Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Daily Horoscope : ಇಂದು 21/6/23, ಬುಧವಾರ ಯಾವೆಲ್ಲಾ ರಾಶಿಗಳಿಗೆ ಯಾವೆಲ್ಲಾ ಲಾಭಗಳು ದೊರೆಯಲಿವೆ!!

Daily Horoscope : Today 21/6/23, Wednesday which signs will get what benefits!!

Get real time updates directly on you device, subscribe now.

ಮೇಷ ರಾಶಿ: ಇಂದು ನಿಮ್ಮ ಬಳಿ ಯಾವುದೋ ಒಂದು ಕೆಲಸಕ್ಕೆ ಸಾಲ ಕೇಳಿಕೊಂಡು ಬರುವವರನ್ನು ನಿರ್ಲಕ್ಷಿಸಿ. ಇಂದು ನಿಮ್ಮ ಪ್ರೀತಿ ಪಾತ್ರದಿಂದ ನೀವು ಸಾಕಷ್ಟು ಪ್ರೀತಿಯನ್ನು ಪಡೆಯುವ ಸಾಧ್ಯತೆ ಇದೆ. ಅಲ್ಲದೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಇಂದು ನೀವು ಲಾಭವನ್ನು ಸಹ ಕಾಣುತ್ತೀರಿ. ನಿಮ್ಮ ಹಾಸ್ಯ ಮಾತುಗಳ ಮೂಲಕ ಜನರನ್ನು ನಿಮ್ಮ ಕಡೆಗೆ ಆಕರ್ಷಿಸುತ್ತೀರಿ. ನಿಮ್ಮ ಆರೋಗ್ಯದಲ್ಲಿ ಸಹ ಇಂದು ಸ್ವಲ್ಪ ಚೇತರಿಕೆ ಕಂಡು ಬರಲಿದೆ.

ವೃಷಭ ರಾಶಿ: ನೀವು ಹಳೆಯ ವಿಚಾರಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ಮುಂದೇನು ಮಾಡಬೇಕು ಎನ್ನುವುದರ ಬಗ್ಗೆ ಯೋಚಿಸುವುದು ಉತ್ತಮ. ಇದೇ ಚಿಂತನೆಯ ಕಾರಣದಿಂದ ನೀವು ಅನಾರೋಗ್ಯದ ಸಮಸ್ಯೆಯಿಂದ ಸಹ ಬಳಲಲಿದ್ದೀರಿ. ಇಂದಿನ ದಿನ ಕೋಪದ ಮೇಲೆ ನಿಯಂತ್ರಣ ಇದ್ದರೆ ಒಳ್ಳೆಯದು. ಇಂದು ನಿಮ್ಮ ಮಕ್ಕಳು ಹಾಗೂ ಪ್ರೀತಿ ಪಾತ್ರ ನಿಮ್ಮೊಂದಿಗೆ ಬಹಳ ಸಂತೋಷವಾಗಿರಲು ಇಷ್ಟಪಡುತ್ತಾರೆ, ಎಲ್ಲವನ್ನು ಮರೆತು ಅವರಿಗಾಗಿ ಕೊಂಚ ಸಮಯವನ್ನು ಕೊಡಲು ಪ್ರಯತ್ನಿಸಿ.

Weekly Horoscope : ಇಂದು ಭಾನುವಾರ 18/06/23 ರಿಂದ 24/06/23 ರವರೆಗೆ ನಿಮ್ಮ ವಾರ ಭವಿಷ್ಯ ಹೇಗಿರಲಿದೆ ತಿಳಿದುಕೊಳ್ಳಿ!!

ಮಿಥುನ ರಾಶಿ: ಎಲ್ಲವೂ ನಿಮ್ಮಿಷ್ಟದಂತೆ ಆಗಬೇಕು ಎಲ್ಲರೂ ನಿಮಗೆ ಇಷ್ಟ ಬಂದಂತೆ ನಡೆದುಕೊಳ್ಳಬೇಕು ಎನ್ನುವ ಈ ಆಲೋಚನೆಯನ್ನು ಬಿಡುವುದು ಒಳ್ಳೆಯದು. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಸೇರಿ ಮಾಡುವ ಒಂದು ನಿರ್ಧಾರ ನಿಮ್ಮ ಜೀವನವನ್ನೇ ಸಂಪೂರ್ಣವಾಗಿ ಬದಲಾಯಿಸುತ್ತದೆ. ಇನ್ನು ವಿದ್ಯಾರ್ಥಿಗಳು ಇಂದು ತಮ್ಮ ಜೀವನ ಯೋಚಿಸಿಕೊಳ್ಳುವಂತಃ ಸಲಹೆಗಳನ್ನು ಪಡೆಯಲಿದ್ದೀರಿ. ನಿಧಾನವಾಗಿ ಕೂತು ಯೋಚಿಸಿದರೆ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ.

