Aditya L1: ಸೂರ್ಯನತ್ತ ನುಗ್ಗಿದ ಆದಿತ್ಯ L1, 5 ವರ್ಷದ ಅಧ್ಯಯನದಿಂದ ಭಾರತ ಸಾಧಿಸೋದೇನು, ಆದಿತ್ಯ ಏನು ಮಾಡುತ್ತದೆ ಗೊತ್ತ ?
Aditya L1: ಇದೀಗ ನಮ್ಮ ಹೆಮ್ಮೆಯ ಇಸ್ರೋ ಚಂದ್ರಯಾನ 3 ಸಕ್ಸಸ್ ನಂತರ ಇದೀಗ ಸೂರ್ಯನ ಕಡೆಗೆ ಹೆಜ್ಜೆ ಹಾಕುತ್ತಿದೆ. ಆದಿತ್ಯ L1 , 7 ಪೇಲೋಡ್ ಗಳನ್ನು ಇಂದು ಒತ್ತುಕೊಂಡು ಹೋಗಿದೆ. ಇಂದು ಬೆಳಗ್ಗೆ 11:30ಗೆ ಶ್ರೀಹರಿಕೋಟದಲ್ಲಿರುವ ಉಡಾವಣೆ ಜಾಗದಿಂದ ಎರಡನೇ ಹಂತದಲ್ಲಿ ಸೂರ್ಯ ಯಾನ ಉಡಾವಣೆಯಾಗುತ್ತದೆ.
ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರಗಳಲ್ಲಿರುವ L 1 ನಲ್ಲಿ ಅಲ್ಲಿಯ ಸೌರ ಮನೋಭಾವ ಪರಿಸ್ಥಿತಿಗಳನ್ನು ಪರಿಶೀಲನೆ ಮಾಡುವುದಕ್ಕೆ ಆದಿತ್ಯ ಎಲ್ಒನ್ ವಿನ್ಯಾಸಗೊಳಿಸಲಾಗಿದೆ. ಸೂರ್ಯನಿಂದ ಬರುವ ನೇರಳಾತಿತ ಕಿರಣಗಳನ್ನು ಗಮನಿಸುತ್ತದೆ ಎಂದು ಹೇಳಲಾಗುತ್ತಿದೆ.
ಈ ನೇರಳಾತೀತ ಕಿರಣಗಳು ಸೌರ ವಾತಾವರಣದಿಂದ ಹುಟ್ಟಿಕೊಂಡಿವೆ. ಮುಖ್ಯವಾಗಿ ಸೂರ್ಯನ ಒಳಗಿನ ಮತ್ತು ಮಧ್ಯದ ವಾತಾವರಣ suit ಗಳಲ್ಲಿ ವಿವಿಧ ರೀತಿಯ ವೈಜ್ಞಾನಿಕ ಫಿಲ್ಟರ್ ಗಳನ್ನು ಹೊಂದಿದೆ. ಇದನ್ನು ಬಳಸಿಕೊಂಡು ಸೂರ್ಯನ ವಾತಾವರಣಗಳಲ್ಲಿ ನಾವು ಮ್ಯಾಪಿಂಗ್ ಮಾಡಬಹುದು.
ಸೌರ ವಾತಾವರಣದಲ್ಲಿ ನಾ ಡೈನಮಿಕ್ಸ್ ಗಳನ್ನು ಅರ್ಥ ಮಾಡಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ. ಇದರ ಜೊತೆಗೆ ಸೂರ್ಯನ ನಿರ್ದಿಷ್ಟ ಭಾಗಗಳ ಅಧ್ಯಯನ ಕೂಡ ಮಾಡಲಾಗುತ್ತದೆ.
ಸೌರ ಜ್ವಾಲಾದ ಆಳದ ಅಧ್ಯಯನಗಳು ಸೇರಿದಂತೆ ಸೂರ್ಯನ ಕರೋನಲ್ ಗೋಳ ಮತ್ತು ಡೈನಮಿಕ್ಸ್ ಗಳನ್ನು ಅಧ್ಯಯನ ಮಾಡಲು ಆದಿತ್ಯ L 1ಕಾರ್ಯ ನಿರ್ವಹಿಸುತ್ತದೆ. ಇದು ವಿಜ್ಞಾನಿಗಳಿಗೆ ಸೂರ್ಯನ ತಾಪಮಾನ ಮತ್ತು ಅಲ್ಲಿರುವ ವಿಶೇಷತೆಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಲು ಸಹಾಯ ಮಾಡುತ್ತದೆ. ಈ ಅಧ್ಯಯನದಿಂದ ವಿಜ್ಞಾನಗಳು ಕರೋನಲ್ ಮಾಸ್ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳುತ್ತಾರೆ.
