Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

PM Fasal Bima Yojana: 27 ಲಕ್ಷ ರೈತರಿಗೆ ಶುಭ ಸುದ್ದಿ! ಪ್ರತಿಯೊಬ್ಬ ರೈತನಿಗೆ ಹೊಸ ಬಿತ್ತನೆಗೆ ₹18,000 ನೆರವು ನೀಡುತ್ತದೆ ಕೇಂದ್ರ ಸರ್ಕಾರ

ಈಗಾಗಲೇ ಕೆಲವು ರೈತರು ಫಸಲ್ ಭೀಮಾ ಯೋಜನೆಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿ ವಿಮೆ ತೆಗೆದುಕೊಂಡಿದ್ದಾರೆ ಅಂತಹ ರೈತರಿಗೆ ಈಗ ವಿಮಾ ಹಣವೂ ಜಮಾ ಆಗಲಿದೆ.

PM Fasal Bima Yojana: ಕೃಷಿ ಭಾರತದ ಬೆನ್ನೆಲುಬು. ರೈತರು ಪ್ರತಿ ವರ್ಷ ಶ್ರಮಿಸಿ ಉತ್ತಮ ಬೆಳೆ ಬೆಳೆಯಲು ಕಾಯುತ್ತಾರೆ. ಪ್ರತಿ ವರುಷವೂ ಮುಂಗಾರು ಹಾಗೂ ಹಿಂಗಾರು ಬೆಳೆ ಬೆಳೆಯುತ್ತಾರೆ. ಆದರೆ, ಪ್ರವಾಹ, ಅನಾವೃಷ್ಟಿ, ಹಿಮಪಾತ, ಬಿರುಗಾಳಿ ಮುಂತಾದ ನೈಸರ್ಗಿಕ ವಿಕೋಪಗಳ ಬೆಳೆಗಳ ಮೇಲೆ ಭಾರಿ ಪರಿಣಾಮ ಬೀರಿ ರೈತರಿಗೆ ನಷ್ಟವಾಗುತ್ತದೆ. ಈ ವರ್ಷ ಮೊದಲು ಹೆಚ್ಚಿನ ಮೇಲೆ ಹೊಯ್ದು ರೈತ ಬೆಳೆದ ಬೆಳೆ ನಷ್ಟ ಆಯಿತು. ನಂತರ ಮಳೆಯೇ ಬಾರದೆ ರೈತ ಬೆಳೆದ ಬೆಲೆಯೂ ಸರಿಯಾದ ಸಮಯದಲ್ಲಿ ಫಲ ಕೊಡಲಿಲ್ಲ. ಇಂತಹ ಸಮಯದಲ್ಲಿ ಈಗ ಹಿಂಗಾರು ಬೇಳೆ ಬೆಳೆಯುವ ರೈತನಿಗೆ ಬೀಜ ಬಿತ್ತನೆಗೆ ಸಹ ಹಣ ಇಲ್ಲ. ಇದನ್ನು ಮನಗಂಡ ಸರ್ಕಾರವು ಈಗ ರೈತನ ಖಾತೆಗೆ 18,000 ರೂಪಾಯಿ ಸಹಾಯಧನವನ್ನು ನೀಡುವ ಆಲೋಚನೆಯಲ್ಲಿ ಇದೆ. ಅದು ಯಾವ ರೈತನಿಗೆ ಸಿಗುತ್ತದೆ.? ಹೇಗೆ ಸಿಗುತ್ತದೆ ಎಂಬೆಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸುತ್ತೇವೆ.

ಯಾರಿಗೆ ಸಿಗಲಿದೆ 18,000 ರೂಪಾಯಿ ನೆರವು ? PM Fasal Bima Yojana

ಈಗಾಗಲೇ ಕೆಲವು ರೈತರು ಫಸಲ್ ಭೀಮಾ ಯೋಜನೆಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿ ವಿಮೆ ತೆಗೆದುಕೊಂಡಿದ್ದಾರೆ ಅಂತಹ ರೈತರಿಗೆ ಈಗ ವಿಮಾ ಹಣವೂ ಜಮಾ ಆಗಲಿದೆ. ಸರ್ಕಾರ ಈ ಯೋಜನೆಗೆ 1820.23 ಕೋಟಿ ಪ್ರೀಮಿಯಂ ನೀಡುತ್ತದೆ. ಸರ್ಕಾರವು 2024 ರಲ್ಲಿ 1.5 ಕೋಟಿಗೂ ಹೆಚ್ಚು ರೈತರಿಗೆ ಉಚಿತ ವಿಮೆಯನ್ನು ನೀಡಿದೆ.

ಬೆಳೆ ವಿಮೆ ಯ ಮೊತ್ತವನ್ನು ನವಿಕರಣಗೊಳಿಸಲಾಗಿದೆ. 2024 ರಲ್ಲಿ ಪ್ರತಿ ಹೆಕ್ಟೇರ್‌ಗೆ 6,800 ರೂಪಾಯಿಂದ 8,500 ವರೆಗಿನ ಕೃಷಿಯೋಗ್ಯ ಬೆಳೆಗಳಿಗೆ ಹಾನಿಯ ಮೇಲೆ ಪ್ರತಿ ಹೆಕ್ಟೇರ್‌ಗೆ ರೂ 8,500 ರ ಪರಿಷ್ಕೃತ ಸಬ್ಸಿಡಿಯನ್ನು ನೀಡಲಾಗುತ್ತದೆ. ತೋಟಗಾರಿಕಾ ಬೆಳೆಗಳ ಹಾನಿಗೆ ಪರಿಹಾರದ ಮೊತ್ತ ಒಂದು ಹೆಕ್ಟೇರ್‌ಗೆ 13,500 – 17,000 ರೂಪಾಯಿ ಆಗಿರುತ್ತದೆ.

