Daily Horoscope :ಇಂದು ಜೂನ್ 22, 2023 ಬುಧವಾರ, ಇಂದಿನ ದಿನ ಯಾವೆಲ್ಲಾ ರಾಶಿಗಳಿಗೆ ಯಾವೆಲ್ಲಾ ಫಲಗಳು ದೊರೆಯಲಿದೆ ನೋಡಿ!!
Daily Horoscope : Today, June 22, 2023, Wednesday, see which zodiac signs will get what results today!!
ಮೇಷ ರಾಶಿ: ನಿಮ್ಮ ಅತಿಯಾದ ಆತ್ಮವಿಶ್ವಾಸದ ಮೂಲಕ ನೀವು ನಿಮ್ಮ ಸುತ್ತ ಮುತ್ತಲಿನ ಜನರನ್ನು ಬೆಂಬಲಿಸುತ್ತಿರಾ. ಇನ್ನು ನೀವು ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ, ಇನ್ನು ನಿಮ್ಮ ವಸ್ತುಗಳ ಮೇಲೆ ಗಮನ ಹರಿಸಬೇಕು, ಇಲ್ಲದೆ ಹೋದರೆ ಅವುಗಳು ಕಳುವಾಗುವ ಸಾಧ್ಯತೆ ಇದೆ. ಇನ್ನು ನಿಮ್ಮ ಮಕ್ಕಳು ನಿಮ್ಮ ಆಸೆಯಂತೆ ತಮ್ಮ ಜೀವನವನ್ನು ರೂಪಿಸಿಕೊಳ್ಳುಟ್ಟಿರುವುದನ್ನು ನೋಡಿ ನೀವು ಬಹಳ ಸಂತೋಷ ಪಡುತ್ತಿರಿ. ಇನ್ನು ಪ್ರೇಮಿಗಳ ಜೀವನದಲ್ಲಿ ಇಂದು ಹೊಸ ತಿರುವು ಬರಲಿದೆ.
ವೃಷಭ ರಾಶಿ: ಇಷ್ಟು ದಿನ ಮೋಜಿನ ಜೀವನ ಅನುಭವಿಸುತ್ತಿದ್ದ ಈ ರಾಶಿಯವರು ಇನ್ನು ಮುಂದೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ನಿಮ್ಮ ವೈಯಕ್ತಿಕ ಹಾಗೂ ನಿಮಗೆ ಸಂಬಂಧ ಪಟ್ಟ ಯಾವುದೇ ವಿಷಯವನ್ನು ಯಾರೊಂದಿಗೂ ಸಹ ಹಂಚಿಕೊಳ್ಳಬೇಡಿ. ಇನ್ನು ಇಂದು ನಿಮ್ಮ ಪ್ರೀತಿಪಾತ್ರರೊಂದಿಗೆ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ.
ಮಿಥುನ ರಾಶಿ: ಇಂದಿನ ದಿನ ಮಿಥುನ ರಾಶಿಯವರಿಗೆ ಬಹಳ ಲಾಭಕರವಾದ ದಿನವಾಗಲಿದೆ. ಇಂದು ನೀವು ಕೈ ಹಾಕುವ ಯಾವುದೇ ಕೆಲಸವಾದರೂ ಅದರಲ್ಲಿ ಜಯ ನಿಮ್ಮದಾಗಲಿದೆ. ನಿಮ್ಮ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಸಹ ಇಂದು ನೀವು ಪಾರಾಗಲಿದದ್ದೀರಿ. ಇನ್ನು ನೀವು ಹೂಡಿಕೆಗಳಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ನಿಮ್ಮ ಆಪ್ತರ ಸಲಹೆ ಪಡೆದು ಅದರ ಕುರಿತು ಚರ್ಚಿಸಿ ನಂತರ ಈ ಕೆಲಸಗಳಿಗೆ ಕೈ ಹಾಕುವುದು ಉತ್ತಮ. ಇನ್ನು ವ್ಯಾಪಾರ ಮಾಡುವವರು ಇಂದು ಕೆಲವು ಜನರಿಂದ ಕೊಂಚ ಎಚ್ಚರವಾಗಿರಬೇಕು.
ಕರ್ಕಾಟಕ ರಾಶಿ: ಇಂದು ನೀವು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳುವ ಮೂಲಕ ನೀವು ಮಾಡುವ ಕೆಲಸಗಳಲ್ಲಿ ಜಯ ಕಾಣುತ್ತೀರಿ. ಇನ್ನು ಧೀರ್ಘ ಕಾಲದ ಹೂಡಿಕೆಗಳಿಂದ ಕೊಂಚ ದೂರು ಉಳಿಯುವುದು ಉತ್ತಮ. ನೀವು ಬಹಳ ದಿನಗಳಿಂದ ಭೇಟಿ ಮಾಡಬೇಕು ಎಂದುಕೊಂಡಿದ್ದ ನಿಮ್ಮ ಸ್ನೇಹಿತನನ್ನು ಇಂದು ಭೇಟಿ ಮಾಡುವ ಸಾಧ್ಯತೆ ಇದೆ. ಇನ್ನು ವ್ಯಾಪಾರದಲ್ಲಿ ಇಂದು ನೀವು ಮೋಸ ಹೋಗುವ ಸಾಧ್ಯತೆ ಇದೆ, ಕೊಂಚ ಎಚ್ಚರದಿಂದ ಇರುವುದು ಉತ್ತಮ.
