Weekly Horoscope : ಇಂದು ಭಾನುವಾರ 18/06/23 ರಿಂದ 24/06/23 ರವರೆಗೆ ನಿಮ್ಮ ವಾರ ಭವಿಷ್ಯ ಹೇಗಿರಲಿದೆ ತಿಳಿದುಕೊಳ್ಳಿ!!
Weekly Horoscope: ಇಂದು ಭಾನುವಾರ, ಮೃಗಶಿರಾ ಅಮಾವಾಸ್ಯೆ ಜೊತೆಗೆ ಇಂದಿನಿಂದ ಅಶಾಡ ಮಾಸದ ಪ್ರಾರಂಭವಾಗುತ್ತಿದೆ. ಈ ವಾರ ಅಂದರೆ, ಜೂನ್ 18/06/23 ಭಾನುವಾರದಿಂದ ಜೂನ್ 24/06/23 ರ ವರೆಗೆ, ಯಾವ ರಾಶಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತದೆ ಎಂಬುದನ್ನು ತಿಳಿಸುತ್ತೇವೆ, ಈ ಪುಟವನ್ನು ಪೂರ್ತಿಯಾಗಿ ಓದಿ..
ಮೇಷ ರಾಶಿ: ಈ ವಾರ ಮೇಷ ರಾಶಿಯವರಿಗೆ ಬಾರಿ ಅನುಕೂಲವಾದ ವಾರ ಎಂದರೆ ತಪ್ಪಾಗುವುದಿಲ್ಲ. ಸರ್ಕಾರಿ ಕೆಲಸ ಸಿಗುವ ಸಾಧ್ಯತೆ ಇದ್ದು, ಇನ್ನು ಯಾವುದೇ ಕೆಲಸವಾದರೂ ಅದರಲ್ಲಿ ಜಯ ಈ ರಾಶಿಯವರದ್ದು ಆಗಲಿದೆ. ಇನ್ನು ಈ ವಾರ ಈ ರಾಶಿಯವರಿಗೆ ಹಣದ ಸಮಸ್ಯೆ ಇರುವುದಿಲ್ಲ. ಆದರೆ ಮನಸ್ಸಿನಲ್ಲಿ ಕೊಂಚ ಕಿರಿಕಿರಿ ಇರುತ್ತದೆ. ಇನ್ನು ಸುಬ್ರಮಣ್ಯ ಸ್ವಾಮಿಯ ಜಪ ಮಾಡುವ ಮೂಲಕ ನಿಮ್ಮ ಪ್ರತಿದಿನ ಪ್ರಾರಂಭಿಸುವುದು ಒಳ್ಳೆಯದು.
ಸತತವಾಗಿ ಮೂರು ದಿನದಿಂದ ಇಳಿಕೆ ಕಂಡ ಚಿನ್ನದ ಬೆಲೆ, ಇಂದಿನ ದರ ಎಷ್ಟು !!
ವೃಷಭ ರಾಶಿ: ಈ ವಾರ ವೃಷಭ ರಾಶಿಯವರಿಗೆ ಪುಣ್ಯಕ್ಷೇತ್ರದ ದರ್ಶನ ಪಡೆಯುವ ಭಾಗ್ಯ ಕಂಡು ಬರುತ್ತಿದೆ. ಇನ್ನು ಮನಸ್ಸಿಗೆ ಅಶಾಂತಿ ದೊರೆಯುವ ಸಾಧ್ಯತೆ ಇದೆ. ಇನ್ನು ವ್ಯಾಪಾರ ಮಾಡುವವರು ಕೊಂಚ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಯಾವುದೇ ಕೆಲಸ ಪ್ರಾರಂಭ ಮಾಡುವ ಮುನ್ನ ದುರ್ಗಾದೇವಿಯ ಜಪ ಮಾಡಿ ಕೆಲಸ ಶುರು ಮಾಡುವುದು ಉತ್ತಮ.
