Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Daily Horoscope: ಇಂದು ಜುಲೈ 7, 2023 ಶುಕ್ರವಾರ, ಇಂದಿನ ದಿನ ಯಾವೆಲ್ಲಾ ರಾಶಿಗಳಿಗೆ ಯಾವೆಲ್ಲಾ ಫಲಗಳು ದೊರೆಯಲಿದೆ ನೋಡಿ !!

Daily Horoscope

ಮೇಷ ರಾಶಿ: ನಿಮ್ಮ ಧೀರ್ಘ ಕಾಲದ ಬಾಕಿಗಳು ಇಂದು ಎಲ್ಲವೂ ನಿಮ್ಮನ್ನು ಬಂದು ಸೇರಲಿದೆ. ಇನ್ನು ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡಿ ನಿಮ್ಮ ಆರೋಗ್ಯದ ಬಗ್ಗೆ ಕೊಂಚ ಗಮನ ಹರಿಸುವುದು ಒಳ್ಳೆಯದು. ಇಂದು ನೀವು ಒಂಟಿಯಾಗಿ ಸಮಯ ಕಳೆಯಲು ಇಷ್ಟ ಪಡೆಯುತ್ತೀರಿ. ಇನ್ನು ನಿಮ್ಮ ಸಂಗಾತಿಯ ಜೊತೆಗೆ ಇಂದು ನೀವು ಉತ್ತಮವಾದ ಸಮಯವನ್ನು ಕಳೆಯುತ್ತಿರಿ.

ವೃಷಭ ರಾಶಿ: ನಿಮ್ಮ ನೇರ ಮಾತುಗಳು ಇಂದು ನಿಮ್ಮ ಆಪ್ತರ ಮನಸ್ಸಿಗೆ ನೋವುಂಟು ಮಾಡುವ ಸಾಧ್ಯತೆ ಇದೆ. ಏನಾದರೂ ಮಾತನಾಡುವ ಮುನ್ನ ಹಲವು ಬಾರಿ ಯೋಚಿಸಿ ಮಾತನಾಡಿ. ಇನ್ನು ಯಾವುದಾದರೂ ಹೊಸ ವ್ಯಾಪಾರದಲ್ಲಿ ಹೂಡಿಕೆ ಮಾಡುವ ಮನಸಿದ್ದರೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದು ನಂತರ ಅದರಲ್ಲಿ ಹೂಡಿಕೆ ಮಾಡಿ. ಇನ್ನು ಇಂದಿನ ದಿನ ನಿಮ್ಮ ಎಲ್ಲಾ ಕೆಲಸಗಳು ಬಹಳ ಸರಳವಾಗಿ ನಡೆಯಲಿದೆ.

Threads an Instagram app : ಟ್ವಿಟ್ಟರ್ ಅನ್ನು ಧೂಳಿಪಟ ಮಾಡಲು ಬಂದಿರುವ “ಥ್ರೇಡ್ಸ್” ಏನಿದು ಥ್ರೇಡ್ಸ್ ಯಾಕಿಷ್ಟು ದೇಶದಾದ್ಯಂತ ಫೇಮಸ್ ಆಗುತ್ತಿದೆ ಏನಿದರ ವಿಶೇಷ ಸಂಪೂರ್ಣ ಮಾಹಿತಿ ಇಲ್ಲಿದೆ!!

ಮಿಥುನ ರಾಶಿ: ಬೇರೆಯವರ ಕೆಲಸಗಳಲ್ಲಿ ನಿಮ್ಮ ಸಲಹೆಗಳನ್ನು ನೀಡದೆ ಇರುವುದು ಉತ್ತಮ. ನಿಮ್ಮ ಕೆಲಸಗಳ ಮೇಲೆ ಗಮನ ಹರಿಸಿ. ಮುಂದಿನ ದಿನಗಳಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರಬೇಕೆಂದರೆ ಇಂದಿನಿಂದಲೇ ಹಣವನ್ನು ಉಳಿಸಿ. ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಬೇರೆಯವರೊಂದಿಗೆ ಚರ್ಚಿಸುವುದನ್ನು ತಪ್ಪಿಸಿ.

