Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Beer Rate : ಬಿಯರ್ ದರ ಏರಿಕೆ ಇಂದ ಮಾರಾಟ ಕುಸಿತವಾದರು ಸರ್ಕಾರಕ್ಕೆ ಯಾವುದೇ ನಷ್ಟ ಇಲ್ಲ..

ರಾಜ್ಯ ಸಭೆ ಬಜೆಟ್ ನಲ್ಲಿ ಬಿಯರ್ ಬೆಲೆಯನ್ನು ಹೆಚ್ಚಿಸಲಾಗಿದೆ. ಇದರಿಂದ ಭಾರಿ ಲಾಭವನ್ನು ನಿರೀಕ್ಷೆ ಮಾಡಿತ್ತು ರಾಜ್ಯ ಸರಕಾರ. ಆದರೆ ಗ್ರಾಹಕರು ದುಬಾರಿ ಬಿಯರ್ ಖರೀದಿಸಲು ಹಿಂಜರಿಯುತ್ತಿದ್ದಾರೆ.

Beer Rate : ರಾಜ್ಯ ಸಭೆ ಬಜೆಟ್ ನಲ್ಲಿ ಬಿಯರ್ ಬೆಲೆಯನ್ನು ಹೆಚ್ಚಿಸಲಾಗಿದೆ. ಇದರಿಂದ ಭಾರಿ ಲಾಭವನ್ನು ನಿರೀಕ್ಷೆ ಮಾಡಿತ್ತು ರಾಜ್ಯ ಸರಕಾರ. ಆದರೆ ಗ್ರಾಹಕರು ದುಬಾರಿ ಬಿಯರ್ ಖರೀದಿಸಲು ಹಿಂಜರಿಯುತ್ತಿದ್ದಾರೆ. ಇದರಿಂದ ಬಿಯರ್ ಮಾರಾಟದಲ್ಲಿ ಭಾರಿ ಕುಸಿತ ಕಂಡುಬಂದಿದೆ. ಹಾಗಾದರೆ ಬಜೆಟ್ ನಂತರ ಬಿಯರ್ ಮಾರಾಟವಾದ ಪ್ರಮಾಣ ಹೇಗಿದೆ ಎಂದು ತಿಳಿಯೋಣ.

Beer Rate

ಕರ್ನಾಟಕದಲ್ಲಿ ಬಿಯರ್ ಪ್ರಿಯರಿಗೆ ಕಹಿ ಸುದ್ದಿ! ಫೆಬ್ರವರಿ 1 ರಿಂದ ಬಿಯರ್ ಮೇಲಿನ ಸುಂಕವನ್ನು 185% ರಿಂದ 195% ಗೆ ಏರಿಸಲಾಗಿದೆ. ಇದರಿಂದ ಒಂದು ಬಿಯರ್‌ಗೆ 12 ರೂಪಾಯಿಗಳಿಗೆ ಹೆಚ್ಚುವರಿ ಬೆಲೆ ಬೇಕಾಗಿದೆ. ಕಳೆದ ಎಂಟು ತಿಂಗಳಲ್ಲಿ ಬಿಯರ್ ಬೆಲೆ ಮೂರನೇ ಬಾರಿ ಏರಿಕೆಯಾಗಿದೆ. ಈ ಏರಿಕೆಯಿಂದ ಒಂದು ಬಿಯರ್‌ಗೆ ಒಟ್ಟು 40 ರೂಪಾಯಿಗಳಷ್ಟು ಆಗಿದೆ. ಗ್ಯಾರೆಂಟಿ ಯೋಜನೆಗಳಿಗೆ ವಿನಿಯೋಗಿಸಲು ಹಾಗೂ ಅಭಿವೃದ್ದಿಯ ಕೆಲಸಗಳಿಗೆ ಹಣ ಇಲ್ಲದೆ ಇರುವುದರಿಂದ ಬೆಲೆ ಏರಿಕೆ ಆಗಿದೆ ಎಂಬುದು ಜನತೆಯ ಅಭಿಪ್ರಾಯ.

ಕಳೆದ ವರ್ಷಕ್ಕಿಂತ ಈ ಬಾರಿ ಬಿಯರ್ ಮಾರಾಟದಲ್ಲಿ ಭಾರಿ ಕುಸಿತ!

