Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

SBI Home Loan: ಸ್ವಂತ ಮನೆ ಕಟ್ಟೋ ಆಸೆ ಇದೆ, ಆದ್ರೆ ಏನ್ ಮಾಡೋದು ಬ್ಯಾಂಕ್ ಸಾಲ ಬಡ್ಡಿ ಜಾಸ್ತಿ ಅಂತೀರಾ ? ಬಿಡಿ ಸ್ವಾಮಿ ಚಿಂತೆ ಇಲ್ಲಿದೆ ನೋಡಿ ಕಡಿಮೆ ಬಡ್ಡಿಗೆ ಸಾಲ ಕೊಡೊ ಬ್ಯಾಂಕ್ !!

SBI Home Loan: ಸ್ವಂತ ಮನೆ ಕಟ್ಟಿಕೊಳ್ಳುವುದು ಪ್ರತಿಯೊಬ್ಬರ ಕನಸು ಆದರೆ ಅದನ್ನು ನನಸು ಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಬಾಡಿಗೆ ಮನೆದಾರರು ತಮ್ಮದೇ ಆದ ಒಂದು ಸ್ವಂತ ಮನೆಯನ್ನು ನಿರ್ಮಿಸಿಕೊಂಡು ತಮ್ಮ ಕುಟುಂಬದ ಜೊತೆಗೆ ಸಂತೋಷದ ಸಮಯವನ್ನು ಕಳೆಯಬೇಕು ಎಂದು ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ.

ಇನ್ನು ಈ ಕನಸುಗಳನ್ನು ನನಸು ಮಾಡಿಕೊಳ್ಳಲು ಅವರು ತಮ್ಮ ಕೈಲಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಇನ್ನು ಇಂಥವರ ಕನಸುಗಳನ್ನು ನನಸು ಮಾಡಲು ಅನೇಕ ಸರ್ಕಾರಿ ಹಾಗೂ ವೈಯಕ್ತಿಕ ಬ್ಯಾಂಕುಗಳು ಗೃಹ ಸಾಲವನ್ನು ನೀಡುತ್ತಿದೆ. ಇನ್ನು ಅನೇಕರು ಬ್ಯಾಂಕ್ಗಳಿಂದ ಗೃಹ ಸಾಲ ಪಡೆದು ತಮ್ಮ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಇನ್ನು ಅನೇಕ ಜನರು ಬ್ಯಾಂಕಗಳಿಂದ ಬೃಹ ಸಾಲ ಪಡೆದ ನಂತರ ಪ್ರತಿ ತಿಂಗಳು ಇ ಎಂ ಐ ಕಟ್ಟಲಾಗದೆ, ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇನ್ನು ಗೃಹ ಸಾಲದ ಬಡ್ಡಿದರ ಸುಮಾರು 8% ರಿಂದ ಶುರುವಾಗುತ್ತದೆ. ಗೃಹ ಸಾಲ ಪಡೆಯುವ ಮುನ್ನ ನೀವು ಸಾಲ ಪಡೆಯುತ್ತಿರುವ ಬ್ಯಾಂಕ್ ನಲ್ಲಿ ನಿಮ್ಮ ಸಾಲಕ್ಕೆ ಎಷ್ಟು ಪ್ರತಿಶ ಬಡ್ಡಿಯನ್ನು ವಿಧಿಸಲಾಗುತ್ತಿದೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯುವುದು ಉತ್ತಮ.