ಸಿಂಹ ರಾಶಿ: ಗರ್ಭಿಣಿ ಸ್ತ್ರೀಯರು ಇಂದು ಬಹಳ ಎಚ್ಚರಿಕೆಯಿಂದ ಇರಬೇಕು. ಇಂದಿನ ದಿನ ನೀವು ನಿಮ್ಮ ಖರ್ಚುಗಳ ಮೇಲೆ ಕೊಂಚ ಘಮನ ಹರಿಸಬೇಕು. ಅನಗತ್ಯವಾಗಿ ಖರ್ಚು ಮಾಡುವುದನ್ನು ಇಂದಿನ ದಿನ ಕೊಂಚ ಕಡಿಮೆ ಮಾಡಿಕೊಳ್ಳಿ. ಇಂದು ನಿಮ್ಮ ದಾಂಪತ್ಯ ಜೀವನದಲ್ಲಿ ಕೊಂಚ ಕಳಮಳ ಸೃಷ್ಟಿಯಾಗುವ ಸಾಧ್ಯತೆ ಇದೆ. ಇನ್ನು ಕೆಲಸದ ಜಾಗದಲ್ಲಿ ಇಂದಿನ ದಿನ ಕೊಂಚ ಒತ್ತಡದಿಂದ ಕೂಡಿರುತ್ತದೆ.
ಕನ್ಯಾ ರಾಶಿ: ನೀವು ಕಷ್ಟದಲ್ಲಿರುವ ಸಮಯದಲ್ಲಿ ಕೇವಲ ನಿಮ್ಮ ಹಣ ಮಾತ್ರ ನಿಮ್ಮ ಕೆಲಸಕ್ಕೆ ಬರುತ್ತದೆ. ಇನ್ನು ಹಣವನ್ನು ಸಂಗ್ರಹಿಸುವ ಮೇಲೆ ಜಾಸ್ತಿ ಘಮನ ಕೊಡಿ. ಇನ್ನು ನಿಮ್ಮ ಕುಟುಂಬಸ್ಥರ ಜೊತೆಗೆ ಕೊಂಚ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ. ನಿಮಗೆ ಯಾರಾದರೂ ಸಲಹೆ ನೀಡುತ್ತಿದ್ದರೆ, ಅದನ್ನು ಘಮನ ಇಟ್ಟು ಕೇಳಿ, ಮುಂದಿನ ದಿನಗಳಲ್ಲಿ ಅದು ನಿಮಗೆ ಉಪಯೋಗಕ್ಕೆ ಬರಬಹುದು.

ತುಲಾ ರಾಶಿ: ಈ ದಿನ ತುಲಾ ರಾಶಿಯವರು ಮಾಡುವ ಯಾವುದೇ ಕೆಲಸದಲ್ಲಿ ಶೀಘ್ರ ಫಲ ಪ್ರಾಪ್ತಿಯಾಗುವುದಿಲ್ಲ. ಯಾವುದೇ ಕೆಲಸಕ್ಕೆ ಕೈ ಹಾಕುವ ಮುನ್ನ ಹಲವು ಬಾರಿ ಯೋಚಿಸುವುದು ಉತ್ತಮ. ಇನ್ನು ನೀವು ಬಹಳ ದಿನಗಳಿಂದ ಕಾಯುತ್ತಿದ್ದ ಒಂದು ವಿಷಯದ ಬಗ್ಗೆ ಈ ವಾರ ನಿಮಗೆ ಸಿಹಿ ಸುದ್ದಿ ದೊರೆಯಲಿದೆ.
ವೃಶ್ಚಿಕ ರಾಶಿ: ಈ ದಿನ ನೀವು ಮಾಡುವ ಕೆಲಸಗಳಲ್ಲಿ ಕೊಂಚ ಎಚ್ಚರಿಕೆಯಿಂದ ಹೆಜ್ಜೆ ಹಾಕುವುದು ಉತ್ತಮ. ನಿಮ್ಮ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತದೆ. ಇನ್ನು ಕೆಲಸಗಳಲ್ಲಿ ಒತ್ತಡ ಇರಲಿದ್ದು, ಕೊಂಚ ಮನಸ್ಸಿಗೆ ಕಿರಿಕಿರಿ ಸಹ ಉಂಟಾಗುವ ಸಾಧ್ಯತೆ ಇದೆ. ದತ್ತಾತ್ರೇಯ ಸ್ವಾಮಿಯ ಪ್ರಾರ್ಥನೆ ಮಾಡುವುದರಿಂದ ಕೊಂಚ ನೆಮ್ಮದಿ ಪಡೆಯಬಹುದು.
Gold Price : ಬಾರಿ ಇಳಿಕೆ ಕಂಡ ಚಿನ್ನದ ಬೆಲೆ, ಚಿನ್ನ ಕೊಳ್ಳುವವರಿಗೆ ಈಗ ಉತ್ತಮ ಸಮಯ, ಇಂದಿನ ದರ ಹೇಗಿದೆ!!