ಕರ್ಕಾಟಕ ರಾಶಿ: ಇಂದು ನೀವು ಸಂತಸದ ಪ್ರಯಾಣ ಒಂದರಲ್ಲಿ ತೊಡಗಿಕೊಳ್ಳುವ ಸಾಧ್ಯತೆಗಳಿವೆ. ಇನ್ನು ಉದ್ಯೋಗದಲ್ಲಿರುವವರು ತಮ್ಮ ಆಪ್ತರಿಂದ ಸಲಹೆಗಳನ್ನು ಪಡೆಯುವ ಮೂಲಕ ತಮ್ಮ ಕೆಲಸಗಳಲ್ಲಿ ಜಯಶೀಲರಾಗಬಹುದು. ಇನ್ನು ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸಹ ಸಾಕಷ್ಟು ಬದಲಾವಣೆಗಳನ್ನು ಇಂದು ನೀವು ಕಾಣಲಿದ್ದೀರಿ. ಅನಗತ್ಯ ಕೆಲಸಗಳಿಗೆ ಹೆಚ್ಚಿನ ಸಮಯ ನೀಡುವ ಮೂಲಕ ಅಗತ್ಯವಾದ ಕೆಲಸಗಳನ್ನು ನೀವು ಮರೆಯುವ ಸಾಧ್ಯತೆ ಹೆಚ್ಚಿದೆ. ಇದರ ಬಗ್ಗೆ ಕೊಂಚ ಗಮನ ಹರಿಸುವುದು ಉತ್ತಮ.

Gruha Lakshmi Scheme : ಗೃಹಲಕ್ಷ್ಮಿ ಯೋಜನೆ ಅರ್ಜಿಸಲ್ಲಿಸಲು ವಿಳಂಬ ಮುಂದಿನ ಈ ದಿನಗಳ ವರೆಗೆ ಮುಂದೂಡಲಾಗಿದೆ, ಸಚಿವರು ಹೇಳಿದ್ದಿಷ್ಟು!!

ಸಿಂಹ ರಾಶಿ: ಕುಟುಂಬಸ್ಥರಿಂದ ಇಂದು ನಿಮ್ಮ ಮನಸ್ಸಿಗೆ ಬಾರಿ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಆದರೆ ನೀವು ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬಾರದು. ಇಲ್ಲದೆ ಹೋದರೆ ಪರಿಸ್ಥಿತಿ ಮಿತಿಮೀರಿ ಹೋಗುತ್ತದೆ. ಇಂದು ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರಲಿದೆ. ಇನ್ನು ದಾನ ಮಾಡುವ ಮೂಲಕ ನಿಮ್ಮ ಮನಸ್ಸಿಗೆ ಕೊಂಚ ಶಾಂತಿ ಮತ್ತು ನೆಮ್ಮದಿಯನ್ನು ನೀವು ಪಡೆಯಬಹುದಾಗಿದೆ. ಇಂದು ನಿಮ್ಮ ಮನೆಯಲ್ಲಿ ಯಾವುದು ಸಣ್ಣ ಸಣ್ಣ ವಿಷಯಗಳಿಗೆ ಜಗಳವಾಗುವ ಸಾಧ್ಯತೆ ಇದೆ.

ಕನ್ಯಾ ರಾಶಿ: ಇಂದು ನಿಮ್ಮ ಮಾನಸಿಕ ಸ್ಥಿತಿ ಕೊಂಚ ದುರ್ಬಲವಾಗಿರುತ್ತದೆ, ನಿಮಗೆ ಕೊಂಚ ನೋವಾದಲ್ಲಿ ಸಹ ಆ ಸ್ಥಳದಿಂದ ಹೊರಗೆ ಉಳಿಯುವುದು ಉತ್ತಮ. ಇಂದು ನೀವು ಯಾರು ಸಹಾಯವೂ ಇಲ್ಲದೆ ಹಣವನ್ನು ಗಳಿಸುವ ಸಾಧ್ಯತೆ ಇದೆ. ಅಲ್ಲದೆ ನೀವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ಮನಸ್ಸನ್ನು ಕೊಂಚ ಹಗುರವಾಗಿಸಿಕೊಳ್ಳಬಹುದು. ಇಂದು ನಿಮ್ಮ ವೃತ್ತಿಪರ ಜೀವನದಲ್ಲಿ ಸಹ ಸಾಕಷ್ಟು ಲಾಭಗಳನ್ನು ಪಡೆಯಲಿದ್ದೀರಿ. ಗೆಳೆಯರು ಹಾಗೂ ಹತ್ತರ ಕೊಡುವ ಸಲಹೆಗಳನ್ನು ಪಡೆದುಕೊಂಡು ಅವುಗಳನ್ನು ನಿಮ್ಮ ಜೀವನದಲ್ಲಿ ಅನ್ವಯಿಸಲು ಪ್ರಯತ್ನಿಸಿ.

