜ್ಯ ಸರ್ಕಾರವು ನಗರ ಬಡ ವರ್ಗದ (ಬೀದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು, ಪಾದಚಾರಿ ಬೀದಿ ಬದಿ ವ್ಯಾಪಾರಿಗಳು) ಎಲ್ಲರಿಗೂ ಸಹಾಯ ಆಗಲಿ ಎಂಬ ದೃಷ್ಠಿಯಿಂದ ರೂಪಿಸಿರುವ ಯೋಜನೆ ಆಗಿದೆ. ಬಡ ವ್ಯಾಪಾರಿಗಳಿಗೆ ಇದು ಬಹಳ ಉಪಯೋಗ ಆಗಲಿದ್ದು ಈ ಯೋಜನೆಯಿಂದ ಹಲವಾರು ಲಾಭ ಪಡೆಯಬಹುದಾಗಿದೆ. ಈ ಯೋಜನೆಯು 2018-19ನೇ ಸಾಲಿನಿಂದ ಜಾರಿಯಲ್ಲಿ ಇದ್ದಿದ್ದು ಈಗ ಈ ಯೋಜನೆಗೆ ಮರು ಚಾಲನೆ ದೊರೆತಿದೆ
Government Scheme
ಏನಿದು ಒಂದು ದಿನದ ಸಾಲ ಯೋಜನೆ?
ಈ ಯೋಜನೆಯ ಮೂಲಕ, ರಾಜ್ಯ ಸರ್ಕಾರ ನಗರ ಬಡವರಿಗೆ (ಬೀದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು, ಪಾದಚಾರಿ ವ್ಯಾಪಾರಿಗಳು) 1000 ರೂ.ವರೆಗೆ ಬಡ್ಡಿರಹಿತ ಸಾಲವನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ, ಈ ವರ್ಗದ ಜನರು ಲೇವಾದೇವಿದಾರರಿಂದ 2% ರಿಂದ 10% ರಷ್ಟು ಹೆಚ್ಚು ಬಡ್ಡಿಯನ್ನು ನೀಡಬೇಕಾಗಿಲ್ಲ.
ಈ ಯೋಜನೆಯ ಉದ್ದೇಶವೇನು ?
ಈ ಕರ್ನಾಟಕ ಬಡವರ ಬಂಧು ಒಂದು ದಿನದ ಸಾಲ ಯೋಜನೆಯು ರಾಜ್ಯದ ಬಡ ವ್ಯಾಪಾರಿಗಳಿಗೆ ಸ್ವ-ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಮತ್ತು ಅವರ ವ್ಯವಹಾರಗಳನ್ನು ವಿಸ್ತರಿಸಲು ಅಗತ್ಯವಾದ ಬಂಡವಾಳವನ್ನು ಒದಗಿಸುವ ಸದುದ್ದೇಶವನ್ನು ಹೊಂದಿದೆ. ರಸ್ತೆಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳಿಗೆ ಸ್ವಾವಲಂಬಿ ಜೀವನ ನಡೆಸಲು ಹಾಗೂ ಇನ್ನೂ ಉತ್ತಮ ಜೀವನಮಟ್ಟವನ್ನು ಜೀವಿಸಲು ಸಹಾಯ ಆಗುತ್ತದೆ.
ಯೋಜನೆಯು ಜನರಿಗೆ ನೇರವಾಗಿ ಸಿಗಬೇಕು ಎಂಬ ದೃಷ್ಟಿಯಿಂದ ಸಹಕಾರ ಇಲಾಖೆಯು ಶೀಘ್ರದಲ್ಲೇ ಮೊಬೈಲ್ ಬ್ಯಾಂಕ್ ಒಂದನ್ನು ಬಿಡುಗಡೆ ಗೊಳಿಸಲಿದೆ.
Also Read: Farmers Scheme : ಈ ಒಂದು ಯೋಜನೆಯ ಮೂಲಕ ರೈತರಿಗೆ 10,0000 ನೀಡಲು ಮುಂದಾದ ಸರ್ಕಾರ!
ಯೋಜನೆಯ ಬಗ್ಗೆ ಪೂರ್ಣ ಮಾಹಿತಿ :-
* ಸಾಲದ ನೀಡುವ ಮೊತ್ತ: ₹10,0000
* ಬಡ್ಡಿದರ ಮೊತ್ತ: 0%
*ಮರುಪಾವತಿ ಮಾಡಲು ನೀಡಿರುವ ಅವಧಿ: ಸಾಲ ಪಡೆದ ದಿನ (ಸಂಜೆಯ ವೇಳೆಗೆ)
ಸಾಲ ಪಡೆಯಬೇಕು ಎಂದರೆ ಇರುವ ಅರ್ಹತೆಯ ಪಟ್ಟಿ :+
* ನಗರ ಬಡ ವರ್ಗದ ಬೀದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು, ಪಾದಚಾರಿ ಬೀದಿ ಬದಿ ವ್ಯಾಪಾರಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
* ಯಾವುದೇ ಲೇವಾದೇವಿದಾರರಿಂದ ದಿನದ ಬಡ್ಡಿ ದರದಲ್ಲಿ ಯಾವುದೇ ಸಾಲವನ್ನು ಪಡೆದಿರಬಾರದು
* ಈಗಾಗಲೇ ಯಾವುದೇ ಸರ್ಕಾರಿ ಸಾಲ ಯೋಜನೆಯ ಮೂಲಕ್ಕೆ ವ್ಯಾಪಾರದ ಸಲುವಾಗಿ ಸಾಲ ಪಡೆದಿರಬಾರದು.
ಅರ್ಜಿ ಸಲ್ಲಿಸುವುದು ಹೇಗೆ:
ಯಾವುದೇ ಬೀದಿ ವ್ಯಾಪಾರಿಗಳಿಗೆ ತಮ್ಮ ಹತ್ತಿರದ ಸಹಕಾರ ಬ್ಯಾಂಕ್‌ಗೆ ಹೋಗಿ ಅರ್ಜಿಯನ್ನು ಸಲ್ಲಿಸಿ ಸಾಲ ಪಡೆಯಬಹುದು.
ಅರ್ಜಿ ಸಲ್ಲಿಸಲು ನೀಡಬೇಕಾದ ದಾಖಲೆಗಳು:
1) ಗುರುತಿನ ಪುರಾವೆಗೆ ಆಧಾರ್ ಕಾರ್ಡ್ ಅಥವಾಮತದಾರರ ಗುರುತಿನ ಚೀಟಿ
2) ವಿಳಾಸ ಪುರಾವೆಗೆ ವಿದ್ಯುತ್ ಬಿಲ್ ಅಥವಾ ರೇಷನ್ ಕಾರ್ಡ್
3)ಆದಾಯದ ಪುರಾವೆ ವೇತನದ ಚೀಟಿ ಅಥವಾ ವ್ಯಾಪಾರದ ಪರವಾನಿಗೆ