Daily Horoscope: ಇಂದು ಜೂನ್ 24, 2023 ಶನಿವಾರ, ಇಂದಿನ ದಿನ ಯಾವೆಲ್ಲಾ ರಾಶಿಗಳಿಗೆ ಯಾವೆಲ್ಲಾ ಫಲಗಳು ದೊರೆಯಲಿದೆ ತಿಳಿಯಿರಿ !!
Daily Horoscope: Today is June 24, 2023, Saturday, Know which zodiac signs will get what results today!!
ಮೇಷ ರಾಶಿ: ನಿಮ್ಮ ಮೇಲೆ ನೀವು ಭರವಸೆ ಇಟ್ಟು ಯಾವುದೇ ಕಷ್ಟಕರವಾದ ಕೆಲಸ ಇದ್ದರೂ ಸಹ ಅದನ್ನು ಛಲದಿಂದ ಮಾಡಿದರೆ ನಿಜಕ್ಕೂ ಒಳ್ಳೆಯ ಲಾಭವನ್ನು ಇಂದು ನೀವು ಕಾಣುತ್ತೀರಿ. ರಿಯಲ್ ಎಸ್ಟೇಟ್ ಗಳಲ್ಲಿ ಇಂದು ನೀವು ಹೂಡಿಕೆ ಮಾಡಿದರೆ ಅದರಲ್ಲಿ ಲಾಭ ಕಾಣುವ ಸಾಧ್ಯತೆ ಹೆಚ್ಚಿದೆ. ಇನ್ನು ನಿಮ್ಮ ಸಂಗಾತಿ ನಿಮ್ಮ ಜೀವನದ ಬಗ್ಗೆ ನೀವು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ನಿಮ್ಮ ಜೊತೆಗೆ ಇರುತ್ತಾರೆ. ಅಲ್ಲದೆ ಕೆಲವು ವಿಷಯಗಳಿಗೆ ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವೆ ಕೆಲವು ಮನಸ್ತಾಪಗಳು ಉಂಟಾಗಬಹುದು.
ವೃಷಭ ರಾಶಿ: ಇಂದಿನ ದಿನ ನಿಮ್ಮ ಮೇಲೆ ನೀವು ವಿಶ್ವಾಸ ಇಟ್ಟು ಕೆಲಸ ಮಾಡುವುದರಿಂದ ನಿಮ್ಮ ಮೇಲೆ ನಿಮಗೆ ಬಹಳ ಖುಷಿ ಎನಿಸುತ್ತದೆ. ಇಂದು ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಮಾಡುವ ಯೋಜನೆಗಳು ಮುಂದಿನ ದಿನಗಳಲ್ಲಿ ನಿಮಗೆ ಲಾಭದಾಯಕವಾಗಿರಲಿದೆ. ಇನ್ನು ಇಂದು ನಿಮ್ಮ ಆಕರ್ಷಕ ವ್ಯಕ್ತಿತ್ವದ ಮೂಲಕ ನೀವು ಹೊಸ ಗೆಳೆಯರನ್ನು ಸಂಪಾದಿಸಿಕೊಳ್ಳುವ ಸಾಧ್ಯತೆ ಇದೆ.
ಮಿಥುನ ರಾಶಿ: ಇಂದಿನ ದಿನ ನೀವು ಮಾಡುವ ಪ್ರತಿಯೊಂದು ಕೆಲಸ ಜಯ ಕಾಣಲಿದ್ದೀರಿ. ನಿಮ್ಮ ಕುಟುಂಬ ಸದಸ್ಯರು ತಮ್ಮ ಎಲ್ಲಾ ಸಮಸ್ಯೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ಇನ್ನು ನಿಮ್ಮ ಬುದ್ಧಿವಂತಿಕೆಯನ್ನು ಸರಿಯಾದ ಜಾಗದಲ್ಲಿ ಬಳಸುವ ಮೂಲಕ ಇಂದಿನ ದಿನ ನೀವು ಲಾಭ ಪಡೆಯಬಹುದು. ಇಂದು ನಿಮ್ಮ ವೈವಾಹಿಕ ಜೀವನ ಬಹಳ ಸಂತೋಷದಿಂದ ಕೂಡಿರುತ್ತದೆ.
