Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Daily Horoscope: ಇಂದು ಸೋಮವಾರ ಪರಶಿವನ ಕೃಪೆಯಿಂದ ಯಾವೆಲ್ಲಾ ರಾಶಿಗಳು ಯಾವೆಲ್ಲಾ ಲಾಭಗಳನ್ನು ಪಡೆಯಲಿದೆ ನೋಡಿ!

Daily Horoscope: ಮೇಷ ರಾಶಿ: ಇಂದಿನ ದಿನ ನಿಮ್ಮ ನಡುವಳಿಕೆಗೆ ಎಲ್ಲರಿಂದ ಮೆಚ್ಚುಗೆ ಹಾಗು ಆಶೀರ್ವಾದ ಪಡೆದುಕೊಳ್ಳುತ್ತೀರಿ. ಸ್ನೇಹಿತರು ಹಾಗೂ ಆಪ್ತರು ನಿಮ್ಮ ವೈಯಕ್ತಿಕ ಜೀವನ ಕುರಿತು ಸಲಹೆಗಳನ್ನು ನೀಡುತ್ತಾರೆ. ಇಂದು ನಿಮ್ಮ ಸಂಸಾರಿಕ ಜೀವನದಲ್ಲಿ ದೊಡ್ಡ ತೊಂದರೆಯನ್ನು ಅನುಭವಿಸುವ ಸಾಧ್ಯತೆ ಇದೆ. ಇಂದು ನೀವು ಲಾಭದಾಯಕ ಹೊಸ ಉದ್ಯಮಗಳನ್ನು ಪ್ರಾರಂಭಿಸುವ ಎಲ್ಲಾ ಸಾಧ್ಯತೆಗಳು ಕಾಣುತ್ತಿದೆ.

ವೃಷಭ ರಾಶಿ: ಇಂದು ನೀವು ಸಾಕಷ್ಟು ಹಣವನ್ನು ಖರ್ಚು ಮಾಡುವ ಸ್ಥಿತಿ ಎದುರಾಗಬಹುದು, ನಿಮ್ಮ ಖರ್ಚಿನ ಬಗ್ಗೆ ಸ್ವಲ್ಪ ಗಮನಹರಿಸುವುದು ಉತ್ತಮ. ಇಂದು ನಿಮ್ಮ ಸಂಗಾತಿ ನೀವು ಊಹಿಸಿದ ರೀತಿ ನಿಮಗೆ ಸಂತೋಷದ ಸುದ್ದಿಯನ್ನು ಹೇಳಬಹುದು. ನಿಮ್ಮ ಸಂಗಾತಿಯ ಜೊತೆಗೆ ಇಂದಿನ ದಿನ ನೀವು ಅದ್ಭುತವಾದ ಸಮಯವನ್ನು ಕಳೆಯಲಿದ್ದೀರಿ.

ಮಿಥುನ ರಾಶಿ: ಇಂದಿನ ದಿನ ಎಲ್ಲರೂ ನಿಮ್ಮ ನಡವಳಿಕೆಯಿಂದ ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ. ಇಂದಿನ ದಿನ ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಅಗತ್ಯ ಇದ್ದವರಿಗೆ ಮಾತ್ರ ಹಣ ಕೊಡುವ ಮೂಲಕ ನಿಮ್ಮ ಮನಸ್ಸಿಗೆ ಕೊಂಚ ವಿಶ್ರಾಂತಿ ಸಿಗಲಿದೆ. ನಿಮ್ಮ ಸಂಗಾತಿಯ ಜೊತೆಗೆ ಇಂದಿನ ದಿನ ನಿಜವಾದ ಪ್ರೀತಿಯನ್ನು ಅನುಭವಿಸುತ್ತೀರಿ.

ಕರ್ಕಾಟಕ ರಾಶಿ: ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ಮನಸ್ಸಿಗೆ ಕೊಂಚ ವಿಶ್ರಾಂತಿ ದೊರೆಯಲಿದೆ. ನಿಮ್ಮ ಮಾತುಗಳ ಮೂಲಕ ನಿಮ್ಮ ಪೋಷಕರ ಮನಸ್ಸಿಗೆ ನೋವುಂಟುಮಾಡಲಿದ್ದೀರಿ. ಇನ್ನು ಯಾವುದೇ ಹೊಸ ಕೆಲಸ ಮಾಡುವ ಮುನ್ನ ಅದರ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿದು ನಂತರ ಈ ಬಗ್ಗೆ ಯೋಚಿಸುವುದು ಉತ್ತಮ.

