Daily Horoscope :ಇಂದು ಜೂನ್ 28, ಬುಧವಾರ, ಇಂದಿನ ದಿನ ಯಾವೆಲ್ಲಾ ರಾಶಿಗಳಿಗೆ ಯಾವೆಲ್ಲ ಫಲಗಳು ದೊರೆಯಲಿದೆ, ಸಂಪೂರ್ಣ 12 ರಾಶಿಗಳ ಭವಿಷ್ಯ !!
Daily Horoscope : Today, June 28, Wednesday, which zodiac signs will get what results today, complete 12 horoscope predictions !!
ಮೇಷ ರಾಶಿ: ಕೆಲವು ಜನರು ಇಂದು ನಿಮ್ಮ ಕೆಲಸಗಳಿಗಾಗಿ ನಿಮ್ಮನ್ನು ಪ್ರೇರೇಪಿಸುತ್ತಾರೆ. ಇನ್ನು ವ್ಯಾಪಾರಗಳಲ್ಲಿ ಇಂದು ನೀವು ಅಧಿಕ ಲಾಭಗಳನ್ನು ಕಾಣಲಿದ್ದೀರಿ. ಇನ್ನು ನಿಮ್ಮ ಕುಟುಂಬಸ್ಥರ ಜೊತೆಗೆ ಹೆಚ್ಚಿನ ಸಮಯ ಕಳೆಯುವುದು ಉತ್ತಮ. ಇಂದು ಜನರು ನಿಮ್ಮನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಅಂತಹ ಜನರಿಂದ ಕೊಂಚ ದೂರ ಉಳಿಯುವುದು ಉತ್ತಮ. ಇನ್ನು ಇದೆ ಕಾರಣಕ್ಕೆ ನೀವು ನಿಮ್ಮ ಮೇಲೆ ಕೋಪಗೊಳ್ಳುವಿರಿ.
ವೃಷಭ ರಾಶಿ: ಇಂದಿನ ದಿನ ನಿಮ್ಮ ಆರೋಗ್ಯದಲ್ಲಿ ಕೊಂಚ ಸುಧಾರಿಕೆ ಕಾಣಲಿದ್ದೀರಿ. ಇನ್ನು ಕೆಲವು ಸ್ಟಾಕ್ ಮಾರ್ಕೆಟ್ಗಳಲ್ಲಿ ಹೂಡಿಕೆ ಮಾಡುವುದರ ಮೂಲಕ ನೀವು ಮುಂದಿನ ದಿನಗಳಲ್ಲಿ ಹೆಚ್ಚಿನ ಲಾಭವನ್ನು ಕಾಣಲಿದ್ದೀರಿ. ನಿಮ್ಮ ಕೋಪದ ಕಾರಣದಿಂದ ನೀವು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ. ಇಂದಿನ ದಿನ ಯಾವುದೇ ಕೆಲಸಕ್ಕೆ ನೀವು ಕೈ ಹಾಕಿದರೂ ಸಹ ಅದರಲ್ಲಿ ಯಶಸ್ಸು ಕಾಣಲಿದ್ದೀರಿ.
ಮಿಥುನ ರಾಶಿ: ಕೆಲಸ ಹಾಗೂ ಕುಟುಂಬದ ಸಮಸ್ಯೆಗಳ ಕಾರಣದಿಂದಾಗಿ ಇಂದು ನೀವು ಪಂಚ ಒತ್ತಡವನ್ನು ಅನುಭವಿಸಲಿದ್ದೀರಿ. ಇನ್ನು ನಿಮ್ಮ ಹಣವನ್ನು ಅನಗತ್ಯವಾಗಿ ಖರ್ಚು ಮಾಡದೆ ಉಪಯುಕ್ತ ವಸ್ತುಗಳಲ್ಲಿ ಮಾತ್ರ ಹಣವನ್ನು ಹೂಡಿಕೆ ಮಾಡಿ. ಇನ್ನು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಕೆಲವು ಬಾರಿ ಯೋಚಿಸಿ ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.
ಕರ್ಕಾಟಕ ರಾಶಿ: ಇದು ನಿಮ್ಮ ಮಕ್ಕಳ ಸಾಧನೆ ನಿಮ್ಮ ಮನಸ್ಸಿಗೆ ಬಾರಿ ಸಂತೋಷವನ್ನು ತಂದು ಕೊಡಲಿದೆ. ನೀವು ಇಂದಿನಿಂದ ಉಳಿಸುವ ಹಣ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ದೊಡ್ಡ ಸಹಾಯ ಮಾಡಲಿದೆ. ಇನ್ನು ನಿಮ್ಮ ಕೆಲಸದ ಜಾಗದಲ್ಲಿ ಯಾವುದಾದರೂ ತಪ್ಪು ಮಾಡಿದರೆ, ಅದನ್ನು ಒಪ್ಪಿಕೊಳ್ಳಿ, ಇದರಿಂದ ಅಧಿಕಾರಿಗಳಿಗೆ ನಿಮ್ಮ ಮೇಲೆ ಒಳ್ಳೆಯ ಭಾವನೆ ಮೂಡುತ್ತದೆ.