ಕರ್ಕಾಟಕ ರಾಶಿ: ನಿಮ್ಮ ಭಾವನೆಗಳನ್ನು ನಿಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಿ, ಇಲ್ಲವಾದರೆ ಇದರಿಂದ ನೀವು ಸಮಸ್ಯೆಗಳಿಗೆ ಸಿಲುಕುತ್ತೀರಿ. ಇಂದು ಹಣವನ್ನು ಮಿತಿ ಮೀರಿ ಕರ್ಚು ಮಾಡುವುದನ್ನು ಮಾಡಬೇಡಿ. ಹಣವನ್ನು ಉಳಿಸಲು ಪ್ರಯತ್ನಿಸಿ. ಇಂದಿನ ದಿನ ನಿಮ್ಮ ಸಂಗಾತಿಯ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯಲು ಪ್ರಯತ್ನಿಸಿ, ಈ ಮೂಲಕ ನಿಮ್ಮ ವೈವಾಹಿಕ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.

LPG GAS : ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಇದ್ದವರಿಗೆ ಇನ್ನು ಮುಂದೆ ಕೇವಲ 820 ರೂ ಗೆ ಗ್ಯಾಸ್ ಸಿಗಲಿದೆ, ಪೂರ್ತಿ ವಿವರ ಇಲ್ಲಿದೆ !!

ಸಿಂಹ ರಾಶಿ: ಯೋಗ ಮತ್ತು ಧ್ಯಾನ ಮಾಡುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ. ಇಂದಿನ ದಿನದ ಕೊನೆಯಲ್ಲಿ ನೀವು ಹಣವನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಸಂಗಾತಿ ಇಂದು ನೀವು ಸಂತೋಷ ಪಡೆಯುವಂತಹ ಕೆಲಸವನ್ನು ಮಾಡುತ್ತಾರೆ. ನೀವು ಕೆಲವರ ಜೊತೆಗೆ ಇರುವಾಗ ನಿಮಗೆ ಸಂಕೋಚ ಎನಿಸಿದರೆ ಅಂತಹ ಜನರಿಂದ ದೂರ ಉಳಿಯುವುದು ಉತ್ತಮ. ಇಂದಿನ ದಿನ ನಿಮಗೆ ಕೊಂಚ ಲಾಭದಾಯಕವಾಗಿರಲಿದೆ.

ಕನ್ಯಾ ರಾಶಿ: ಇಂದು ನಿಮ್ಮ ಕೋಪದ ಮೇಲೆ ಕೊಂಚ ಹಿಡಿತವಿರಲಿ. ಕೋಪದ ಕಾರಣದಿಂದ ನಿಮ್ಮ ಸಂಬಂಧಗಳು ಕೆಡುವ ಸಾಧ್ಯತೆ ಇದೆ. ಮುಂದಿನ ದಿನಗಳಿಗಾಗಿ ಇಂದಿನಿಂದಲೇ ಹಣವನ್ನು ಕೂಡಿಸಿಡಿ, ಇಲ್ಲವಾದರೆ ಮುಂದಿನ ದಿನಗಳಲ್ಲಿ ನಿಮಗೆ ಕಷ್ಟವಾಗಬಹುದು. ಇಂದು ಕೊಂಚ ಜಾಗರೂಕತೆಯಿಂದ ಇರಿ, ನೀವು ಮಾಡುವ ಕೆಲಸಕ್ಕೆ ಬೇರೆಯವರು ಗೌರವ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇಂದು ಆಧ್ಯಾತ್ಮಕ ಪುಸ್ತಕಗಳನ್ನು ಓದಲು ಪ್ರಯತ್ನಿಸಿ, ಈ ಮೂಲಕ ನಿಮ್ಮ ಅನೇಕ ಸಮಸ್ಯೆಗಳನ್ನು ನೀವು ಪರಿಹರಿಸಿಕೊಳ್ಳಬಹುದು.

