Personal loans : ಕಡಿಮೆ ಬಡ್ಡಿದರದಲ್ಲಿ ವೈಯಕ್ತಿಕ ಸಾಲ ಪಡೆಯುವುದು ಹೇಗೆ? ಲೋನ್ ತೆಗೆದುಕೊಳ್ಳುವ ಮುನ್ನ ಅನುಸರಿಸಬೇಕಾದ ವಿಷಯಗಳು !!
Personal loans: How to get a personal loan at a low interest rate? Things to follow before taking a loan!!
Personal loan: ಕೆಲವೊಮ್ಮೆ ನಮ್ಮ ವೈಯಕ್ತಿಕ ಅಗತ್ಯಗಳನ್ನು ಪೂರೈಸಲು ನಾವು ವೈಯಕ್ತಿಕ ಸಾಲವನ್ನು ಪಡೆಯಲು ಮುಂದಾಗುತ್ತೇವೆ. ಆ ನಮ್ಮ ವೈಯಕ್ತಿಕ ಅಗತ್ಯ, ಮನೆ ಖರೀದಿ ಮಾಡುವುದು, ಅಥವಾ ವಾಹನ ಖರೀದಿ ಅಥವಾ ಇನ್ನು ಯಾವುದೇ ಕೆಲಸವಾಗಿರಬಹದು.
ಇನ್ನು ಈ ಮೂಲಕ ನಮ್ಮ ಅಗತ್ಯ ವಸ್ತುಗಳನ್ನು ನಾವು ಖರೀದಿಸಬಹುದು ಅಥವಾ ಪಡೆಯಬಹುದು. ಇನ್ನು ಇಂದು ನಾವು ಕಡಿಮೆ ಇಎಂಐ (EMI )ಮೂಲಕ ನೀವು ಯಾವ ರೀತಿ ವೈಯಕ್ತಿಕ ಸಾಲವನ್ನು ಪಡೆಯಬಹುದು ಎನ್ನುವ ಬಗ್ಗೆ ಇಂದು ನಾವು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತೇವೆ, ಈ ಪುಟವನ್ನು ಪೂರ್ತಿಯಾಗಿ ಓದಿ…
ಇನ್ನು ನೀವು ಯಾವುದೇ ಬ್ಯಾಂಕ್ ನಿಂದ ವೈಯಕ್ತಿಕ ಸಾಲ ಪಡೆಯಲು ನಿರ್ಧರಿಸಿದರೆ, ಮೊದಲು ನೀವು ಯಾವ ಬ್ಯಾಂಕ್ ನಲ್ಲಿ ಸಾಲ ಪಡೆಯಬೇಕು ಎಂದಿದ್ದೀರಿ ಎನ್ನುವುದು ನಿರ್ಧರಿಸಿ. ನಂತರ ಆ ಬ್ಯಾಂಕ್ ನ ಬಡ್ಡಿ ಧರದ(Interest rate) ಬಗ್ಗೆ ಸಂಪೂರ್ಣವಾದ ವಿವರಗಳನ್ನು ತಿಳಿದುಕೊಳ್ಳಿ. ನಿಮಗೆ ಯಾವ ಬ್ಯಾಂಕ್ ನಲ್ಲಿ ಅತ್ಯಂತ ಕಡಿಮೆ ಧರದಲ್ಲಿ(low interest rate) ಬಡ್ಡಿ ವಿಧಿಸುತ್ತಾರೋ, ಆ ಬ್ಯಾಂಕ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಇನ್ನು ಎರಡನೇ ಬಹು ಮುಖ್ಯ ವಿಷಯ ಏನೆಂದರೆ, ನಿಮ್ಮ ಅವಶ್ಯಕತೆ ಎಷ್ಟು ಇದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಹಾಗೆ ನಿಮ್ಮ ಅವಶ್ಯಕತೆಗೆ ಎಷ್ಟು ಹಣ ಬೇಕೋ ಅಷ್ಟನ್ನು ಮಾತ್ರ ಬ್ಯಾಂಕ್ ನಿಂದ ಸಾಲದ ರೀತಿ ಪಡೆಯಿರಿ. ನಿಮಗೆ ಏಷ್ಟು ಹಣ ಬೇಕೋ ಅದನ್ನು ಮೊದಲೇ ಲೆಕ್ಕಾಚಾರ ಹಾಕಿ ನಂತರ ಅಷ್ಟೇ ಹಣವನ್ನು ಪಡೆಯುವುದು ಉತ್ತಮ. ಅಗತ್ಯಕ್ಕಿಂತ ಹೆಚ್ಚು ಹಣ ಪಡೆದು, ಅನಗತ್ಯವಾಗಿ ಹೆಚ್ಚು ಬಡ್ಡಿ ಪಾವತಿಸುವುದು ಸರಿಯಲ್ಲ.
