Daily Horoscope: 12 ದ್ವಾದಶ ರಾಶಿಗಳ ಪೈಕಿ ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ !!
Daily Horoscope: Check your horoscope today among the 12 Dwadasa Rasis!!
ನಿಮ್ಮ ರಾಶಿಗೆ ಅನುಗುಣವಾಗಿ ಇಂದಿನ ನಿಮ್ಮ ದಿನ ಹೇಗಿದೆ ಹಾಗೆ ಯಾವೆಲ್ಲಾ ರಾಶಿಗಳು ಇಂದು ಯಾವೆಲ್ಲಾ ಲಾಭಗಳನ್ನು ಪಡೆಯುತ್ತಿದೆ ಎನ್ನುವುದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಬನ್ನಿ.
ಮೇಷ ರಾಶಿ ದಿನ ಭವಿಷ್ಯ : ಇಂದಿನ ದಿನ ನೀವು ಇಷ್ಟು ದಿನ ಪಟ್ಟ ಪರಿಶ್ರಮಕ್ಕೆ ಒಳ್ಳೆಯ ಪ್ರತಿಫಲ ಸಿಗಲಿದೆ. ನೀವು ಕಷ್ಟ ಪಟ್ಟು ಕೆಲಸ ಮಾಡುತ್ತೀರಿ, ಶೀಘ್ರದಲ್ಲೇ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ನಿಮ್ಮದಲ್ಲದ ವಿಷಯಗಳಿಂದ ದೂರು ಉಳಿದು, ನಿಮ್ಮ ಕೆಲಸ ಕಾರ್ಯದ ಬಗ್ಗೆ ಘಮನ ಹರಿಸುವುದು ಒಳ್ಳೆಯದು. ಇನ್ನು ನಿಮ್ಮ ಆರೋಗ್ಯದ ಬಗ್ಗೆ ಕೊಂಚ ಗಮನ ಹರಿಸುವುದು ಉತ್ತಮ.
ವೃಷಭ ರಾಶಿ ದಿನ ಭವಿಷ್ಯ : ಇಂದು ನೀವು ಮಾಡುವ ಯಾವುದೇ ಕೆಲಸವಾದರೂ ಅದರಲ್ಲಿ ಜಯ ಪಡೆಯುತ್ತೀರಿ. ಇನ್ನು ನಿಮ್ಮ ಕೆಲಸಕ್ಕೆ ನಿಮ್ಮ ಹಿರಿಯ ಅಧಿಕಾರಿಗಳಿಂದ ನೀವು ಪ್ರಶಂಸೆ ಪಡೆದುಕೊಳ್ಳುತ್ತೀರಿ. ಇನ್ನು ವ್ಯಾಪಾರ ಹಾಗೂ ವ್ಯವಹಾರಗಳಲ್ಲಿ ಸಹ ನೀವು ಇಂದು ಲಾಭ ಕಾಣುತ್ತೀರಿ. ಕುಟುಂಬ ಜೀವನದಲ್ಲಿ ಸಹ ಇಂದು ನೀವು ಸಂತೋಷ ಕಾಣುತ್ತೀರಿ.
ಮಿಥುನ ರಾಶಿ ದಿನ ಭವಿಷ್ಯ : ಇಂದು ನಿಮ್ಮ ಕೆಲಸದ ಮೇಲೆ ಒತ್ತಡ ಇರುತ್ತದೆ. ಆದರೆ ಚಿಂತಿಸಬೇಡಿ ನೀವು ಮಾಡುವ ಎಲ್ಲಾ ಕೆಲಸದಲ್ಲಿ ಒಳ್ಳೆಯ ಫಲಿತಾಂಶ ಕಾಣುತ್ತೀರಿ. ಇನ್ನು ನಿಮ್ಮ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ, ನೀನು ಮದುವೆಯಾಗಿದ್ದರೆ ನಿಮ್ಮ ಸಂಗಾತಿಯ ಜೊತೆಗೆ ವಾದವನ್ನು ತಪ್ಪಿಸಿ, ಇಲ್ಲದೆ ಹೋದರೆ ಇದರಿಂದ ನಿಮ್ಮಿಬ್ಬರ ನಡುವೆ ವೈಮನಸು ಉಂಟಾಗುವ ಸಾಧ್ಯತೆಗಳಿದೆ. ಇನ್ನು ಇಷ್ಟು ದೇವರ ಪ್ರಾರ್ಥನೆಯೊಂದಿಗೆ ನಿಮ್ಮ ಈ ದಿನವನ್ನು ಪ್ರಾರಂಭಿಸಿ ಎಲ್ಲವೂ ನೀವು ಅಂದುಕೊಂಡಂತೆ ನಡೆಯಲಿದೆ.