ಕರ್ಕಾಟಕ ರಾಶಿ: ಇಂದಿನ ದಿನ ಕರ್ಕಾಟಕ ರಾಶಿಯವರು ಯಾವುದೇ ಕೆಲಸ ಮಾಡುವ ಮುನ್ನ ಎಚ್ಚರಿಕೆವಹಿಸುವುದು ಉತ್ತಮ. ನಿಮ್ಮ ಮಗುವಿನ ಸಾಧನೆ ಇಂದು ನಿಮಗೆ ಹೆಚ್ಚಿನ ಗೌರವ ತಂದು ಕೊಡುತ್ತದೆ. ಇನ್ನು ಕಲಾಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಇಂದಿನ ದಿನ ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಇನ್ನು ನಿಮ್ಮ ಸಂಗಾತಿಯ ಜೊತೆಗೆ ಹಿಂದಿನ ದಿನ ಕೊಂಚ ಹೆಚ್ಚು ಸಮಯ ಕಳೆಯುವುದರ ಮೂಲಕ, ನಿಮ್ಮಿಬ್ಬರ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.
ಸಿಂಹ ರಾಶಿ: ಇಂದು ನೀವು ನಿಮ್ಮ ಆರೋಗ್ಯದ ಬಗ್ಗೆ ಪಂಚಾಂಗನ ಹರಿಸುವುದು ಉತ್ತಮ. ಇನ್ನು ಮನೆಯ ವಸ್ತುಗಳ ಮೇಲೆ ಅಗತ್ಯವಾಗಿ ಹಣ ಖರ್ಚು ಮಾಡುವುದರಿಂದ ನೀವು ಆರ್ಥಿಕ ಸಂಕಷ್ಟಗಳಲ್ಲಿ ಸಿಲುಕುವ ಸಾಧ್ಯತೆ ಇದೆ. ಇಂದು ನೀವು ನಿಮ್ಮ ಸಂಗಾತಿಯ ಜೊತೆಗೆ ಹಳೆಯ ಎಲ್ಲಾ ಮನಸ್ತಾಪಗಳನ್ನು ಮರೆತು ಹಿಂದಿನಿಂದ ಹೊಸ ಜೀವನ ನಡೆಸಲು ಶುರು ಮಾಡುತ್ತೀರಾ.
ಕನ್ಯಾ ರಾಶಿ: ನಿಮ್ಮ ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸಲು ನಿಮ್ಮ ಮಕ್ಕಳ ಜೊತೆಗೆ ಕೊಂಚ ಹೆಚ್ಚು ಸಮಯವನ್ನು ಕಳೆಯಿರಿ. ಇಂದಿನ ದಿನ ಹಣಕಾಸಿನ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವ ವೇಳೆ ತಾಳ್ಮೆಯಿಂದ ಬಹಳಷ್ಟು ಬಾರಿ ಯೋಚಿಸಿ ನಂತರ ನಿರ್ಧಾರ ತೆಗೆದುಕೊಳ್ಳುವ ಮೂಲಕ ಆ ಕೆಲಸಗಳಿಂದ ನೀವು ಲಾಭವನ್ನು ಪಡೆಯಬಹುದಾಗಿದೆ. ಇನ್ನು ಕೆಲಸದ ಜಾಗದಲ್ಲಿ ಸಹ ಎಲ್ಲವೂ ನಿಮ್ಮ ಪರವಾಗಿ ನಿಂತಿರುತ್ತದೆ.

