Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಿಮ್ಮ ಪಾದದ ಬೆರಳುಗಳು ನಿಮ್ಮ ಭವಿಷ್ಯವನ್ನೇ ಹೇಳುತ್ತವೆ ಹೇಗೆ ಎಂಬ ವಿಷಯವನ್ನು ತಿಳಿದುಕೊಳ್ಳೋಣ ಬನ್ನಿ.

Let's find out how your toes tell your future.

ನಮ್ಮ ದೇಹದಲ್ಲಿ ಇರುವ ಕೆಲವೊಂದು ಭಾಗಗಳಿಂದ ನಮ್ಮ ಈ ಜ್ಯೋತಿಷ್ಯವನ್ನು ಹೇಳಬಹುದು ಎಂದು ಶಾಸ್ತ್ರಗಳು ಹೇಳುತ್ತಿವೆ. ಅವು ಎಷ್ಟರಮಟ್ಟಿಗೆ ಇವೆ ಎಂದರೆ ಕೆಲವೊಂದು ಬಾರಿ ನಮಗೆ ನಾವೇ ನಂಬುವವನು ಸಾಧ್ಯವಿಲ್ಲ. ಆದರೆ ಅದು ನಂಬಲೇ ಬೇಕಾದಂತಹ ವಿಚಾರ. ಹೌದು ನಮ್ಮ ಕಾಲಿನ ಬೆರಳುಗಳನ್ನು ನೋಡಿ ನಮ್ಮ ಭವಿಷ್ಯವನ್ನು ತಿಳಿದುಕೊಳ್ಳಬಹುದು ಇದು ಸಾವಿರಾರು ವರ್ಷಗಳ ಹಿಂದೆಯೇ ಗ್ರೀಕ್ ನಲ್ಲಿ ಚಾಲ್ತಿಯಲ್ಲಿತ್ತು.

ಇಲ್ಲಿ ಹೇಗೆ ನಾವು ಕೈಗಳ ಗೆರೆಗಳನ್ನು ನೋಡಿ ಶಾಸ್ತ್ರ ಹೇಳುತ್ತಿವೊ ಗ್ರೀಕ್ ನಲ್ಲಿ ಸಾವಿರ ವರ್ಷಗಳ ಹಿಂದೆ ಕಾಲಿನ ಬೆರಳುಗಳ ಶೇಪ್ ಅನ್ನು ನೋಡಿ ಶಾಸ್ತ್ರ ಹೇಳುತ್ತಿದ್ದರು. ಹಾಗಾದರೆ ನಿಮ್ಮ ಕಾಲು ಬೆರಳುಗಳ ಶೇಪ್ ಹೇಗಿದೆ ನಿಮ್ಮ ಭವಿಷ್ಯಗಳು ಹೇಗಿದೆ ಹಾಗೂ ನೀವು ಎಂತಹ ವ್ಯಕ್ತಿತ್ವ ಉಳ್ಳವರಾಗಿದ್ದೀರಿ ಎಂಬುದನ್ನು ನೋಡುವುದಾದರೆ

ಮೊದಲನೆಯದಾಗಿ ಈಜಿಪ್ಟ್ ಅಂದರೆ ಅವರಿಗೆ ಹೆಬೆರಳಿನಿಂದ ಹಿಡಿದು ಕಿರುಬೆರಳವರೆಗೂ ಮೆಟ್ಟಿಲಿನ ರೀತಿಯಲ್ಲಿ ಬೆರಳುಗಳು ಇರುತ್ತವೆ. ಅಂತಹ ವ್ಯಕ್ತಿಗಳ ವ್ಯಕ್ತಿತ್ವ ಹೇಗೆ ಇರುತ್ತಾರೆ ಎಂದರೆ ಅವರು ತುಂಬಾ ಸೀಕ್ರೆಟ್ ವ್ಯಕ್ತಿಗಳು ಆಗಿರುತ್ತಾರೆ. ಅಷ್ಟೇ ಅಲ್ಲದೆ ಇವರು ಜಾಸ್ತಿ ಯಾರೊಂದಿಗೂ ಬೆರೆಯಲು ಇಷ್ಟಪಡುವುದಿಲ್ಲ. ತಾವು ಒಂಟಿಯಾಗಿರುವುದನ್ನು ತುಂಬಾ ಪ್ರೀತಿಸುತ್ತಾರೆ.

ಎರಡನೆಯದಾಗಿ ರೋಮನ್ ಫುಟ್ ಶೇಪ್ ಈ ರೀತಿಯದಂತಹ ಕಾಲಿನ ಬೆರಳು ಹೊಂದಿರುವವರು ಮೊದಲ ಮೂರು ಬೆರಳು ಸಮವಾಗಿರುತ್ತದೆ. ಇವರು ಸಮಾಜದಲ್ಲಿ ಒಳ್ಳೆಯ ಗೌರವವನ್ನು ಪಡೆಯಲು ಪ್ರಯತ್ನಿಸುತ್ತಿರುತ್ತಾರೆ. ಅಷ್ಟೇ ಅಲ್ಲದೆ ತಾವು ಅಂದುಕೊಂಡ ಕೆಲಸವನ್ನು ಮಾಡಿಯೇ ಬಿಡುತ್ತಾರೆ. ಇವರು ಎಲ್ಲರೊಂದಿಗೆ ಸ್ನೇಹ ಸಂಬಂಧದಲ್ಲಿ ಇದ್ದು ಎಲ್ಲರ ಎಂದಿಗೂ ಸಹ ಚೆನ್ನಾಗಿ ಮಾತನಾಡುತ್ತಿರುತ್ತಾರೆ

