Daily Horoscope : ಜೂನ್ 20, ಮಂಗಳವಾರ, ಇಂದಿನ ದಿನ ಯಾವೆಲ್ಲಾ ರಾಶಿಗಳಿಗೆ ಯಾವೆಲ್ಲ ಫಲಗಳು ದೊರೆಯಲಿದೆ!!
Horoscope : June 20, Tuesday, which signs will get what results today!!
ಮೇಷ ರಾಶಿ: ನಿಮ್ಮ ವೈಯಕ್ತಿಕ ಜೀವನದ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆ ಸಹ ಇಂದಿನ ದಿನ ಕೊಂಚ ಘಮನ ಹರಿಸುವುದು ಉತ್ತಮ. ಇನ್ನು ನಿಮ್ಮ ಕೋಪವನ್ನು ಕಡಿಮೆ ಮಾಡಿಕೊಂಡು ನಿಮ್ಮ ಕುಟುಂಬದವರ ಭಾವನೆಗಳಿಗೆ ಕೊಂಚ ಬೆಲೆ ಕೊಡಿ. ಇನ್ನು ನಿಮ್ಮ ಸಂಗಾತಿಗೆ ಸಮಯ ನೀಡಲು ಪ್ರಯತ್ನಿಸಿ, ಇಲ್ಲದೆ ಹೋದಲ್ಲಿ ಈ ಕಾರಣದಿಂದ ಜಗಳವಾಗುವ ಸಾಧ್ಯತೆ ಇದೆ. ಇನ್ನು ನಿಮ್ಮ ಪೆಂಡಿಂಗ್ ಇರುವ ಕೆಲಸಗಳನ್ನು ಇಂದೆ ಪೂರ್ತಿ ಮಾಡಿಕೊಳ್ಳುವುದು ಉತ್ತಮ. ಮುಂದಕ್ಕೆ ಹಾಕಿದಷ್ಟು ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ.
ವೃಷಭ ರಾಶಿ: ಇಂದಿನ ದಿನ ವೃಷಭ ರಾಶಿಯವರಿಗೆ ಬಹಳ ಅದ್ಭುತ ದಿನವಾಗಿರಲಿದೆ. ಇಂದಿನ ದಿನ ನೀವು ಮಾಡಬೇಕೆನಿಸುವ ಎಲ್ಲಾ ಕೆಲಸಗಳಲ್ಲಿ ಸಹ ಯಶಸ್ಸು ಕಾಣುತ್ತೀರಿ. ಇನ್ನು ನಿಮ್ಮ ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಸಹ ನೀವು ಮುಕ್ತಿ ಪಡೆಯುತ್ತೀರಿ. ಇನ್ನು ಇಂದಿನ ದಿನ ಯಾವುದೋ ಒಂದು ಕಾರಣಕ್ಕೆ ಅನಗತ್ಯವಾಗಿ ಹಣ ಖರ್ಚು ಮಾಡುವ ಸಾಧ್ಯತೆ ಇದೆ. ಈ ಕಾರಣದಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಕೊಂಚ ಹದಗೆಡಬಹುದು.
ಮಿಥುನ ರಾಶಿ: ಇಂದಿನ ದಿನ ನೀವು ಕೈ ಹಾಕುವ ಎಲ್ಲಾ ಕೆಲಸಗಳಲ್ಲಿ ಮೇಲು ಗೈ ಸಾಧಿಸುತ್ತೀರಿ. ನಿಮ್ಮ ಕೆಲವು ಕಠಿಣ ಮಾತುಗಳಿಂದ ನೀವು ನಿಮ್ಮ ಪ್ರೀತಿ ಪಾತ್ರರ ಮನಸ್ಸನ್ನು ನೋವಿಸಬಹುದು. ಇನ್ನು ನಿಮ್ಮ ಆರೋಗ್ಯದಲ್ಲಿ ಸಹ ಇಂದು ನೀವು ಕೊಂಚ ಚೇತರಿಕೆ ಕಾಣುತ್ತೀರಿ. ಜೊತೆಗೆ ಇಂದು ನೀವು ಕೆಲವು ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಹಾಗೆ ಬಹಳ ದಿನಗಳ ನಂತರ ನಿಮ್ಮ ಕುಟುಂಬದವರ ಜೊತೆಗೆ ಉತ್ತಮವಾದ ಸಮಯ ಕಳೆಯುತ್ತಿರಿ.
ಕರ್ಕಾಟಕ ರಾಶಿ: ಇಂದಿನ ದಿನ ನೀವು ನಿಮ್ಮ ಆರೋಗ್ಯದ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನಹರಿಸುವುದು ಉತ್ತಮ. ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಸಹ ಜಯ ಕಾಣುತ್ತೀರಿ. ಹಾಗೆ ನೀವು ಕೆಲಸ ಶುರು ಮಾಡುವ ಮುನ್ನ ಹಿರಿಯರ ಸಲಹೆ ಪಡೆದು ನಂತರ ಅದಕ್ಕೆ ಕೈ ಹಾಕುವುದು ಉತ್ತಮ. ಇನ್ನು ವಿದೇಶದಲ್ಲಿರುವ ನಿಮ್ಮ ಭೂವಿಯನ್ನು ನೀವು ಮಾರಾಟ ಮಾಡಬಹದು.
