ಬಂತು ಕೊನೆಗೂ ಪ್ರಾಣ ಉಳಿಸುವ ಹೊಸ ಕಾರು, ಈ ಕಾರಿನಲ್ಲಿ ಆಕ್ಸಿಡೆಂಟ್ ಆಗುವ ಮಾತೆ ಇಲ್ಲ, ಬೆಲೆ ಅಂತೂ ತುಂಬಾ ಕಡಿಮೆ.
Maruti Suzuki Grand Vitara has life saving features.
Maruti Suzuki Grand Vitara: ನಮ್ಮ ಭಾರತ ದೇಶದ ಅತಿ ದೊಡ್ಡ ವಾಹನ ತಯಾರಿಕ ಕಂಪನಿ ಎಂದರೆ ಅದು ಮಾರುತಿ ಸುಜುಕಿ ಎಂದರೆ ತಪ್ಪಾಗುವುದಿಲ್ಲ. ಇದೀಗ ಕಂಪನಿಯ ಗ್ರಾಂಡ್ ವಿಟಾರಾ (Grand Vitara) ಎಸ್ ಯು ವಿ ಗೆ ಮಾರುಕಟ್ಟೆಯಲ್ಲಿ ಬಾರಿ ಡಿಮ್ಯಾಂಡ್ ಇದೆ. ಹೌದು ಗ್ರಾಹಕರು ಈ ಕಾರ್ ಅನ್ನು ಬಹಳ ಇಷ್ಟ ಪಟ್ಟು ಖರೀದಿ ಮಾಡುತ್ತಿದ್ದಾರೆ. ಅಲ್ಲದೆ ಇದೀಗ ಕಂಪನಿಯು ಈ ಕಾರಿನಲ್ಲಿ ಮತ್ತೊಂದು ವಿಶೇಷ ವೈಶಿಷ್ಟ್ಯವನ್ನು ಸಹ ಪರಿಚಯಿಸಿದ್ದು, ಸದ್ಯ ಈ ಕುರಿತು ಚರ್ಚೆಗಳು ಸಹ ಶುರುವಾಗಿದೆ. ಹೌದು ಇದೀಗ ಕಂಪನಿಯು ಈ ಕಾರಿನಲ್ಲಿ ಜೀವರಕ್ಷಕ ಫೀಚರ್ ಅನ್ನು ಸಹ ಪರಿಚಯಿಸಿದೆ.
ಹೌದು, ಮಾರುತಿ ಸುಜುಕಿ ಗ್ರಾಂಡ್ ವಿಟಾರಾದ ಹೊಸ ಹೈಬ್ರಿಡ್ ಮಾಡಲ್ ಗಳಲ್ಲಿ ಅಕೌಸ್ಟಿಕ್ ವೆಹಿಕಲ್ ಅಲರ್ಟಿಂಗ್ ಸಿಸ್ಟಮ್ (AVAS) ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ಫೀಚರ್ ಅನ್ನು ಬಹುತೇಕ ಎಲೆಕ್ಟ್ರಿಕ್ ಕಾರ್ ಗಳಲ್ಲಿ ಈಗಾಗಲೇ ಬಳಸಲಾಗಿದೆ. ಇನ್ನು ಈ ಫೀಚರ್ ಅನ್ನು ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಕಾರಿನಲ್ಲಿ ಇನ್ಸ್ಟಾಲ್ ಮಾಡಲಾಗಿದೆ. ಇನ್ನು ಇದರ ಲಾಭಗಳನ್ನು ತಿಳಿಸುತ್ತೇವೆ, ಈ ಪುಟವನ್ನು ಪೂರ್ತಿಯಾಗಿ ಓದಿ…
AVAS ತಂತ್ರಜ್ಞಾನವನ್ನು ಕಾರು ಚಾಲಕ ಹಾಗೂ ಪಾದಚಾರಿಗಳ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ ಗಳಲ್ಲಿ ಇನ್ಸ್ಟಾಲ್ ಮಾಡಲಾಗಿದೆ. ಕಾರು ಚಾಲಕ ಹಾಗೂ ಪಾಡಚಾಲಕರ ನಡುವೆ 5 ಅಡಿ ದೂರ ಇದ್ದಾಗ, AVAS ತಂತ್ರಜ್ಞಾನ ಶಬ್ದ ಮಾಡುವ ಮೂಲಕ ಇಬ್ಬರನ್ನೂ ಅಲರ್ಟ್ ಮಾಡುತ್ತದೆ. ಇನ್ನು ಈ ಮೂಲಕ ರಸ್ತೆ ಅಪಘಾತಗಳನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ.
ಇನ್ನು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾದಲ್ಲಿ ಈ AVAS ತಂತ್ರಜ್ಞಾನವನ್ನು ಇನ್ಸ್ಟಾಲ್ ಮಾಡಿರುವುದರಿಂದ ಈ ಕಾರಿನ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಹೌದು, ಬೆಲೆಯಲ್ಲಿ ಸುಮಾರು ರೂ. 4,000 ಅಷ್ಟು ಏರಿಕೆಯಾಗಿದೆ. ಆದರೆ ಈ ಬೆಲೆ ಏರಿಕೆ ಮಾರುಕಟ್ಟೆಯಲ್ಲಿ ಕಾರ್ ನ ಸೇಲ್ಸ್ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಇನ್ನು ಇದೀಗ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾದ ಎಕ್ಸ್ ಶೋರೂಂನ ಬೆಲೆ ರೂ. 19.79 ಲಕ್ಷ ಇದೆ.
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಸುಮಾರು 27.97 kmpl ವರೆಗೆ ಮೈಲೇಜ್ ನೀಡುತ್ತದೆ ಎಂದು ತಿಳಿದುಬಂದಿದೆ. ಹಾಗೆ ನೆಕ್ಸಾ ಬ್ಲೂ, ಒಪ್ಯುಲೆಂಟ್ ರೆಡ್, ಗ್ರ್ಯಾಂಡ್ಯೂರ್ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಆರ್ಕ್ಟಿಕ್ ವೈಟ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಈ ಕಾರ್ ಇದೀಗ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಅಲ್ಲದೆ ಈ ಕಾರಿನಲ್ಲಿ ಹಲವು ವಿಶೇಷ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದ್ದು, ಅದರಲ್ಲಿ, 7 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಪರಿಚಯಿಸಲಾಗಿದೆ. ಇನ್ನು ಇಷ್ಟೆಲ್ಲಾ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರ್ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.