ಮೂರನೆಯದಾಗಿ ಫೆಮಿನ್ ಫುಡ್ ಶೇಪ್ ಹೇಗಿರುತ್ತದೆ ಎಂದರೆ ಕಾಲಿನ ಐದು ಬೆರಳುಗಳು ಸಮನಾಗಿ ಇರುತ್ತದೆ. ಈ ರೀತಿಯಾದಂತಹ ಕಾಲಿನ ಬೆರಳನ್ನು ಹೊಂದಿರುವ ಜನರನ್ನು ಅತಿ ಹೆಚ್ಚಾಗಿ ನಂಬುತ್ತಾರೆ. ಏಕೆಂದರೆ ಇವರು ಕೊಟ್ಟಂತಹ ಮಾತುಗಳನ್ನು ಎಂದಿಗೂ ತಪ್ಪೋದಿಲ್ಲ. ಅಷ್ಟೇ ಅಲ್ಲದೆ ಇವರು ತುಂಬಾ ಸೂಕ್ಷ್ಮದಿಂದ ಏನೇ ಒಂದು ಕೆಲಸ ಆಗಬೇಕಾದರೆ ಸಹ ಯೋಚನೆ ಮಾಡುತ್ತಾರೆ ಆದ್ದರಿಂದ ಇವರಿಗೆ ಜೀವನದಲ್ಲಿ ಯಶಸ್ಸು ಸಿಗುತ್ತದೆ.

ನಾಲ್ಕನೆಯದಾಗಿ ಗ್ರೀಕ್ ಫುಟ್ ಶೇಪ್ ಅಂದರೆ ಎರಡನೆಯ ಬೆರಳು ಮಿಕ್ಕಿದ ಬೆರಳುಗಳಿಗಿಂತ ಉದ್ದವಾಗಿರುತ್ತದೆ. ಇವರು ಕೋಪಿಷ್ಟರು ಆಗಿರುತ್ತಾರೆ. ಅಷ್ಟೇ ಅಲ್ಲದೆ ಇವರ ಮನಸ್ಸು ತುಂಬಾ ಮೃದುವಾಗಿ ಇದ್ದು ಸ್ಪೋರ್ಟ್ಸ್ ಕಡೆ ಇವರು ಅತಿ ಹೆಚ್ಚಿನ ಗಮನವನ್ನು ಇಡುತ್ತಾರೆ. ಅಷ್ಟೇ ಅಲ್ಲದೆ ಇವರು ಸ್ಪೋರ್ಟ್ಸ್ ವಿಭಾಗದಲ್ಲಿ ತಮ್ಮ ಗೆಲುವನ್ನು ಸಹ ಪಡೆಯುತ್ತಾರೆ. ಒಂದು ವೇಳೆ ನಿಮಗೂ ಸಹ ಈ ರೀತಿ ಇದ್ದರೆ ಸ್ಪೋರ್ಟ್ಸ್ ಕಡೆ ಒಮ್ಮೆ ನಿಮ್ಮ ಮನಸ್ಸನ್ನು ಬದಲಿಸಿ ನೋಡಿ.

ಐದನೇದಾಗಿ ಮಿನಿ ಫುಟ್ ಶೇಪ್ ಅಂದರೆ ನಿಮ್ಮ ಕಾಲಿನ ಕಿರುಬೆರಳು ಅಲುಗಾಡುವುದೇ ಇಲ್ಲ. ಅದರ ಪಾಡಿಗೆ ಅದು ಇರುತ್ತದೆ ಅಷ್ಟೇ ಅಲ್ಲದೆ ಇವರು ಕಾಯಕವೇ ಕೈಲಾಸ ಎಂದು ನಂಬುವಂತಹ ವ್ಯಕ್ತಿಗಳು ಆಗಿರುತ್ತಾರೆ. ಏಕೆಂದರೆ ಇವರು ತಮ್ಮ ಕೆಲಸವನ್ನು ಮಾಡಿದರೆ ಮಾತ್ರ ಜೀವನದಲ್ಲಿ ಮುಂದೆ ಬರುವುದು ಎಂದು ಬಲವಾಗಿ ನಂಬುವಂತಹ ವ್ಯಕ್ತಿತ್ವವುಳ್ಳ ಮನುಷ್ಯರು ಆಗಿರುತ್ತಾರೆ.

ಈ ರೀತಿಯ ಹಲವು ಪದಗಳಲ್ಲಿ ನಿಮ್ಮ ಪಾದದ ಬೆರಳುಗಳು ಹೇಗೆ ಮತ್ತು ಯಾವ ಶೇಪ್ ನಲ್ಲಿದೆ ಎಂಬುದನ್ನು ತಿಳಿಸಿ.

PhotoGrid Site 1690097428098 scaled

Leave a comment