Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Free Laptops: ಈ ರೀತಿಯ ವಿಧ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ, ಇಂದೆ ಈ ಯೋಜನೆಗೆ ಅರ್ಜಿ ಸಲ್ಲಿಸಿ, ಮತ್ತು ಈ ಧಾಖಲೆಗಳನ್ನು ಮರೆಯಬೇಡಿ.

Free laptops for poor students.

Free Laptops: ಇತ್ತೀಚೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಅನೇಕ ಯೋಜನೆಗಳನ್ನು ಒಂದೊಂದಾಗಿ ಜಾರಿಗೆ ತರುತ್ತಿದೆ. ಈ ಮೂಲಕ ದೇಶದ ಸಾರ್ವಜನಿಕರ ಆರ್ಥಿಕ ಸ್ಥಿತಿಯನ್ನು ಭದ್ರಗೊಳಿಸುವ ಪ್ರಯತ್ನ ಮಾಡುತ್ತಿದೆ. ಇನ್ನು ಇತ್ತೀಚೆಗೆ ವಿದ್ಯಾರ್ಥಿಗಳಿಗಾಗಿ ಅನೇಕ ಯೋಜನೆಗಳನ್ನು ಸರ್ಕಾರ ಚಾಲನೆ ನೀಡಿದೆ. ಇದೀಗ ಪ್ರೌಡ ಶಿಕ್ಷಣ ಮತ್ತು ಪಿಯುಸಿ ಯಲ್ಲಿ ಓದುತ್ತಿರುವ ವಿಧ್ಯಾರ್ಥಿಗಳಿಗಾಗಿ ವಿಶೇಷವಾದ ಯೋಜನೆಗೆ ಚಾಲನೆ ನೀಡಿದೆ. ಹೌದು, ಶಿಕ್ಷಣ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಇದೀಗ ಅನೇಕ ವಿಶೇಷವಾದ ಹೊಸ ಯೋಜನೆಗಳನ್ನು ಸರ್ಕಾರ ಜಾರಿಗೆ ತರುವ ಪ್ರಯತ್ನ ಮಾಡುತ್ತಿದೆ.

ಹೌದು, ಇದೀಗ ಸರ್ಕಾರವು ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ ಮಾಡುವ ಯೋಜನೆಯನ್ನು ಇದೀಗ ಸರ್ಕಾರ ಜಾರಿಗೆ ತಂದಿದೆ. ಇನ್ನು ಈ ಯೋಜನೆಯ ಲಾಭವನ್ನು ಎಲ್ಲರೂ ಪಡೆಯಲು ಸಾಧ್ಯವಿಲ್ಲ. ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರ ಮಕ್ಕಳು ಈ ಯೋಜನೆಯ ಲಾಭವನ್ನು ಪಡೆಯಲು ಅರ್ಹರಾಗಿದ್ದಾರೆ.

ಪ್ರಥಮ ಹಾಗೂ ದ್ವಿತೀಯ ಪಿಯುಸಿಯ, Science, Arts ಮತ್ತು Commerce ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಕಾರ್ಮಿಕರ ಮಕ್ಕಳಿಗೆ ಇದೀಗ ಸರ್ಕಾರವು ಉಚಿತ ಲ್ಯಾಪ್ ಟಾಪ್ ನೀಡಲು ನಿರ್ಧರಿಸಿದೆ. ಇನ್ನು ಈ ಯೋಜನೆಯ ಲಾಭ ಪಡೆಯಲು, ಕಾರ್ಮಿಕರ ಅಧಿಕಾರಿ ಕಚೇರಿ ಅಥವಾ ನಿಮ್ಮ ತಾಲೂಕಿನ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಅರ್ಜಿಗಳನ್ನು ಸಲ್ಲಿಸಬೇಕು. ಅದಕ್ಕಾಗಿ ಕಚೇರಿಯಿಂದ ಅಧಿಕೃತ ಪತ್ರವನ್ನು ಪಡೆದು, ಅವರ ಕಾಲೇಜಿನ ಪ್ರಾಂಶುಪಾಲರ ಸಹಿಯ ಜೊತೆಗೆ ಎಸ್ ಎಸ್ ಎಲ್ ಸಿ ಅಂಕಪಟ್ಟಿಯ ಜೊತೆಗೆ ಇನ್ನು ಹಲವು ದಾಖಲೆಗಳನ್ನು ನೀಡಿ, ಅರ್ಜಿಯನ್ನು ಭರ್ತಿ ಮಾಡಿ ಕಚೇರಿಗೆ ಸಲ್ಲಿಸಬೇಕು.

ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸಲು,
ನಿರ್ಮಾಣ ಕಾರ್ಮಿಕರ ನೋಂದಣಿ ಕಾರ್ಡ್ ನ ಒಂದು ಪ್ರತಿ , ವಿದ್ಯಾರ್ಥಿ ಅಧ್ಯಯನ ಪ್ರಮಾಣ ಪತ್ರದ ಒಂದು ಪ್ರತಿ, ಕಾಲೇಜು ದಾಖಲಾತಿಯ ರಶೀದಿ ಪ್ರತಿ( Payment Slip), ಆಧಾರ್ ಕಾರ್ಡ್ (Aadhaar Card) ಅನ್ನು ಕಚೇರಿಗೆ ಸಲ್ಲಿಸಬೇಕು. ಇನ್ನು ಇದೆ ಡಿಸೆಂಬರ್ 26 ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಇನ್ನು ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಕಾರ್ಮಿಕರ ಅಧಿಕಾರಿ ಕಚೇರಿ ಅಥವಾ ನಿಮ್ಮ ತಾಲೂಕಿನ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಭೇಟಿ ನೀಡಿ.

Free laptops for poor students.
Free laptops for poor students. Image Source: Deccan Herald 
Leave a comment