ಜುಲೈ 5 ಕ್ಕೆ ಮಾರುತಿ ಸುಜುಕಿ ಇನ್ವಿಕ್ಟೋ ಭರ್ಜರಿ ಬಿಡುಗಡೆ; ಈ ಹೊಸ ಮಾಡಲ್ ನ ಸ್ಪೆಷಾಲಿಟಿ ಮತ್ತು ಬೆಲೆ ಮಾತ್ರ ತುಂಬಾ ಅದ್ಭುತವಾಗಿದೆ !!
Maruti Suzuki Invicto grand launch on July 5; The specialty and price of this new model is just amazing!!
Maruti Suzuki invicto : ಮಾರುತಿ ಸುಜುಕಿ ಕಂಪನಿಯ ಯಾವುದೇ ಹೊಸ ಮಾಡಲ್ ಮಾರುಕಟ್ಟೆಯಲ್ಲಿ ಬಿಡುಗಡೆಯಾದರೂ ಸಹ ಅದು ಸದ್ದು ಮಾಡದೆ ಹೋಗುವುದಿಲ್ಲ. ಇದೀಗ ಮಾರುತಿ ಸುಜುಕಿ ತನ್ನ ಮುಂದಿನ ಮಾಡಲ್ ಎಂಪಿವಿ MPV ಹೆಸರನ್ನು ‘ಇನ್ವಿಕ್ಟೋ’ INVICTO ಎಂದು ಅಧಿಕೃತವಾಗಿ ಘೋಷಿಸಿದೆ. ಈ ಮಾಹಿತಿಯನ್ನು ತಯಾರಕರು ಇತ್ತೀಚಿನ ಬಿ ಎಸ್ ಸಿ ಫೈಲಿಂಗ್‌ನಲ್ಲಿ BSC FILING ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದಾರೆ. ಮಾರುತಿ ಸುಜುಕಿ ಕಂಪನಿಯ ಹೊಸ ಮಾಡಲ್ ಕುರಿತು ಈ ಹಿಂದೆ ಸಹ ಸಾಕಷ್ಟು ಚರ್ಚೆಗಳು ನಡೆಯುತ್ತಿತ್ತು. ಮಾರುತಿ ಸುಜುಕಿ ತಮ್ಮ ಎಂಪಿವಿಯನ್ನು ಬಿಡುಗಡೆಯಾದ ನಂತರ ‘ಎಂಗೇಜ್’ ENGAGE ಎಂದು ಕರೆಯಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿತ್ತು.
ಬಿಡುಗಡೆ ಯಾವಾಗ
ಇದೆ ವರ್ಷದ ಜುಲೈ 5, ರಂದು ಮಾರುತಿ ಸುಜುಕಿ ಕಂಪನಿಯು ತನ್ನ ಇನ್ವಿಕ್ಟೊ ಬಿಡುಗಡೆ ಮಾಡಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ಮಾರುತಿ ಸುಜುಕಿ ಟೊಯೊಟಾ ಇನ್ನೋವಾ ಹೈಕ್ರಾಸ್ ಆಧಾರಿತವಾರಲಿದೆ ಎಂದು ತಿಳಿದು ಬಂದಿದೆ. ಇನ್ನು ಮಾರುತಿ ಸುಜುಕಿ ಇನ್ವಿಕ್ಟೋ ಎಂಪಿವಿ MARUTI SUZUKU INVICTO MPV ಭಾರತದಲ್ಲಿ ನೆಕ್ಸಾ NEXA ಡೀಲರ್‌ಶಿಪ್‌ಗಳ ಮೂಲಕ ಮಾರಾಟವಾಗಲಿದೆ ಎನ್ನುವ ವಿಷಯ ಸಹ ತಿಳಿದುಬಂದಿದೆ. ಮಾರುತಿ ಸುಜುಕಿಯ ಈ ಹೊಸ ಮಾಡಲ್ ಅನ್ನು ಟೊಯೊಟಾ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇನ್ವಿಕ್ಟೊವನ್ನು ಅಧಿಕೃತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗಿದೆ, ಈ ಮೂಲಕ ತಮ್ಮ ಈ ಹೊಸ ಮಾಡಲ್ ಕಾರ್ ಅನ್ನು ಎಲ್ಲರಿಗೂ ಪರಿಚಯಿಸಲಾಗಿದೆ.
