Gold Price: ಇಂದಿನ ಚಿನ್ನದ ದರ ಹೇಗಿದೆ ನೋಡಿ, ಒಂದು ವಾರದ ಹಿಂದೆ ನೋಡಿದರೆ ಇಂದಿನ ದರದಲ್ಲಿ ಬಾರಿ ವೆತ್ಯಾಸ.
Gold Price: Check out the latest price of gold.
Gold Price: ನಮ್ಮ ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಸಾಕಷ್ಟು ಏರಿಳಿತಗಳು ಕಂಡು ಬರುತ್ತದೆ. ಇನ್ನು ಇದೆ ಕಾರಣದಿಂದ ಮಾರುಕಟ್ಟೆಯಲ್ಲಿ ಎಲ್ಲರೂ ಇದೀಗ ಚಿನ್ನವನ್ನು ಖರೀದಿಸಲು ಲೈನ್ ನಲ್ಲಿ ನಿಂತಿದ್ದಾರೆ. ಹೌದು ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದ್ದು, ಇನ್ನು ಹಣವನ್ನು ಉಳಿಸಲು ಜನರು ಚಿನ್ನವನ್ನು ಖರೀದಿಸಲು ಮುಂದಾಗಿದ್ದಾರೆ. ಏಕೆಂದರೆ ಚಿನ್ನವನ್ನು ಖರೀದಿಸುವುದು ಒಂದು ರೀತಿಯಲ್ಲಿ ಭವಿಷ್ಯದ ಇನ್ವೆಸ್ಟ್ಮೆಂಟ್ ಎಂದರೆ ತಪ್ಪಾಗುವುದಿಲ್ಲ. ಭವಿಷ್ಯದಲ್ಲಿ ಹಣ ಕಾಸಿನ ತೊಂದರೆಯಾದಾಗ ನೀವು ಖರೀದಿಸುವ ಚಿನ್ನ ನಿಮ್ಮ ಸಹಾಯಕ್ಕೆ ಬರುತ್ತದೆ. ಇನ್ನು ನೀವು ಸಹ ಚಿನ್ನವನ್ನು ಖರೀದಿಸಲು ಯೋಚಿಸುತ್ತಿದ್ದರೆ, ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.
ಇನ್ನು ಇಂದಿನ ದಿನ ಜುಲೈ 20 2023, ಗುರುವಾರ ಭಾರತದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಪ್ರತಿ 10 ಗ್ರಾಂ ಚಿನ್ನದ ಬೆಲೆ 55,600 ಇದ್ದು, ಇನ್ನು 24 ಕ್ಯಾರೆಟ್ ಪ್ರತಿ 10 ಗ್ರಾಂ ಚಿನ್ನದ ಬೆಲೆ ಸುಮಾರು 60,650 ರೂಪಾಯಿ ಇದೆ. ಇನ್ನು ಇಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಯಾವ ರೀತಿ ಇದೆ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡುತ್ತೇವೆ, ಈ ಪುಟವನ್ನು ಪೂರ್ತಿಯಾಗಿ ಓದಿ..
ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 55,750 ಆಗಿದ್ದು, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 60,800 ಆಗಿದೆ.
ಇನ್ನು ನಮ್ಮ ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 55,600 ರೂಗಳು ಆಗಿದ್ದು, 10 ಗ್ರಾಂ 24 ಕ್ಯಾರೆಟ್‌ನ ಚಿನ್ನದ ಬೆಲೆ ಸುಮಾರು 60,650 ರೂ ಎಂದು ತಿಳಿದುಬಂದಿದೆ. ಅಲ್ಲದೆ ನಮ್ಮ ಬೆಂಗಳೂರಿನಲ್ಲಿ 1ಕೆಜಿ ಬೆಳ್ಳಿಯ ಬೆಲೆ ಸುಮಾರು 78,400 ರೂಪಾಯಿಗಳಿದೆ.
ಇನ್ನು ಮುಂಬೈ ನಗರದಲ್ಲಿ 10 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 55,600 ರೂಗಳು ಆಗಿದ್ದು, ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 60,650 ರೂಗಳು ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.₹55,900 ಇದ್ದು, ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 60,980 ಆಗಿದೆ ಎನ್ನಲಾಗುತ್ತಿದೆ.