Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Weekly Horoscope : ಇಂದು 16/07/23 ಭಾನುವಾರದಿಂದ, ಮುಂದಿನ  23/07/23 ರ ವರೆಗೆ, ಯಾವ ರಾಶಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತವೆ, ಪೂರ್ಣ 12 ರಾಶಿಗಳ ಭವಿಷ್ಯ.

weekly horoscope for 12 rashi chakra

Weekly Horoscope : ಮೇಷ ರಾಶಿ: ಈ ವಾರ ಮೇಷ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿ ಬಹಳ ಉತ್ತಮ ವಾಗಿರಲಿದೆ. ಇನ್ನು ಹಣದ ಪರಿಸ್ಥಿತಿಯಲ್ಲಿ ಸಹ ಸಾಕಷ್ಟು ಲಾಭವನ್ನು ಕಾಣಲಿದ್ದೀರಿ. ಇನ್ನು ನಿಮ್ಮ ಮಕ್ಕಳ ಯಶಸ್ಸು ನಿಮ್ಮ ಮನಸ್ಸಿಗೆ ಸಾಕಷ್ಟು ಸಂತೋಷವನ್ನು ನೀಡಲಿದೆ. ಇನ್ನು ಈ ವಾರ ವಿಧ್ಯಾರ್ಥಿಗಳಿಗೆ ಸಹ ಬಹಳ ಅನುಕೂಲವಾದ ವಾರವಾಗಲಿದೆ.

ವೃಷಭ ರಾಶಿ: ಇನ್ನು ಈ ವಾರ ವೃಷಭ ರಾಶಿಯವರು, ತಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಪ್ರಯಾಣದಲ್ಲಿ ತೊಡಗುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿಗೆ ಬಹಳ ಹತ್ತಿರ ಇರುವಂತವರು ಇಂದು ನಿಮಗೆ ಕಿರಿಕಿರಿ ಉಂಟು ಮಾಡಿ ನಿಮ್ಮ ಮನಸ್ಸಿಗೆ ನೋವನ್ನು ಉಂಟು ಮಾಡುವ ಸಾಧ್ಯತೆ ಇದೆ. ಅನಾವಶ್ಯಕವಾಗಿ ಯಾರ ಬಳಿ ಸಹ ವಾದ ಮಾಡಬೇಡಿ, ಇದು ಕೇವಲ ನಿಮ್ಮ ಸಮಯವನ್ನು ನಷ್ಟ ಮಾಡುತ್ತದೆ.

Chandrayaan-3: ಚಂದ್ರಯಾನ 3 ಉಡಾವಣೆಗೆ ಖರ್ಚು ಮಾಡಿದ ಹಣ ಎಷ್ಟು ಕೋಟಿ ಗೊತ್ತೇ, ಈ ದೇಶದ ಜನಸಂಖ್ಯೆ ಗಿಂತಲ್ಲೂ 5 ಪಟ್ಟು ದುಪ್ಪಟ್ಟು.

ಮಿಥುನ ರಾಶಿ: ಮಿಥುನ ರಾಶಿಯವರು ಇಂದಿನ ವಾರ ಆರ್ಥಿಕವಾಗಿ ಸಾಕಷ್ಟು ಲಾಭವನ್ನು ಕಾಣಲಿದ್ದಾರೆ. ಇಂದಿನ ವಾರ ನಿಮ್ಮ ಕುಟುಂಬಸ್ಥರ ಜೊತೆಗೆ ಬಹಳ ಉತ್ತಮವಾದ ಸಮಯವನ್ನು ಕಾಣಲಿದ್ದೀರಿ. ಇನ್ನು ಮಕ್ಕಳ ಆರೋಗ್ಯ ಸ್ಥಿತಿ ಕೊಂಚ ಗಂಭೀರವಾಗಿರಲಿದೆ. ನಿಮ್ಮ ಹಾಗೂ ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಕೊಂಚ ಗಮನ ಹರಿಸುವುದು ಉತ್ತಮ.

ಕಟಕ ರಾಶಿ: ಇಂದಿನ ವಾರ ಕಟಕ ರಾಶಿಯವರ ಆರೋಗ್ಯ ಸ್ಥಿತಿ ಕೊಂಚ ಗಂಭೀರವಾಗಿರಲಿದ್ದು, ನಿಮ್ಮ ಆಹಾರದ ಬಗ್ಗೆ ಗಮನ ಹರಿಸುವುದು ಉತ್ತಮ. ನಿಮ್ಮ ಕುಟುಂಬಸ್ಥರ ಜೊತೆಗಿನ ಸಂಬಂಧಗಳು ಸಹ ಅಷ್ಟು ಸಮಂಜಸವಾಗಿರುವುದಿಲ್ಲ. ಇನ್ನು ವೃತ್ತಿಪರ ಜೀವನದಲ್ಲಿ ಸಹ ಸಾಕಷ್ಟು ಒತ್ತಡವನ್ನು ಕಾಣಲಿದ್ದೀರಿ.