ಕರ್ಕಾಟಕ ರಾಶಿ ದಿನ ಭವಿಷ್ಯ : ಇಂದಿನ ದಿನ ನಿಮ್ಮ ಕೆಲಸದ ಜಾಗದಲ್ಲಿ ಮೇಲಾಧಿಕಾರಿಗಳ ಜೊತೆಗೆ ಕೊಂಚ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ. ಹಾಗೆ ನೀವು ಯಾವುದಾದರೂ ವ್ಯಾಪಾರಗಳಲ್ಲಿ ತೊಡಗಿಕೊಂಡಿದ್ದಾರೆ ಅವುಗಳಲ್ಲಿ ಗೊಂದಲಗಳು ಎಂದು ಹೆಚ್ಚಾಗಿ ಕಾಣುತ್ತದೆ. ಇನ್ನು ನಿಮ್ಮ ಸಂಗಾತಿ ಅಥವಾ ನಿಮ್ಮ ಪೋಷಕರ ಜೊತೆಗೆ ವಾದ ವಿವಾದಗಳಲ್ಲಿ ತೊಡಗಿಕೊಳ್ಳದೆ ಇರುವುದು ಉತ್ತಮ. ಹಾಗೆ ನಿಮ್ಮ ಆರೋಗ್ಯದ ಬಗ್ಗೆ ಕೊಂಚ ಗಮನ ಹರಿಸುವುದು ಉತ್ತಮ.
ಸಿಂಹ ರಾಶಿ ದಿನ ಭವಿಷ್ಯ : ಇಂದಿನ ದಿನ ನಿಮ್ಮ ಸೋಮಾರಿತನದ ಕಾರಣದಿಂದ ನೀವು ನಿಮ್ಮ ಮೇಲಾಧಿಕಾರಿಗಳಿಂದ ಕೊಂಚ ಟೀಕೆಯನ್ನು ತೆಗೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಇನ್ನು ನಿಮ್ಮ ವ್ಯಾಪಾರ ಹಾಗೂ ಕಟ್ಟಡಗಳ ಕೆಲಸಗಳು ಇಂದು ಸ್ಥಗಿತಗೊಳ್ಳಲಿದೆ. ಬೇರೆಯವರ ವಿಷಯಗಳಲ್ಲಿ ಇಂದು ನಿಮ್ಮ ಸಲಹೆಗಳನ್ನು ನೀಡದೆ ಇರುವುದು ಉತ್ತಮ. ಹವಮಾನದ ಕಾರಣದಿಂದಾಗಿ ನಿಮ್ಮ ಆರೋಗ್ಯದಲ್ಲಿ ಸಹ ಕೊಂಚ ಏರುಪೇರು ಕಾಣಲಿದೆ.
ಸತತವಾಗಿ ಮೂರು ದಿನದಿಂದ ಇಳಿಕೆ ಕಂಡ ಚಿನ್ನದ ಬೆಲೆ, ಇಂದಿನ ದರ ಎಷ್ಟು !!
ಕನ್ಯಾ ರಾಶಿ ದಿನ ಭವಿಷ್ಯ : ಇಷ್ಟು ದಿನ ನೀವು ಪಟ್ಟ ಪರಿಶ್ರಮಕ್ಕೆ ಇಂದು ನಿಮಗೆ ಸರಿಯಾದ ಫಲಿತಾಂಶ ದೊರೆಯಲಿದೆ. ನೀವು ವ್ಯಾಪಾರ ಮಾಡುವುದರ ಬಗ್ಗೆ ಯೋಚಿಸುತ್ತಿದ್ದರೆ, ನೀವು ಬುದ್ಧಿವಂತಿಕೆಯಿಂದ ವರ್ತಿಸಬೇಕಾಗುತ್ತದೆ. ಇನ್ನು ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡುವ ಮೊದಲು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ದಿನದ ಅಂತ್ಯದಲ್ಲಿ ಇಂದು ನಿಮಗೆ ಆಶ್ಚರ್ಯಕರವಾದ ವಿಷಯವನ್ನು ಸಿಗಲಿದೆ. ನೀನು ಪ್ರೀತಿಸುವವರಿಂದ ಉಡುಗೊರೆಗಳನ್ನು ಪಡೆಯಲು ಹಾಗೂ ನೀಡಲು ಎಂದು ಬಹಳ ಒಳ್ಳೆಯ ದಿನವಾಗಲಿದೆ.