Daily Horoscope
Image credited to original source

ತುಲಾ ರಾಶಿ: ನಿಮ್ಮ ಭಯವೇ ನಿಮ್ಮನ್ನು ಎಲ್ಲಾ ಸ್ಥಳಗಳಲ್ಲಿ ಕುಗ್ಗಿ ಹೋಗುವಂತೆ ಮಾಡುತ್ತದೆ. ಧೈರ್ಯದಿಂದ ಯಾವುದೇ ಕಷ್ಟ ಬಂದರೂ ಅದನ್ನು ಎದುರಿಸುತ್ತೇನೆ ಎನ್ನುವ ಛಲ ಇಟ್ಟುಕೊಳ್ಳಿ. ಯಾವುದೇ ಅಪರಚಿತ ವ್ಯಕ್ತಿಯ ಸಲಹೆಗಳನ್ನು ಪಡೆಯುವ ಮುನ್ನ ಒಂದೆರಡು ಬಾರಿ ಯೋಚಿಸುವುದು ಉತ್ತಮ. ಇಂದು ನೀವು ಆಭರಣಗಳನ್ನು ಖರೀದಿಸುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ನಿಮ್ಮ ಸಂಗಾತಿ ಜೊತೆಗೆ ಬಾಂಧವ್ಯ ಇಂದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ: ನಿಮ್ಮನ್ನು ನೀವೇ ದಂಡಿಸಿಕೊಳ್ಳುವುದನ್ನು ಮೊದಲು ಬಿಡಿ, ದೇಹದ ಜೊತೆಗೆ ನಿಮ್ಮ ಯೋಚನೆಗಳಿಗೂ ಸಹ ಇಂದು ವಿಶ್ರಾಂತಿ ಕೊಡಲು ಪ್ರಯತ್ನಿಸಿ. ಇನ್ನು ನೀವು ಭವಿಷ್ಯಕ್ಕಾಗಿ ಇಂದು ಚಿಂತಿಸುವ ಪ್ರತಿಯೊಂದು ಯೋಚನೆ ಸಹ ಮುಂದೆ ನಿಮಗೆ ಲಾಭದಾಯಕವಾಗಲಿದೆ. ಇಂದಿನ ದಿನ ಯಾರೇ ನಿಮಗೆ ಸಲಹೆಗಳನ್ನು ನೀಡಿದರು ಅದನ್ನು ಎಚ್ಚರಿಕೆಯಿಂದ ಪಾಲಿಸಿ. ಇನ್ನು ಹೆಚ್ಚಾಗಿ ಜನರ ಜೊತೆ ಬೆರೆಯುವ ಬದಲು ಇಂದಿನ ದಿನ ನಿಮಗಾಗಿ ಕೊಂಚ ಸಮಯವನ್ನು ತೆಗೆದುಕೊಳ್ಳುವುದು ಉತ್ತಮ.

ಜುಲೈ 5 ಕ್ಕೆ ಮಾರುತಿ ಸುಜುಕಿ ಇನ್ವಿಕ್ಟೋ ಭರ್ಜರಿ ಬಿಡುಗಡೆ; ಈ ಹೊಸ ಮಾಡಲ್ ನ ಸ್ಪೆಷಾಲಿಟಿ ಮತ್ತು ಬೆಲೆ ಮಾತ್ರ ತುಂಬಾ ಅದ್ಭುತವಾಗಿದೆ !!

ಧನು ರಾಶಿ: ಇಂದು ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಕಾಣಲಿದ್ದೀರಿ. ಇದೇ ಆರೋಗ್ಯ ಸಮಸ್ಯೆಯಿಂದ ನಿಮ್ಮ ಆರ್ಥಿಕ ಸ್ಥಿತಿ ಸಹ ಕೊಂಚ ಗಂಭೀರವಾಗಲಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅದರ ಬಗ್ಗೆ ಯೋಚಿಸು ಉತ್ತಮ. ಅವಸರದ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅನಗತ್ಯವಾದ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಮೊದಲು ಆ ಸಮಯವನ್ನು ಯಾವುದಾದರು ಒಂದು ಕೆಲಸದಲ್ಲಿ ತೊಡಗಿಕೊಳ್ಳಿ.