ವೈಯಕ್ತಿಕ ಸಾಲಗಳು(Personal loans) ಸ್ಥಿರ ಅಥವಾ ಏರಿಳಿತದ ಬಡ್ಡಿದರಗಳೊಂದಿಗೆ(Inflation interest rate) ಲಭ್ಯವಿರಬಹುದು. ನೀವು ನಿಗದಿತ ಬಡ್ಡಿ ದರದೊಂದಿಗೆ ವೈಯಕ್ತಿಕ ಸಾಲವನ್ನು ಪಡೆದರೆ, ಲೋನ್ ಅವಧಿಯ ಮುಕ್ತಾಯದಲ್ಲಿ ನೀವು ಮರುಪಾವತಿಸಬೇಕಾದ ಮೊತ್ತದ ಬಗ್ಗೆ ನಿಮಗೆ ಮಾಹಿತಿ ಇರುತ್ತದೆ. ಅಲ್ಲದೆ, ಬಡ್ಡಿ ದರದಲ್ಲಿನ ಬದಲಾವಣೆಯನ್ನು ಅವಲಂಬಿಸಿ ನೀವು ವೇರಿಯಬಲ್ ಬಡ್ಡಿ ದರದೊಂದಿಗೆ(Variable interest rates) ವೈಯಕ್ತಿಕ ಸಾಲವನ್ನು ಹೊಂದಿದ್ದರೆ ನಿಮ್ಮ ಸಾಲ ಮರುಪಾವತಿಗಳು ಭಿನ್ನವಾಗಿರಬಹುದು. ನಿಮ್ಮ ಸಾಲದ EMI ಬಡ್ಡಿದರದ ಜೊತೆಗೆ ಹೆಚ್ಚಾಗುತ್ತದೆ. ಆದ್ದರಿಂದ ನಿಗದಿತ ಬಡ್ಡಿದರದೊಂದಿಗೆ ವೈಯಕ್ತಿಕ ಸಾಲವನ್ನು ಪಡೆಯುವುದು ಉತ್ತಮ.
ಯಾವುದೇ ಬ್ಯಾಂಕ್ ನಿಂದ ಸಾಲ ಪಡೆಯುವ ಮುನ್ನ ಆನ್ಲೈನ್ ಮೂಲಕ ನಿಮ್ಮ ಸಾಲದ ಬಡ್ಡಿಯನ್ನು ಲೆಕ್ಕ ಹಾಕುವುದು ಉತ್ತಮ. ಹೌದು ಆನಲೈನ್ ನಲ್ಲಿ ನೀವು ಇಎಂಐ ಕ್ಯಾಲ್ಕುಲೇಟರ್(EMI Calculator ) ಬಳಸಿ, ಅದರ ಮೂಲಕ ನೀವು ನಿಮ್ಮ ಇಎಂಐ ಅನ್ನು ನಿರ್ಧರಿಸಬಹುದು. ಈ ಮೂಲಕ ನೀವು ವಿವಿಧ ಸಾಲಗಳನ್ನು ಹೋಲಿಸಿ, ಕಡಿಮೆ ಬಡ್ಡಿ ಇರುವ ಸಾಲವನ್ನು ಪಡೆಯುವುದು ಉತ್ತಮ.