Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Daily Horoscope: 12 ದ್ವಾದಶ ರಾಶಿಗಳ ಪೈಕಿ ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ !!

Daily Horoscope: Check your horoscope today among the 12 Dwadasa Rasis!!

ಇಂದು ಜುಲೈ 12, 2023 ಬುಧವಾರ, ಇಂದಿನ ದಿನ ಯಾವೆಲ್ಲಾ ರಾಶಿಗಳಿಗೆ ಯಾವೆಲ್ಲಾ ಫಲಗಳು ದೊರೆಯಲಿದೆ ಎನ್ನುವುದನ್ನು ತಿಳಿಯೋಣ ಬನ್ನಿ…

ಮೇಷ ರಾಶಿ: ಇಂದು ನಿಮ್ಮ ಸ್ನೇಹಿತ ಅಥವಾ ನಿಮಗೆ ಪರಿಚಯಸ್ತ ಇರುವ ವ್ಯಕ್ತಿಯ ಕಾರಣದಿಂದ ನಿಮ್ಮ ಮನಸ್ಸಿಗೆ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಇಂದಿನ ದಿನ ನೀವು ಯಾವುದೇ ಒಂದು ರೀತಿಯಲ್ಲಿ ಹಣವನ್ನು ಪಡೆದುಕೊಂಡು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳುವ ಸಾಧ್ಯತೆ ಕೂಡ ಹೆಚ್ಚಾಗಿ ಕಾಣುತ್ತಿದೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಇಂದಿನ ದಿನ ಹೆಚ್ಚಿನ ಸಮಯ ಕಳೆಯುವುದರ ಮೂಲಕ ಅವರ ಮನಸ್ಸಿಗೆ ಇನ್ನಷ್ಟು ಹತ್ತಿರವಾಗುತ್ತೀರಾ.

ವೃಷಭ ರಾಶಿ: ನೀವು ದೀರ್ಘಕಾಲದ ಅನಾರೋಗ್ಯದಿಂದ ಬಳಲುವ ಸಾಧ್ಯತೆ ಕಾಣುತ್ತಿದೆ, ನಿಮ್ಮ ಆರೋಗ್ಯದ ಕಡೆ ಕೊಂಚ ಗಮನ ಹರಿಸಿ. ಇನ್ನು ನಿಮ್ಮ ಆಪ್ತರು ಅಥವಾ ಕುಟುಂಬಸ್ಥರ ಜೊತೆಗೆ ಯಾವುದೇ ಉದ್ಯಮ ಶುರು ಮಾಡುವ ಮುನ್ನ ಹಲವು ಬಾರಿಯ ಯೋಚಿಸಿ ನಂತರ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ನಿಮ್ಮ ಕುಟುಂಬದ ಜೊತೆಗೆ ಇಂದಿನ ದಿನ ಹೆಚ್ಚಿನ ಸಮಯ ಕಳೆಯುವುದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ದೊರೆಯುತ್ತದೆ.

ಮಿಥುನ ರಾಶಿ: ಇಂದಿನ ದಿನ ಕೆಲಸದ ಒತ್ತಡದಿಂದ ನೀವು ವಿಶ್ರಮಿಸಲು ಬಯಸುತ್ತೀರಿ. ಉದ್ಯೋಗದ ಜಾಗದಲ್ಲಿ ಸಹ ನಿಮ್ಮ ಮೇಲಾಧಿಕಾರಿಗಳಿಂದ ಪ್ರಶಂಸೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಇಂದಿನ ದಿನ ಮಿಥುನ ರಾಶಿಯವರಿಗೆ ಬಹಳ ಲಾಭಕಾರಿಯಾಗಿರಲಿದೆ. ಇಂದಿನ ದಿನ ನಿಮ್ಮ ವೈವಾಹಿಕ ಜೀವನದ ಅದ್ಭುತವಾದ ದಿನ ಎಂದು ನಿನ್ನ ಮನಸ್ಸಿಗೆ ಅನಿಸುತ್ತದೆ.