Daily Horoscope
Respected images are credited to the original owners

ತುಲಾ ರಾಶಿ: ಇಂದು ನಿಮ್ಮ ಕೋಪ, ದ್ವೇಷ, ಅಸೂಯೆ ಇಂತಹ ನಕಾರಾತ್ಮಕ ಭಾವನೆಗಳಿಂದ ಕೊಂಚ ನಿಮ್ಮನ್ನು ನೀವು ತಡೆದಿಟ್ಟುಕೊಳ್ಳಿ. ನಿಮ್ಮ ಸಂಬಂಧಿಕರ ಜೊತೆಗೆ ಹಣದ ವಿಷಯದಲ್ಲಿ ಕೊಂಚ ಎಚ್ಚರಿಕೆ ವಹಿಸಿ. ಇನ್ನು ನಿಮ್ಮ ಮನೆಯನ್ನು ಸುಂದರವಾಗಿರಿಸಲು ಪ್ರಯತ್ನಿಸಿ. ನಿಮ್ಮ ಸಂಗಾತಿಯ ಕಾರಣದಿಂದ ಇಂದು ನೀವು ಕೊಂಚ ನಷ್ಟವನ್ನು ಅನುಭವಿಸಬಹುದು.

ವೃಶ್ಚಿಕ ರಾಶಿ: ನಿಮ್ಮ ಮನಸ್ಸಿಗೆ ಸಂತೋಷ ಕೊಡುವ ಕೆಲಸಗಳನ್ನು ಮಾಡಲು ಇಂದಿನ ದಿನ ಅದಕ್ಕಾಗಿ ಹೆಚ್ಚಿನ ಸಮಯವನ್ನು ಮೀಸಲಿಡಿ. ರಿಯಲ್ ಎಸ್ಟೇಟ್ ಹೂಡಿಕೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಲಾಭ ಪಡೆಯಬಹುದು. ಕೆಲಸದಲ್ಲಿ ಕೊಂಚ ಒತ್ತಡವನ್ನು ಎದುರಿಸುತ್ತೀರಿ. ನಿಮ್ಮ ಸಂಗಾತಿಯ ಜೊತೆಗೆ ಅತ್ಯುತ್ತಮವಾದ ದಿನವಾಗಿರಲಿದೆ.

Home tips : ದೇವರ ಮನೆಯ ಪೂಜಾ ಸಾಮಗ್ರಿ ನಿಮಿಷದಲ್ಲಿ ಕ್ಲೀನ್ ಆಗಬೇಕೇ, ಜಸ್ಟ್ ಇದನ್ನು ಒಮ್ಮೆ ಬಳಸಿನೋಡಿ ಸಾಕು ಫಲಿತಾಂಶ ಅದ್ಬುತವಾಗಿರುತ್ತೆ!!

ಧನು ರಾಶಿ: ಇಂದಿನ ದಿನ ನೀವು ನಿಮ್ಮ ಸ್ನೇಹಿತರ ಜೊತೆಗೆ ಪ್ರವಾಸಕ್ಕೆ ತೆರಳುವ ಯೋಜನೆಗಳನ್ನು ಮಾಡಲಿದ್ದಿರಿ. ಇಂದು ನೀವು ಬಿಡುವಿಲ್ಲದ ಕೆಲಸಗಳಲ್ಲಿ ತೊಡಗಿ ಆಯಾಸ ಪಡುತ್ತೀರಿ. ನೀವು ಯಾವುದಾದರೂ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಅದರ ಬಗ್ಗೆ ಸಂಪೂರ್ಣವಾಗಿ ತಿಳಿದು ನಂತರ ಅದರ ಬಗ್ಗೆ ಸರಿಯಾಗಿ ಚರ್ಚಿಸಿ ನಂತರ ಹೂಡಿಕೆ ಮಾಡುವುದು ಉತ್ತಮ. ಇನ್ನು ಸಂಜೆಯ ವೇಳೆ ನಿಮ್ಮ ಸ್ನೇಹಿತರೊಂದಿಗೆ ಬಹಳ ಸಂತೋಷವಾದ ಸಮಯವನ್ನು ಕಳೆಯುತ್ತಿರಿ. ಇನ್ನು ನಿಮ್ಮ ಬಗ್ಗೆ ನೀವೇ ಕೊಂಚ ಯೋಚಿಸಿ, ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಇದು ಬಹಳ ಉತ್ತಮವಾದ ದಿನ.