ತುಲಾ ರಾಶಿ: ನಿಮ್ಮ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳುವ ಮೂಲಕ ಇಂದಿನ ದಿನವನ್ನು ನೀವು ಪ್ರಾರಂಭಿಸಿ. ಈ ಮೂಲಕ ನೀವು ಮಾಡುವ ಕೆಲಸಗಳಲ್ಲಿ ಯಶಸ್ಸು ಕಾಣುವ ಸಾಧ್ಯತೆ ಇದೆ. ಇಂದಿನ ದಿನ ನೀವು ಕೆಲಸಗಳಲ್ಲಿ ತೊಡಗಿದ್ದರು ಸಹ ನಿಮ್ಮ ಮಕ್ಕಳು ಹಾಗೆ ನಿಮ್ಮ ಕುಟುಂಬದವರ ಜೊತೆಗೆ ಸಮಯ ಕಳೆಯಲು ಪ್ರಯತ್ನಿಸಿ. ಇತರರು ನೀಡುವ ಸಲಹೆಯನ್ನು ಕೇಳುವುದರ ಮೂಲಕ ಇಂದಿನ ದಿನ ನೀವು ಮಾಡುವ ಕೆಲಸಗಳಲ್ಲಿ ಲಾಭ ಪಡೆಯಬಹುದಾಗಿದೆ.
ವೃಶ್ಚಿಕ ರಾಶಿ: ನಿಮ್ಮ ಸ್ವಭಾವದ ಮೂಲಕ ಇಂದು ನೀವು ನಿಮ್ಮ ಸಂಬಂಧಗಳನ್ನು ಹಾಳು ಮಾಡಿಕೊಳ್ಳುವ ಸಾಧ್ಯತೆ ಇದೆ. ಸಂಪ್ರದಾಯ ಬದ್ಧ ಹೂಡಿಕೆಗಳಲ್ಲಿ ನೀವು ಹೂಡಿಕೆ ಮಾಡಿದ್ದಲ್ಲಿ ನೀವು ಲಾಭ ಕಾಣುವ ಹೆಚ್ಚು ಸಾಧ್ಯತೆ ಇದೆ. ಸಮಯ ಸಿಕ್ಕಾಗಲಿಲ್ಲ ಅದನ್ನು ವ್ಯರ್ಥ ಮಾಡದೆ ಜೀವನ ಪಾಠಗಳನ್ನು ಕಲಿಯಲು ಪ್ರಯತ್ನಿಸಿ. ಯಾರಿಗಾಗಿ ಸಹ ಸಮಯ ಕಾಯುವುದಿಲ್ಲ, ಸಮಯ ಸಿಕ್ಕಾಗ ಅದನ್ನು ಸದುಪಯೋಗ ಮಾಡಿಕೊಂಡು ನಿಮ್ಮ ಜೀವನವನ್ನು ರೂಪಿಸುವ ಕೆಲಸ ಮಾಡಿ.
ಧನು ರಾಶಿ:ಇಂದಿನ ದಿನ ಆರ್ಥಿಕ ಸಮಸ್ಯೆಗಳಿಂದ ನೀವು ಬಳಲಲಿದ್ದಿರಿ. ಇದೇ ಕಾರಣದಿಂದ ನಿಮ್ಮ ವಿಭಿನ್ನವಾದ ಯೋಚನಾ ಶಕ್ತಿ ಮೇಲೆ ಸಹ ಇದು ಪ್ರಭಾವ ಬೀರುತ್ತದೆ. ಇಂದು ನಿಮ್ಮ ಮಕ್ಕಳು ನಿಮ್ಮ ಮನೆ ಕೆಲಸಗಳಲ್ಲಿ ಸಹಾಯ ಮಾಡಲು ಇಚ್ಚಿಸುತ್ತಾರೆ. ನಿಮ್ಮ ಸಂಗಾತಿಗೆ ನೀವು ಎಷ್ಟು ಪ್ರಾಮುಖ್ಯತೆ ನೀಡುತ್ತಿರೋ ಅಷ್ಟೇ ನಿಮ್ಮ ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ.