ಕರ್ಕಾಟಕ ರಾಶಿ: ನಿಮ್ಮ ಮನಸ್ಸಿಗೆ ಕಿರಿಕಿರಿ ಉಂಟು ಮಾಡುವ ಜನರಿಂದ ಕೊಂಚ ದೂರ ಇರುವುದು ಉತ್ತಮ. ಇದನ್ನೇ ನೀವು ಯೋಚಿಸುತ್ತಾ ಹೋದರೆ ನೀವು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಇಂದಿನ ದಿನ ಕೊಂಚ ಎಚ್ಚರ ವಹಿಸುವುದು ಉತ್ತಮ. ಇಂದಿನ ದಿನ ಯಾವುದೇ ಕೆಲಸ ಮಾಡುವ ಮುನ್ನ ಹಲವು ಬಾರಿ ಯೋಚಿಸಿ ನಂತರ ನಿರ್ಧಾರ ತೆಗೆದುಕೊಳ್ಳಿ.

ಸಿಂಹ ರಾಶಿ: ಇಂದಿನ ದಿನ ಸಿಂಹ ರಾಶಿಯವರಿಗೆ ಬಹಳ ಮೋಜಿನ ದಿನವಾಗಿರಲಿದೆ. ಇಷ್ಟು ದಿನ ನೀವು ಪಟ್ಟ ಎಲ್ಲಾ ಕಷ್ಟಗಳಿಗೆ ಇಂದಿನ ದಿನ ಪ್ರತಿಫಲ ಸಿಗಲಿದೆ. ಕೆಲಸದ ಜಾಗದಲ್ಲಿ ಸಹ ನೀವು ಇಂದು ಒಳ್ಳೆಯ ಹೆಸರನ್ನು ತೆಗೆದುಕೊಳ್ಳಲಿದ್ದೀರಿ. ಯಾವುದೇ ಹೊಸ ಕೆಲಸಕ್ಕೆ ಕೈ ಹಾಕುವ ಮುನ್ನ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದು ನಂತರ ಮುಂದಿನ ಕ್ರಮಗಳ ಬಗ್ಗೆ ಯೋಚಿಸಿ.

ಕನ್ಯಾ ರಾಶಿ: ನಿಮಗೆ ನೀವು ಒಂಟಿ ಎನಿಸುತ್ತಿದ್ದರೆ, ನಿಮ್ಮ ಕುಟುಂಬಸ್ಥರು ಅಥವಾ ನಿಮ್ಮ ಸ್ನೇಹಿತರ ಜೊತೆಗೆ ಪಂಚ ಸಮಯ ಮಾತನಾಡುವ ಮೂಲಕ ನಿಮ್ಮ ಮನಸ್ಸಿನಲ್ಲಿ ಈ ಭಾವನೆಯನ್ನು ತೆಗೆದು ಹಾಕಿ. ಕೇವಲ ಇಂದಿನ ದಿನವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಡೆಯುವ ನಿಮ್ಮ ಈ ಭಾವನೆಯನ್ನು ಬಿಟ್ಟು, ನಿಮ್ಮ ಭವಿಷ್ಯದ ಬಗ್ಗೆ ಕೊಂಚ ಗಮನ ಹರಿಸುವುದು ಉತ್ತಮ. ನಿಮ್ಮ ಆಪ್ತರಿಗೆ ನೀವು ಕೊಂಚ ಸಮಯವನ್ನು ನೀಡುವ ಮೂಲಕ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.