ಧನಸ್ಸು ರಾಶಿ: ಈ ದಿನ ಧನಸ್ಸು ರಾಶಿಯವರು ಬಾರಿ ಯಶಸ್ಸನ್ನು ಕಾಣುತ್ತಾರೆ. ನಿಮ್ಮ ಕೆಲಸವನ್ನು ಕಂಡು ಮೇಲಾಧಿಕಾರಿಗಳು ನಿಮಗೆ ಪ್ರಶಂಶೆ ನೀಡುತ್ತಾರೆ. ಹಣಕಾಸಿನ ವಿಷಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ನಿಮಗೆ ಬರಬೇಕಾಗಿದ್ದ ನಿಮ್ಮ ಹಣ ಇಂದು ನಿಮ್ಮ ಕೈ ಸೇರುತ್ತದೆ. ಇನ್ನು ಪ್ರವಾಸದಲ್ಲಿ ನೀವು ಈ ವಾರ ತೊಡಗಿಕೊಳ್ಳುವ ಸಾಧ್ಯತೆ ಇದೆ. ಇನ್ನು ಈ ದಿನ ಧನಸ್ಸು ರಾಶಿಯವರಿಗೆ ಸಾಕಷ್ಟು ಲಾಭಗಳು ಕಂಡು ಬರಲಿದೆ.
ಮಕರ ರಾಶಿ: ಈ ದಿನ ಮಕರ ರಾಶಿಯವರು ಚೂಪಾದ ವಸ್ತುಗಳಿಂದ ಕೊಂಚ ದೂರ ಇರುವುದು ಉತ್ತಮ, ಅದರಿಂದ ದೇಹದ ಮೇಲೆ ಗಾಯಗಳಾಗುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡುಬರಲಿದೆ. ಹೊಸ ಬಟ್ಟೆಯನ್ನು ಖರೀದಿ ಮಾಡುತ್ತೀರಿ. ನೀವು ಅಂದುಕೊಂಡ ಕೆಲಸಗಳನ್ನು ಪ್ರಾರಂಭ ಮಾಡುವುದಕ್ಕೆ ಇದು ಒಳ್ಳೆಯ ಸಮಯ. ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಲವು ಬಾರಿ ಯೋಚಿಸಿ.
SIP Mutual fund: ಮ್ಯೂಚುಯಲ್ ಫಂಡ್ ಗಳಲ್ಲಿ ಹಣ ಹೂಡುವ ಮೊದಲ ತಿಳಿಯಲೇ ಬೇಕಾದ ವಿಷಯಗಳು !!
ಕುಂಭ ರಾಶಿ: ಈ ದಿನ ವಿಧ್ಯಾರ್ಥಿಗಳಿಗೆ ಜ್ಞಾನ ವೃದ್ಧಿ ಸಿಗಲಿದೆ. ಇನ್ನು ವೃತ್ತಿ ಜೀವನದಲ್ಲಿ ಇಂದು ಪ್ರಗತಿ ಕಾಣುವ ಸಾಧ್ಯತೆ ಇದೆ. ಮೇಲಾಧಿಕಾರಿಗಳು ನಿಮ್ಮ ಕೆಲಸಕ್ಕೆ ಪ್ರಶಂಸೆ ನೀಡುತ್ತಾರೆ. ಆರೋಗ್ಯ ಸಮಸ್ಯೆಗಳು ಕೊಂಚ ದೂರವಾಗುತ್ತದೆ. ಹಣದ ಸಮಸ್ಯೆಯಿಂದ ಪರಾಗುತ್ತಿರಿ. ಕೆಲಸದಲ್ಲಿ ಕೊಂಚ ಒತ್ತಡ ಕಾಣಲಿದ್ದಿರಿ.
ಮೀನ ರಾಶಿ: ಇಂದು ನೀವು ಮಾಡುವ ಯಾವುದೇ ಕೆಲಸ ಅಡೆತಡೆ ಇಲ್ಲದೆ ಸಾಗುತ್ತದೆ. ಮನಸ್ಸಿಗೆ ನೆಮ್ಮದಿ ಸಿಗಲಿದೆ. ಕೊಂಚ ಹೆಚ್ಚು ಖರ್ಚುಗಳನ್ನು ನೀವು ಅನುಭವಿಸಲಿದ್ದೀರಿ. ಯಾವುದೇ ಕೆಲಸಕ್ಕೆ ಕೈ ಹಾಕುವ ಮುನ್ನ ಹಲವು ಬಾರಿ ಯೋಚಿಸಿ, ಏಕೆಂದರೆ ಹೊಸ ಕೆಲಸಕ್ಕೆ ಕೈ ಹಾಕಿ, ನಷ್ಟ ಕಾಣುವ ಸಾಧ್ಯತೆ ಇದೆ. ಪರಶಿವನ ಆರಾಧನೆ ಮಾಡುವ ಮೂಲಕ ನಿಮ್ಮ ದಿನವನ್ನು ಶುರು ಮಾಡಿ.