Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಬಜಾಜ್ ಚೇತಕ್ ev ಏನಿದರ ಸ್ಪೆಷಾಲಿಟಿ ನೋಡೋಣ ಬನ್ನಿ..!!

Come and see what is the specialty of Bajaj Chetak ev..!!

ಸಾಮಾನ್ಯವಾಗಿ ಆಗಿನ ಕಾಲದಲ್ಲಿ ಬಜಾಕ್ಷೇತಕ್ ಸ್ಕೂಟರ್ ಮೇಲೆ ಓಡಾಡಿದ್ದೀರಿ ಅಥವಾ ನೀವು ಕೂಡ ಅದನ್ನು ಹೊಂದಿದ್ದೀರಿ. ಆಗಿನ ಕಾಲದಲ್ಲಿ ಬಜಾಜ್ ಚೇತಕ್ ಸ್ಕೂಟರ್ಗಳಿಗೆ ಇದ್ದ ಬೆಲೆ ಈಗಿನ ರಾಯಲ್ ಎನ್ಫೀಲ್ಡ್ ಗಳಿಗೂ ಕೂಡ ಇರಲಿಲ್ಲ. ಅದೇ ರೀತಿ ಬಜಾಜ್ ಕಂಪನಿಯು ಕೆಲವೊಂದಿಷ್ಟು ವರ್ಷಗಳ ಬಳಿಕ ಮತ್ತೆ ಬಜಾಜ್ ಚೇತಕ್ ಇವಿ ಹೆಸರಿನಲ್ಲಿ ಎಲೆಕ್ಟ್ರಿಕ್ ಬಜಾಜ್ ಚೇತಕ್ ಗಾಡಿಯನ್ನು ಬಿಡುಗಡೆ ಮಾಡಿದ್ದು ಹಾಗಾದರೆ ಈ ಗಾಡಿಯ ಸ್ಪೆಷಾಲಿಟಿ ಏನು? ಇದರ ರೇಂಜ್ ಎಷ್ಟು ಬರುತ್ತದೆ ಇದರಲ್ಲಿ ನೀವು ಎಷ್ಟು ದೂರ ಕ್ರಮಿಸಬಹುದು ಇದರಲ್ಲಿ ಬ್ಯಾಟರಿ ಎಷ್ಟಿದೆ ಮತ್ತು ಇದರಲ್ಲಿರುವ ಎಲ್ಲಾ ಫೀಚರ್ ಗಳು ಏನೇನು ಎಂದು ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ಮೊದಲಿಗೆ ಒಳ್ಳೆಯ ಲುಕ್ಕು ಮತ್ತು ಡಿಸೈನ್ ಹೊಂದಿರುವ ev scooter ಇದಾಗಿದ್ದು ಮುಂಭಾಗದಲ್ಲಿ ಎಲ್ ಈ ಡಿ ಆರ್ ಎಲ್ ಕೊಡುತ್ತಿದ್ದಾರೆ ಜೊತೆಗೆ ಈ ಗಾಡಿ ಇಂಡಿಕೇಟರ್ಗಳನ್ನು ಸಹ ತುಂಬಾನೇ ಸ್ಟೈಲಿಶ್ ಆಗಿ ಕೊಡುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಈ ಎಲೆಕ್ಟ್ರಿಕ್ ಸ್ಕೂಟರ್ ಒಂದು ಪ್ರೀಮಿಯಂ ಗುಡ್ ಕ್ವಾಲಿಟಿ ನೋಟವನ್ನು ಒಳಗೊಂಡಿದೆ.ಜೊತೆಗೆ ip 67 ವಾಟರ್ ರಿಜಿಸ್ಟನ್ಸ್ ಕೊಡ ಒಳಗೊಂಡಿದೆ.

ಈ ಸ್ಕೂಟರ್ ನಲ್ಲಿ ತುಂಬಾನೇ ಇನ್ಸ್ಟಂಟ್ ಮತ್ತು ಬಹಳ ಬೇಗನೆ ಪಿಕ್ ಅಪ್ ತೆಗೆದುಕೊಳ್ಳುತ್ತದೆ. ನೀವು ಈ ಎಲೆಕ್ಷನ್ ಸ್ಕೂಟರ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದ್ದಾರೆ, ಬರೋಬ್ಬರಿ 95 km ದೂರ ಕ್ರಮಿಸಬಹುದು. ಜೊತೆಗೆ ಚೇತಕ್ ಅವರು ಈ ಸ್ಕೂಟರ್ ಗಾಗಿ ಸ್ಪೆಷಲ್ ಅಪ್ಲಿಕೇಶನ್ ಕೂಡ ಓಪನ್ ಮಾಡಿದ್ದಾರೆ.app name chetak ಅಂತ ನೀವು ಇದನ್ನು ಪ್ಲೇ ಸ್ಟೋರ್ ಗೆ ಹೋಗಿ ಡೌನ್ಲೋಡ್ ಮಾಡಿಕೊಳ್ಳಬಹುದು.