SIP Mutual fund: ಮ್ಯೂಚುಯಲ್ ಫಂಡ್ ಗಳಲ್ಲಿ ಹಣ ಹೂಡುವ ಮೊದಲ ತಿಳಿಯಲೇ ಬೇಕಾದ ವಿಷಯಗಳು !!
ಸಿಂಹ ರಾಶಿ: ಇಂದು ಸಿಂಹ ರಾಶಿಯವರು ಕೌಟುಂಬಿಕ ಜೀವನದ ಸಮಸ್ಯೆಗಳಿಗೆ ಮೊದಲು ಆದ್ಯತೆ ನೀಡಿ ಅದನ್ನು ಸರಿ ಪಡಿಸಲು ಮುಂದಾಗುವುದು ಒಳ್ಳೆಯದು. ಆತುರದ ನಿರ್ಧಾರ ತೆಗೆದುಕೊಳ್ಳದೆ ಹಿರಿಯರು ಹೇಳುವ ಮಾತುಗಳನ್ನು ಕೇಳಿ, ಅದರ ಅನುಸಾರ ನಡೆಯುವುದು ಉತ್ತಮ. ಇನ್ನು ದೀರ್ಘಕಾಲದವರೆಗೂ ಹಣದ ಬಾಧೆಯಿಂದ ಬಳಲುತ್ತಿರುವವರಿಗೆ ಇಂದು ಹನ್ ಸಿಗುವ ಸಾಧ್ಯತೆ ಇದೆ.
ಕನ್ಯಾ ರಾಶಿ: ಇಂದು ಕನ್ಯಾ ರಾಶಿಯವರು ತಮ್ಮ ಪ್ರೀತಿ ಪಾತ್ರದ ಸಾಗರದಲ್ಲಿ ತೇಲುವಂತಹ ಒಂದಿಷ್ಟು ಸಾಧ್ಯತೆಗಳು ಕಂಡುಬರುತ್ತದೆ. ಇನ್ನು ನೀವು ಮಾಡುವ ಎಲ್ಲಾ ಕೆಲಸವು ಸಹ ಬಹಳ ವೇಗವಾಗಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇನ್ನು ಈ ರಾಜ್ಯಗಳ ಆರೋಗ್ಯದಲ್ಲಿ ಸಹ ಸಾಕಷ್ಟು ಚೇತರಿಕೆ ಕಂಡು ಬರಲಿದೆ. ಇನ್ನು ವಿದೇಶದಲ್ಲಿರುವವರ ಆಸ್ತಿ ಅಥವಾ ಇನ್ಯಾವುದಾದರೂ ವಸ್ತುಗಳ ಮಾರಾಟ ಇಂದು ಸಲೀಸಾಗಿ ಆಗಲಿದೆ.
ತುಲಾ ರಾಶಿ: ತುಲಾ ರಾಶಿಯವರು ನಾವು ಮಾಡುವ ಕೆಲಸದ ಬಗ್ಗೆ ಕೊಂಚ ಗಮನಹರಿಸಿದರೆ ತಮಗೆ ದೊಡ್ಡ ಮಟ್ಟದಲ್ಲಿ ಲಾಭ ಕಂಡು ಬರುವ ಸಾಧ್ಯತೆ ಇದೆ. ಇನ್ನು ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಇಂದಿನ ದಿನ ಒಳ್ಳೆಯದು ಎನ್ನಲಾಗುತ್ತಿದೆ. ಇನ್ನು ಇಂದು ನೀವು ಪ್ರಯತ್ನಿಸಿದರೆ ನಿಮ್ಮ ಎಂತಹ ಸಮಸ್ಯೆ ಬೇಕಾದರೂ ಪರಿಹಾರವಾಗುವ ಸಾಧ್ಯತೆ ಕೂಡ ಹೆಚ್ಚಾಗಿ ಕಂಡುಬರುತ್ತದೆ.
ವೃಶ್ಚಿಕ ರಾಶಿ: ಬೇಡದ ವಿಷಯಕ್ಕೆ ಇಂದು ನೀವು ಜನರ ಜೊತೆಗೆ ವಾದ ಮಾಡಿಕೊಳ್ಳುವ ಹೆಚ್ಚಿನ ಸಾಧ್ಯತೆ ಕಂಡು ಬರುತ್ತದೆ. ಇದೇ ಕಾರಣದಿಂದ ನಿಮ್ಮ ಆಪ್ತರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಇನ್ನು ಯಾವುದಾದರೂ ಹೊಸ ವ್ಯಾಪಾರದಲ್ಲಿ ಹೂಡಿಕೆ ಮಾಡುವ ಮುನ್ನ ಬಹಳಷ್ಟು ಬಾರಿ ಯೋಚಿಸಿ ನಂತರ ಕೈ ಹಾಕುವುದು ಉತ್ತಮ. ಇನ್ನು ಕುಟುಂಬದಲ್ಲಿ ಇಂದು ಪಂಚ ಕಿರಿಕಿರಿ ಕಾಣಲಿದ್ದು ಅದರ ಕಡೆ ಕೊಂಚ ಗಮನಹರಿಸಬೇಕಾಗುತ್ತದೆ.