ತುಲಾ ರಾಶಿ ದಿನ ಭವಿಷ್ಯ : ಇಂದಿನ ದಿನ ಈ ರಾಶಿಯವರಿಗೆ ಬಹಳ ಮುಖ್ಯವಾದ ದಿನವಾಗಲಿದೆ. ನಿಮ್ಮ ಕೆಲಸದ ಜಾಗದಲ್ಲಿ ನಿಮಗೆ ಹೊಸ ಜವಾಬ್ದಾರಿಗಳನ್ನು ನೀಡುವ ಸಾಧ್ಯತೆಗಳಿವೆ. ಕುಟುಂಬ ಜೀವನದಲ್ಲಿ ಇಂದು ಎಲ್ಲವು ಸರಳವಾಗಿದೆ ನಡೆಯಲಿದೆ. ಇಂದು ನೀವು ಕುಟುಂಬದವರೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಹಾಗೆ ನೀವು ಯಾವುದಾದರೂ ವ್ಯಾಪಾರಗಳಲ್ಲಿ ಹೂಡಿಕೆ ಮಾಡಿದ್ದರೆ ಅದರಲ್ಲಿ ಇಂದು ಲಾಭ ಕಾಣಲಿದ್ದೀರಿ. ಇನ್ನು ನಿಮ್ಮ ಆರ್ಥಿಕ ಸಮಸ್ಯೆಗಳು ಸಹ ಕೊಂಚ ಕೊಂಚವಾಗಿ ಕಡಿಮೆಯಾಗಲಿದೆ.
ವೃಶ್ಚಿಕ ರಾಶಿ ದಿನ ಭವಿಷ್ಯ : ಇಂದಿನ ದಿನ ನಿಮಗೆ ಬಹಳ ಸ್ಮರಣೀಯ ದಿನವಾಗಲಿದೆ. ಇಂದು ನೀವು ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಲಿದ್ದೀರಿ. ಇನ್ನು ಕೆಲಸದ ಸಮಯದಲ್ಲಿ ಇಂದು ನೀವು ಕೊಂಚ ಒತ್ತಡವನ್ನು ಅನುಭವಿಸಲಿದ್ದೀರಿ. ನಿಮ್ಮ ಕುಟುಂಬದವರೊಂದಿಗೆ ನೀವು ಉತ್ತಮ ಬಾಂಧ್ಯವನ್ನು ಹೊಂಡಿರುತ್ತಿರಿ. ಇನ್ನು ಹಣದ ವಿಷಯದಲ್ಲಿ ನೀವು ಕೊಂಚ ಜಾಗರೂಕರಾಗಿರುವುದು ಉತ್ತಮ.
ಧನಸ್ಸು ರಾಶಿ ದಿನ ಭವಿಷ್ಯ : ಇಂದು ನೀವು ಹಣಕಾಸಿನ ತೊಂದರೆಗಳನ್ನು ಕಾಣುತ್ತೀರಿ. ಹಣದ ತೊಂದರೆಯಿಂದಾಗಿ ನಿಮ್ಮ ದೈನಂದಿನ ಕೆಲಸಗಳಲ್ಲಿ ನೀವು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಉದ್ಯೋಗಿಗಳು ಇಂದು ನಿಮ್ಮ ಕೆಲಸಗಳನ್ನು ಪ್ರಾಮಾಣಿಕವಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ, ಇಲ್ಲದೆ ಹೋದರೆ ನೀವು ಕಷ್ಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ. ಇನ್ನು ವೈಯಕ್ತಿಕ ವಿಚಾರದ ಬಗ್ಗೆ ಹೇಳುವುದಾದರೆ, ನಿಮ್ಮ ಕುಟುಂಬದವರ ಜೊತೆಗೆ ನೀವು ಕೊಂಚ ಸಮಯ ಕಳೆಯುವುದರಿಂದ ನಿಮ್ಮ ಮನೆಯಲಿ ಸಂತೋಷ ಕಾಣಬಹುದು.
