Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Self Employment Loan: ಸ್ವಯಂ ಉದ್ಯೋಗ ಯೋಜನೆಯಲ್ಲಿ ಆಸಕ್ತರಿಗೆ ಕರ್ನಾಟಕ ಸರ್ಕಾರ 1 ಲಕ್ಷ ಸಹಾಯ ಹಣ ಕೊಡುತ್ತಿದೆ  ಅರ್ಜಿ ಸಲ್ಲಿಸುವುದು ಹೇಗೆಂದು ತಿಳಿಯಿರಿ.

ರಾಷ್ಟ್ರೀಕೃತ/ಪರಿಶಿಷ್ಟ ಬ್ಯಾಂಕ್‌ಗಳ ಮೂಲಕ ಘಟಕ ವೆಚ್ಚದ 33% ಅಥವಾ ಗರಿಷ್ಠ ಒಂದು ಲಕ್ಷ ರೂಪಾಯಿ ಸಹಾಯಧನ ಸಿಗುತ್ತದೆ.

Self Employment Loan: ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಣ್ಣ ಪ್ರಮಾಣದ ಕರಕುಶಲ ಉದ್ಯಮ, ಸೇವಾ ವಲಯ ಮತ್ತು ಕೃಷಿ ಆಧಾರಿತ ಚಟುವಟಿಕೆಗಳನ್ನು ಪ್ರಾರಂಭಿಸಲು ಅಥವಾ ಸುಧಾರಿಸಲು ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

ಸಾಲ ಮತ್ತು ಸಹಾಯಧನ:

ರಾಷ್ಟ್ರೀಕೃತ/ಪರಿಶಿಷ್ಟ ಬ್ಯಾಂಕ್‌ಗಳ ಮೂಲಕ ಘಟಕ ವೆಚ್ಚದ 33% ಅಥವಾ ಗರಿಷ್ಠ ಒಂದು ಲಕ್ಷ ರೂಪಾಯಿ ಸಹಾಯಧನ ಸಿಗುತ್ತದೆ.

ಅರ್ಜಿ ಸಲ್ಲಿಸಲು ಅರ್ಹತೆಗಳು:

1) ರಾಜ್ಯ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು
2) ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿ
3,) ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ 18 ರಿಂದ 55 ವರ್ಷ
4) ಒಟ್ಟು ಕುಟುಂಬದ ಸದಸ್ಯರ ಆದಾಯ ಆದಾಯ 1 ಲಕ್ಷಕ್ಕಿಂತ ಇರಬಾರದು.
5) ಅರ್ಜಿ ಸಲ್ಲಿಸುವ ವ್ಯಕ್ತಿಯು ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರದ ಉದ್ಯೋಗಿ ಆಗಿರಬಾರದು.
6) ಈಗಾಗಲೇ KMDC ಯಲ್ಲಿ ಸಾಲ ಪಡೆದಿರಬಾರದು

ಆನ್ಲೈನ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-

1) ಅರ್ಜಿ ಹಾಕುವವರ 2 ಪಾಸ್‌ಪೋರ್ಟ್ ಗಾತ್ರದ ಫೋಟೋ
2) ಜಾತಿ ಮತ್ತು ಆದಾಯ ಪ್ರಮಾಣ ಪತ್ರ ( cast and income certificate)
3) ಆಧಾರ್ ಕಾರ್ಡ್ ನಕಲು ( Aadhaar card Xerox)
4)ಉದ್ಯಮ ಯೋಜನಾ ವರದಿ

Central Govt Helps for farmers: ರೈತರಿಗಾಗಿ 9 ಸರ್ಕಾರಿ ಯೋಜನೆಗಳು! ಇನ್ಮೇಲೆ ಆದಾಯಕ್ಕಾಗಿ ಚಿಂತೆ ಇಲ್ಲ, ಫುಲ್ ಖುಷ್ ಆದ ಭೂಮಿಯ ಒಡೆಯ.