ಲಕ್ಷ ಲಕ್ಷ ಚಾರ್ಜ್ ಮಾಡುವ ಆಪಲ್ ಕಂಪನಿಗೆ ಒಂದು ಐಫೋನ್ ತಯಾರಿಸಲು ಬೀಳುವ ಖರ್ಚು ಎಷ್ಟು ಎಷ್ಟು ??
ಇನ್ನು ಮಾರುತಿ ಸುಜುಕಿ ಇನ್ವಿಕ್ಟೊ ಮಾಡಲ್ ನ ಇಂಟೀರಿಯರ್
(Maruti Suzuki invicto Interior) ಕುರಿತು ಮಾತನಾಡುವುದಾದರೆ, ಮುಂಬರುವ MPV ನಲ್ಲಿ ಫ್ರೀ-ಸ್ಟ್ಯಾಂಡಿಂಗ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್, Wireless charger ಪನೋರಮಿಕ್ ಸನ್‌ರೂಫ್ Panoramic sunroof ಆಂಬಿಯೆಂಟ್ ಲೈಟಿಂಗ್ Ambient lighting ಮತ್ತು ಪಾರ್ಕಿಂಗ್ ಸೆನ್ಸರ್‌ಗಳೊಂದಿಗೆ Parking sensor 360-ಡಿಗ್ರಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.
ಮಾರುತಿ ಸುಜುಕಿ ಇನ್ವಿಕ್ಟೋ Maruti Suzuki invicto, ಟೊಯೋಟಾ ಇನ್ನೋವಾ ಹೈಕ್ರಾಸ್ Toyota innova hycross ರೀತಿಯೆ ಅದೇ ಪವರ್ ಟ್ರೇನ್ ಅನ್ನು ಒಳಗೊಂಡಿರುವ ಸಾಧ್ಯತೆಗಳು ಕಾಣುತ್ತಿದೆ.
ಇದು ಸ್ವಯಂ ಚಾರ್ಜ್ ಆಗುವ ಎಲೆಕ್ಟ್ರಿಕ್ ಮೋಟರ್ ಹೊಂದಿದ್ದು Self charging electric motor, 2.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಸಹ ಪಡೆದಿದೆ. ಇದು 183 ಎಚ್ಪಿ ಪವರ್ ಔಟ್ಪುಟ್ ಅನ್ನು ಉತ್ಪಾದಿಸುತ್ತದೆ ಎನ್ನಲಾಗುತ್ತಿದೆ. ಈ ಹೈಬ್ರಿಡ್ ರೂಪಾಂತರವು 21.1 kmpl ನಷ್ಟು ಮೈಲೇಜ್ ಅನ್ನು ನೀಡುತ್ತದೆ ಎಂದು ತಿಳಿಸಲಾಗಿದೆ.
Maruti Suzuki invicto Price
ಎಲ್ಲರಿಗೂ ಇದೀಗ ಕಾಡುತ್ತಿರುವ ಪ್ರಶ್ನೆ ಇದರ ಬೆಲೆ ಏನಿರಬಹುದು ಎನ್ನುವುದು. ಹೌದು, ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ, ಮಾರುತಿ ಇನ್ವಿಕ್ಟೊ ಟೊಯೊಟಾ ಇನ್ನೋವಾ ಹೈಕ್ರಾಸ್‌ಗಿಂತ ಪ್ರೀಮಿಯಂ ವೆಚ್ಚವನ್ನು ನಿರೀಕ್ಷಿಸಲಾಗಿದ್ದು, ಇನ್ನೋವಾ ಹೈಕ್ರಾಸ್ ಬೆಲೆಯು 18.55 ಲಕ್ಷದಿಂದ ಪ್ರಾರಂಭವಾಗಲಿದ್ದು, 29.99 ಲಕ್ಷದವರೆಗೆ ಹೋಗಿ ತಲುಪುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.
