Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Special Loan Scheme: ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆಗೆ ಭರ್ಜರಿ ಸಾಲ ಯೋಜನೆ! ಮಾರ್ಚ್ ತಿಂಗಳ ಕೊನೆಯವರೆಗೆ ಅರ್ಜಿ ಸಲ್ಲಿಸಿ, ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಿರಿ!

ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ, ಶೇ. 3 ರಷ್ಟು ಹೆಚ್ಚುವರಿ ಬಡ್ಡಿ ರಿಯಾಯಿತಿ ಸಿಗುತ್ತದೆ.

Special Loan Scheme: ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆ ಕಡಿಮೆಯಾಗ್ತಿದೆ. ಏಕೆಂದರೆ, ಇದಕ್ಕೆ ದುಡ್ಡು ಬೇಕಾಗುತ್ತೆ.ಆದ್ರೆ, ಕೇಂದ್ರ ಸರ್ಕಾರ ಈಗ ಒಂದು ಒಳ್ಳೆಯ ಯೋಜನೆ ಮಾಡಿದೆ.ಈ ಯೋಜನೆಯಲ್ಲಿ, ಗ್ರಾಮೀಣ ಭಾಗದ ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ.ಈ ಸಾಲದಿಂದ ಜನರು ಹಣ ಪಡೆದುಕೊಂಡು ಹಸು, ಕುರಿ, ಮೇಕೆ, ಕೋಳಿ ಸಾಕಾಣಿಕೆ ಮುಂದುವರಿಸಬಹುದು.ಈ ಯೋಜನೆಯ ಹೆಸರು “ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ”.ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

ಪಶುಸಂಗೋಪನೆ ರೈತರಿಗೆ ಆರ್ಥಿಕ ಸಹಾಯ: Special Loan Scheme

*ಯಾರು ಕೊಡ್ತಾರೆ?: ಭಾರತ ಸರ್ಕಾರದ ಹಣಕಾಸು ಸೇವೆಗಳ ಇಲಾಖೆ
*ಯಾರಿಗೆ ಸಿಗ್ತದೆ?: ಪಶುಸಂಗೋಪನೆಯಲ್ಲಿ ತೊಡಗಿರುವ ರೈತರಿಗೆ
*ಏನು ಸಿಗ್ತದೆ?: ಕಡಿಮೆ ಬಡ್ಡಿ ದರದಲ್ಲಿ ಸಾಲ
*ಯಾರು ಕೊಡ್ತಾರೆ?: ರಾಷ್ಟ್ರೀಕೃತ ಬ್ಯಾಂಕ್‌/ಸಹಕಾರ ಸಂಸ್ಥೆಗಳು
*ಉದ್ದೇಶ: ರೈತರಿಗೆ ಆರ್ಥಿಕ ಸಹಾಯ ನೀಡಿ ಪಶುಸಂಗೋಪನೆಯನ್ನು ಉತ್ತೇಜಿಸುವುದು.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಬಡ್ಡಿ ರಿಯಾಯಿತಿ:

*ಈ ಯೋಜನೆಯಲ್ಲಿ ರೈತರಿಗೆ 3 ಲಕ್ಷ ರೂಪಾಯಿವರೆಗೆ ಸಾಲ ಸಿಗುತ್ತದೆ.
*ಸರ್ಕಾರ ಶೇ. 2 ರಷ್ಟು ಬಡ್ಡಿ ರಿಯಾಯಿತಿ ನೀಡುತ್ತದೆ.
*ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ, ಶೇ. 3 ರಷ್ಟು ಹೆಚ್ಚುವರಿ ಬಡ್ಡಿ ರಿಯಾಯಿತಿ ಸಿಗುತ್ತದೆ.
*ಒಟ್ಟಾರೆಯಾಗಿ, ರೈತರು ಈ ಯೋಜನೆಯಲ್ಲಿ ಶೇ. 5 ರಷ್ಟು ಬಡ್ಡಿ ರಿಯಾಯಿತಿ ಪಡೆಯಬಹುದು.
*ರೈತರು 10 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು.
*ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡಿ. ಈ ಯೋಜನೆಯ ಅಡಿಯಲ್ಲಿ ಯಾವುದಕ್ಕೆ ಎಷ್ಟು ಸಾಲ ಸಿಗಲಿದೆ ಎಂಬ ಮಾಹಿತಿಯನ್ನು ನೋಡೋಣ

Also Read: Wedding Loan: ಇನ್ನು ಮುಂದೆ ಮದುವೆಯ ಚಿಂತೆ ಬಿಟ್ಟುಬಿಡಿ, ಸುಲಭವಾಗಿ ಈ ಬ್ಯಾಂಕ್ ಇಂದ ಹಣ ಪಡೆದು ಭರ್ಜರಿಯಾಗಿ ಮದುವೆ ಮಾಡಿ.

ಹೈನುಗಾರಿಕೆಗೆ ಸಾಲ ಸೌಲಭ್ಯ:

*ಯೋಜನೆಯಲ್ಲಿ, ಮಿಶ್ರತಳಿ ಹಸುಗಳಿಗೆ ಪ್ರತಿ ಹಸುವಿಗೆ ₹18,000 ಮತ್ತು ಎರಡು ಹಸುಗಳಿಗೆ ₹36,000 ವರೆಗೆ ಸಾಲ ಸಿಗುತ್ತದೆ.
*ಸುಧಾರಿತ ಎಮ್ಮೆಗಳಿಗೆ ಪ್ರತಿ ಎಮ್ಮೆಗೆ ₹21,000 ಮತ್ತು ಎರಡು ಎಮ್ಮೆಗಳಿಗೆ ₹42,000 ವರೆಗೆ ಸಾಲ ಸಿಗುತ್ತದೆ.