ಫಸಲ್ ಭೀಮಾ ಯೋಜನೆಯ ಮುಖ್ಯ ಉದ್ದೇಶಗಳು ಏನೇನು ? :

1)ಒಂದು ರಾಷ್ಟ್ರ, ಒಂದು ಬೆಳೆ, ಒಂದು ಪ್ರೀಮಿಯಂ: ಈ ಯೋಜನೆ, ಒಂದೇ ರಾಜ್ಯದಲ್ಲಿ ಒಂದೇ ಬೆಳೆಗೆ ಒಂದೇ ಪ್ರೀಮಿಯಂ ದರವಿರುತ್ತದೆ. ಅಂದರೆ ಭಾರತ ದೇಶದ ಎಲ್ಲ ರಾಜ್ಯಗಳ ರೈತರಿಗೆ ಒಂದೇ ರೀತಿಯಲ್ಲಿ ವಿಮಾ ಯೋಜನೆ ಇರುತ್ತದೆ.
2) ಕಡಿಮೆ ಪ್ರೀಮ್: ಈ ಯೋಜನೆಯಡಿ ರೈತರು ಖರೀದಿಸಬೇಕಾದ ಪ್ರೀಮಿಯಂ ತುಂಬಾ ಕಡಿಮೆ. ರೈತರಿಗೆ ಆರ್ಥಿಕವಾಗಿ ಹೊರೆ ಆಗದಂತೆ ಈ ಯೋಜನೆಯನ್ನು ರೂಪಿಸಲಾಗಿದೆ.
3) ಸಮಗ್ರ ಅಪಾಯ ರಕ್ಷಣೆ: ಯಾವುದೇ ಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ರಕ್ಷಣೆಗೆ ಬರುತ್ತದೆ. ಅಂದರೆ ಬರಗಾಲ, ಪ್ರವಾಹ, ಭೂಕಂಪ, ಚಂಡಮಾರುತ, ಗಾಳಿ, ಆಲಿಕಲ್ಲು ಮಳೆ, ಕ್ರಿಮಿ ಕೀಟಗಳ ಬಾಧೆ, ರೋಗಗಳು, ಭೂಕುಸಿತ, ಬೆಂಕಿ, ಮತ್ತು ಸಿಡಿಲು ಬಡಿತದಂತಹ ಅನೇಕ ಅಪಾಯಗಳಿಂದ ರಕ್ಷಣೆ ನೀಡಲಿದೆ..
4) ತ್ವರಿತ ಪರಿಹಾರ: ಬೆಳೆ ನಷ್ಟ ಉಂಟಾದರೆ, ರೈತರು
ಪರಿಹಾರ ಪಡೆಯಬಹುದಾಗಿದೆ.

ರೈತರಿಗೆ ಆಗುವ ಲಾಭಗಳು ಏನು?

1) ಈ ಯೋಜನೆಯು ರೈತರಿಗೆ ಆರ್ಥಿಕ ಭದ್ರತೆ ಮತ್ತು ಪ್ರಾಕೃತಿಕ ವಿಕೋಪಗಳಿಂದ ಉಂಟಾಗುವ ನಷ್ಟವನ್ನು ಸರಿಪಡಿಸಲು ಸಹಾಯ ಮಾಡುತ್ತದೆ.
2) ಈ ಯೋಜನೆಯು ರೈತರಲ್ಲಿ ಬೆಳೆ ವಿಮೆಯ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ.
3) ಈ ಯೋಜನೆಯು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.

ಫಸಲ್ ಭೀಮಾ ಯೋಜನೆಯನ್ನು ಪಡೆಯುವುದು ಹೇಗೆ

ರೈತರು ಈ ಯೋಜನೆಯಲ್ಲಿ ಸೇರಲು ತಮ್ಮ ಹತ್ತಿರದ ಬ್ಯಾಂಕ್, ಕೃಷಿ ಸೇವಾ ಕೇಂದ್ರ, ಅಥವಾ ವಿಮಾ ಕಂಪನಿಯನ್ನು ಸಂಪರ್ಕಿಸಬಹುದು. ರೈತರು ಯೋಜನೆಯ ಅರ್ಜಿಯನ್ನು ಭರ್ತಿ ಮಾಡಿ ಮತ್ತು ದಾಖಲೆಗಳೊಂದಿಗೆ ಸಲ್ಲಿಸಬೇಕು. ಅರ್ಜಿ ಪರಿಶೀಲಿಸಿದ ನಂತರ, ರೈತರಿಗೆ ವಿಮಾ ಪಾಲಿಸಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ:

ರೈತರು ಈ ಯೋಜನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ನಿಮ್ಮ ಹತ್ತಿರದ ರೈತ ಸೇವಾ ಕೇಂದ್ರಕ್ಕೆ ಭೇಟಿನೀಡಿ.

Also Read: Government Scheme: ಮಹಿಳೆಯರ ಸಬಲೀಕರಣಕ್ಕೆ ಉಚಿತ ಹೊಲಿಗೆ ಯಂತ್ರ ನೀಡುತ್ತಿದೆ ಕೇಂದ್ರ ಸರ್ಕಾರ.. ನೀವು ಅರ್ಜಿ ಸಲ್ಲಿಸಬಹುದು.

Leave a comment