Gastric Problems: ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಕಷ್ಟ ಪಡ್ತಾಯಿದ್ರೆ ಚಿಂತೆ ಬಿಡಿ, ಈ ರೀತಿ ಮಾಡಿ ಸಾಕು, ಇಡೀ ಜನ್ಮದಲ್ಲಿ ಮತ್ತೆ ಗ್ಯಾಸ್ಟ್ರಿಕ್ ಸಮಸ್ಯೆ ಬರೋದೇ ಇಲ್ಲ.

ಸಿಂಹ ರಾಶಿ: ಈ ವಾರ ಸಿಂಹ ರಾಶಿಯವರಿಗೆ ಗುರು ಬಲ ಹೆಚ್ಚಾಗಿ ಇದೆ. ಇನ್ನು ಗುರು ಬಲ ಇದ್ದರೂ ಸಹ ನೀವು ಈ ವಾರ ಕೆಲವು ತೊಂದರೆಗಳನ್ನು ಎದುರಿಸಬಹುದು. ಇನ್ನು ಹಣಕಾಸಿನ ಖರ್ಚು ಸಹ ಈ ವಾರ ಬಹಳ ಹೆಚ್ಚಾಗಿರಲಿದೆ. ಯಾವುದೇ ಕಷ್ಟ ಬಂದರೂ ಎದರ ಬೇಡಿ ಧೈರ್ಯವಾಗಿ ಅದನ್ನು ಎದುರಿಸಿ.

ಕನ್ಯಾ ರಾಶಿ: ಈ ವಾರ ಕನ್ಯಾ ರಾಶಿಯವರಿಗೆ ಲಾಭದಾಯಕವಾಗಿರಲಿದೆ. ನಿಮ್ಮ ಯಾವುದಾದರೂ ಹಳೆಯ ಬಾಕಿ ಇದ್ದರೆ ಎಲ್ಲವೂ ನಿಮಗೆ ಮರಳಿ ಸಿಗುವ ಸಾಧ್ಯತೆ ಇದೆ. ಇನ್ನು ನಿಮ್ಮ ಮಾತೇ ನಿಮಗೆ ಮುಳ್ಳಾಗುವ ಸಾಧ್ಯತೆ ಇದೆ. ನಿಮ್ಮ ಮಾತಿನ ಬಗ್ಗೆ ಕೊಂಚ ಗಮನ ಹರಿಸಿ.

Weekly Horoscope
this image is credited to the original source

ತುಲಾ ರಾಶಿ: ಇಂದಿನ ವಾರ ತುಲಾ ರಾಶಿಯವರು ಮಾಡುವ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಕಾಣಲಿದ್ದಾರೆ. ಇನ್ನು ನಿಮ್ಮ ಆರೋಗ್ಯ ಸ್ಥಿತಿಯಲ್ಲಿ ಸಹ ಸಾಕಷ್ಟು ಚೇತರಿಕೆ ಕಾಣಲಿದ್ದೀರಿ. ಇನ್ನು ಅನಾವಶ್ಯಕವಾಗಿ ಯಾರ ಜೊತೆಗೂ ವಾದ ಮಾಡಬೇಡಿ, ಇದರಿಂದ ನೀವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ವೃಶ್ಚಿಕ ರಾಶಿ: ಈ ವಾರ ವೃಶ್ಚಿಕ ರಾಶಿಯವರು ನಿಮ್ಮ ಮನೆಯಲ್ಲಿ ಕೊಂಚ ಆತಂಕದ ಪರಿಸ್ಥಿತಿಯನ್ನು ಕಾಣಲಿದ್ದೀರಿ. ಇನ್ನು ಹಣಕಾಸಿನ ವಿಷಯದಲ್ಲಿ ಸಹ ಕೊಂಚ ಕಷ್ಟದ ಪರಿಸ್ಥಿತಿಯನ್ನು ಎದುರಿಸಲಿದ್ದೀರಿ. ಇನ್ನು ವೃತ್ತಿ ಜೀವನದಲ್ಲಿ ಈ ವಾರ ಕೊಂಚ ಲಾಭವನ್ನು ಕಾಣುವ ಸಾಧ್ಯತೆ ಇದೆ. ಇನ್ನು ನಿಮ್ಮ ಆರೋಗ್ಯದ ಬಗ್ಗೆ ಕೊಂಚ ಗಮನ ಹರಿಸಿ.