ಸೂರ್ಯನಲ್ಲಿ ಉಂಟಾಗುವ ಜ್ವಾಲಾಮುಖಿ ಮತ್ತು ಅಲ್ಲಿನ ವಾತಾವರಣ ಇವೆರಡರ ನಡುವಿನ ವಾತಾವರಣವನ್ನು ಅರ್ಥ ಮಾಡಿಕೊಳ್ಳಲು ಇಸ್ರೋ ವಿಜ್ಞಾನಿಗಳು ಪ್ರಯತ್ನಿಸುತ್ತಾರೆ. ಇಸ್ರೋ ಪ್ರಕಾರ ಸೂರ್ಯ ಹತ್ತಿರದ ನಕ್ಷತ್ರ ಆಗಿರುವುದರಿಂದ ಇತರ ಅಧ್ಯಯನಗಳಿಗಿಂತ ಸೂರ್ಯನನ್ನು ಅಧ್ಯಯನ ಮಾಡುವುದು ಬಹಳ ಸುಲಭ.
ಆದಿತ್ಯ L 1 ಮೂಲಕ ಸೂರ್ಯನ ಮೇಲ್ಮೈ ಅಂದರೆ ದ್ವಿತಿಗೊಳ ವರ್ಣ ಗೋಳ ಮತ್ತು ಕರೋಳ ಗೋಳ ವಾತಾವರಣದ ಪದರ ಮತ್ತು ಸೂರ್ಯನ ಹೊರ ಭಾಗವನ್ನು ವಿವರವಾಗಿ ಅಧ್ಯಯನ ಮಾಡುವ ಸಾಧ್ಯತೆ ಇದೆ. ಆದಿತ್ಯ L 1 ಮೂಲಕ ಇತರ ಗ್ಯಾಲಕ್ಸಿಗಳ ನಕ್ಷತ್ರಗಳ ಬಗ್ಗೆ ಕೂಡ ಬಹಳ ಮೂಲವಾಗಿ ತಿಳಿದುಕೊಳ್ಳಬಹುದು.
ಹಾಗೆಯೇ ಸೂರ್ಯನನ್ನು ಅಧ್ಯಯನ ಮಾಡುವ ಮೂಲಕ ಇತರ ಗ್ರಹಗಳ ಹವಮಾನ ಮತ್ತು ಅವುಗಳ ನಕ್ಷೆಯನ್ನು ಕೂಡ ಅರ್ಥಮಾಡಿಕೊಳ್ಳಬಹುದು. ಈ ಕಾರ್ಯಾಚರಣೆಯಲ್ಲಿ ಪಡೆದುಕೊಂಡ ಡೇಟಾ ಶುಕ್ರಯಾನ ಅಥವಾ ಮಂಗಳಯಾನ ಭವಿಷ್ಯದ ಉಪಯುಕ್ತ ಪ್ರಯೋಜನಗಳಿಗೆ ತುಂಬಾ ಉಪಯೋಗವಾಗುತ್ತದೆ ಎಂದು ಸಾಬೀತುಪಡಿಸಬಹುದು.
ಭಾರತಕ್ಕಿಂತ ಮುಂಚೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಯ ನಾಸಾ ಮತ್ತು ಯುರೋಪ್ ಸಂಸ್ಥೆ ಮತ್ತು ಜರ್ಮನಿ ದೇಶಗಳು ಒಟ್ಟಾರೆಯಾಗಿ ಸೇರಿಕೊಂಡು ಸೂರ್ಯನ ಅಧ್ಯಯನಕ್ಕಾಗಿ ಮಿಷನ್ ಗಳನ್ನು ಈಗಾಗಲೇ ಕಳಿಸಿದೆ….