ನೀವು ಈ ಅಪ್ಲಿಕೇಶನ್ ಬಳಕೆ ಮಾಡುವ ಮೂಲಕ ವಿಷಯಗಳನ್ನು ಗಾಡಿಗೆ ಸಂಬಂಧಪಟ್ಟ ವಿಷಯಗಳನ್ನು ಕೂಡ ತಿಳಿದುಕೊಳ್ಳಬಹುದಾಗಿದೆ. ಜೊತೆಗೆ ನಿಮಗೆ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಮ್ಯೂಸಿಕ್ ಕಂಟ್ರೋಲ್ ಕೂಡ ಸಿಗುತ್ತದೆ ಗೂಗಲ್ ಮ್ಯಾಪ್ ಸಿಗುತ್ತದೆ ಎಲ್ಲಾ ರೀತಿಯ ವಿಶೇಷ ಅಪ್ಲಿಕೇಶನ್ಗಳು ಕೂಡ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನಿಮಗೆ ಸಿಗುತ್ತದೆ. ಜೊತೆಗೆ ನೀವು ಈ ಗಾಡಿಯಲ್ಲಿ ನಿಮ್ಮ ಎಲೆಕ್ಟ್ರಿಕ್ ಸ್ಕೂಟರ್ ಡಾಕ್ಯುಮೆಂಟ್ಸ್ ಗಳನ್ನು ಕೂಡ ಅಪ್ಲೋಡ್ ಮಾಡಿಕೊಳ್ಳಬಹುದು.

ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ರಿವರ್ಸ್ ಗೇರ್ ಕೂಡ ಇದ್ದು ಇದು ಒಂದು ಒಳ್ಳೆ ರೀತಿಯ ಉತ್ತಮ ಫ್ಯೂಚರ್ ಎಂದು ಗುರುತಿಸಲಾಗಿದೆ. ಇನ್ನು ನೀವು ಇಷ್ಟ ಅಲ್ಲದೆ ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನಿಮ್ಮ ಮೊಬೈಲ್ ಗಳನ್ನು ಕೂಡ ಚಾರ್ಜ್ ಮಾಡಿಕೊಳ್ಳಬಹುದು.ಇನ್ನು ಈ ev ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 18 ltr ಸ್ಪೇಸ್ ಕೂಡ ಇರುವಂತದ್ದು. ಇಲ್ಲಿ ನೀವು ನಿಮ್ಮ ಬೇರೆ ಬೇರೆ ಡಾಕ್ಯುಮೆಂಟ್ಸ್ಗಳನ್ನು ಜೊತೆಗೆ ಹೆಲ್ಮೆಟ್ ಮೊಬೈಲ್ ಲ್ಯಾಪ್ಟಾಪ್ ಎಲ್ಲಾ ರೀತಿಯ ವಸ್ತುಗಳನ್ನು ನೀವು ಇಲ್ಲಿ ಇಟ್ಟುಕೊಳ್ಳಬಹುದು.

ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಬ್ಯಾಟರಿ ವಿಷಯಕ್ಕೆ ಬರುವುದಾದರೆ 3kw ನ ಲಿಥಿಯಂ ion ಬ್ಯಾಟರಿ ಇದ್ದು ಇದನ್ನು ನೀವು ಬಹಳ ಸುಲಭವಾಗಿ ನಿಮ್ಮ ಮನೆ ಅಥವಾ ಹೊರಗಡೆ ಚಾರ್ಜಿಂಗ್ ಪಾಯಿಂಟ್ ಗಳಲ್ಲಿ ಅತಿ ಬೇಗನೆ ಚಾರ್ಜ್ ಮಾಡಿಕೊಳ್ಳಬಹುದು. ನೀವು ಐದು ಗಂಟೆಗಳ ಕಾಲ ಇದನ್ನು ಒಮ್ಮೆ ಚಾರ್ಜ್ ಮಾಡಿದರೆ ನೀವು 90 ರಿಂದ 95 ಕಿ.ಮೀ ದೂರ ಪ್ರಯಾಣ ಮಾಡಬಹುದು. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಬರೋಬ್ಬರಿ 1,43,000 ex ಶೋರೂಂ ಬೆಲೆ ಇದ್ದು ನೀವು ನಿಮ್ಮ ಹತ್ತಿರದಲ್ಲಿರುವ ಬಜಾಜ್ ಶೋರೂಮ್ ಗೆ ಭೇಟಿ ನೀಡಿ ಈ ಗಾಡಿನ ಎಕ್ಸ್ಪೀರಿಯೆನ್ಸ್ ಅನ್ನು ನೀವು ತೆಗೆದುಕೊಳ್ಳಬಹುದು.
PhotoGrid Site 1690707759960

Leave a comment