Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಬೇರೆ ದೇಶದ ಸ್ಕೂಟರ್ ಗಳಿಗೆ ಠಕ್ಕರ್ ಕೊಡಲು ಬರ್ತಾ ಇದೆ, ನಮ್ಮ ಬೆಂಗಳೂರು ಮೂಲದ, ಎಲೆಕ್ಟ್ರಿಕ್ ಸ್ಕೂಟರ್ 125km ಮೈಲೇಜ್ ಕಡಿಮೆ ಬೆಲೆ.

Ola electric scooter Air s1 is available from july 28th

Ola S1 Air: ಬೆಂಗಳೂರು ಮೂಲದ ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಹೊಸ ಸ್ಕೂಟರ್ ಮಾಡಲ್ S1 ಏರ್ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಇದೆ ಜುಲೈ 28, 2023 ರಂದು ಬಿಡುಗಡೆ ಮಾಡಲು ನಿರ್ಧರಿಸಿದೆ. ಇನ್ನು ಗ್ರಾಹಕರು ಜುಲೈ 23 ರಿಂದ ಈ ಸ್ಕೂಟರ್ ಅನ್ನು ಖರೀದಿ ಮಾಡಬಹುದಾಗಿದೆ ಎಂದು ಕಂಪನಿಯು ಅಧಿಕೃತವಾಗಿ ಪ್ರಕಟಿಸಿದೆ. ಇನ್ನು ಈ ಮಾಡಲ್ ಅನ್ನು ಖರೀದಿ ಮಾಡಲು ಸೀಮಿತ ಅವಧಿ ಇದ್ದು, ಕೇವಲ ಜುಲೈ 28 ರಿಂದ ಜುಲೈ 30 ರವರೆಗೆ ವಿಂಡೋಸ್ ಓಪನ್ ಇರಲಿದೆ ಎಂದು ಕಂಪನಿ ಮಾಹಿತಿ ನೀಡಿದೆ.

ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತವಾಗಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಿದೆ., “The all-new versatile S1 Air is arriving on 28th July #EndIC”. ಎಂದು ಟ್ವಿಟರ್ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ಪೋಸ್ಟ್ ಮಾಡಿದೆ.

ರೇಷನ್ ಕಾರ್ಡ್ ನಲ್ಲಿ ಮನೆ ಯಜಮಾನಿ ಅಂತ ಹೆಸರು ಬದಲಾಯಿಸಲು ಹೀಗೆ ಮಾಡಿ, ಹೆಚ್ಚೇನೂ ಇಲ್ಲ ಈ ಒಂದು ಸಿಂಪಲ್ ವಿಧಾನ ಅನುಸರಿಸಿ ಸಾಕು.

ಓಲಾ ಕಂಪನಿಯು ಇದೆ ಜುಲೈ 28 ರಿಂದ ಎಲೆಕ್ಟ್ರಿಕ್ ಸ್ಕೂಟರ್ ನ ಮೊದಲು ಬುಕ್ಕಿಂಗ್ ಶುರು ಮಾಡಬಹುದು ಎಂದು ತಿಳಿಸಿದೆ. ಹಾಗೆ ಎಸ್ 1 ಏರ್ ನ ಎಕ್ಸ್ ಶೋ ರೂಂ ಬೆಲೆ ರೂ 1,09,999 ಇದ್ದು, ಗ್ರಾಹಕರು ಇದರ ಲಾಭ ಪಡೆಯಬಹುದು ಎಂದು ಕಂಪನಿ ತಿಳಿಸಿದೆ.

Ola S1 ಏರ್ ಸ್ಕೂಟರ್ 3 kWh ಬ್ಯಾಟರಿಯನ್ನು ಒಳಗೊಂಡಿದ್ದು, ಇದು 125 ಕಿಮೀ ಮೈಲೇಜ್ ಅನ್ನು ನೀಡುತ್ತದೆ ಎನ್ನಲಾಗುತ್ತಿದೆ. ಇ-ಸ್ಕೂಟರ್ ಗಂಟೆಗೆ 90 ಕಿಮೀ ವೇಗವನ್ನು ಚಲಿಸುವ ಸಾಮರ್ಥ್ಯ ಹೊಂದಿದೆ. ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ 11.3 ಎಚ್‌ಪಿ ಗರಿಷ್ಠ ಶಕ್ತಿಯನ್ನು ಮತ್ತು 58 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿ ಹೊಂದಿದೆ.

ನಿಮ್ಮ ಜಮೀನಿಗೆ ದಾರಿ ಇಲ್ವಾ,  ಜಮೀನಿಗೆ ಬಂಡಿ  ಅಥವಾ ಕಾಲು ದಾರಿ ಹೇಗೆ ಪಡೆದುಕೊಳ್ಳಬೇಕು, ಭೂ ಕಂದಾಯದ ರೂಲ್ಸ್.

ಇನ್ನು ಈ ಸ್ಕೂಟರ್ ನ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, S1 ಏರ್ ಎಲ್ಇಡಿ ಹೆಡ್‌ಲ್ಯಾಂಪ್, 7.0-ಇಂಚಿನ TFT ಸ್ಕ್ರೀನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ರಿವರ್ಸ್ ಮೋಡ್, OTA ಅಪ್ಡೇಟ್ ಗಳು, ರಿಮೋಟ್ ಬೂಟ್ ಲಾಕ್/ಅನ್‌ಲಾಕ್ ಮತ್ತು ಮ್ಯೂಸಿಕ್ ಪ್ಲೇಬ್ಯಾಕ್ ಅನ್ನು ಒಳಗೊಂಡಿದೆ. ಅಲ್ಲದೆ ಈ ಇ-ಸ್ಕೂಟರ್ ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಎನ್ನುವ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿರುವುದು ವಿಶೇಷ.

ola air s1
Image credit Auto car india. Ola electric scooter AIr s1 is available from july 28th.

ಇನ್ನು ಮುಂದೆ ಬೈಕ್ ಗಳೆಲ್ಲ ಈ ಕಾರ್ ಮುಂದೆ ದೂಳಿಗೆ ಸಮ, ಬೈಕ್ ಗಿಂತ ದುಪ್ಪಟ್ಟು ಮೈಲೇಜ್, ಜಸ್ಟ್ 10 ಲಕ್ಷದಲ್ಲಿ ಮನೆಗೆ ತನ್ನಿ, ಬೆಂಕಿ ಫೀಚರ್ಸ್.

 

Leave a comment