ಮಿಥುನ ರಾಶಿ: ಈ ವಾರ ಮಿಥುನ ರಾಶಿಯವರು ಕೊಂಚ ಒತ್ತಡದ ಜೀವನವನ್ನು ನಡೆಸಬೇಕಾಗುತ್ತದೆ. ಇನ್ನು ವಿದ್ಯಾರ್ಥಿಗಳು ಸಹ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಹಿನ್ನಡೆಯನ್ನು ಕಾಣುತ್ತಾರೆ. ಇನ್ನು ಈ ರಾಶಿಯವರಿಗೆ ಗುರು ಬಲ ಇರುವ ಕಾರಣ ಗುರುವಿನ ಸಂಪೂರ್ಣ ಆಶೀರ್ವಾದ ಈ ರಾಶಿಯವರ ಮೇಲಿರುತ್ತದೆ. ಮಹಾ ವಿಷ್ಣುವಿನ ಜಪ ಮಾಡುವುದರಿಂದ ಸಂಕಷ್ಟಗಳಿಂದ ಪಾರಾಗಬಹುದು.
ಕಟಕ ರಾಶಿ: ಈ ವಾರ ಕಟಕ ರಾಶಿಯವರು ಧನ ಲಾಭ ಪಡೆಯಲಿದ್ದಾರೆ. ಇನ್ನು ನಿಮ್ಮ ಮನಸ್ಸಿನ ಎಲ್ಲಾ ತಳಮಳ ದೂರವಾಗಿ, ಮನಸ್ಸಿಗೆ ನೆಮ್ಮದಿ ಸಿಗುವ ಕಾಲ ಹತ್ತಿರ ಬಂದಿದೆ. ಇನ್ನು ಈ ವಾರ ನಿಮ್ಮ ಹಣಕಾಸು ನೀರಿನಂತೆ ಖರ್ಚಾಗುತ್ತದೆ. ಇನ್ನು ಈ ವಾರದ ಮೊದಲ ದಿನ ನೀವು ಅಂದುಕೊಂಡ ಕೆಲಸದಲ್ಲಿ ನಿಮಗೆ ಪಾಸಿಟಿವ್ ರಿಸಲ್ಟ್ ಸಹ ದೊರೆಯಲಿದೆ. ನಿಮ್ಮ ಕೆಲಸಗಳಲ್ಲಿ ನೀವು ತೊಡಗಿಕೊಳ್ಳುವುದು ಉತ್ತಮ, ಬೇರೆಯವರ ವಿಷಯಕ್ಕೆ ತಲೆ ಕೆಡಿಸಿಕೊಳ್ಳಬೇಡಿ.
ಸಿಂಹ ರಾಶಿ: ನಿಮ್ಮ ಯಾವ ಕೆಲಸದಲ್ಲಿ ಸಹ ಈ ವಾರ ಅಷ್ಟಾಗಿ ಪ್ರಗತಿ ಕಾಣುವುದಿಲ್ಲ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಸಹ ಅದು ಬಹಳ ನಿಧಾನವಾಗಿ ಪಲಿತಾಂಶ ನೀಡುತ್ತದೆ. ಇನ್ನು ವಾಹನಗಳಿಂದ ಹಾಗೂ ವಿಧ್ಯುತ್ ಸಂಬಂಧಿತ ವಸ್ತುಗಳಿಂದ ನಿಮಗೆ ಖರ್ಚು ಬರುವ ಸಾಧ್ಯತೆ ಇದೆ. ಇನ್ನು ಭೂಮಿಗೆ ಸಂಬಂಧಿಸಿದ ಯಾವುದೇ ಕೆಲಸಕ್ಕೆ ನೀವು ಕೈ ಹಾಕದೆ ಇರುವುದು ಉತ್ತಮ.

