ನಿಮ್ಮ ಬೈಕ್ ನ ಮೈಲೇಜ್ ತುಂಬಾ ಕಡಿಮೆ ಆಗಿದೆಯಾ, ಹೆಚ್ಚು ಮೈಲೇಜ್ ಪಡೆಯುವುದು ಹೇಗೆ ಗೊತ್ತಾ.
Bike Mileage: How to increase the mileage of the bike
Bike Mileage: ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಎಲ್ಲಾ ಬೈಕುಗಳ ಎಫ್ ಐ ಸಿಸ್ಟಮ್(Fuel Injected System) ಆಗಿದೆ. ಆದರೆ ನಾವು ಮೊದಲು ಬಳಸುತ್ತಿದ್ದ ಬೈಕ್ಗಳು ಹೀಗೆನಾದರೂ ಬಳಸುತ್ತಿದ್ದಾರೆ ಅವುಗಳ ಮೈಲೇಜ್ ಕಡಿಮೆಯಾಗಿದ್ದರೆ ಅದನ್ನು ಹೇಗೆ ಹೆಚ್ಚಿಸುವುದು ಎಂದು ಸಂಪೂರ್ಣವಾಗಿ ತಿಳಿಯಿರಿ. ಆದರೆ ಇನ್ನೂ ಕೆಲವರು ಶೋರೂಮ್ ನವರು ಹೇಳಿರುವ ಮೈಲೇಜ್ ಕೊಡುತ್ತಿಲ್ಲ ಎಂದು ಯೋಚನೆ ಮಾಡುತ್ತಾರೆ.
ನಿಮಗೆ ನೆನಪಿರಲಿ ನಾವು ನಮ್ಮ ವಾಹನಗಳನ್ನು ಯಾವ ರೀತಿ ಚಲಾಯಿಸುತ್ತೇವೆ ಎನ್ನುವುದರ ಮೇಲೆ ಡಿಪೆಂಡ್ ಆಗಿರುತ್ತದೆ. ನಾವು ವಾಹನವನ್ನು ಚಲಾಯಿಸುವ ದಾರಿಯ ಮೇಲೆ ಮೈಲೇಜ್ ಡಿಪೆಂಡ್ ಆಗಿರುತ್ತದೆ. ಕೆಲವೊಂದು ಬಾರಿ ಟ್ರಾಫಿಕ್ ಗಳಲ್ಲಿ ಗಾಡಿಯನ್ನು ಆಫ್ ಮಾಡಿ ಆನ್ ಮಾಡಿದಾಗ ಮೈಲೇಜ್ ಕಡಿಮೆಯಾಗುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ.
ನೀವು ನಿಮಗೆ ಗೊತ್ತಿರುವ ಅಥವಾ ವಿಶ್ವಾಸ ಇರುವ ಪೆಟ್ರೋಲ್ ಬಂಕ್ ಅಲ್ಲಿ ಮಾತ್ರ ಪೆಟ್ರೋಲ್ ಹಾಕಿಸಿ ಅಕಸ್ಮಾತ್ ನೀವು ಬೇರೆ ಕಡೆ ಪೆಟ್ರೋಲ್ ಹಾಕಿಸಿದರೆ ವೇರಿಯೇಶನ್ ಆಗಿ ಮೈಲೇಜ್ ಕೂಡ ಡ್ರಾಪ್ ಆಗಿ ಹೋಗುತ್ತದೆ. ನಿಮಗೆ ವಿಶ್ವಾಸ ಇರುವಂತಹ ಪೆಟ್ರೋಲ್ ಬಂಕ್ಗಳಲ್ಲಿ ಮಾತ್ರ ಪೆಟ್ರೋಲ್ ಹಾಕಿಸಿ.
ಮತ್ತು ಎರಡನೇದಾಗಿ ನೀವು ನಿಮ್ಮ ಗಾಡಿಗಳನ್ನು ಯಾವುದೇ ಕಾರಣಕ್ಕೂ ಬಿಸಿಲಿನಲ್ಲಿ ನಿಲ್ಲಿಸಬೇಡಿ. ನೀವೇನಾದರೂ ನಿಮ್ಮ ವಾಹನಗಳನ್ನು ಬಿಸಿಲಿನಲ್ಲಿ ನಿಲ್ಲಿಸಿದರೆ ನಿಮ್ಮ ಗಾಡಿಯಲ್ಲಿರುವ ಪೆಟ್ರೋಲ್ ಆವಿಯಾಗಿ ಹೋಗುತ್ತದೆ. ನೀವು ನಿಮ್ಮ ವಾಹನಗಳನ್ನು ನೆರಳಿನಲ್ಲಿ ಪಾರ್ಕ್ ಮಾಡಿ ಇದರಿಂದ ನಿಮ್ಮ ಪೆಟ್ರೋಲ್ ಉಳಿತಾಯ ಆಗುತ್ತದೆ.