ಸಿಂಹ ರಾಶಿ: ಇಂದಿನ ದಿನ ನಿಮಗಾಗಿ ಸಾಕಷ್ಟು ಸಮಯ ದೊರೆಯಲಿದ್ದು ಈ ಸಮಯದಲ್ಲಿ ಉಪಯುಕ್ತ ಕೆಲಸಗಳನ್ನು ಮಾಡಿ. ನಿಮ್ಮ ಪ್ರೀತಿ ಪಾತ್ರ ಇಂದಿನ ದಿನ ನಿಮಗೆ ದೊಡ್ಡ ಉಡುಗೊರೆಯನ್ನು ನೀಡುವ ಮೂಲಕ ನಿಮ್ಮ ಮನಸ್ಸಿಗೆ ಸಂತಸ ತರಲಿದ್ದಾರೆ. ಬಹಳ ದಿನಗಳ ನಂತರ ಇಂದು ನೀವು ಸಂತಸದ ಪ್ರಯಾಣದಲ್ಲಿ ಭಾಗಿಯಾಗಲಿದ್ದೀರಿ.

ಕನ್ಯಾ ರಾಶಿ: ನಿಮ್ಮ ಧೀರ್ಘ ಕಾಲದ ಬಾಕಿಗಳು ಇಂದು ನಿಮ್ಮನ್ನು ಬಂದು ತಲುಪಲಿದೆ. ಇಂದಿನ ದಿನ ನಿಮ್ಮ ಮಾತಿನ ಬಗ್ಗೆ ಕೊಂಚ ಗಮನ ಹರಿಸಿ ಅನಗತ್ಯವಾದ ಮಾತುಗಳಿಂದ ನಿಮ್ಮ ಚಿತ್ರಣದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಬಹಳ ಚಾಲನೆ ಮಾಡುವಾಗ ಕೊಂಚ ಎಚ್ಚರದಿಂದ ಇರುವುದು ಉತ್ತಮ. ಹೊಸ ಹೂಡಿಕೆಗಳಿಂದ ನೀವು ನಷ್ಟವಾಗುವ ಸಾಧ್ಯತೆ ಇದೆ ಇದರ ಬಗ್ಗೆ ಕೊಂಚ ಗಮನ ಹರಿಸಿ.

ತುಲಾ ರಾಶಿ: ಇಂದಿನ ದಿನ ನಿಮ್ಮ ಮನಸ್ಸು ಬಹಳ ದುರ್ಬಲವಾಗಿರಲಿದೆ. ಸಣ್ಣ ಸಣ್ಣ ವಿಚಾರಗಳು ಸಹ ನಿಮ್ಮ ಮನಸ್ಸನ್ನು ಕೆಡಿಸುತ್ತದೆ. ಕುಟುಂಬದ ಸದಸ್ಯರು ನಿಮ್ಮ ನಿರೀಕ್ಷೆಗಳನ್ನು ಪೂರೈಸದೆ ಇರುವ ಎಲ್ಲ ಸಾಧ್ಯತೆ ಇದೆ. ಅವರ ಮೇಲೆ ಅವಲಂಬಿತವಾಗಿರದೆ ನಿಮ್ಮ ಮೇಲೆ ನೀವು ನಂಬಿಕೆ ಇಡುವುದು ಉತ್ತಮ. ಇಂದಿನ ಸಂಪೂರ್ಣ ದಿನ ನೀವು ನಿಮ್ಮ ಕೆಲಸಗಳಲ್ಲಿ ತೊಡಗಲೀದ್ದೀರಿ. ಆದರೆ ಸಂಜೆಯ ಸಮಯದಲ್ಲಿ ನಿಮಗೆ ಕೊಂಚ ವಿಶ್ರಾಂತಿ ದೊರೆಯಲಿದೆ.

ವೃಶ್ಚಿಕ ರಾಶಿ: ಎಂತಹ ಕಷ್ಟ ಪರಿಸ್ಥಿತಿ ಬಂದರೂ ಸಹ ಅದನ್ನು ದೈರ್ಯದಿಂದ ಎದುರಿಸಿ. ಯಾವುದೇ ಕಾರಣಕ್ಕೂ ನಿಮ್ಮ ಮನಸ್ಸನ್ನು ದುರ್ಬಲಗೊಳಿಸಬೇಡಿ. ಸಕಾರಾತ್ಮಕ ಯೋಚನೆಗಳ ಮೂಲಕ ಯಾವುದೇ ಪರಿಸ್ಥಿತಿಯನ್ನು ಬಹಳ ಸುಲಭವಾಗಿ ಎದುರಿಸಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಕೊಂಚ ಗಮನ ಹರಿಸಿ. ನಿಮ್ಮ ಖರ್ಚುಗಳ ಬಗ್ಗೆ ಗಮನ ಹರಿಸಿ. ಇಂದು ನಿಮ್ಮ ಸಂಗಾತಿಯ ಪ್ರೀತಿ ಗಾಳಿಯಲ್ಲಿರಲಿದೆ.