ಮಕರ ರಾಶಿ: ನಿಮ್ಮ ಯಾವ ಕೆಲಸದಲ್ಲಿ ಸಹ ಈ ವಾರ ಅಷ್ಟಾಗಿ ಪ್ರಗತಿ ಕಾಣುವುದಿಲ್ಲ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಸಹ ಅದು ಬಹಳ ನಿಧಾನವಾಗಿ ಪಲಿತಾಂಶ ನೀಡುತ್ತದೆ. ಇನ್ನು ವಾಹನಗಳಿಂದ ಹಾಗೂ ವಿಧ್ಯುತ್ ಸಂಬಂಧಿತ ವಸ್ತುಗಳಿಂದ ನಿಮಗೆ ಖರ್ಚು ಬರುವ ಸಾಧ್ಯತೆ ಇದೆ. ಇನ್ನು ಭೂಮಿಗೆ ಸಂಬಂಧಿಸಿದ ಯಾವುದೇ ಕೆಲಸಕ್ಕೆ ನೀವು ಕೈ ಹಾಕದೆ ಇರುವುದು ಉತ್ತಮ.

ಕುಂಭ ರಾಶಿ: ಇಂದಿನ ದಿನ ನೀವು ಕೈ ಹಾಕುವ ಎಲ್ಲಾ ಕೆಲಸಗಳಲ್ಲಿ ಮೇಲು ಗೈ ಸಾಧಿಸುತ್ತೀರಿ. ನಿಮ್ಮ ಕೆಲವು ಕಠಿಣ ಮಾತುಗಳಿಂದ ನೀವು ನಿಮ್ಮ ಪ್ರೀತಿ ಪಾತ್ರರ ಮನಸ್ಸನ್ನು ನೋವಿಸಬಹುದು. ಇನ್ನು ನಿಮ್ಮ ಆರೋಗ್ಯದಲ್ಲಿ ಸಹ ಇಂದು ನೀವು ಕೊಂಚ ಚೇತರಿಕೆ ಕಾಣುತ್ತೀರಿ. ಜೊತೆಗೆ ಇಂದು ನೀವು ಕೆಲವು ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಹಾಗೆ ಬಹಳ ದಿನಗಳ ನಂತರ ನಿಮ್ಮ ಕುಟುಂಬದವರ ಜೊತೆಗೆ ಉತ್ತಮವಾದ ಸಮಯ ಕಳೆಯುತ್ತಿರಿ.

Gruha Jyothi scheme: ಶುಭ ಸುದ್ದಿ ಈ ದಿನದಿಂದ ಕರೆಂಟ್ ಬಿಲ್ ಕಟ್ಟುವಂತಿಲ್ಲ, ಕೊನೆಗೂ ದಿನಾಂಕ ನಿಗದಿತ !!

ಮೀನಾ ರಾಶಿ: ಇಂದಿನ ದಿನ ನಿಮ್ಮ ಮನೆಯ ಮಕ್ಕಳು ಮನೆಯಲ್ಲಿ ಶಾಂತಿಯುತ ವಾತಾವರಣವನ್ನು ನಿರ್ಮಿಸುತ್ತಾರೆ, ಈ ಕಾರಣದಿಂದ ಪೋಷಕರಿಗೆ ಮಕ್ಕಳ ಮೇಲೆ ಬಹಳಷ್ಟು ಹೆಮ್ಮೆ ಉಂಟಾಗುತ್ತದೆ. ಹಣಕಾಸಿನ ವಿಷಯಕ್ಕೆ ಬಂದರೆ, ಇಂದಿನ ದಿನ ನೀವು ಅಂದುಕೊಂಡ ಎಲ್ಲಾ ಕೆಲಸಗಳು ಸರಳವಾಗಿ ನಡೆಯಲಿದೆ. ಸಂಬಂಧಿಕರಿಂದ ಸಹ ಇಂದು ನೀವು ಬೆಂಬಲವನ್ನು ಕಾಣುತ್ತೀರಿ. ಅಲ್ಲದೆ ಇಂದು ಹೊಸ ವಸ್ತುಗಳನ್ನು ಖರೀದಿ ಮಾಡುವ ಯೋಗ ಈ ರಾಶಿಯವರಿಗೆ ಇದೆ

Leave a comment