ಕನ್ಯಾ ರಾಶಿ: ಈ ವಾರ ಕನ್ಯಾ ರಾಶಿಯವರು, ಹಣಕಾಸಿನ ವಿಷಯದಲ್ಲಿ ಯಾವುದೇ ಸಮಸ್ಯೆ ಎದುರಿಸುವುದಿಲ್ಲ. ಉದ್ಯೋಗ ಕ್ಷೇತ್ರದಲ್ಲಿ ಕೊಂಚ ಯಶಸ್ಸು ಕಾಣುವ ಸಾಧ್ಯತೆ ಇದೆ. ಇನ್ನು ವಾಹನ ಚಲಿಸುವಾಗ ಹಾಗೆ ಯಂತ್ರಗಳ ಜೊತೆಗೆ ಕೆಲಸ ಮಾಡುವ ಸಮಯದಲ್ಲಿ ಕೊಂಚ ಜಾಗರೂಕತೆಯಿಂದ ಇರುವುದು ಒಳ್ಳೆಯದು. ಆರೋಗ್ಯ ಸಮಸ್ಯೆಯಿಂದ ನೀವು ಈ ವಾರ ಬಳಲಬಹುದು. ದುರ್ಗಾ ಮಂತ್ರವನ್ನು ಜಪಿಸಿ ಎಲ್ಲವೂ ಒಳ್ಳೆಯದೇ ಆಗುತ್ತದೆ.
ತುಲಾ ರಾಶಿ: ಈ ವಾರ ತುಲಾ ರಾಶಿಯವರು ಮಾಡುವ ಯಾವುದೇ ಕೆಲಸದಲ್ಲಿ ಶೀಘ್ರ ಫಲ ಪ್ರಾಪ್ತಿಯಾಗುವುದಿಲ್ಲ. ಯಾವುದೇ ಕೆಲಸಕ್ಕೆ ಕೈ ಹಾಕುವ ಮುನ್ನ ಹಲವು ಬಾರಿ ಯೋಚಿಸುವುದು ಉತ್ತಮ. ಇನ್ನು ನೀವು ಬಹಳ ದಿನಗಳಿಂದ ಕಾಯುತ್ತಿದ್ದ ಒಂದು ವಿಷಯದ ಬಗ್ಗೆ ಈ ವಾರ ನಿಮಗೆ ಸಿಹಿ ಸುದ್ದಿ ದೊರೆಯಲಿದೆ.
ವೃಶ್ಚಿಕ ರಾಶಿ: ಈ ವಾರ ನೀವು ಮಾಡುವ ಕೆಲಸಗಳಲ್ಲಿ ಕೊಂಚ ಎಚ್ಚರಿಕೆಯಿಂದ ಹೆಜ್ಜೆ ಹಾಕುವುದು ಉತ್ತಮ. ನಿಮ್ಮ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತದೆ. ಇನ್ನು ಕೆಲಸಗಳಲ್ಲಿ ಒತ್ತಡ ಇರಲಿದ್ದು, ಕೊಂಚ ಮನಸ್ಸಿಗೆ ಕಿರಿಕಿರಿ ಸಹ ಉಂಟಾಗುವ ಸಾಧ್ಯತೆ ಇದೆ. ದತ್ತಾತ್ರೇಯ ಸ್ವಾಮಿಯ ಪ್ರಾರ್ಥನೆ ಮಾಡುವುದರಿಂದ ಕೊಂಚ ನೆಮ್ಮದಿ ಪಡೆಯಬಹುದು.
ಧನಸ್ಸು ರಾಶಿ: ಈ ವಾರ ಧನಸ್ಸು ರಾಶಿಯವರು ಬಾರಿ ಯಶಸ್ಸನ್ನು ಕಾಣುತ್ತಾರೆ. ನಿಮ್ಮ ಕೆಲಸವನ್ನು ಕಂಡು ಮೇಲಾಧಿಕಾರಿಗಳು ನಿಮಗೆ ಪ್ರಶಂಶೆ ನೀಡುತ್ತಾರೆ. ಹಣಕಾಸಿನ ವಿಷಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ನಿಮಗೆ ಬರಬೇಕಾಗಿದ್ದ ನಿಮ್ಮ ಹಣ ಇಂದು ನಿಮ್ಮ ಕೈ ಸೇರುತ್ತದೆ. ಇನ್ನು ಪ್ರವಾಸದಲ್ಲಿ ನೀವು ಈ ವಾರ ತೊಡಗಿಕೊಳ್ಳುವ ಸಾಧ್ಯತೆ ಇದೆ. ಇನ್ನು ಈ ವಾರ ಧನಸ್ಸು ರಾಶಿಯವರಿಗೆ ಸಾಕಷ್ಟು ಲಾಭಗಳು ಕಂಡು ಬರಲಿದೆ.