ಮಕರ ರಾಶಿ ದಿನ ಭವಿಷ್ಯ : ಇನ್ನು ಇಂದಿನ ದಿನ ನಿಮಗೆ ಅತ್ಯಂತ ಲಾಭದಾಯಕವಾಗಿರಲಿದೆ. ಇನ್ನು ನಿಮ್ಮ ಕೆಲಸಗಳಲ್ಲಿ ಸಹ ನಿಮ್ಮ ಮೇಲಧಿಕಾರಿಗಳು ನಿಮ್ಮ ಕೆಲಸದಿಂದ ಪ್ರಭಾವಿತರಾಗಿರುತ್ತಾರೆ. ಅಲ್ಲದೆ ನಿಮ್ಮ ಎಲ್ಲಾ ಹಣ ಕಾಸಿನ ಸಮಸ್ಯೆಗಳು ಇಂದು ಪರಿಹಾರವಾಗಿದೆ. ಇನ್ನು ಆರೋಗ್ಯದ ವಿಷಯಕ್ಕೆ ಬರುವುದಾದರೆ, ಇಂದು ನೀವು ಶೀತ, ಕೆಮ್ಮು, ನೆಗಡಿ ಇವುಗಳಿಂದ ಕಷ್ಟ ಪಡಬಹದು. ಇನ್ನು ವ್ಯಾಪಾರಗಳಲ್ಲಿ ಸಹ ಇಂದು ನೀವು ಲಾಭವನ್ನು ಕಾಣಲಿದ್ದಿರಿ.
ಕುಂಭ ರಾಶಿ ದಿನ ಭವಿಷ್ಯ : ಇಂದಿನ ದಿನ ನೀವು ಬಹಳ ಉತ್ಸಾಹದಿಂದ ತುಂಬಿರುತ್ತೀರಿ. ಇಂದು ನೀವು ಸಾಮಾಜಿಕ ಕಾರ್ಯ ಒಂದರಲ್ಲಿ ಪಾಲ್ಗೊಳ್ಳಲಿದ್ದೀರಿ. ಇನ್ನು ಹಣದ ಪರಿಸ್ಥಿತಿ ಸಹ ತೃಪ್ತಿಕರವಾಗಿರಲಿದೆ. ನೀವು ಪ್ರೀತಿಯಲ್ಲಿದ್ದರೆ, ನೀವು ಪ್ರೀತಿಸುವವರ ಜೊತೆಗೆ ಉತ್ತಮ ಸಮಯವನ್ನು ಕಳೆಯುತ್ತಿರಿ. ಇನ್ನು ಆರೋಗ್ಯದ ಬಗ್ಗೆ ಹೇಳುವುದಾದರೆ, ತಡ ರಾತ್ರಿ ನಿದ್ರೆಯಿಂದ ಎಚ್ಚರಗೊಳ್ಳಬೇಡಿ. ಹಾಗೆ ಇಂದು ನಿಮ್ಮ ಪೋಷಕರು ನಿಮ್ಮ ಮೇಲೆ ಹೆಮ್ಮೆ ಪಡುವ ಸಾಧ್ಯತೆಗಳಿವೆ.
ಮೀನ ರಾಶಿ ದಿನ ಭವಿಷ್ಯ : ಇಂದು ನೀವು ನಿಮ್ಮ ಕೆಲಸದ ಕ್ಷೇತ್ರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯದ ಸಮಸ್ಯೆಯಿಂದಾಗಿ ನೀವು ಕೆಲಸದ ಕಡೆ ಗಮನ ಹರಿಸದೆ ಇರಲು ಸಾಧ್ಯವಾಗಬಹುದು. ಇಂದು ಕೆಲವು ಜನರು ನಿಮಗೆ ತಪ್ಪು ಸಲಹೆ ನೀಡಿ ನಿಮ್ಮನ್ನು ಗೊಂದಲಕ್ಕೆ ಸಿಳುಕಿಸುತ್ತಾರೆ ಅಂಥವರಿಂದ ದೂರ ಇರುವುದು ಉತ್ತಮ. ಇನ್ನು ಮಹಿಳೆಯರಿಗೆ ಉದ್ಯೋಗದಲ್ಲಿ ಲಾಭ ಕಾಣುವ ದಿನ ಇದಾಗಿದೆ.