Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gruha Lakshmi: ಗೃಹಲಕ್ಷ್ಮಿ ಯೋಜನೆಗೆ APL ಕಾರ್ಡ್ ಮತ್ತು BPL ಕಾರ್ಡ್ ಹೊಂದಿರುವವರಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹೊಸ ಗುಡ್ ನ್ಯೂಸ್ ನೀಡಿದೆ.

Karnataka Congress government has given new good news to APL card and BPL card holders for Gruha lakshmi Yojana…

Gruha Lakshmi: ಶಕ್ತಿ ಯೋಜನೆಯ ಯಶಸ್ವಿ ಜಾರಿ ಬಳಿಕ ಇದೀಗ ಕಾಂಗ್ರೆಸ್ ಸರ್ಕಾರ ಮತ್ತೆ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ಇದೇ ಜುಲೈ 17 ಅಥವಾ 19 ರಿಂದ ಜಾರಿಗೊಳಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿ, ಇದೀಗ ಮನೆಯ ಯಜಮಾನಿಗೆ ಪುಷ್ ಕವರ್ ನೀಡಿದ್ದಾರೆ. ಈ ಕುರಿತು ಚರ್ಚೆಯನ್ನು ನಡೆಸಿದ ಅವರು ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿದರು.

Gruha Jyothi Scheme: ಕರೆಂಟ್ ಫ್ರೀ ಬರುತ್ತದೆ ಎಂದು ಖುಷಿ ಆಗಬೇಡಿ..!! ಈ ಶಾಕಿಂಗ್ ಅಪ್ಡೇಟ್ ಒಮ್ಮೆ ನೋಡಿ ತಪ್ಪಾಗಿದ್ದರೆ ಈಗಲೇ ಸರಿ ಮಾಡಿ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮುಂದಿನ ಆಗಸ್ಟ್ ತಿಂಗಳಿನಿಂದ ಮನೆಯ ಯಜಮಾನಿ ಖಾತೆಗೆ 2000 ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು. ಅರ್ಜಿ ಸ್ವೀಕಾರ ಜುಲೈ 19 ರಿಂದ ಆರಂಭವಾಗಲಿದ್ದು ಆಗಸ್ಟ್ 15ಕ್ಕೆ ಆಧಾರ್ ಜೋಡಣೆ ಆಗಿರುವ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗಲಿದೆ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಳಲ್ಲಿ ಯಜಮಾನಿ ಎಂದು ಗುರುತಿಸಿಕೊಂಡಿರುವ ಮಹಿಳೆಯರಿಗೆ ಈ ಯೋಜನೆಯ ಲಾಭ ಸಿಗಲಿದೆ ಎಂದು ಹೇಳಿದ್ದಾರೆ. ಮಹಾಲಕ್ಷ್ಮಿ ಜಾರಿಯ ಕಾರ್ಯಕ್ಕೆ ಪ್ರಜಾ ಪ್ರತಿನಿಧಿಗಳನ್ನು ಸೇರ್ಪಡೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು ಈಗಾಗಲೇ ಮಾರ್ಗಸೂಚಿಯನ್ನು ಸಹ ಪ್ರಕಟಿಸಿದೆ.

Government Employees: ಸರ್ಕಾರಿ ನೌಕರರಿಗೆ ಸಿದ್ದರಾಮಯ್ಯ ರವರ  ಸರ್ಕಾರದಿಂದ ಬಿಗ್ ಶಾಕ್, ಪಿಂಚಣಿಯಲ್ಲಿ ಬಾರಿ ನಿರಾಸೆ.

ಪ್ರಜಾ ಪ್ರತಿನಿಧಿಗಳನ್ನು ಗೌರವದನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಪ್ರತಿ ಒಂದು ಸಾವಿರ ಜನರು ಅಥವಾ ಒಂದು ಗ್ರಾಮಕ್ಕೆ ಇಬ್ಬರು ಪ್ರಜಾ ಪ್ರತಿನಿಧಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಒರ್ವ ಪ್ರಜಾ ಪ್ರತಿನಿಧಿ ಮಹಿಳಾ ಸೇರಿ ಇಬ್ಬರು ಪ್ರಜಾ ಪ್ರತಿನಿಧಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಒಂದು ತಿಂಗಳ ಅವಧಿಗಳಿಗೆ ಮಾತ್ರ ಸರ್ಕಾರ ಪ್ರಜಾ ಪ್ರತಿನಿಧಿಗಳನ್ನು ತೆಗೆದುಕೊಳ್ಳುವ ನಿರ್ಧಾರ ಮಾಡಿದೆ. ಕಾಂಗ್ರೆಸ್ ಸರ್ಕಾರವು ಘೋಷಣೆ ಮಾಡಿದ ಐದು ಪಂಚ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಅಡಿ ಮನೆಯ.

Somvati Amavasya: ಈ ವರ್ಷ ಜುಲೈ 17 ರಂದು ಸೋಮವತಿ ಅಮಾವಾಸ್ಯೆ ಇದ್ದು, ಈ ದಿನ ಈ ಮೂರು ಕೆಲಸಗಳನ್ನು ತಪ್ಪದೆ ಮಾಡಲೇ ಬೇಕು

ಯಜಮಾನಿ ಖಾತೆಗೆ ಮಾಸಿಕ 2 ಸಾವಿರ ರೂಪಾಯಿ ಹಣ ಜಮಾ ಮಾಡುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಅವರು ಈ ಗೃಹಲಕ್ಷ್ಮಿ ಯೋಜನೆಯ ಉದ್ಘಾಟನೆಗೆ ನಮ್ಮ ರಾಷ್ಟ್ರೀಯ ನಾಯಕರಿಗೆ ಪತ್ರ ಬರೆಯಲಾಗಿದ್ದು ಅವರು ಲಭ್ಯವಾದರೆ ಜುಲೈ 17 ಸೋಮವಾರ ಸಂಜೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಉದ್ಘಾಟಿಸಲಾಗುವುದು. ರಾಷ್ಟ್ರೀಯ ನಾಯಕರು ಬರೆದಿದ್ದಲ್ಲಿ ಜುಲೈ 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸುತ್ತಾರೆ ಎಂದು ಹೇಳಿದರು.

Weekly Horoscope : ಇಂದು 16/07/23 ಭಾನುವಾರದಿಂದ, ಮುಂದಿನ  23/07/23 ರ ವರೆಗೆ, ಯಾವ ರಾಶಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತವೆ, ಪೂರ್ಣ 12 ರಾಶಿಗಳ ಭವಿಷ್ಯ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 19 ರಿಂದ ಅವಕಾಶ ಇದೆ. ಕರ್ನಾಟಕ ಒನ್,  ಗ್ರಾಮ ಒನ್,  ಹಾಗೂ  ಸೇವಾ ಕೇಂದ್ರಗಳಲ್ಲಿ ನೀವು ಅರ್ಜಿ ಸಲ್ಲಿಸಬಹುದಾಗಿದೆ. ಒಂದು ವೇಳೆ ಇದರ ಬೇಡಿಕೆ ಹೆಚ್ಚಾದರೆ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಯೋಚನೆ ಮಾಡಲಾಗುವುದು ಆದರೆ ಅರ್ಜಿ ಸಲ್ಲಿಕೆಗೆ ಮಾತ್ರ ಯಾವುದೇ ರೀತಿಯ ಡೆಡ್ ಲೈನ್ ಇಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದರು. ನಿಮ್ಮ ಆಧಾರ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ 2,000 ಹಣ ಆಗುತ್ತದೆ.ಈ ಯೋಜನೆಯಂತೆ 1.28 ಕೋಟಿ ಕುಟುಂಬಗಳಿಗೆ ಲಾಭ ಸಿಗಲಿದೆ ಎಂದು ಅವರು ಹೇಳಿದ್ದಾರೆ.

Gruha lakshmi scheme
Respected images are credited to the original sources
Leave a comment