ಅರ್ಜಿ ಸಲ್ಲಿಸುವ ಹಂತಗಳು:

ಹಂತ 1) ಮುಖ ಪುಟದಲ್ಲಿ “ಸ್ವಯಂ ಉದ್ಯೋಗ ಯೋಜನೆ” ಮೇಲೆ ಕ್ಲಿಕ್ ಮಾಡಿ. ನಂತರ ಮೊಬೈಲ್ ನಂಬರ್ ನಮೂದಿಸಿ ಮತ್ತು OTP ಬರುತ್ತದೆ ಅದನ್ನು ನಮೂದಿಸಿ

ಹಂತ 2) ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಬೇಕು .
ಹೆಸರು, ವಿಳಾಸ, ಜಾತಿ, ಆದಾಯ, ಶಿಕ್ಷಣ, ಉದ್ಯಮದ ವಿವರ, ಯೋಜನಾ ವೆಚ್ಚ, ಉದ್ಯಮದ ಸ್ಥಳ, ಉದ್ಯಮದ ಉದ್ದೇಶ, ಉದ್ಯಮದಿಂದ ಉಂಟಾಗುವ ಉದ್ಯೋಗಾವಕಾಶಗಳು, ಉದ್ಯಮದ ಲಾಭದಾಯಕತೆ, ಉದ್ಯಮಕ್ಕೆ ಬೇಕಾಗುವ ಸಾಲದ ಮೊತ್ತ, ಉದ್ಯಮಕ್ಕೆ ಬೇಕಾಗುವ ಸಹಾಯಧನದ ಮೊತ್ತ, ಉದ್ಯಮಕ್ಕೆ ಬೇಕಾಗುವ ಭದ್ರತೆ, ಉದ್ಯಮಕ್ಕೆ ಬೇಕಾಗುವ ಮಾರ್ಜಿನ್ ಮನಿ, ಉದ್ಯಮಕ್ಕೆ ಬೇಕಾಗುವ ಸ್ವಂತ ಬಂಡವಾಳ ಈ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಬೇಕು.

ಹಂತ 3) ಬ್ಯಾಂಕ್ ಮತ್ತು ಸಾಲದ ವಿವರಗಳ ಬಗ್ಗೆ ಮಾಹಿತಿಯನ್ನು ಭರ್ತಿ ಮಾಡಿ ಅಂದರೆ ನಿಮ್ಮ ಬ್ಯಾಂಕ್‌ನ ಹೆಸರು, ಶಾಖೆಯ ಹೆಸರು, IFSC ಕೋಡ್, ಬ್ಯಾಂಕ್ ಖಾತೆಯ ನಂಬರ್ , ಸಾಲದ ಮೊತ್ತ, ಬಡ್ಡಿ ದರ, ಮರುಪಾವತಿ ಅವಧಿ, ಭದ್ರತೆ, ಮಾರ್ಜಿನ್ ಮನಿ, ಸ್ವಂತ ಬಂಡವಾಳ ಇವೆಲ್ಲವನ್ನೂ ಸರಿಯಾಗಿ ಭರ್ತಿ ಮಾಡಿ.

ಹಂತ 4) ಆನ್‌ಲೈನ್ ಅರ್ಜಿದಾರರ 2 ಪಾಸ್‌ಪೋರ್ಟ್ ಗಾತ್ರದ ಫೋಟೋಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ನಕಲು, ಉದ್ಯಮ ಯೋಜನೆ ವರದಿ, ಉದ್ಯಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಹಾಕಬೇಕು.

ಹಂತ 5) ಎಲ್ಲಾ ವಿವರಗಳು ಸರಿಯಾಗಿ ಇವೆಯೇ ಇಲ್ಲವೇ ಎಂಬುದನ್ನು ಒಮ್ಮೆ ಸರಿಯಾಗಿ ಪರಿಶೀಲನೆ ಮಾಡಿ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರುವರಿ 29 2024.

The Karnataka government is giving loans for self-employment; interested people can apply online.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

 

Leave a comment