Horoscope: ಈ 3 ರಾಶಿಯವರಿಗೆ ಕೊನೆಗೂ ಬಂದೆ ಬಿಡ್ತು ಶನಿ ಮಾರ್ಗಿ ಯೋಗ, ಇವರು ಎಲ್ಲೆ ಹೋದರು ಯಶಸ್ಸು, ಜಯ, ಕೀರ್ತಿ!!
For these zodiac signs god Shani dev has blessed and good times are coming for them.
Horoscope: ಶನಿ ಎನ್ನುವ ಹೆಸರು ಕೇಳಿದ ತಕ್ಷಣ ಎಲ್ಲರ ಮನಸ್ಸಿನಲ್ಲಿ ನಡುಕ ಶುರುವಾಗುತ್ತದೆ. ಒಮ್ಮೆ ಶನಿ ಯಾವುದಾದರೂ ರಾಶಿಯ ಮನೆಗೆ ಪ್ರವೇಶ ಮಾಡಿದರೆ, ಆ ರಾಶಿಯವರ ಸಂಪೂರ್ಣ ಜೀವನ ಬದಲಾಗುತ್ತದೆ. ಇಲ್ಲಿ ಎಲ್ಲರೂ ತಿಳಿಯಬೇಕಾದ ವಿಷಯ ಏನೆಂದರೆ, ಶನಿ ಬಹಳ ನಿಧಾನವಾಗಿ ಚಲಿಸುವ ಗ್ರಹ. ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ಶನಿ ತನ್ನ ಸ್ಥಾನವನ್ನು ಬದಲಿಸುತ್ತಾರೆ. ಇದೀಗ ಪ್ರಸ್ತುತ ಶನಿ ಕುಂಭ ರಾಶಿಯವರ ಹೆಗಲೆರಿದ್ದಾನೆ.
ಇನ್ನು ಶನಿ ನಾವು ಮಾಡುವ ಕರ್ಮ ಫಲಗಳನ್ನು ಲೆಕ್ಕಿಸಿ ಅದಕ್ಕೆ ತಕ್ಕಂತೆ ಫಲಿತಾಂಶವನ್ನು ನೀಡುತ್ತಾರೆ. ನಾವು ಒಳ್ಳೆಯ ಕೆಲಸಗಳನ್ನು ಮಾಡಿ, ನಮ್ಮ ಮನಸ್ಸು ಪರಿಶುದ್ಧವಾಗಿದ್ದರೆ, ಶನಿ ನಮ್ಮನ್ನು ರಕ್ಷಿಸಲು ನಿಲ್ಲುತ್ತಾನೆ. ಅದೇ ನಾವು ಮಾಡುವ ಕೆಲಸಗಳಲ್ಲಿ ಲೋಪ ಇದ್ದು, ನಾವು ನೀತಿ ತಪ್ಪಿ ನಡೆದರೆ, ಶನಿ ದಂಡನಾಯಕನಾಗಿ ನಮ್ಮನ್ನು ಮತ್ತೆ ಮಾರ್ಗಕ್ಕೆ ತರುತ್ತಾನೆ.
ಇದೀಗ ಈ ಮೂರು ರಾಶಿಯವರು ಶನಿ ದೇವರ ಪ್ರಭಾವದಿಂದ ಸಾಕಷ್ಟು ಲಾಭವನ್ನು ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ಆ ಮೂರು ರಾಶಿಗಳು ಯಾವುವು ಎನ್ನುವುದನ್ನು ನೋಡೋಣ ಬನ್ನಿ..
ವೃಷಭ ರಾಶಿ: ವೃಷಭ ರಾಶಿಯವರು ಶನಿ ದೇವರ ಕೃಪೆಗೆ ಪಾತ್ರರಾಗಲಿದ್ದಾರೆ. ಹೌದು ಶನಿಯು ಇದೀಗ ಈ ರಾಶಿಯವರ 10ನೇ ಮನೆಗೆ ಸಂಚರಿಸಲಿದ್ದು, ಈ ರಾಶಿಯವರ ಅದೃಷ್ಟ ಕುಲಾಯಿಸಲಿದೆ. ಈ ರಾಶಿಯವರು ವೃತ್ತಿ ಮತ್ತು ವ್ಯಾಪಾರಗಳಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿದ್ದಾರೆ. ಇನ್ನು ಉದ್ಯೋಗ ಹುಡುಕುತ್ತಿರುವವರಿಗೆ ಸಿಹಿ ಸುದ್ದಿ ಸಿಗಲಿದೆ. ಇನ್ನು ಉದ್ಯಮಿಗಳು ಒಳ್ಳೆಯ ಹೆಸರು ಪಡೆಯುವ ಮೂಲಕ ಸಮಾಜದಲ್ಲಿ ಸಾಕಷ್ಟು ಗೌರವ ಪಡೆಯಲಿದ್ದಾರೆ.
ಸಿಂಹ ರಾಶಿ: ಸಿಂಹ ರಾಶಿಯ ಜನರು ಯಾವುದೇ ವ್ಯಾಪಾರ ಅಥವಾ ವ್ಯವಹಾರಗಳನ್ನು ಶುರು ಮಾಡಿದರೆ ಅದರಲ್ಲಿ ಲಾಭ ಕಾಣಲಿದ್ದಾರೆ. ಇನ್ನು ಕುಟುಂಬದ ಎಲ್ಲಾ ಸಮಸ್ಯೆಗಳು ದೂರವಾಗಿ ಸಂತೋಷದಿಂದ ಕಾಲ ಕಳೆಯಲಿದ್ದೀರಿ. ಇನ್ನು ಈ ರಾಶಿಯವರ ವೈವಾಹಿಕ ಜೀವನ ಇನ್ನು ಮುಂದೆ ಸುಖಮಯವಾಗಿ ಸಾಗಲಿದೆ. ಇನ್ನು ನಿಮ್ಮ ಆರ್ಥಿಕ ಪರಿಸ್ಥಿತಿ ಸಹ ಸುಧಾರಿಸಲಿದೆ.
ಮಕರ ರಾಶಿ: ಉದ್ಯೋಗಿಗಳು ತಮ್ಮ ಮೇಲಧಿಕಾರಿಗಳಿಂದ ಒಳ್ಳೆಯ ಹೆಸರು ಪಡೆಯಲಿದ್ದು, ನಿಮ್ಮ ಸ್ಥಾನದಲ್ಲಿ ಬರ್ತಿ ಪಡೆಯುವ ಸಾಧ್ಯತೆ ಇದೆ. ಇನ್ನು ವ್ಯಾಪಾರದಲ್ಲಿ ಲಾಭ ಪಡೆಯಲಿದ್ದು, ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಕಾಣಲಿದ್ದೀರಿ. ಇನ್ನು ನಿಮ್ಮ ಆರ್ಥಿಕ ಪರಿಸ್ಥಿತಿ ಸಹ ಸುಧಾರಿಸಲಿದೆ.