ಸಿಂಹ ರಾಶಿ: ಇಂದು ನಿಮ್ಮ ಆರ್ಥಿಕ ಜೀವನದ ಸ್ಥಿತಿ ಬಹಳ ಉತ್ತಮವಾಗಿರಲಿದೆ ಎಂದು ಹೇಳುವುದು ಕಷ್ಟ. ಇನ್ನು ನಿಮಗೆ ತಿಳಿಯದ ಹಾಗೆ ನಿಮ್ಮನ್ನು ಯಾರೊಬ್ಬರೂ ಘಮನಿಸುತ್ತಿದ್ದಾರೆ. ನಿಮ್ಮನ್ನು ಅವರು ತಮ್ಮ ಆದರ್ಶದಂತೆ ಭಾವಿಸುತ್ತಿದ್ದಾರೆ. ಅನಗತ್ಯವಾಗಿ ಯಾರನ್ನು ಸಹ ಅನುಮಾನಿಸಬೇಡಿ ಇದರಿಂದ ನಿಮ್ಮ ಸಂಬಂಧಗಳು ಕೆಡುವ ಸಾಧ್ಯತೆಗಳಿವೆ. ನಿಮ್ಮ ಮನಸ್ಸಿನಲ್ಲಿ ಯಾರ ಬಗ್ಗೆ ಆದರೂ ಅನುಮಾನವಿದ್ದರೆ ಅವರ ಜೊತೆಗೆ ಕುಳಿತು ಮಾತನಾಡಿ ಪರಿಹರಿಸಿಕೊಳ್ಳಿ.
ಕನ್ಯಾ ರಾಶಿ: ಧೂಮಪಾನ ಹಾಗೂ ಮಧ್ಯಪಾನ ಇವುಗಳನ್ನು ಮಾಡುವವರು ಹೆಚ್ಚಿನ ಹಣ ಇದಕ್ಕಾಗಿ ಖರ್ಚು ಮಾಡುತ್ತಾರೆ ಈ ಕಾರಣದಿಂದ ಮುಂದಿನ ದಿನಗಳಲ್ಲಿ ನೀವು ಹಣಕಾಸಿನ ಸಮಸ್ಯೆ ಹಾಗೂ ಆರೋಗ್ಯದ ಸಮಸ್ಯೆಯನ್ನು ಸಹ ಎದುರಿಸಬೇಕಾಗುತ್ತದೆ. ನಿಮ್ಮ ಸುತ್ತಮುತ್ತ ಇರುವವರನ್ನು ಟೀಕಿಸದೆ ಇರುವುದು ಉತ್ತಮ ಇಲ್ಲವಾದರೆ ನೀವು ಏಕಾಂಗಿಯಾಗುತ್ತೀರಿ. ಅವಮಾನದ ಕಾರಣದಿಂದ ಆರ್‌ಸಿಬಿ ಇಂದ ಹೇಳಲು ನಿಮಗೆ ಮನಸ್ಸಿರುವುದಿಲ್ಲ, ದಿನದ ಕೊನೆಯಲ್ಲಿ ನೀವು ನಿಮ್ಮ ಅಮೂಲ್ಯವಾದ ಸಮಯವನ್ನು ಇದೇ ರೀತಿ ವ್ಯರ್ಥ ಮಾಡಿದ್ದೀರಿ ಎಂದು ನಿಮಗೆ ಭಾಸವಾಗುತ್ತದೆ.

ತುಲಾ ರಾಶಿ: ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಇಂದು ನೀವು ಭೂಮಿ ಅಥವಾ ಇನ್ನು ಯಾವುದೇ ಆಸ್ತಿ ವಿಷಯಗಳಲ್ಲಿ ಹೂಡಿಕೆ ಮಾಡದೇ ಇರುವುದು ಉತ್ತಮ. ಇಲ್ಲವಾದರೆ ಈ ಕಾರಣದಿಂದ ನೀವು ಆರ್ಥಿಕ ಸಮಸ್ಯೆಗಳಿಗೆ ಸಿಲುಕಬಹುದು. ಕೆಲವರಿಗೆ ಇಂದು ಕುಟುಂಬದಲ್ಲಿ ಹೊಸ ಸದಸ್ಯರ ಆಗಮನವಾಗುವ ಸಾಧ್ಯತೆ ಇದೆ. ಇನ್ನು ಈ ವಿಷಯ ನಿಮಗೆ ಬಹಳ ಖುಷಿಯನ್ನು ನೀಡಲಿದೆ.
ವೃಶ್ಚಿಕ ರಾಶಿ: ನಿಮ್ಮ ಸ್ನೇಹಿತರು ಅಥವಾ ನಿಮ್ಮ ಕುಟುಂಬಸ್ಥರ ಜೊತೆಗೆ ಇಂದು ನೀವು ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ, ಇದು ನಿಮ್ಮ ಮನಸ್ಸಿಗೆ ಬಹಳ ಸಂತೋಷವನ್ನು ನೀಡುತ್ತದೆ. ಇಂದು ನಿಮ್ಮ ಕೆಲಸದ ಜಾಗದಲ್ಲಿ ಆಗುವ ಕೆಲವು ಬದಲಾವಣೆಗಳು, ಮುಂದಿನ ದಿನಗಳಲ್ಲಿ ಬಾರಿ ಪ್ರಯೋಜನೆಗಳನ್ನು ನೀಡಲಿದೆ. ಅಗತ್ಯವಾಗಿ ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಿ.