ಧನಸ್ಸು ರಾಶಿ: ಪ್ರಯಾಣದ ಕಾರಣದಿಂದ ನಿಮ್ಮ ಆರೋಗ್ಯ ಸ್ಥಿತಿಯಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆ ಇದೆ. ವ್ಯವಹಾರಗಳಲ್ಲಿ ಪೋಷಕರ ಸಲಹೆ ಪಡೆದು ಕಾರ್ಯನಿರ್ವಹಿಸುವುದರಿಂದ ನೀವು ಸಾಕಷ್ಟು ಲಾಭವನ್ನು ಕಾಣಬಹುದು. ಇನ್ನು ಕೆಲವು ಜನರಿಂದ ದೂರ ಇರುವುದು ಉತ್ತಮ ಎಂದು ನಿಮ್ಮ ಮನಸ್ಸಿಗೆ ಅನಿಸಿದರೆ ಅಂತವರಿಂದ ದೂರ ಇರುವುದು ಉತ್ತಮ. ಇಲ್ಲವಾದರೆ ಭವಿಷ್ಯದಲ್ಲಿ ಇದು ನಿಮಗೆ ತೊಂದರೆಗಳನ್ನು ತರಬಹುದು.

ಮಕರ ರಾಶಿ: ಇಂದಿನ ದಿನದ ಅನೇಕ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯಲಿದ್ದೀರಿ. ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಸ್ಥಿರವಾಗುವ ಎಲ್ಲಾ ಸಾಧ್ಯತೆ ಇದೇ. ನಿಮ್ಮ ಆಪ್ತರು ಅಥವಾ ಸ್ನೇಹಿತರು ಇಂದು ನಿಮಗೆ ಹಣದ ಸಹಾಯ ಮಾಡಲಿದ್ದಾರೆ. ನಿಮ್ಮ ಕಠಿಣ ಪರಿಶ್ರಮದ ಮೂಲಕ ಕೆಲಸದ ಜಾಗದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ. ನಿಮ್ಮ ಪ್ರೀತಿ ಪಾತ್ರದ ಮಾತುಗಳು ನಿಮ್ಮ ಮನಸ್ಸಿಗೆ ನೋವುಂಟು ಮಾಡುತ್ತದೆ.

ಕುಂಭ ರಾಶಿ: ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಹೆಚ್ಚು ಗಮನಹರಿಸುವುದು ಉತ್ತಮ. ನೀವು ವಿವಾಹಿತರಾಗಿದ್ದರೆ ನಿಮ್ಮ ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಿ, ಏಕೆಂದರೆ ಅವರು ತೊಂದರೆಗಳಿಗೆ ಸಿಲುಕುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಪಡೆದುಕೊಳ್ಳುತ್ತೀರಿ. ನಿಮ್ಮ ಕುಟುಂಬಸ್ಥರ ಜೊತೆಗೆ ಇಂದಿನ ದಿನ ಉತ್ತಮ ಸಮಯವನ್ನು ಕಳೆಯಲಿದ್ದೀರಿ.

ಮೀನಾ ರಾಶಿ: ಹೂಡಿಕೆ ಮಾಡುವುದರಿಂದ ನೀವು ಯಾವಾಗಲೂ ಉತ್ತಮ ಲಾಭವನ್ನು ಪಡೆಯುತ್ತೀರಿ ಎಂಬುದು ಇಂದು ನಿಮಗೆ ಅರ್ಥವಾಗುತ್ತದೆ. ಹಳೆಯ ಹೂಡಿಕೆಗಳು ಇಂದು ನಿಮಗೆ ಸಾಕಷ್ಟು ಲಾಭವನ್ನು ತಂದುಕೊಡುತ್ತದೆ. ಕೆಲಸದ ಸಮಯದಲ್ಲಿ ನೀವು ಸಾಕಷ್ಟು ಒತ್ತಡವನ್ನು ಅನುಭವಿಸಲಿದ್ದೀರಿ.

Leave a comment