Life Style Tips: ನಿಮ್ಮ ಜೀವನದಲ್ಲಿ ನೀವು ಸುಖವಾಗಿರಲು ಮತ್ತು ಆರೋಗ್ಯವಾಗಿರಲು ಅದ್ಭುತವಾದ 20  ಜೀವನ ಮಂತ್ರಗಳು.

ಧನಸ್ಸು ರಾಶಿ: ಇಂದಿನ ವಾರ ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಕಾಣಲಿದ್ದೀರಿ. ಕೆಲಸದ ಜಾಗದಲ್ಲಿ ಸಹ ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕೆಲಸ ನೋಡಿ ನಿಮ್ಮನ್ನು ಪ್ರಶಂಸಿಸುತ್ತಾರೆ. ಇನ್ನು ನಿಮ್ಮ ಮಕ್ಕಳು ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ಕೆಲಸಗಳನ್ನು ಮಾಡುತ್ತಾರೆ. ಇನ್ನು ಈ ವಾರ ಧನ ಲಾಭ ಕಾಣಲಿದ್ದೀರಿ.

ಮಕರ ರಾಶಿ: ನಿಮ್ಮ ಮನಸ್ಸಿನಲ್ಲಿ ಯಾರಿಗೂ ಹೇಳಿಕೊಳ್ಳಲಾಗದಷ್ಟು ತಳಮಳ. ನಿಮ್ಮ ಪ್ರೀತಿಪಾತ್ರರೊಂದಿಗೆ ಮನಸ್ತಾಪಗಳು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ಕಾಣಲಿದ್ದೀರಿ. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಕೊಂಚ ಗಮನ ಹರಿಸುವುದು ಉತ್ತಮ.

Daily Horoscope: 12 ದ್ವಾದಶ ರಾಶಿಗಳ ಪೈಕಿ ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ !!

ಕುಂಭ ರಾಶಿ: ಈ ವಾರ ಕುಂಭ ರಾಶಿಯವರು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಎಷ್ಟೇ ಪರಿಶ್ರಮ ಪಟ್ಟು ಕೆಲಸ ಮಾಡಿದರು ಸಹ ಫಲ ಕಾಣುವುದು ಕಷ್ಟ. ಇನ್ನು ಈ ವಾರ ಆಹಾರಕ್ಕಾಗಿ ಕೊಂಚ ಅಲೆದಾಡುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ನಿಮ್ಮನ್ನು ಕಂಡರೆ ಆಗದವರು ನಿಮಗೆ ವಿರುದ್ದವಾಗಿ ಕೆಲಸಗಳನ್ನು ಮಾಡುತ್ತಾರೆ. ಕೊಂಚ ಗಮನ ಹರಿಸಿ ಮುಂದಿನ ಹೆಜ್ಜೆ ಇಡಿ.

ಮೀನಾ ರಾಶಿ: ವಿಧ್ಯಾರ್ಥಿಗಳಿಗೆ ಈ ವಾರ ಸಾಕಷ್ಟು ಲಾಭಕರವಾದ ದಿನವಾಗಿರಲಿದೆ. ನಿಮಗೆ ಸಿಕ್ಕ ಸಮಯವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸಿ. ಇನ್ನು ಈ ವಾರ ನಿಮ್ಮ ಹಣ ಖರ್ಚಾಗುವ ಸಾಧ್ಯತೆ ಹೆಚ್ಚಿದೆ. ಇದರ ಬಗ್ಗೆ ಕೊಂಚ ಗಮನ ಹರಿಸಿ. ಇನ್ನು ನಿಮ್ಮ ವೃತ್ತಿ ಜೀವನದಲ್ಲಿ ನೀವು ಯಶಸ್ಸು ಕಾಣಲಿದ್ದೀರಿ.

Threads an Instagram app : ಟ್ವಿಟ್ಟರ್ ಅನ್ನು ಧೂಳಿಪಟ ಮಾಡಲು ಬಂದಿರುವ “ಥ್ರೇಡ್ಸ್” ಏನಿದು ಥ್ರೇಡ್ಸ್ ಯಾಕಿಷ್ಟು ದೇಶದಾದ್ಯಂತ ಫೇಮಸ್ ಆಗುತ್ತಿದೆ ಏನಿದರ ವಿಶೇಷ ಸಂಪೂರ್ಣ ಮಾಹಿತಿ ಇಲ್ಲಿದೆ!!

Leave a comment