Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Yuvanidhi Update : ಕರ್ನಾಟಕ ರಾಜ್ಯ ಸರ್ಕಾರದ ಯುವನಿಧಿ ಯೋಜನೆಗೆ ಅಭ್ಯರ್ಥಿಗಳು ಪ್ರತಿ ತಿಂಗಳು ಈ ಪತ್ರ ಸಲ್ಲಿಸಬೇಕು…

Yuvanidhi Update : ರಾಜ್ಯ ಸರ್ಕಾರವು ನಿರುದ್ಯೋಗಿ ಯುವಕರಿಗೆ ಧನ ಸಹಾಯ ನೀಡುವ ಉದ್ದೇಶದಿಂದ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿ ತಿಂಗಳು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಯು ಕಡ್ಡಾಯವಾಗಿ ಒಂದು ಕೆಲಸವನ್ನು ಮಾಡಲೇಬೇಕು.

Yuvanidhi Update : ರಾಜ್ಯ ಸರ್ಕಾರವು ನಿರುದ್ಯೋಗಿ ಯುವಕರಿಗೆ ಧನ ಸಹಾಯ ನೀಡುವ ಉದ್ದೇಶದಿಂದ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿ ತಿಂಗಳು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಯು ಕಡ್ಡಾಯವಾಗಿ ಒಂದು ಕೆಲಸವನ್ನು ಮಾಡಲೇಬೇಕು. ಹಾಗಾದರೆ ಏನು ಈ ನಿಯಮ ಎಂಬುದನ್ನು ತಿಳಿಯೋಣ.

Yuvanidhi Update

ಯೋಜನೆಯ ಹಣವನ್ನು ಪಡೆಯಲು ಕಡ್ಡಾಯವಾಗಿ ಈ ಕೆಲಸ ಮಾಡಲೇಬೇಕು :-

ಈ ಯೋಜನೆಯ ಪ್ರಯೋಜನ ಪಡೆಯಲು, ನಿರುದ್ಯೋಗಿಗಳು ಪ್ರತಿ ತಿಂಗಳು ಯಾವುದೇ ಕೆಲಸ ಮಾಡುತ್ತಿಲ್ಲ ಮತ್ತು ಉನ್ನತ ಶಿಕ್ಷಣಕ್ಕೆ ಸೇರಿಲ್ಲ ಎಂಬ ಮಾಹಿತಿಯ ಪತ್ರವನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು.ಈ ಯೋಜನೆಯ ಷರತ್ತುಗಳನ್ನು ಪೂರೈಸುವ ಯುವಕರು ಯುವನಿಧಿ ಯೋಜನೆಯ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಹತೆ ಏನಿದೆ?

* ಕರ್ನಾಟಕ ರಾಜ್ಯದ ನಿವಾಸಿ
* 18-40 ವರ್ಷ ವಯಸ್ಸಿನ ಒಳಗೆ
* ಪದವಿ / ಡಿಪ್ಲೊಮಾ ಪದವೀಧರ
* ಯಾವುದೇ ಉದ್ಯೋಗದಲ್ಲಿಲ್ಲದಿರುವುದು
* ಉನ್ನತ ಶಿಕ್ಷಣಕ್ಕೆ ಸೇರಿಲ್ಲದಿರುವುದು
ಈ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಸಿಗುವ ಸಹಾಯಧನ ಏಷ್ಟು )
* ಪದವೀಧರರಿಗೆ ₹3,000/ತಿಂಗಳು
* ಡಿಪ್ಲೊಮಾ ಪಡೆದವರಿಗೆ ₹1,500/ತಿಂಗಳು

Also Read: Eshram Card : ಕೇಂದ್ರ ಸರ್ಕಾರದ ಇ-ಶ್ರಮ ಕಾರ್ಡ್ ಗೆ ಅರ್ಜಿ ಆಹ್ವಾನ:

ಎಷ್ಟು ಅವಧಿಗೆ ಹಣ ಸಿಗುತ್ತದೆ ?

2 ವರ್ಷಗಳು ಅಥವಾ ಉದ್ಯೋಗ ಸಿಗುವವರೆಗೆ ಈ ಯೋಜನೆಯ ಹಣವೂ ಸಿಗುತ್ತದೆ

ಈ ಯೋಜನೆಯ ಉಪಯೋಗಗಳು ಏನು ?

* ಈ ಸಹಾಯ ಧನ ನೀಡುವುದರಿಂದ ನಿರುದ್ಯೋಗಿಗಳಿಗೆ ಉದ್ಯೋಗ ಹುಡುಕುವವರೆಗೆ ತಮ್ಮ ಜೀವನೋಪಾಯವನ್ನು ನಡೆಸಲು ಸಹಾಯ ಮಾಡುತ್ತದೆ.
* ಧನ ಸಹಾಯದ ಜೊತೆಗೆ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ಉದ್ಯಮಶೀಲತೆಯ ತರಬೇತಿಯನ್ನು ನೀಡುವುದರಿಂದ ಉದ್ಯೋಗ ಸಿಗಲು ನೆರವಾಗುತ್ತದೆ.
* ಈ ಯೋಜನೆಯು ಯುವಕರಿಗೆ ಉತ್ತಮ ಜೀವನಮಟ್ಟವನ್ನು ನಡೆಸಲು ಆರ್ಥಿಕ ಸಹಾಯ ಮಾಡಲಿದೆ.
* ಈ ಯೋಜನೆಯು ರಾಜ್ಯದ ಯುವ ಜನತೆಯನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮೂಲಕ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲು ಉದ್ದೇಶಿಸಿದೆ.

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ನೀಡಬೇಕಾದ ದಾಖಲೆಗಳು :-

1)ವಯಸ್ಸಿನ ಪುರಾವೆ: ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ
2)ಶೈಕ್ಷಣಿಕ ಅರ್ಹತೆಗಳ ದಾಖಲೆಗಳು: ಪದವಿ/ಡಿಪ್ಲೊಮಾ ಪ್ರಮಾಣ ಪತ್ರಗಳು
3)ಜಾತಿ ಮತ್ತು ಆದಾಯ ಪ್ರಮಾಣಪತ್ರ: ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ
4)ವಾಸಸ್ಥಳ ದಾಖಲೆ: ವಿದ್ಯುತ್ ಬಿಲ್, ರೇಷನ್ ಕಾರ್ಡ್
ಯಾವುದೇ ಉದ್ಯೋಗದಲ್ಲಿಲ್ಲದಿರುವುದಕ್ಕೆ ಪ್ರಮಾಣಪತ್ರ: ಗ್ರಾಮ ಪಂಚಾಯತ್ ಅಥವಾ ನಗರಸಭೆಯಿಂದ ಪ್ರಮಾಣ ಪತ್ರ
5)ಉನ್ನತ ಶಿಕ್ಷಣಕ್ಕೆ ಸೇರಿಲ್ಲದಿರುವುದಕ್ಕೆ ಪ್ರಮಾಣಪತ್ರ: ಶೈಕ್ಷಣಿಕ ಸಂಸ್ಥೆಯಿಂದ ಪ್ರಮಾಣ ಪತ್ರ

*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-

ಯುವನಿಧಿ ಯೋಜನೆಯ ಸಹಾಯವಾಣಿ: 1800-425-5902

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Also Read: Swayam Udyog : ಈ ಯೋಜನೆಯಲ್ಲಿ ಸರ್ಕಾರದಿಂದ ಸಿಗಲಿದೆ ಒಂದು ಲಕ್ಷ ಸಹಾಯಧನ! ಇಂದೇ ಅರ್ಜಿ ಸಲ್ಲಿಸಿ!

Leave a comment