ಹಲವು ಸರ್ಕಾರಿ ಹಾಗೂ ವೈಯಕ್ತಿಕ ಬ್ಯಾಂಕ್ ಗಳು ಈ ಗೃಹ ಸಾಲವನ್ನು ನೀಡುತ್ತಿದ್ದು, ಕೆಲವು ಕಡೆ ಸಾಲಕ್ಕೆ ಬಡ್ಡಿ ದರ ಹೆಚ್ಚಿರುವುದು ಗಮನಕ್ಕೆ ಬಂದಿದೆ. ಇನ್ನು ಸಾಲ ಪಡೆಯುವಾಗ ಸಾಲದ ಅವಧಿಯನ್ನು ಕಡಿಮೆ ಇರಿಸುವುದು ಉತ್ತಮ. ಇನ್ನು ಈ ಹಲವು ಬ್ಯಾಂಕ್ ಗಳ ಪೈಕಿ ಸರ್ಕಾರಿ ಬ್ಯಾಂಕ್ ಅದರಲ್ಲೂ ಭಾರತದ ಸಾರ್ವಜನಿಕ ಬ್ಯಾಂಕ್ ಆಗಿರುವ SBI ಬ್ಯಾಂಕ್ ಉತ್ತಮವಾದ ಬ್ಯಾಂಕ್ ಎಂದು ಪರಿಗಣಿಸಲಾಗಿದೆ.

ಹೌದು, ನೀವು ಗೃಹ ಸಾಲ ಪಡೆಯಲು ಯೋಚಿಸುತ್ತಿದ್ದರೆ SBI ಬ್ಯಾಂಕ್ ಇದಕ್ಕೆ ಸೂಕ್ತವಾದ ಬ್ಯಾಂಕ್ ಎಂದರೆ ತಪ್ಪಾಗುವುದಿಲ್ಲ. ಬೇರೆ ಬ್ಯಾಂಕ್ ಗಳಿಗೆ ಹೋಲಿಸಿದರೆ, SBI ಬ್ಯಾಂಕ್ ನ ಬಡ್ಡಿ ದರ ಕೊಂಚ ಕಡಿಮೆ ಇದೆ. ಅಲ್ಲದೆ SBI ಬ್ಯಾಂಕ್ ಇದೀಗ ತಮ್ಮ ಗ್ರಾಹಕರಿಗೆ ಗೃಹ ಸಾಲದ ಮೇಲೆ ರಿಯಾಯತಿ ನೀಡಲು ಮುಂದಾಗಿದೆ. ಹೌದು ಈ ಮೂಲಕ ತಮ್ಮ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿದೆ.

ಹೌದು, ನೀವು ಗೃಹ ಸಾಲ ಪಡೆಯಲು ಯೋಚಿಸುತ್ತಿದ್ದರೆ, ನೀವು ನಿಮ್ಮ ಹೋಮ್ ಲೋನ್ ಗೆ ಕಡಿಮೆ ಬಡ್ಡಿ ದರ ಪಡೆಯುವ ಅವಕಾಶ ನೀಡಲಾಗಿದೆ. ಹೌದು, ನೀವು ಹೋಂ ಲೋನ್ ಬಡ್ಡಿ ದರದ ಮೇಲೆ 55 bps ವರೆಗೂ ರಿಯಾಯತಿ ಪಡೆಯಲು ಬ್ಯಾಂಕ್ ಅವಕಾಶ ಮಾಡಿಕೊಟ್ಟಿದೆ. ಇನ್ನು ಆಗಸ್ಟ್ 31 ರವರಿಗೂ ನೀವು ಈ ಲಾಭವನ್ನು ಪಡೆಯಬಹುದು.

ನೀವು ಸಹ ಹೋಂ ಲೋನ್ ಪಡೆಯಲು ಯೋಚಿಸುತ್ತಿದ್ದರೆ, ನಿಮ್ಮ ಹತ್ತಿರದ SBI ಬ್ಯಾಂಕ್ ಗೆ ಇಂದೆ ಭೇಟಿ ನೀಡಿ ಹಾಗೂ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಬ್ಯಾಂಕ್ ಸಿಬ್ಬಂದಿಗಳ ಬಳು ಚರ್ಚಿಸಿ ಪಡೆಯಿರಿ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..

Low interest home loans from SBI.
Low interest home loans from SBI.
Leave a comment