ಮಕರ ರಾಶಿ: ನಿಮ್ಮ ಮಾನಸಿಕ ಸಮಸ್ಯೆಗಳಿಂದ ಚೇತರಿಸಿಕೊಳ್ಳಲು ಯೋಗ ಮತ್ತು ಧ್ಯಾನದ ಸಹಾಯವನ್ನು ತೆಗೆದುಕೊಳ್ಳುವುದು ಉತ್ತಮ. ನಿಮ್ಮ ಹಾಸ್ಯದ ಮಾತುಗಳ ಮೂಲಕ ಇಂದು ಕೆಲವು ಜನರ ಮನ ಗೆಲ್ಲುವಲ್ಲಿ ನೀವು ಯಶಸ್ವಿ ಆಗುತ್ತೀರಾ. ಇಂದಿನ ದಿನ ಬಹಳ ಉತ್ಸಾಹಭರಿತರಾಗಿರುತ್ತೀರಾ, ಹಾಗೆ ನಿಮ್ಮ ಎಲ್ಲಾ ಕೆಲಸಗಳಲ್ಲಿ ಇಂದಿನ ದಿನ ಜಯ ಕಾಣುವ ಸಾಧ್ಯತೆ ಇದೆ. ಇಂದು ನಿಮ್ಮ ಪ್ರೀತಿ ಪಾತ್ರದ ಜೊತೆಗೆ ಕೊಂಚ ಸಮಯ ಕಳೆಯುವ ಮೂಲಕ ನಿಮಗೆ ಇನ್ನಷ್ಟು ಸಂತಸವಾಗಲಿದೆ.

Home Appliances : ಟಿವಿ, ವಾಷಿಂಗ್ ಮೆಷಿನ್, ಕಂಪ್ಯೂಟರ್, ಬೆಲೆಗಳಲ್ಲಿ ಬಾರಿ ಇಳಿಕೆ! ಯಾವ ಸಮಯದಲ್ಲಿ ಖರೀದಿಸಿದರೆ ಒಳ್ಳೆಯದು!!

ಕುಂಭ ರಾಶಿ: ಇಂದಿನ ದಿನ ನಿಮ್ಮ ಆರೋಗ್ಯದ ಬಗ್ಗೆ ಕೊಂಚ ಗಮನ ಹರಿಸುವುದು ಉತ್ತಮ. ಇನ್ನು ನೀವು ವಿದ್ಯಾರ್ಥಿಗಳು ಅಥವಾ ವ್ಯಾಪಾರಿಗಳಾಗಿದ್ದರೆ ನಿಮ್ಮ ಮನೆಯಿಂದ ದೂರ ಉಳಿದಿದ್ದರೆ ನಿಮ್ಮ ಬಳಿ ಅನಗತ್ಯ ಖರ್ಚು ಮಾಡಿಸುವವರಿಂದ ಕೊಂಚ ದೂರ ಉಳಿಯುವುದು ಮೇಲು. ಇಂದಿನ ದಿನ ನಿಮಗೆ ಬಹಳ ಲಾಭದಾಯಕವಾಗಲಿದೆ. ಇನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಕಂಚ ಸಂತೋಷದ ಸಮಯವನ್ನು ಕಳೆಯಲಿದ್ದೀರಿ.

ಮೀನ ರಾಶಿ: ನಿಮ್ಮ ಸಂಗಾತಿಯ ಜೊತೆಗೆ ನಿಮ್ಮ ಜೀವನದ ಕುರಿತು ಇಂದು ನೀವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರ ಸಹ ಮುಂದಿನ ದಿನಗಳಲ್ಲಿ ನಿಮಗೆ ಲಾಭದಾಯಕವಾಗಲಿದೆ. ಇಂದಿನ ದಿನ ನಿಮಗೆ ಸಂತೋಷ ಕೊಡುವ ಕೆಲಸಗಳನ್ನು ಮಾಡಿ, ಆದರೆ ಇತರ ವ್ಯಾಪಾರಿಗಳಿಂದ ಕೊಂಚ ದೂರ ಇರಲು ಪ್ರಯತ್ನಿಸಿ. ನಿಮ್ಮ ಸಂಗಾತಿಯ ಜೊತೆಗೆ ನೀವು ಇಂದು ಅದ್ಭುತವಾದ ಕ್ಷಣಗಳನ್ನು ಕಳೆಯಲಿದ್ದಿರಿ.

Get real time updates directly on you device, subscribe now.

Leave a comment