40-50 ವರ್ಷಗಳ ಹಿಂದೆ ಎಲ್ಲರ ಮನೆಯಲ್ಲು ಇದ್ದ, ಲೂನಾ ಸ್ಕೂಟರ್ ಈಗ ಹೊಸ ರೂಪದಲ್ಲಿ, ಎಲೆಕ್ಟ್ರಿಕ್ ಸ್ಕೂಟರ್ ಆಗಿ ಬರುತ್ತಿದೆ, ವಿಶೇಷತೆ ಏನು !!
40-50 years ago, the Luna scooter that was in everyone's home, now comes in a new form, an electric scooter, what's special!!
Kinetic E Luna : ಒಂದು ಕಾಲದಲ್ಲಿ ಸಾಕಷ್ಟು ಕ್ರೇಜ್ ಪಡೆದುಕೊಂಡಿದ್ದ ಗಾಡಿಗಳ ಪೈಕಿ ಲೂನಾ ಸಹ ಒಂದು ಎಂದರೆ ತಪ್ಪಾಗುವುದಿಲ್ಲ. ಆಗಿನ ಕಾಲದಲ್ಲಿ ಲೂನಾ ಗಾಡಿ ತೆಗೆದುಕೊಳ್ಳಬೇಕು ಎನ್ನುವುದು ಅದೆಷ್ಟೋ ಜನರ ಕನಸು. ಇನ್ನು ಅದೆಷ್ಟೋ ಸಿನಿಮಾಗಳಲ್ಲಿ ಸಹ ಲೂನಾ ಗಾಡಿಯನ್ನು ತೋರಿಸಲಾಗಿದೆ.
ಅಲ್ಲದೆ ಈ ಲೂನಾ ಗಾಡಿಯ ಮೇಲೆ ಅದೆಷ್ಟೋ ಹಾಡುಗಳು ಸಹ ಬಂದಿದ್ದು, ಇಂದಿಗೂ ಈ ಹಾಡುಗಳ ಕ್ರೇಜ್ ಕಡಿಮೆ ಆಗಿಲ್ಲ. ಇನ್ನು ಇದೀಗ ಮತ್ತೊಮ್ಮೆ ಈ ಲೂನಾ ಮೋಡಿ ಮಾಡಲು ಮಾರುಕಟ್ಟೆಗೆ ಬಂದಿದೆ. ಹೌದು ಇದೀಗ ಲೂನಾ ಗಾಡಿ ರೂಪಾಂತರಗೊಂಡು E Luna ಎನ್ನುವ ಹೊಸ ಹೆಸರಿನಿಂದ ಮಾರುಕಟ್ಟೆಗೆ ಕಾಲಿಟ್ಟಿದೆ.
ಹೌದು ಸ್ನೇಹಿತರೆ, ಇದೀಗ E Luna ಎಲೆಕ್ಟ್ರಿಕ್ ರೂಪಾಂತರದಲ್ಲಿ ಮಾರುಕಟ್ಟೆಗೆ ಕಾಲಿಡಲು ತಯಾರಿಗಳನ್ನು ನಡೆಸುತ್ತಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಎಲ್ಲೆಡೆ ಬಾರಿ ಕ್ರೇಜ್ ಸೃಷ್ಟಿ ಮಾಡಿದೆ ಎಂದರೆ ತಪ್ಪಾಗುವುದಿಲ್ಲ. ಅದೆಷ್ಟೋ ವಾಹನ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್ ಗಳನ್ನು ರೂಪಾಂತರಗೊಳಿಸಿ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಇನ್ನು 80 ಹಾಗೂ 90 ರ ದಶಕದಲ್ಲಿ ಬಾರಿ ಕ್ರೇಜ್ ಸೃಷ್ಟಿಸಿದ್ದ, ಕೈನೆಟಿಕ್ ಲೂನಾ ಇದೀಗ ಮತ್ತೊಮ್ಮೆ ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ನೀಡಲು ತಯಾರಾಗುತ್ತಿದೆ. ಹೌದು ಇದೀಗ ಕೈನೆಟಿಕ್ ಲೂನಾ ಹೊಸ ಲುಕ್ ನೊಂದಿಗೆ ಎಲೆಕ್ಟ್ರಿಕ್ ಆಗಿ ರೂಪಾಂತರಗೊಂಡು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.
ಇನ್ನು Kinetic E Luna ಹೊಸ ಲುಕ್ ಬಗ್ಗೆ ಸ್ವತಃ ಕಂಪನಿಯ ಸಿಇಒ ಸುಲಾಝಾ ಫಿರೋಡಿಯಾ ಮೊಟ್ವಾನಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು E Luna ಹೊಸ ಮಾಡಲ್ ಅನ್ನು ಮಹಾರಾಷ್ಟ್ರದ ಅಹಮದಾಬಾದ್ ನ ಖಾರ್ಕಾನೆಯಲ್ಲಿ ತಯಾರಿಲಾಗುತ್ತಿದ್ದು, ತಿಂಗಳಿಗೆ ಸುಮಾರು 5 ಸಾವಿರ ಯೂನಿಟ್ ಗಳನ್ನೂ ತಯಾರಿಸುವ ಗುರಿ ಹೊಂದಿದೆಯಂತೆ.
1972 ರಲ್ಲಿ ಭಾರತದ ಮೊದಲ ಲೂನಾ 50 ಸಿಸಿ ಮಾಡಲ್ ಬಿಡುಗಡೆಯಾಗಿತ್ತು. ಇನ್ನು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಲೂನಾ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಹಾಗೆ ಮಾರುಕಟ್ಟೆಯಲ್ಲಿ ಬಾರಿ ಕ್ರೇಜ್ ಸಹ ಸೃಷ್ಟಿಸಿತ್ತು. ಇನ್ನು ಈ ಮಾಡಲ್ ಮಾರುಕಟ್ಟೆಗೆ ಬಂದಾಗ ಇದರ ಬೆಲೆ ಸುಮಾರು 2000 ರೂಪಾಯಿ ಇದ್ದು, ಇನ್ನು ಬೆಲೆಗೆ ಸೂಕ್ತವಾದ ಮಾಡಲ್ ಗೆ ಜನರು ಮನಸೋತ್ತಿದ್ದರು.
ಇನ್ನು ಇದೀಗ ಕೈನೆಟಿಕ್ E Luna ಇದೀಗ ಎಲೆಕ್ಟ್ರಿಕ್ ರೂಪಾಂತರಗೊಂಡು ಮಾರುಕಟ್ಟೆಗೆ ಮತ್ತೆ ಪ್ರವೇಶಿಸುತ್ತಿದೆ. ಇನ್ನು ಎಲ್ಲೆಡೆ ಇದೀಗ ಇದರದ್ದೇ ಚರ್ಚೆ ಶುರುವಾಗಿದೆ. ಈ ಲೂನಾ ಹೊಸ ಮಾಡಲ್ ಮಾರುಕಟ್ಟೆಯಲ್ಲಿ ಯಾವ ರೀತಿ ಕ್ರೇಜ್ ಸೃಷ್ಟಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
