Horoscope: ಬಂತು ಬಂದೆ ಬಿಡ್ತು ಕೊನೆಗೂ ಎಲ್ಲ ಕಷ್ಟ ಕಳೆದು ಬಾಳಲ್ಲಿ ಬೆಳಕು ತುಂಬವ ಸಮಯ ಇನ್ನು ಮುಂದೆ ಈ 3 ರಾಶಿಯವರನ್ನು ಯಾರು ತಡೆಯಲು ಸಾಧ್ಯವಿಲ್ಲ.
Horoscope: Good times are coming for these 3 Zodiac signs,
Horoscope: ರಾಹು ಮತ್ತು ಕೇತು ಎನ್ನುವ ಈ ಎರಡು ಗ್ರಹಗಳ ಹೆಸರು ಕೇಳಿದ ತಕ್ಷಣ ಎಲ್ಲರೂ ಒಂದು ಕ್ಷಣ ಬೆಚ್ಚಿ ಬೀಳುತ್ತಾರೆ. ಈ ಎರಡು ರಾಶಿಗಳು ಯಾರ ರಾಶಿ ಪ್ರವೇಶ ಮಾಡುತ್ತಾರೋ ಅವರ ಕೆಟ್ಟ ಸಮಯ ಶುರು ಎನ್ನುವುದು ಅನೇಕರ ನಂಬಿಕೆ. ಆದರೆ, ಇದು ಸಂಪೂರ್ಣ ನಿಜವಲ್ಲ, ನಿಮ್ಮ ಜಾತಕದಲ್ಲಿ ಕೇತುವಿನ ಸ್ಥಾನ ಉತ್ತಮವಾಗಿದ್ದರೆ, ಕೇತುವಿನಿಂದ ನೀವು ಸಾಕಷ್ಟು ಲಾಭಗಳನ್ನು ಪಡೆಯುತ್ತೀರಿ. ಅದೇ ಕೇತುವಿನ ಸ್ಥಾನ ಸರಿಯಾಗಿ ಇಲ್ಲದೆ ಹೋದರೆ, ನೀವು ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.
ಇದೇ 30 ನೇ ತಾರೀಕು, ಕೇತು ತನ್ನ ಸ್ಥಾನ ಬದಲಾಯಿಸುತ್ತಿದ್ದು, ಕೇತು ತುಲಾ ರಾಶಿಯನ್ನು ಬಿಟ್ಟು ಕನ್ಯಾ ರಾಶಿಯನ್ನು ಪ್ರವೇಶಸಲಿದ್ದಾನೆ. ಕೇತು ಕನ್ಯಾ ರಾಶಿಯನ್ನು ಪ್ರವೇಶಿಸಿದ ನಂತರ ಅನೇಕ ರಾಶಿಯವರ ಅದೃಷ್ಟ ಕುಲಾಯಿಸಲಿದೆ. ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯಲಿದೆ. ಹಾಗಾದರೆ ಯಾವು ಆ ರಾಶಿಗಳು ನೋಡೋಣ ಬನ್ನಿ..
ಮೇಷ ರಾಶಿ: ಅಕ್ಟೋಬರ್ 30 ರಂದು ನಿಮ್ಮ ರಾಶಿಯ ಆರನೇ ಮನೆಯಿಂದ ಕೇತು ಸಂಚರಿಸಲಿದ್ದು, ಇದರ ಪರಿಣಾಮ ನೀವು ಸಾಕಷ್ಟು ಲಾಭಗಳನ್ನು ಪಡೆಯಲಿದ್ದೀರಿ. ಶತ್ರುಗಳ ಬಾಧೆಯಿಂದ ವಿಮುಕ್ತಿ ಪಡೆಯಲಿದ್ದೀರಿ. ಇನ್ನು ಯಾವುದೇ ಹೊಸ ಕೆಲಸ ಪ್ರಾರಂಭಿಸಿದರೆ, ಅದರಲ್ಲಿ ಜಯ ಕಾಣಲಿದ್ದೀರಿ. ಇನ್ನು ನಿಮ್ಮ ಆರ್ಥಿಕ ಸ್ಥಿತಿ ಸಹ ಸರಿ ಹೊಗಲಿದ್ದು, ಮುಂದಿನ ದಿನಗಳು ನಿಮಗೆ ಬಾರಿ ಅನುಕೂಲಕರವಾಗಿರಲಿದೆ.
ಕರ್ಕಾಟಕ ರಾಶಿ: ಇದೆ ಅಕ್ಟೋಬರ್ 30 ರಂದು ಕೇತು, ನಿಮ್ಮ ಮೂರನೇ ಮನೆಯಿಂದ ಸಂಚರಿಸಲಿದ್ದು, ಕೇತುವಿನ ಕಣ್ಣು ನಿಮ್ಮ ಏಳನೇ, ಒಂಬತ್ತನೇ ಹಾಗೂ ಹನ್ನೊಂದನೇ ಮನೆಯ ಮೇಲಿರುತ್ತದೆ. ಹಣ ಮತ್ತು ಆಸ್ತಿಗೆ ನಡೆಯುತ್ತಿರುವ ಎಲ್ಲಾ ವೈಮನಸ್ಸುಗಳು ಕಡಿಮೆಯಾಗುತ್ತದೆ. ನೀವು ಪ್ರಾರಂಭಿಸುವ ಯಾವುದೇ ಹೊಸ ಕೆಲಸಗಳಲ್ಲಿ ಕೇತುವಿನ ಅನುಗ್ರಹದಿಂದ ಜಯ ಕಾಣುತ್ತೀರಿ.
ವೃಶ್ಚಿಕ ರಾಶಿ: ಕೇತು ವೃಶ್ಚಿಕ ರಾಶಿಯವರ ಹನ್ನೊಂದನೇ ಮನೆಯಿಂದ ಸಂಚರಿಸಲಿದ್ದು, ಕೇತುವಿನ ಕಣ್ಣು ಮೂರನೇ, ಐದನೇ ಹಾಗೂ ಏಳನೇ ಮನೆಯ ಮೇಲಿದೆ. ನಿಮ್ಮ ಬಹು ಕಾಲದ ಎಲ್ಲಾ ಕೆಲಸಗಳು ಆದಷ್ಟು ಬೇಗ ಪೂರ್ಣಗೊಳ್ಳಲಿದೆ. ನಿಮ್ಮ ಕೆಲಸದ ಜಾಗದಲ್ಲಿ ಸಹ ದೊಡ್ಡ ಮಟ್ಟದಲ್ಲಿ ಲಾಭ ಪಡೆಯಲಿದ್ದೀರಿ.