Great loan scheme for dairy farming sheep farming and goat farming 1
Special Loan Scheme: Great loan scheme for dairy farming, sheep farming, and goat farming!

ಕುರಿ ಸಾಕಾಣಿಕೆಗೆ ಸಾಲ ಸೌಲಭ್ಯ:

1. ಕುರಿಗಳಿಗೆ:

*8 ತಿಂಗಳ ಕಾಲ 10 ಕುರಿಗಳನ್ನು ಕಟ್ಟಿ ಮೇಯಿಸಲು ₹29,950 ಸಾಲ ಸಿಗುತ್ತದೆ.
*8 ತಿಂಗಳ ಕಾಲ 10 ಕುರಿಗಳನ್ನು ಬಯಲಿನಲ್ಲಿ ಮೇಯಿಸಲು ₹14,700 ಸಾಲ ಸಿಗುತ್ತದೆ.
*8 ತಿಂಗಳ ಕಾಲ 20 ಕುರಿಗಳನ್ನು ಕಟ್ಟಿ ಮೇಯಿಸಲು ₹57,200 ಸಾಲ ಸಿಗುತ್ತದೆ.
*8 ತಿಂಗಳ ಕಾಲ 20 ಕುರಿಗಳನ್ನು ಬಯಲಿನಲ್ಲಿ ಮೇಯಿಸಲು ₹28,200 ಸಾಲ ಸಿಗುತ್ತದೆ.

2. ಕುರಿಮರಿಗಳಿಗೆ:

*10 ಕುರಿಮರಿಗಳನ್ನು ಕೊಬ್ಬಿಸಲು ₹13,120 ಸಾಲ ಸಿಗುತ್ತದೆ.
*20 ಕುರಿಮರಿಗಳನ್ನು ಕೊಬ್ಬಿಸಲು ₹26,200 ಸಾಲ ಸಿಗುತ್ತದೆ.

ಹಂದಿ ಮತ್ತು ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಸಾಲ ಸೌಲಭ್ಯ:

*ಹಂದಿ ಸಾಕಾಣಿಕೆ: 10 ಕೊಬ್ಬಿಸುವ ಹಂದಿಗಳನ್ನು ಸಾಕಲು ಗರಿಷ್ಠ 60,000 ರೂಪಾಯಿ ಸಾಲ ಸಿಗುತ್ತದೆ.
*ಮಾಂಸದ ಕೋಳಿ ಸಾಕಾಣಿಕೆ: 1000 ಕೋಳಿಗಳನ್ನು ಸಾಕಲು ಗರಿಷ್ಠ 80,000 ರೂಪಾಯಿ ಸಾಲ ಸಿಗುತ್ತದೆ (ಒಂದು ಕೋಳಿಗೆ 80 ರೂಪಾಯಿ).
*ಮೊಟ್ಟೆ ಕೋಳಿ ಸಾಕಾಣಿಕೆ: 1000 ಕೋಳಿಗಳನ್ನು ಸಾಕಲು ಗರಿಷ್ಠ 1,80,000 ರೂಪಾಯಿ ಸಾಲ ಸಿಗುತ್ತದೆ (ಒಂದು ಕೋಳಿಗೆ 180 ರೂಪಾಯಿ).

ಮೇಕೆ ಸಾಕಾಣಿಕೆಗೆ ಸಾಲ ಸೌಲಭ್ಯ:

*ಕಟ್ಟಿ ಮೇಯಿಸುವ ಮೇಕೆಗಳಿಗೆ 10+1 ಅಥವಾ 20+1 ಮೇಕೆಗಳ ಗುಂಪಿನಲ್ಲಿ 8 ತಿಂಗಳ ಅವಧಿಗೆ ಸಾಕಾಣಿಕೆಗೆ ₹29,250 ಅಥವಾ ₹57,200 ಸಾಲ ಸೌಲಭ್ಯ ಸಿಗಲಿದೆ.
*ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ 10+1 ಅಥವಾ 20+1 ಮೇಕೆಗಳ ಗುಂಪಿನಲ್ಲಿ 8 ತಿಂಗಳ ಅವಧಿಗೆ ಸಾಕಾಣಿಕೆಗೆ ₹14,700 ಅಥವಾ ₹28,200 ಸಾಲ ಸೌಲಭ್ಯ ಸಿಗಲಿದೆ.

ಸಾಲ ಪಡೆಯಲು ಬೇಕಾದ ದಾಖಲೆಗಳು:

*ಆರ್.ಟಿ.ಸಿ
*ಆಧಾರ್ ಕಾರ್ಡ್
*ಭಾವಚಿತ್ರ
*ಭರ್ತಿ ಮಾಡಿದ ಅರ್ಜಿ
*ಬ್ಯಾಂಕ್ ಖಾತೆ ವಿವರ

ರೈತರಿಗೆ 31-3-2024 ವರೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಸಾಲ ಪಡೆಯಲು ಅರ್ಜಿ ಸಲ್ಲಿಸಬಹುದು.

Also Read: Personal Loan: ಹೆಚ್ಚೇನೂ ಇಲ್ಲ ನೀವು ವಯಸ್ಕರಾಗಿದ್ದು ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದ್ದರೆ ಸಾಕು, ಪಡೆಯಬಹುದು ಲಕ್ಷ ಲಕ್ಷ ಹಣ.

Leave a comment