ಮಕರ ರಾಶಿ: ಇಂದಿನ ಸಂಪೂರ್ಣ ದಿನ ನೀವು ಹಣಕ್ಕಾಗಿ ಹೋರಾಟ ಮದುತ್ತಿರುತ್ತಿರಿ, ಸಂಜೆಯ ವೇಳೆಗೆ ನಿಮ್ಮ ಹಣ ನಿಮ್ಮ ಕೈ ಸೇರಲಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ಹೆಚ್ಚಿನ ಸಮಯ ಕಳೆಯುವ ಮೂಲಕ ನಿಮ್ಮ ಇಂದಿನ ದಿನ ಸಂತೋಷದಿಂದ ಕೂಡಿರುತ್ತದೆ. ಕೆಲಸದ ಜಾಗದಲ್ಲಿ ನಿಮ್ಮ ಸ್ಪರ್ಧಿಗಳು ನಿಮ್ಮ ವಿರುದ್ಧ ಸಂಚು ಮಾಡಬಹುದು, ನೀವು ಕೊಂಚ ಹೆಚ್ಚರಿಕೆಯಿಂದ ಇರುವುದು ಉತ್ತಮ.
ಕುಂಭ ರಾಶಿ: ವರ್ಷಗಳ ಹಳೆಯ ಸ್ನೇಹಿತನನ್ನು ನೀವು ಇಂದು ಭೇಟಿ ಮಾಡುವ ಮೂಲಕ ನಿಮ್ಮ ಮನಸ್ಸು ಹಗುರವಾಗಲಿದೆ. ಇನ್ನು ವ್ಯಾಪಾರದಲ್ಲಿ ನೀವು ಇಂದು ಹೆಚ್ಚಿನ ಲಾಭ ಕಾಣಲಿದ್ದೀರಿ. ಇಂದಿನ ದಿನ ನಿಮ್ಮ ಜೀವನ ಬಹಳ ಅರ್ಥಪೂರ್ಣವಾಗಿ ಸಾಗಲಿದೆ. ಇಂದಿನ ದಿನ ನೀವು ನಿಮ್ಮ ಎಲ್ಲಾ ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ದೂರ ಉಳಿದು ನಿಮಗಾಗಿ ಕೊಂಚ ಸಮಯ ಒಬ್ಬರೇ ಇರಲು ಇಷ್ಟಪಡುತ್ತೀರಿ.
ಮೀನ ರಾಶಿ: ನಿಮ್ಮ ಜೀವನದ ಉದ್ದೇಶ ಏನು ಎನ್ನುವುದನ್ನು ತಿಳಿದುಕೊಳ್ಳಿ, ಖಿನ್ನತೆಯಿಂದ ಹೊರ ಬರಲು ಪ್ರಯತ್ನಿಸಿ. ಇಲ್ಲದೆ ಹೋದರೆ ನೀವು ಮಾಡುವ ಪ್ರತಿಯೊಂದು ಪ್ರಯತ್ನದಲ್ಲಿ ವಿಫಲವಾಗುವ ಸಾಧ್ಯತೆ ಇದೆ. ಶೀಘ್ರದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳು ತೀರಿಹೋಗುತ್ತದೆ. ನಿಮ್ಮ ಕುಟುಂಬಸ್ಥರು ನೀಡುವ ಸಲಹೆಗಳನ್ನು ಪಾಲಿಸುವುದು ಉತ್ತಮ. ನಿಮ್ಮ ಧೀರ ಕಾಗದ ಸಮಸ್ಯೆಗಳಿಗೆ ಇಂದಿನ ದಿನ ಸ್ವಲ್ಪವಾದರೂ ಪರಿಹಾರ ಕಾಣಲಿದ್ದೀರಿ.