World Cheapest 5G Smartphone: ಭಾರತೀಯ ಮೊದಲ 5G ಸ್ಮಾರ್ಟ್ ಫೋನ್, ಇದರ ಬೆಲೆ, ಫೀಚರ್ಸ್ ನೋಡಿ ಬೆರಗಾದ ನೆಟ್ಟಿಗರು!
ಧನು ರಾಶಿ: ಯಾರಾದರೂ ನಿಮಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಅಂತಹ ಜನರಿಂದ ದೂರ ಉಳಿಯುವುದು ಉತ್ತಮ. ಇಂತಹ ವಿಷಯಗಳ ಬಗ್ಗೆ ನೀವು ಯೋಚಿಸಿದಷ್ಟು ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಭವಿಷ್ಯದಲ್ಲಿ ನೀವು ಆರ್ಥಿಕವಾಗಿ ಸ್ಥಿರವಾಗಿರಬೇಕು ಎಂದು ಬಯಸಿದರೆ ಇಂದಿನಿಂದಲೇ ನಿಮ್ಮ ಹಣವನ್ನು ಉಳಿಸಲು ಪ್ರಯತ್ನಿಸಿ. ನಿಮ್ಮ ಕೆಲಸದ ಜಾಗದಲ್ಲಿ ಹಿಂದಿನ ದಿನಗಳಲ್ಲಿ ನೀವು ಸಂಪೂರ್ಣ ಮಾಡದೇ ಇರುವ ಎಲ್ಲಾ ಕೆಲಸಗಳನ್ನು ಇಂದು ನೀವು ಪೂರ್ತಿ ಮಾಡುವುದು ಉತ್ತಮ.
ಮಕರ ರಾಶಿ: ಇಂದು ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಕಾಣಲಿದ್ದೀರಿ. ಇದೇ ಆರೋಗ್ಯ ಸಮಸ್ಯೆಯಿಂದ ನಿಮ್ಮ ಆರ್ಥಿಕ ಸ್ಥಿತಿ ಸಹ ಕೊಂಚ ಗಂಭೀರವಾಗಲಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅದರ ಬಗ್ಗೆ ಯೋಚಿಸು ಉತ್ತಮ. ಅವಸರದ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅನಗತ್ಯವಾದ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಮೊದಲು ಆ ಸಮಯವನ್ನು ಯಾವುದಾದರು ಒಂದು ಕೆಲಸದಲ್ಲಿ ತೊಡಗಿಕೊಳ್ಳಿ.
ಕುಂಭ ರಾಶಿ: ಇನ್ನು ನಿಮ್ಮ ಮಾನಸಿಕ ನೆಮ್ಮದಿಗಾಗಿ ಇಂದು ನೀವು ದೇವಸ್ಥಾನಗಳಿಗೆ ಅಥವಾ ಧ್ಯನ ಮಂದಿರಗಳಿಗೆ ಭೇಟಿ ನೀಡುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತದೆ. ಇಂದು ಯಾವುದೋ ಒಂದು ಅಮೂಲ್ಯವಾದ ವಸ್ತುವನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಇನ್ನು ಇಂದು ನೀವು ನಿಮ್ಮ ಅವಶ್ಯಕತೆಗೆ ಬೇಕಾದ ಕೆಲಸಗಳನ್ನು ಮಾಡುವುದು ಉತ್ತಮ. ಇನ್ನು ನಿಮಗೆ ಹಾಗೂ ನಿಮ್ಮ ಇಡೀ ಕುಟುಂಬಕ್ಕೇ ಸಂತೋಷದ ಸುದ್ದಿ ಸಿಗಲಿದೆ.
ಮೀನ ರಾಶಿ: ಇಂದು ನೀವು ಹೂಡಿಕೆ ಮಾಡಿರುವಂತಹ ಹಣ ದ್ವಿಗುಣ ವಾಗುವ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತಿದೆ. ಕೆಲವೊಂದು ವಿಷಯಗಳ ಬಗ್ಗೆ ಇಂದು ನಿಮ್ಮ ಮನಸ್ಸಿನಲ್ಲಿ ಸಾಕಷ್ಟು ಚಿಂತನೆ ಇರಲಿದೆ. ಅಲ್ಲದೆ ನೀವು ಅಂದುಕೊಂಡ ಕೆಲಸಗಳನ್ನು ಇಂದು ನೀವು ಛಲದಿಂದ ಸಾಧಿಸಲು ಸಾಧ್ಯವಾಗುತ್ತದೆ. ಇನ್ನು ಯಾವುದೇ ಕೆಲಸ ಮಾಡುವ ಮುನ್ನ ಹಿರಿಯರ ಆಶೀರ್ವಾದ ಪಡೆಯುವುದು ಉತ್ತಮ.