Gruha Lakshmi Scheme : ಗೃಹಲಕ್ಷ್ಮಿ ಯೋಜನೆ ಅರ್ಜಿಸಲ್ಲಿಸಲು ವಿಳಂಬ ಮುಂದಿನ ಈ ದಿನಗಳ ವರೆಗೆ ಮುಂದೂಡಲಾಗಿದೆ, ಸಚಿವರು ಹೇಳಿದ್ದಿಷ್ಟು!!
Gruha Lakshmi Scheme: The delay in applying for Gruha Lakshmi Scheme has been postponed till next few days, as said by the Minister!!
ಗೃಹಲಕ್ಷ್ಮಿ ಯೋಜನೆ : ಮೇ 11 ರಂದು ನಡೆದ ರಾಜ್ಯ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜನಗಳಿಗೆ 5 ಯೋಜನೆಗಳನ್ನು ಕೊಡಲಾಗುವುದು ಎಂದು ಘೋಶಣೆ ಮಾಡಿತ್ತು, ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು, ಸದ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ, ಈ ಯೋಜನೆಯಲ್ಲಿ ಮನೆಯ ಹಿರಿಯ ಮಹಿಳೆಗೆ ಪ್ರತಿ ತಿಂಗಳು 2000 ಹಣ ಕೊಡುವುದಾಗಿ ಹೇಳಿತ್ತು.
ಸತತವಾಗಿ ಮೂರು ದಿನದಿಂದ ಇಳಿಕೆ ಕಂಡ ಚಿನ್ನದ ಬೆಲೆ, ಇಂದಿನ ದರ ಎಷ್ಟು !!
ಹಾಗು ಇದರ ಫಲವನ್ನು ಪಡೆಯಲು ಇದೆ ತಿಂಗಳು ಜೂನ್ 15 ರಂದು ಅರ್ಜಿ ತುಂಬಲು ದಿನಾಂಕವನ್ನು ನಿಗದಿ ಮಾಡಿತ್ತು ಆದರೆ ಈಗ ಅದು ವಿಳಂಬವಾಗಿದೆ, ಏಕೆಂದರೆ ಸದ್ಯದ ಪರಿಸ್ಥಿತಿಯಲ್ಲಿ, ಕೆಲಸ ಮಾಡುವ ಸಿಬ್ಬಂದಿಗಳಿಗೆ ಪೂರ್ಣ ಪ್ರಮಾಣವಾಗಿ ತರಬೇತಿ ಆಗಿಲ್ಲ ಹಾಗು ಸೇವಾ ಸಿಂಧು ಅಪ್ಲಿಕೇಶನ್ ಇನ್ನು ತಯಾರಾಗಿಲ್ಲ ಹಾಗು ಇನ್ನು 5 ರಿಂದ 6 ದಿನಗಳ ವರೆಗೂ ವಿಳಂಬ ಆಗಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ, ಸದ್ಯದ ಲೆಕ್ಕಾಚಾರದ ಪ್ರಕಾರ ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಯನ್ನು.
ಸತತವಾಗಿ ಮೂರು ದಿನದಿಂದ ಇಳಿಕೆ ಕಂಡ ಚಿನ್ನದ ಬೆಲೆ, ಇಂದಿನ ದರ ಎಷ್ಟು !!
ಪಡೆಯುವ ಫಲಾನುಭವಿಗಳು ಸುಮಾರು 1.28 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ, ಆಗಾಗಿ ಒಬ್ಬರ ಅರ್ಜಿಯನ್ನು ತುಂಬಲು ಸರಿ ಸುಮಾರು 5 ರಿಂದ 7 ನಿಮಿಷಗಳ ವರೆಗೂ ಸಮಯ ಬೇಕಾಗಬಹುದು, ಮತ್ತು ಇನ್ನು ಸಿಬ್ಬಂದಿಗಳಿಗೆ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ಆಗಿಲ್ಲ ಹಾಗು ಸಿಬ್ಬಂದಿಗಳ ಕೊರೆತ ಆಗಬುದು ಎಂದು ಹೇಳಲಾಗಿದೆ, ಅದಲ್ಲದೆ ಸಿಂಧು ಸೇವಾ ಅಪ್ಲಿಕೇಶನ್ ಇನ್ನು ಪೂರ್ತಿಯಾಗಿ ರೆಡಿ ಆಗಿಲ್ಲ ಇನ್ನು 5 ರಿಂದ 6 ದಿನಗಳ ಕಾಲ ಬೇಕಾಗಬಹುದು ಎಂದು ಹೇಳಲಾಗಿದೆ.
ಇನ್ನು ಅರ್ಜಿಸಲ್ಲಿಸಲು ಕರ್ನಾಟಕ ಒನ್ , ಬೆಂಗಳೂರ್ ಒನ್, ಗ್ರಾಮ ಒನ್, ನಾಡ ಕಚೇರಿ ಹಾಗು ಬಾಪೂಜಿ ಕೇಂದ್ರಗಳಲ್ಲೂ ಅವಕಾಶ ಮಾಡಲಾಗಿದೆ, ಇನ್ನು ಸೇವಾ ಸಿಂಧು ಹೊಸ ಅಪ್ಲಿಕೇಶನ್ ತಯಾರಿಸಲು ಈಗಾಗಲೇ ಇ ಆಡಳಿತ ಕಚೇರಿಗೆ ಹೇಳಲಾಗಿದ್ದು ಇನ್ನು 4, 5 ದಿನಗಳ ಕಾಲಾವಕಾಶ ಬೇಕು ಎಂದು ಇಲಾಖೆ ಹೇಳಿದೆ ಅದಲ್ಲದೆ ಸ್ವಯಂ ಸೇವಾ ಸಂಸ್ಥೆಗಳಿಗೂ ಅಪ್ಲಿಕೇಶನ್ ತಯಾರು ಮಾಡಲು ರಿಕ್ವೆಸ್ಟ್ ಮಾಡಲಾಗಿದೆ ಸ್ವಯಂ ಸೇವಾ ಸಂಸ್ಥೆಗಳು ಕೂಡ 4,5 ದಿನ ಸಮಯ ಬೇಕು ಎಂದು ಹೇಳಿವೆ ಈಗಾಗಿ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಲು ವಿಳಂಬವಾಗಿದೆ ಎಂದು ಅವರು ಹೇಳಿದ್ದಾರೆ.

Gruha Lakshmi Scheme: The delay in applying for Gruha Lakshmi Scheme has been postponed till next few days, as said by the Minister!!