ಮಕರ ರಾಶಿ: ಮಕರ ರಾಶಿಯವರು ಚೂಪಾದ ವಸ್ತುಗಳಿಂದ ಕೊಂಚ ದೂರ ಇರುವುದು ಉತ್ತಮ, ಅದರಿಂದ ದೇಹದ ಮೇಲೆ ಗಾಯಗಳಾಗುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡುಬರಲಿದೆ. ಹೊಸ ಬಟ್ಟೆಯನ್ನು ಖರೀದಿ ಮಾಡುತ್ತೀರಿ. ನೀವು ಅಂದುಕೊಂಡ ಕೆಲಸಗಳನ್ನು ಪ್ರಾರಂಭ ಮಾಡುವುದಕ್ಕೆ ಇದು ಒಳ್ಳೆಯ ಸಮಯ. ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಲವು ಬಾರಿ ಯೋಚಿಸಿ.
ಕುಂಭ ರಾಶಿ: ವಿಧ್ಯಾರ್ಥಿಗಳಿಗೆ ಜ್ಞಾನ ವೃದ್ಧಿ ಸಿಗಲಿದೆ. ಇನ್ನು ವೃತ್ತಿ ಜೀವನದಲ್ಲಿ ಇಂದು ಪ್ರಗತಿ ಕಾಣುವ ಸಾಧ್ಯತೆ ಇದೆ. ಮೇಲಾಧಿಕಾರಿಗಳು ನಿಮ್ಮ ಕೆಲಸಕ್ಕೆ ಪ್ರಶಂಸೆ ನೀಡುತ್ತಾರೆ. ಆರೋಗ್ಯ ಸಮಸ್ಯೆಗಳು ಕೊಂಚ ದೂರವಾಗುತ್ತದೆ. ಹಣದ ಸಮಸ್ಯೆಯಿಂದ ಪರಾಗುತ್ತಿರಿ. ಕೆಲಸದಲ್ಲಿ ಕೊಂಚ ಒತ್ತಡ ಕಾಣಲಿದ್ದಿರಿ.
ಮೀನ ರಾಶಿ: ಇಂದು ನೀವು ಮಾಡುವ ಯಾವುದೇ ಕೆಲಸ ಅಡೆತಡೆ ಇಲ್ಲದೆ ಸಾಗುತ್ತದೆ. ಮನಸ್ಸಿಗೆ ನೆಮ್ಮದಿ ಸಿಗಲಿದೆ. ಕೊಂಚ ಹೆಚ್ಚು ಖರ್ಚುಗಳನ್ನು ನೀವು ಅನುಭವಿಸಲಿದ್ದೀರಿ. ಯಾವುದೇ ಕೆಲಸಕ್ಕೆ ಕೈ ಹಾಕುವ ಮುನ್ನ ಹಲವು ಬಾರಿ ಯೋಚಿಸಿ, ಏಕೆಂದರೆ ಹೊಸ ಕೆಲಸಕ್ಕೆ ಕೈ ಹಾಕಿ, ನಷ್ಟ ಕಾಣುವ ಸಾಧ್ಯತೆ ಇದೆ. ಪರಶಿವನ ಆರಾಧನೆ ಮಾಡುವ ಮೂಲಕ ನಿಮ್ಮ ದಿನವನ್ನು ಶುರು ಮಾಡಿ.