ಧನಸ್ಸು ರಾಶಿ: ನೀವು ಅಂದುಕೊಂಡಂತೆ ಇಂದು ನಿಮ್ಮ ಎಲ್ಲಾ ಕೆಲಸಗಳು ನಡೆಯಲಿದೆ. ನಿಮ್ಮ ಎಲ್ಲಾ ಆಸೆ ಆಕಾಂಕ್ಷಿಗಳು ಇಂದಿನ ದಿನ ಈಡೇರಲಿದೆ. ಇನ್ನು ಹಣಕಾಸಿನ ವಿಷಯದಲ್ಲಿ ಇಂದು ಬೇಡದ ವಸ್ತುಗಳನ್ನು ಖರೀದಿಸುವ ಮೂಲಕ ಅನಗತ್ಯವಾಗಿ ನಿಮ್ಮ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ. ಇನ್ನು ಅತಿ ಉತ್ಸಾಹದ ಮೂಲಕ ನೀವು ಸಂಕಷ್ಟದಲ್ಲಿ ಸಿಲುಕಿ ಕೊಳ್ಳುವ ಸಾಧ್ಯತೆ ಇದೆ.
ಮಕರ ರಾಶಿ: ನಿಮ್ಮ ಪ್ರೀತಿ ಪಾತ್ರರೊಂದಿಗೆ ಇಂದು ನೀವು ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ. ಇನ್ನು ನೀವು ಕೈಗೊಂಡಿರುವ ಉದ್ಯೋಗ ಕೆಲಸಗಳಲ್ಲಿ ಇಂದು ನೀವು ಒಳ್ಳೆಯ ಯಶಸ್ಸು ಕಾಣಲಿದ್ದೀರಿ. ಇನ್ನು ನೀವು ಯಾವುದೇ ಕೆಲಸ ಮಾಡುವ ಮೊದಲು ಹಿರಿಯರ ಒಪ್ಪಿಗೆ ತೆಗೆದುಕೊಳ್ಳುವುದು ಉತ್ತಮ. ಇನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಕೊಂಚ ದೂರು ಇರುವುದು ಉತ್ತಮ.
ಕುಂಭ ರಾಶಿ: ಇನ್ನು ನಿಮ್ಮ ಮಾನಸಿಕ ನೆಮ್ಮದಿಗಾಗಿ ಇಂದು ನೀವು ದೇವಸ್ಥಾನಗಳಿಗೆ ಅಥವಾ ಧ್ಯನ ಮಂದಿರಗಳಿಗೆ ಭೇಟಿ ನೀಡುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತದೆ. ಇಂದು ಯಾವುದೋ ಒಂದು ಅಮೂಲ್ಯವಾದ ವಸ್ತುವನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಇನ್ನು ಇಂದು ನೀವು ನಿಮ್ಮ ಅವಶ್ಯಕತೆಗೆ ಬೇಕಾದ ಕೆಲಸಗಳನ್ನು ಮಾಡುವುದು ಉತ್ತಮ. ಇನ್ನು ನಿಮಗೆ ಹಾಗೂ ನಿಮ್ಮ ಇಡೀ ಕುಟುಂಬಕ್ಕೇ ಸಂತೋಷದ ಸುದ್ದಿ ಸಿಗಲಿದೆ.
ಸತತವಾಗಿ ಮೂರು ದಿನದಿಂದ ಇಳಿಕೆ ಕಂಡ ಚಿನ್ನದ ಬೆಲೆ, ಇಂದಿನ ದರ ಎಷ್ಟು !!
ಮೀನ ರಾಶಿ: ಇಂದು ನೀವು ಹೂಡಿಕೆ ಮಾಡಿರುವಂತಹ ಹಣ ದ್ವಿಗುಣ ವಾಗುವ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತಿದೆ. ಕೆಲವೊಂದು ವಿಷಯಗಳ ಬಗ್ಗೆ ಇಂದು ನಿಮ್ಮ ಮನಸ್ಸಿನಲ್ಲಿ ಸಾಕಷ್ಟು ಚಿಂತನೆ ಇರಲಿದೆ. ಅಲ್ಲದೆ ನೀವು ಅಂದುಕೊಂಡ ಕೆಲಸಗಳನ್ನು ಇಂದು ನೀವು ಛಲದಿಂದ ಸಾಧಿಸಲು ಸಾಧ್ಯವಾಗುತ್ತದೆ. ಇನ್ನು ಯಾವುದೇ ಕೆಲಸ ಮಾಡುವ ಮುನ್ನ ಹಿರಿಯರ ಆಶೀರ್ವಾದ ಪಡೆಯುವುದು ಉತ್ತಮ.