ಮೂಲಗಳ ಪ್ರಕಾರ ಕಳೆದ ವರ್ಷಕ್ಕಿಂತ ಈ ವರ್ಷ ಫೆಬ್ರವರಿ ಮೊದಲ ವಾರದಲ್ಲಿ ಬಿಯರ್ ಮಾರಾಟದಲ್ಲಿ ಭಾರಿ ಕುಸಿತ ಕಂಡುಬಂದಿದೆ. 2023 ರ ಫೆಬ್ರವರಿ ಮೊದಲ ವಾರದಲ್ಲಿ 7. 2 ಲಕ್ಷ ಕೇಸ್ ಬಿಯರ್ ಮಾರಾಟವಾಗದೆ, ಈ ವರ್ಷ ಅದೇ ಸಮಯದಲ್ಲಿ 6. 4 ಲಕ್ಷ ಕೇಸ್ ಬಿಯರ್ ಮಾತ್ರ ಮಾರಾಟವಾಗಿದೆ.

ಮಾರಾಟದಲ್ಲಿ ಕುಸಿತ ಕಂಡರೂ ಸರ್ಕಾರಕ್ಕೆ ನಷ್ಟ ಆಗುತ್ತಿಲ್ಲ ಏಕೆ ?

ಬಿಯರ್‌ನಿಂದ ಬರುವ ಆದಾಯದಲ್ಲಿ ಸರ್ಕಾರಕ್ಕೆ ಯಾವುದೇ ನಷ್ಟ ಉಂಟಾಗಿಲ್ಲ. ಹೆಚ್ಚುವರಿ ಸುಂಕದಿಂದಾಗಿ ಸರ್ಕಾರಕ್ಕೆ ಲಾಭವೇ ಉಂಟಾಗಿದೆ ಎಂದು ಅಬಕಾರಿ ಮೂಲಗಳು ತಿಳಿಸಿವೆ. ಏಕೆ ಎಂದರೆ ಒಂದು ಬಾಟಲ್ ದರವೆ ಹೆಚ್ಚಿರುವ ಸಮಯದಲ್ಲಿ 10 ಬಾಟಲ್ ಮಾರಾಟವಾಗುವ ಕಡೆಯಲ್ಲಿ 5 ಬಾಟಲ್ ಮಾರಾಟವಾದರೂ ಸಹ ಅದು ಸರ್ಕಾರಕ್ಕೆ ಲಾಭವನ್ನು ತಂದುಕೊಡುತ್ತದೆ.

ಬೆಲೆ ಏರಿಕೆಯಿಂದಾಗಿ ಗ್ರಾಹಕರು 185-200 ರೂಪಾಯಿ ಬೆಲೆಯ ಕಿಂಗ್ ಫೀಷರ್ ಬಿಯರ್‌ಗಳಿಗೆ ಬದಲಾಗಿ 130-140 ರೂಪಾಯಿ ಬೆಲೆಯ ರಾಯಲ್ ಚಾಲೆಂಜ್ ಮತ್ತು ಬ್ಲಾಕ್ ಪೋರ್ಟ್ ಬಿಯರ್‌ಗಳನ್ನು ಖರೀದಿಸಲು ಆಯ್ಕೆ ಮಾಡಲಾಗುತ್ತಿದೆ. ಪ್ರಸ್ತುತ ಕಡಿಮೆ ಬೆಲೆ ಬಿಯರ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಕಡಿಮೆ ಬೆಲೆ ಬಿಯರ್‌ಗಳ ಉತ್ಪಾದಕರಿಗೆ ಈ ಬೆಳವಣಿಗೆಯು ಲಾಭದಾಯಕವಾಗಿದೆ. ಹಾಗೂ ಇದರಿಂದ ಸರ್ಕಾರಕ್ಕೆ ಯಾವುದೇ ರೀತಿಯ ನಷ್ಟ ಆಗುತ್ತಿಲ್ಲ. ಜನರು ಕುಡಿತವನ್ನು ಬಿಡದ ಹೊರತು ಹೆಂಡದ ಅಂಗಡಿಗಳು ಹಾಗೂ ಸರ್ಕಾರದ ಆದಾಯಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಅದೇ ಭರವಸೆ ಇರುವುದರಿಂದ ಸರ್ಕಾರ ಸುಂಕವನ್ನು ಹೆಚ್ಚಿಸಿದೆ.  ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

Also Read: High Court Verdict: ಕೋರ್ಟ್ ನಲ್ಲಿ ಕೇಸ್ ಹಾಕುವ ಮುನ್ನ ಎಚ್ಚರಿಕೆವಹಿಸಿ, ಅತ್ತೆ ಸೊಸೆ ಬಗ್ಗೆ ಖಡಕ್ ತೀರ್ಪು ನೀಡಿದ ಹೈಕೋರ್ಟ್

Leave a comment