LIC Policy : ಆದಾಯ ಕಡಿಮೆ ಎಂದು ಹೆಚ್ಚಿನ ಹೂಡಿಕೆ ಮಾಡಲು ಸಾಧ್ಯವಾಗುತ್ತಿಲ್ಲವೇ ಚಿಂತೆ ಬಿಡಿ, ಈ ಪಾಲಿಸಿ ಮಾಡಿಸಿ, ಹೆಚ್ಚಿನ ಲಾಭ ಪಡೆಯಿರಿ!!
LIC Policy : Don't worry about not being able to invest more because of low income, do this policy and get more profit!!
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸಹ ತಾವು ಸಂಪಾದಿಸಿರುವ ಹಣದಲ್ಲಿ ಕನಿಷ್ಠ ಪಕ್ಷ 10% ಆದರೂ ಸಹ ಸೇವಿಂಗ್ಸ್ (Savings) ಮಾಡಲು ಬಯಸುತ್ತಾರೆ. ಏಕೆಂದರೆ ಮುಂದಿನ ದಿನಗಳಲ್ಲಿ ನಮಗೆ ಯಾವ ರೀತಿಯ ಕಷ್ಟ ಸಂಭವಿಸಬಹುದು ಎಂದು ಹೇಳಲಿಕ್ಕೆ ಆಗುವುದಿಲ್ಲ. ಒಂದು ವೇಳೆ ಶೇರ್ ಮಾರ್ಕೆಟ್(Share Market) ಹಾಗೂ ಮ್ಯೂಚುವಲ್ ಫಂಡ್ಸ್(Mutual funds) ನಲ್ಲಿ ಹಣ ಹೂಡಿಕೆ(Money investment) ಮಾಡೋಣ ಎಂದರೆ ಅದು ಸ್ವಲ್ಪ ದುಬಾರಿಯೇ ಹಾಗಿದೆ. ಅಷ್ಟೇ ಅಲ್ಲದೆ ಅದರಲ್ಲಿ ನಷ್ಟ ಕೂಡ ಸಂಭವಿಸಬಹುದು. ಆದ್ದರಿಂದ ಅವುಗಳಲ್ಲಿ ಹಣ ಹೂಡಲು ಸಾಧ್ಯವಾಗುವುದಿಲ್ಲ ಎನ್ನುವವರು ಈ ರೀತಿ ಮಾಡಿ.
ನಮ್ಮ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಎಲ್ಐಸಿಯು(LIC Policy)ಒಂದು ಸೇವಿಂಗ್ ಸ್ಕೀಮ್(Saving scheme)ಹಾಗೂ ನಮ್ಮ ಹಣವನ್ನು ಜೋಪಾನ ಮಾಡುವ ಒಂದು ಸಂಸ್ಥೆಯಾಗಿದೆ. ಎಲ್ಐಸಿಯು ನಮಗೆ ಹಣವನ್ನು ಹೂಡಿಕೆ ಮಾಡಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಮುಖ್ಯವಾದದ್ದು ಯಾವುದು ಎಂದರೆ ಎಲ್ಐಸಿ ಆದರ್ ಸ್ಟಾಂಬ್(LIC Adhar Stambh) ಈ ಯೋಜನೆಯ ಬಗ್ಗೆ ಇನ್ನೂ ವಿವರವಾಗಿ ತಿಳಿಯೋಣ ಬನ್ನಿ.
ಮನುಷ್ಯನಿಗೆ ಕಷ್ಟ ಅಥವಾ ಆಪತ್ತು ಯಾವ ಸಮಯಕ್ಕೆ ಬರುತ್ತದೆ ಎಂದು ತಿಳಿದಿರುವುದಿಲ್ಲ. ಅದಕ್ಕಾಗಿಯೇ ಅವನು ದುಡಿಯುವ ಮೊತ್ತದಲ್ಲಿ ಸ್ವಲ್ಪಮಟ್ಟಿಗೆ ಉಳಿತಾಯ ಎಂದು ಎತ್ತಿಟ್ಟಿರುತ್ತಾನೆ. ಹಾಗೆ ಎತ್ತಿಟ್ಟ ಹಣದಲ್ಲಿ ಆತನು ಸ್ವಲ್ಪ ಲಾಭವನ್ನು ಪಡೆಯಬೇಕು ಅಲ್ಲವೇ. ಹಾಗಾದರೆ ಏನು ಮಾಡಬೇಕು ಎಂದರೆ ಎಲ್ಐಸಿ ಆದರ್ ಸ್ಟಾಂಪ್ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಭದ್ರತೆಯು ಹಾಗೂ ಉಳಿತಾಯ ಎರಡನ್ನು ಸಹ ಮಾಡಬಹುದಾಗಿದೆ.
ಈ ಕಂಡೀಷನ್ಗೆ ಹು ಎಂದರೆ ಸಾಕು 200 ಯೂನಿಟ್ ವಿದ್ಯುತ್ ಉಚಿತವಾಗಿ ದೊರೆಯುತ್ತದೆ!!
ಒಂದು ವೇಳೆ ನೀವು ಏನಾದರೂ ಈ ಯೋಜನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಇದ್ದರೆ ನಿಮ್ಮ ವಯಸ್ಸು ಸುಮಾರು ಎಂಟು ವರ್ಷದಿಂದ 55 ವರ್ಷದೊಳಗೆ ಇರಬೇಕು. ಈ ಯೋಜನೆಯಲ್ಲಿ ಕನಿಷ್ಠ ನೀವು 75 ಸಾವಿರ ಗಳಿಂದ ಗರಿಷ್ಟ 3 ಲಕ್ಷದ ವರೆಗೂ ಹಣವನ್ನು ಹೂಡಿಕೆ ಮಾಡಬಹುದು. ಹಾಗಾದರೆ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಎಷ್ಟೆಲ್ಲಾ ಲಾಭಗಳು ಇವೆ ಎಂದು ತಿಳಿಯೋಣ ಬನ್ನಿ
ಮೊದಲನೆಯದಾಗಿ ಡೆತ್ ಬೆನಿಫಿಟ್ಸ್(Death Benifits)ಒಂದು ವೇಳೆ ನೀವು ಏನಾದರೂ ಈ ಯೋಜನೆಯಲ್ಲಿ ಪಾಲ್ಗೊಂಡಾಗ ನಿಧನರಾದರೆ ಈ ಎಲ್ಲಾ ಯೋಜನೆಯ ಹಣವನ್ನು ನಿಮ್ಮ ನಾಮಿನಿ ದರರಿಗೆ ಕೊಡಲಾಗುತ್ತದೆ. ಇಲ್ಲಿ ನಿಮಗೆ ವಿಮೆ ಮತ್ತು ನಿಷ್ಠೆ ಎರಡು ಸಹ ಸಿಗುತ್ತದೆ.
ಎರಡನೆಯದಾಗಿ ಮೆಚುರಿಟಿ ಬೆನಿಫಿಟ್(Maturity benifits)ಒಂದು ವೇಳೆ ನೀವು ಈ ಯೋಜನೆ ಮುಗಿಯುವವರೆಗೂ ಇದ್ದರೆ ನೀವು ರಾಯಲ್ಟಿಯನ್ನು ಪಡೆಯಬಹುದು ಹಾಗೂ ಮೆಚುರಿಟಿಯ ನಂತರ ನಿಮಗೆ ಹಣವನ್ನು ಬಡ್ಡಿಯ ಸಮೇತವಾಗಿ ಹಿಂದಿರುಗಿಸಲಾಗುತ್ತದೆ.
