Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಿಮ್ಮ ಬ್ಲಡ್ ಗ್ರೂಪ್ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಮತ್ತು ಸ್ವಭಾವವನ್ನು ಹೇಳಬಹುದು! ನಿಮ್ಮ ಬ್ಲಡ್ ಗ್ರೂಪ್ ಯಾವುದು ?? ನೋಡಿ ಇಲ್ಲಿದೆ ಉತ್ತರ !!

ಪ್ರತಿಯೊಬ್ಬರಿಗೂ ಒಂದೊಂದು ರಕ್ತದ ಗುಂಪು ಇದ್ದೇ ಇರುತ್ತೆ. ಈ ಬ್ಲಡ್ ಗ್ರೂಪ್ ಆಧಾರದ ಮೇಲೆ ನಿಮ್ಮ ಸ್ವಭಾವ ಏನು ಎಂಬುದನ್ನು ಹೇಳಬಹುದು ಹಾಗಾದರೆ ನಿಮ್ಮ ಬ್ಲಡ್ ಗ್ರೂಪ್ ಯಾವುದು ಆ ಪ್ರಕಾರ ನಿಮ್ಮ ಸ್ವಭಾವ ಯಾವುದು ಎನ್ನುವುದನ್ನು ನಾವು ತಿಳಿಸಿಕೊಡುತ್ತೇವೆ.

ಮೊದಲನೇದಾಗಿ ಎ ರಕ್ತದ ಗುಂಪು. ಎ ಪಾಸಿಟಿವ್ ನೆಗೆಟಿವ್ ಯಾವುದೇ ರಕ್ತದ ಗುಂಪಿಗೆ ಸೇರಿದ ಜನ ಬಹಳ ಬುದ್ಧಿವಂತರು. ಹಾಗೂ ತಮ್ಮ ಕೆಲಸದ ಬಗ್ಗೆ ಹೆಚ್ಚು ಫ್ಯಾಶನೆಟ್ ಆಗಿರುತ್ತಾರೆ. ಇವರು ತಮ್ಮ ಕೆಲಸದಲ್ಲಿ ಪರ್ಫೆಕ್ಟ್ ಆಗಿರಬೇಕು ಎಂದು ಬಯಸುತ್ತಾರೆ ಅದೇ ರೀತಿ ನಡೆದುಕೊಳ್ಳುತ್ತಾರೆ. ಆದರೆ ಇವರಿಗೆ ಒತ್ತಡ ಹೆಚ್ಚು ಹಾಗಾಗಿ ಆರೋಗ್ಯದ ಸಮಸ್ಯೆಯೂ ಕೂಡ ಕಾಣಿಸಿಕೊಳ್ಳುತ್ತದೆ. ಇನ್ನು ತಮ್ಮಲ್ಲಿರುವ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಹಾಗಾಗಿ ಅವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ.

ಬಿ ರಕ್ತದ ಗುಂಪು; ಇವರು ಯಾವುದೇ ಕೆಲಸವನ್ನು ಮಾಡುವಾಗ ಹತ್ತು ಬಾರಿ ಯೋಚನೆ ಮಾಡುವುದಿಲ್ಲ ಮನಸ್ಸಿಗೆ ಬಂದ ಕೂಡಲೇ ತಕ್ಷಣವೇ ಆ ಕೆಲಸವನ್ನು ಮಾಡಿಬಿಡುತ್ತಾರೆ. ಇನ್ನು ಇವರು ಬೇರೆಯವರ ಮಾತನ್ನು ಹೆಚ್ಚಾಗಿ ಕೇಳುವುದಿಲ್ಲ ಅದರ ಬದಲಿಗೆ ತನ್ನ ಮನಸ್ಸಿಗೆ ಏನು ಅನ್ನಿಸುತ್ತದೆಯೋ ಅದನ್ನೇ ಮಾಡುತ್ತಾರೆ.

