Rain Alert: ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮತ್ತೆ ಮೂರು ದಿನ ಭಾರಿ ಮಳೆ, ನಿಮ್ಮ ಜಿಲ್ಲೆ ಯಾವುದು !!
Rain Alert: Heavy rain for three more days in several districts of the state.
Rain Alert: ಮುಂಬರುವ 24 ಗಂಟೆಗಳಲ್ಲಿ ಅಂದರೆ 16-07-2023 ದಿನದಂದು ಈ ಜಿಲ್ಲೆಗಳಲ್ಲಿ ಬಾರಿ ಅಧಿಕ ಪ್ರಮಾಣದಲ್ಲಿ ಮಳೆ ಆಗುವ ಸಾಧ್ಯತೆಯೇ ಅತಿ ಹೆಚ್ಚಾಗಿ ಕಂಡು ಬಂದಿರುವುದರಿಂದ ಆರೆಂಜ್(orange )ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ದಿನಾಂಕ 16 ಮತ್ತು 17ರ ದಿನದಂದು ದಕ್ಷಿಣ ಕರಾವಳಿ ಜಿಲ್ಲೆಗಳು ಹಾಗೂ ಒಳನಾಡಿನ ಚಿಕ್ಕಮಗಳೂರು.
ಶಿವಮೊಗ್ಗ ಹಾಗೂ ಕೊಡಗು ಸೇರಿದಂತೆ ಸರಿಸುಮಾರು 6 ಜಿಲ್ಲೆಗಳಿಗೆ ಎಲ್ಲೋ (yellow ) alert ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಕನ್ನಡ ನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆ ಬೀಳಲಿದೆ ಎಂದು ಇನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ತುಮಕೂರು ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಬೆಳಗಾವಿ, ಬೀದರ್.
ರಾಯಚೂರು, ಕೊಪ್ಪಳ, ಧಾರವಾಡ, ವಿಜಯಪುರ, ಗದಗ್, ಕಲ್ಬುರ್ಗಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಮುಂಬರುವ ಮೂರು ದಿನಗಳ ಕಾಲ ಅಘೋರವಾದ ಸಾಧಾರಣ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ(Meteorological Department) ಮಾಹಿತಿ ತಿಳಿಸಿದೆ.
ರಾಜ್ಯದಲ್ಲಿ ಕಳೆದ ಬಾರಿಗಿಂತ ಈ ಬಾರಿ ಮಳೆಯ ಪ್ರಮಾಣ ಅತಿ ಕಡಿಮೆಯಾಗಿದ್ದರು ಮುಂಬರುವ ಮೂರು ದಿನಗಳಿಂದ ಮತ್ತೆ ಅತಿ ಹೆಚ್ಚು ಮಳೆ ಆಗುವ ಪ್ರಮಾಣ ಎದ್ದು ಕಾಣುತ್ತಿದೆ ಎಂದು ಹವಾಮಾನ ಇಲಾಖೆಯ ವರದಿಗಾರರು ಸೂಚಿಸಿದ್ದಾರೆ. ರಾಜಧಾನಿ ಬೆಂಗಳೂರು ಚಿಕ್ಕಮಗಳೂರಿನ ಮೂಡಿಗೆರೆ, ಕೊಪ್ಪಳದ ಗಂಗಾವತಿ, ಮಂಡ್ಯದ ಮಳವಳ್ಳಿ ಹಾಗೂ ತುಮಕೂರಿನ ಮಧುಗಿರಿ ಸೇರಿದಂತೆ.
ಇನ್ನು ಹಲವು ಕಡೆಗಳಲ್ಲಿ ಗುರುವಾರ ವರುಣನ ಆರ್ಭಟ ಜೋರಾಗಿ ಇತ್ತು. ಇನ್ನು ಉತ್ತರ ಭಾರತದಲ್ಲಿ ಸತತವಾಗಿ ಒಂದು ವಾರದಿಂದ ಇನ್ನು ಕೂಡ ಹಾಗೆ ಮಳೆಯ ಅಬ್ಬರ ಇನ್ನು ಮುಂದುವರೆದಿದೆ. ದೆಹಲಿಯಲ್ಲಿ ಯಮುನಾ ನದಿಯ ಆತಂಕ ಕಡಿಮೆಯಾಗಿದ್ದು ಹಿಮಾಚಲ ಪ್ರದೇಶದಲ್ಲಿ 5 ದಿನದ ಮಳೆಯ ಮುನ್ಸೂಚನೆ ನೀಡಲಾಗಿದ್ದು ಆ ಭಾಗದಲ್ಲಿ ಮಳೆಯ ಸ್ಥಿತಿ ಹಸ್ತವ್ಯಸ್ತವನ್ನು ಉಂಟು ಮಾಡಿದೆ.
ಹಿಮಾಚಲ ಪ್ರದೇಶದಲ್ಲಿ ಶುಕ್ರವಾರ ದಿನದಿಂದ ಮುಂಬರುವ ಐದು ದಿನಗಳ ಕಾಲ ವರೆಗೆ ಬಾರಿ ಪ್ರಮಾಣದ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದೆ. ಹಿಮಾಚಲ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಬಾರಿ ಆಗುವ ಸಾಧ್ಯತೆ ಇದ್ದು ಎಲ್ಲೋ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ.