ನಿಮ್ಮ ಜಮೀನಿಗೆ ದಾರಿ ಇಲ್ವಾ, ಜಮೀನಿಗೆ ಬಂಡಿ ಅಥವಾ ಕಾಲು ದಾರಿ ಹೇಗೆ ಪಡೆದುಕೊಳ್ಳಬೇಕು, ಭೂ ಕಂದಾಯದ ರೂಲ್ಸ್.
Land revenue: How to get a road to your land, cart or foot to the land, Land Revenue Rules.
Land revenue: ನೀವು ಪಡೆದಿರುವಂತಹ ಜಮೀನಿಗೆ ಹೋಗಲು ಯಾವುದೇ ರೀತಿಯ ಕಾಲು ದಾರಿ ಅಥವಾ ಸೇತುವೆ ಅಥವಾ ಇನ್ಯಾವುದೇ ರೀತಿಯ ದಾರಿ ಸಂಪರ್ಕ ಇಲ್ಲದಿದ್ದರೆ ನೀವು ಅದಕ್ಕೆ ಏನು ಮಾಡಬೇಕು? ಮತ್ತು ನೀವು ಹೊಸದಾಗಿ ದಾರಿ ಸೃಷ್ಟಿ ಮಾಡಲು ಏನು ಮಾಡಬೇಕು ಅದಕ್ಕೆ ದೂರು ಎಲ್ಲಿ ಸಲ್ಲಿಸಬೇಕು? ಅದಕ್ಕೆ ಬೇಕಾಗುವಂತಹ ದಾರಿಗಳು ಏನು ಮತ್ತು ನಾವು ಅದಕ್ಕೆ ಒದಗಿಸಿ ಕೊಡಬಹುದಾದ ಮಾರ್ಗಗಳಾದರು ಏನು ಎಂದು ಸಂಪೂರ್ಣವಾಗಿ ತಿಳಿಯಿರಿ.
PM Kisan scheme: 14 ನೇ ಕಂತಿನ ಹಣ 2000 ಜಮಾ ಯಾವಾಗ ಆಗುತ್ತೆ , ಆಗಿಲ್ಲ ಅಂದ್ರೆ ಇಲ್ಲಿ ಒಮ್ಮೆ ಚೆಕ್ ಮಾಡಿ ನೋಡಿ.
ಕರ್ನಾಟಕ ರಾಜ್ಯ ಭೂ ಕಂದಾಯ ಅಧಿನಿಯಮದ ಕಾಯ್ದೆಯ ಪ್ರಕಾರ ಯಾವುದೇ ಒಂದು ಜಮೀನಿನಗೆ ಒಬ್ಬ ರೈತ ಅಥವಾ ಇನ್ಯಾವುದೇ ಯಂತ್ರೋಪಕರಣಗಳು ಹೋಗಿ ಬರುವುದಕ್ಕೆ ದಾರಿ ಇದ್ದೇ ಇರುತ್ತದೆ. ನೈಸರ್ಗಿಕವಾಗಿ ದಾರಿಯನ್ನು ನೋಡುವುದಾದರೆ ದಾರಿ ಇಲ್ಲದ ಜಮೀನು, ಇಲ್ಲವೇ ಇಲ್ಲ ಎಂದು ಹೇಳಬಹುದು. ಅನೇಕ ರೀತಿಯ ಸಣ್ಣಪುಟ್ಟ ಕಾರಣಗಳಿಂದ ರಸ್ತೆ ವಿಚಾರವಾಗಿ ರೈತರಿಗೆ ತಮ್ಮ ಜಮೀನಿಗೆ ಹೋಗಲು ಬರಲು ಸರಿಯಾದ ರಸ್ತೆ ಮಾರ್ಗ ಇಲ್ಲದೆ ಬಾರಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ ರೈತರು.
ಕೆಲವೊಂದು ಜಮೀನಿಗೆ ದಾರಿ ಇಲ್ಲದೆ ಕಷ್ಟ ಪಡುತ್ತಿರುವ ರೈತರು ಮಾಡಬೇಕಾದ ಕೆಲಸ ಏನೆಂದರೆ ಮೊದಲಿಗೆ ತನ್ನ ಪಕ್ಕದ ಜಮೀನ್ದಾರನ ಜೊತೆಗೆ ಮಾತನಾಡಿ ಕಾಲುದಾರಿ ಮತ್ತು ಸೇತುವೆಗೆ ಅವನೊಂದಿಗೆ ಒಪ್ಪಿಗೆ ಪಡೆದುಕೊಂಡು ಮಾತನಾಡಬೇಕು ನಂತರ ಅವನು ಒಪ್ಪಲಿಲ್ಲ ಎಂದರೆ easement act ಪ್ರಕಾರ ರೈತರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ವಿಧಿ ಇದಾಗಿದೆ. ಈ ಕಾಯ್ದೆಯ ಪ್ರಕಾರ ನಿಮ್ಮ ಹೊಲಕ್ಕೆ ದಾರಿ ಸೃಷ್ಟಿ ಮಾಡಲು ಅವಕಾಶ ಇದೆ.
ನೀವು ಈ ಹಕ್ಕನ್ನು ಪಡೆಯುವುದಕ್ಕೆ ಮುಖ್ಯವಾಗಿ ಬೇಕಾಗಿರುವ ದಾಖಲೆಗಳಾದರು ಏನು. ಮೊದಲಿಗೆ ನಿಮ್ಮ ಜಮೀನಿನ ಸರ್ವೆ ನಂಬರ್ ನಕ್ಷೆ ಇರಬೇಕು. ಸರ್ವೇ ನಕ್ಷೆಯನ್ನು ನೀವು ನಿಮ್ಮ ತಾಲೂಕು ಪಂಚಾಯಿತಿಯ ತಹಸಿಲ್ದಾರ್ ಆಫೀಸಿನಲ್ಲಿ ತೆಗೆದುಕೊಳ್ಳಬಹುದು. ಇನ್ನು ನಿಮ್ಮ ಜಮೀನಿನ ಸುತ್ತ ನಾಲ್ಕು ದಿಕ್ಕುಗಳ ಸರ್ವೇ ನಂಬರ್ ನಕ್ಷೆಯನ್ನು ನೀವು ತೆಗೆದುಕೊಳ್ಳಬೇಕು. ನಂತರ ನಿಮ್ಮ ಸರ್ವೆ ನಂಬರ್ ಅಂದರೆ ನಿಮ್ಮ ಜನಿಮೀನಿನಲ್ಲಿ ಆಗಿರುವ ಕಾಲ ಕಾಲಕ್ಕೆ ಟಿಪ್ಪಣಿಯನ್ನು ನೀವು ತೆಗೆದುಕೊಳ್ಳಬೇಕು.
ಇತರ ಜೊತೆಗೆ ಪಹಣಿ ಮತ್ತು ಆಧಾರ್ ಕಾರ್ಡ್ ಬೇಕು ಇದರ ಜೊತೆಗೆ ಎದುರುದಾರರ ಪಾಣಿ ಮತ್ತು ವಿಳಾಸ ಇವಿಷ್ಟು ಮಾಹಿತಿಗಳು ಕಡ್ಡಾಯವಾಗಿ ಬೇಕಾಗುತ್ತದೆ. ಇಷ್ಟೇ ಅಲ್ಲದೆ ನೀವು ನಿಮ್ಮ ದಾರಿಗೆ ಜಮೀನು ಇಲ್ಲ ಎಂದು ಸರ್ವೇ ಆಫೀಸರ್ ಕರೆ ತಂದು ಮುಖ್ಯವಾಗಿ ಅವರಿಂದ ಒಂದು ಪ್ರಮಾಣ ಪತ್ರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇನ್ನು ನಿಮ್ಮ ದಾರಿಗೆ ನೀವು ಹೋಗಿ ಬರಲು ದಾರಿ ಇಲ್ಲ ಎಂದು ಒಂದು ಪತ್ರದಲ್ಲಿ ಸರಳವಾಗಿ ಅರ್ಜಿಯನ್ನು ಸಹ ಬರೆಯಬೇಕಾಗುತ್ತದೆ.
ಈ ಮೇಲೆ ಹೇಳಿರುವ ಎಲ್ಲಾ ದಾಖಲೆಗಳನ್ನು ನೀವು ಪರಿಶೀಲಿಸಿಕೊಂಡು ನಿಮ್ಮ ತಾಲೂಕಿನ ಡಿಡಿಎಲ್ ಆರ್ ಕಚೇರಿಗೆ ದೂರಿನ ರೀತಿ ತಲುಪಿಸಬೇಕು. ಇದನ್ನು ಅವರು ಪರಿಶೀಲನೆ ಮಾಡಿದ ನಂತರ ನೀವು ಕೊಟ್ಟಿರುವ ದೂರಿನ ಮೇಲೆ ಅವರು ಪುನಃ ಹೊಸದಾದ ಸರ್ವೆ ಮಾಡಲು ಆದೇಶ ನೀಡಬಹುದು. ರೆವೆನ್ಯೂ ಇನ್ಸ್ಪೆಕ್ಟರ್ ಅಥವಾ ವಿಲೇಜ್ ಅಕೌಂಟೆಂಟ್ ಮೂಲಕ ನೀವು ನಿಮ್ಮ ಆಜು ಬಾಜುದಾರರಿಗೆ ನೋಟಿಸ್ ಕಳುಹಿಸಲಾಗುತ್ತದೆ ಇವರೆಲ್ಲರ ಒಪ್ಪಿಗೆಯನ್ನು ಪಡೆದುಕೊಂಡ ನಂತರ ನಿಮ್ಮ ಜಮೀನಿಗೆ ಹೊಸದಾಗಿ ದಾರಿ ಸೃಷ್ಟಿ ಮಾಡಲು ಆದೇಶ ನೀಡಬಹುದು ಇದರ ಜೊತೆಗೆ ಕೆಲವೊಂದಿಷ್ಟು ಕ್ಲಿಷ್ಟಕರ ಸಂದರ್ಭದಲ್ಲಿ ಆಫೀಸರ್ ಸಹ ಬರಬಹುದು. ಇದರಿಂದಾಗಿ ನೀವು ನಿಮ್ಮ ಜಮೀನಿಗೆ ಸುಲಭವಾಗಿ ಸೇತುವೆ ಅಥವಾ ಕಾಲುದಾರಿಯನ್ನು ಮಾಡಿಕೊಳ್ಳಬಹುದೆಂದು ತಿಳಿಸಲಾಗಿದೆ…