ಎಬಿ ರಕ್ತದ ಗುಂಪು; ಈ ರಕ್ತದ ಗುಂಪು ಹೊಂದಿರುವವರು ಕೆಲವೊಮ್ಮೆ ಸಿಟ್ಟಿನಿಂದಲೂ ಕೆಲವೊಮ್ಮೆ ಶಾಂತವಾಗಿ ಇರುತ್ತಾರೆ ಇನ್ನು ಇವರನ್ನ ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಇವರನ್ನ ನೋಡಿದ ಕೂಡಲೇ ಇವರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಿಲ್ಲ ಇವರೊಂದಿಗೆ ಸಾಕಷ್ಟು ವರ್ಷ ಬೆರೆತಾಗ ಮಾತ್ರ ಅವರ ಬಗ್ಗೆ ಅರ್ಥವಾಗುತ್ತದೆ. ಇನ್ನು ಇವರಲ್ಲಿ ಆಲೋಚನೆ ಹಾಗೂ ವಿಮರ್ಶಾತ್ಮಕ ಮನೋಭಾವ ಹೆಚ್ಚಾಗಿರುತ್ತದೆ.

ಓ ರಕ್ತದ ಗುಂಪು; ಉಳಿದ ಎಲ್ಲಾ ರಕ್ತದ ಗುಂಪುಗಳ ವ್ಯಕ್ತಿತ್ವ ಗಳಿಗಿಂತಲೂ ಬಹಳ ವಿಭಿನ್ನ ವ್ಯಕ್ತಿತ್ವ ಹೊಂದಿರುವ ಜನ ಓ ರಕ್ತದ ಗುಂಪು ಹೊಂದಿರುವವರು. ರಕ್ತದ ಗುಂಪನ್ನು ಹೊಂದಿರುವ ಜನ ಬಹಳ ಇಂಡಿಪೆಂಡೆಂಟ್ ಆಗಿರುತ್ತಾರೆ. ಇವರಿಗೆ ಯಾವುದಾದರೂ ಕೆಲಸ ಇಷ್ಟವಾದರೆ ಅದನ್ನ ಬಹಳ ಇಷ್ಟಪಟ್ಟು ಮಾಡುತ್ತಾರೆ ಯಾವಾಗಲೂ ಕೆಲಸ ಕೆಲಸ ಅಂತ ಅದರಲ್ಲಿಯೇ ಬ್ಯುಸಿಯಾಗಿರುತ್ತಾರೆ.

ಇವರು ಒಬ್ಬಂಟಿಯಾಗಿ ಇರಲು ಬಯಸುತ್ತಾರೆ ಅಷ್ಟೇ ಅಲ್ಲ ಇವರನ್ನು ಒಬ್ಬರನ್ನೇ ಎಲ್ಲಾದರೂ ಬಿಟ್ಟರೂ ಕೂಡ ಅವರು ಆರಾಮವಾಗಿ ಅಲ್ಲಿ ಜೀವನ ನಡೆಸುತ್ತಾರೆ. ಇನ್ನು ಈ ರಕ್ತದ ಗುಂಪಿನ ಜನ ಬಹಳ ವಾದಿಸುವ ಮನೋಭಾವ ಹೊಂದಿರುತ್ತಾರೆ ಆದರೆ ಯಾರನ್ನಾದರೂ ಪ್ರೀತಿಸಿದರೆ ಅವರಿಗೋಸ್ಕರ ಪ್ರಾಣವನ್ನು ಕೊಡಲು ಕೂಡ ಇವರು ಸಿದ್ದರಾಗುತ್ತಾರೆ. ಇನ್ನು ಇವರ ಜೊತೆಗೆ ಇರುವವರು ಯಾವತ್ತೂ ಸುಳ್ಳು ಹೇಳಬಾರದು.
ಇವಿಷ್ಟು ರಕ್ತದ ಗುಂಪುಗಳ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವದ ಚಿತ್ರಣ ಹಾಗಾದರೆ ನಿಮ್ಮ ಬ್ಲಡ್ ಗ್ರೂಪ್ ಯಾವುದು ನಮಗೆ ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

Leave a comment