ಇನ್ನು ಮೂರನೆಯದಾಗಿ ನಿಮ್ಮ ಗಾಡಿಯ ಟೈರ್ ನಲ್ಲಿರುವ ಗಾಳಿಯನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳಿ. ಕಂಪನಿಯವರು ತಿಳಿಸಿರುವ ಗಾಳಿಯನ್ನು ನೀವು ಮೈನ್ಟೈನ್ ಮಾಡಿದರೆ ಚೆನ್ನಾಗಿ ಬರುತ್ತದೆ ಮೈಲೇಜ್ ನಿಮ್ಮ ಗಾಡಿಯ ಟೈರುಗಳಲ್ಲಿ ಗಾಳಿ ಕಡಿಮೆ ಆದರೆ ಖಂಡಿತವಾಗಿಯೂ ಮೈಲೇಜ್ ಕಡಿಮೆಯಾಗುತ್ತದೆ. ವಾರಕ್ಕೆ ಒಮ್ಮೆಯಾದರೂ ಸಹ ನಿಮ್ಮ ಗಾಡಿಯ ಟೈರ್ನ ಗಾಳಿಯನ್ನು ಚೆಕ್ ಮಾಡಿಸಿ.
ನೀವು ತುಂಬಾ ಬಾರಿ ಟ್ರಾಫಿಗಳಲ್ಲಿ ಸಿಲುಕಿಕೊಂಡಾಗ ಅಥವಾ ರೈಲ್ವೆ ಗೇಟ್ ಬಳಿ ಸಿಲುಕಿ ಕೊಂಡಾಗ ನಿಮ್ಮ ಇಂಜಿನ್ ಆಫ್ ಮಾಡಿ. ಆಗ ಪೆಟ್ರೋಲ್ ಉಳಿತಾಯ ಆಗುತ್ತದೆ ಜೊತೆಗೆ ನಿಮ್ಮ ಕಾಲನ್ನು ರೆಸ್ಟ್ ಮಾಡುವುದಕ್ಕೆ ಅಂತ ಯಾವುದೇ ಕಾರಣಕ್ಕೂ ಬ್ರೇಕ್ ಪೆಡಲ್ ಮೇಲೆ ನಿಮ್ಮ ಕಾಲನ್ನು ಇಡಬೇಡಿ. ಇದರಿಂದ ನಿಮ್ಮ ಗಾಡಿಗೆ ಪ್ರಾಬ್ಲಮ್ ಆಗುತ್ತದೆ.
ನೀವು ನಿಮ್ಮ ಗಾಡಿಯ ವೇಗವನ್ನು 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಪ್ರಯಾಣ ಮಾಡಿದರೆ ಖಂಡಿತವಾಗಿಯೂ ನಿಮ್ಮ ಗಾಡಿ ಮೈಲೇಜ್ ಬರುತ್ತದೆ. ಅನ್ಎಸ್ಸಸರಿ ಗೇರ್ ಚೇಂಜ್ ಮಾಡಬೇಡಿ ಮತ್ತು ಅತೀ ಹೆಚ್ಚಾಗಿ ಬ್ರೇಕ್ ಹಾಕಬೇಡಿ ಅತೀ ಹೆಚ್ಚಾಗಿ ಆಕ್ಸಿಲರೇಟರ್ ಕೊಡಬೇಡಿ. ಇದರಿಂದ ನಿಮ್ಮ ಗಾಡಿಯ ಪಿಕಪ್ ಕಡಿಮೆ ಆಗುವುದರ ಜೊತೆಗೆ ಮೈಲೇಜ್ ಕೂಡ ಕಡಿಮೆಯಾಗುತ್ತದೆ.
ಇದರ ಜೊತೆಗೆ ನಿಮ್ಮ ಗಾಡಿಯ ಆಕ್ಸಿಲರೇಟರ್ ಮತ್ತು ಬ್ರೇಕನ್ನು ತುಂಬಾ ಸ್ಮೂತ್ ಆಗಿ ಯೂಸ್ ಮಾಡಿ. ನೀವು ಬ್ರೇಕ್ ಅನ್ನು ಬಹಳ ಸ್ಮೂತ್ ಆಗಿ ಯೂಸ್ ಮಾಡಿದರೆ ಮೈಲೇಜ್ ತುಂಬಾ ಚೆನ್ನಾಗಿ ಬರುತ್ತದೆ. ಇನ್ನು ಕೊನೆಯದಾಗಿ ನೀವು ನಿಮ್ಮ ಗಾಡಿಯನ್ನು ಸೂಕ್ತ ಸರಿಯಾದ ಸಮಯಕ್ಕೆ ಸರ್ವಿಸ್ ಮಾಡಿಸಿ ಜೊತೆಗೆ ಏರ್ ಫಿಲ್ಟರ್ ಕ್ಲೀನ್ ಮಾಡಿಸಿ ಜೊತೆಗೆ ಚೈನ್ ಬಾಕ್ಸ್ ಕ್ಲೀನ್ ಮಾಡಿಸುತ್ತೀರಿ ಇದರಿಂದ ನೀವು ಬಳಸುತ್ತಿರುವ ಗಾಡಿಯ ಮೈಲೇಜ್ ತುಂಬಾನೇ ಚೆನ್ನಾಗಿ ಮೈಲೇಜ್ ಕೊಡುತ್ತದೆ…
ನಿಮ್ಮ ಜಮೀನಿಗೆ ದಾರಿ ಇಲ್ವಾ, ಜಮೀನಿಗೆ ಬಂಡಿ ಅಥವಾ ಕಾಲು ದಾರಿ ಹೇಗೆ ಪಡೆದುಕೊಳ್ಳಬೇಕು, ಭೂ ಕಂದಾಯದ ರೂಲ್ಸ್.