ತುಲಾ ರಾಶಿ: ನೀವು ಇಂದು ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಇಂದು ನೀವು ಅತಿಯಾಗಿ ಹಣವನ್ನು ಖರ್ಚು ಮಾಡುವ ಅಥವಾ ನಿಮ್ಮ ಪರ್ಸ್ ಅನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕೆಲವರ ತಪ್ಪು ಸಲಹೆಯಿಂದ ನೀವು ನಿಮ್ಮ ವ್ಯಾಪಾರದಲ್ಲಿ ನಷ್ಟ ಕಾಣಬಹುದು. ಕೆಲಸದ ಜಾಗದಲ್ಲಿ ಇಂದು ನೀವು ಪ್ರಶಂಸೆ ಪಡೆದುಕೊಳ್ಳುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ: ಇಂದಿನ ದಿನ ನೀವು ಯಾವುದಾದರು ದೀರ್ಘ ಪ್ರಯಾಣಕ್ಕೇ ಹೋಗಲು ತಯಾರಿಗಳನ್ನು ನಡೆಸುತ್ತಿದ್ದಂತೆ ನಿಮ್ಮಲ್ಲಿ ಹೊಸ ಚೈತನ್ಯ ಸೃಷ್ಟಿಯಾಗುತ್ತದೆ. ಈ ಪ್ರಯಾಣದ ಕಾರಣದಿಂದ ನಿಮ್ಮ ಮನಸ್ಸಿಗೆ ಹಾಗು ದೇಹಕ್ಕೆ ವಿಶ್ರಾಂತಿ ಹಾಗೂ ನೆಮ್ಮದಿ ಸಿಗಲಿದೆ. ನಿಮ್ಮ ವಸ್ತುಗಳ ಬಗ್ಗೆ ಕೊಂಚ ಗಮನ ಹರಿಸುವುದು ಉತ್ತಮ, ಇಲ್ಲದೆ ಹೋದರೆ ಅವುಗಳು ಕಳ್ಳತನ ವಾಗುವ ಸಾಧ್ಯತೆ ಇದೆ.

ಧನು ರಾಶಿ: ಇಂದಿನ ದಿನ ಹಣಕಾಸಿನ ವಿಚಾರದಲ್ಲಿ ನೀವು ಎಚ್ಚರಿಕೆ ವಹಿಸುವುದು ಉತ್ತಮ. ಇಲ್ಲದೆ ಹೋದರೆ ಹಣ ಕಳುವಾಗುವ ಸಾಧ್ಯತೆ ಇದೆ. ನೀವು ಪ್ರೀತಿಸುವವರು ನಿಮಗಾಗಿ ಸಮಯ ನೀಡದೇ ಇದ್ದಲ್ಲಿ ನಿಮ್ಮ ಮನಸ್ಸಿಗೆ ಈ ವಿಷಯ ಬಹಳಷ್ಟು ನೋವುಂಟು ಮಾಡುವ ಸಾಧ್ಯತೆ ಇದೆ. ವ್ಯಾಪಾರಸ್ಥರು ಹಾಗೆ ಉದ್ಯಮಿಗಳು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಲವು ಬಾರಿ ಯೋಚಿಸುವುದು ಉತ್ತಮ.

ಮಕರ ರಾಶಿ: ಇಂದಿನ ದಿನ ನಿಮ್ಮ ಆಪ್ತರ ಸಲಹೆ ಹಾಗೂ ಅವರ ಬೆಂಬಲದಿಂದ ನೀವು ಹೊಸ ಉದ್ಯಮವನ್ನು ಶುರು ಮಾಡುವ ಸಾಧ್ಯತೆ ಇದೇ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸಹ ಸುಧಾರಿಸುವ ಸಾಧ್ಯತೆಗಳು ಹೆಚ್ಚಾಗಿ ಕಾಣುತ್ತಿದೆ. ಕೆಲಸದ ಒತ್ತಡದ ಕಾರಣದಿಂದ ನಿಮ್ಮ ಸಂಗಾತಿಗೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ಇಬ್ಬರ ನಡುವೆ ಕಿರಿಕಿರಿ ಉಂಟಾಗಬಹುದು.

ಕುಂಭ ರಾಶಿ: ಎಂತಹ ಪರಿಸ್ಥಿತಿ ಬಂದರೂ ಸಹ ನಿಮ್ಮ ತಾಳ್ಮೆಯನ್ನು ಕಳೆದುಕೊಳ್ಳಬೇಡಿ. ನಿಮ್ಮ ಅಭಿಪ್ರಾಯಗಳನ್ನು ನೇರವಾಗಿ ಎಲ್ಲರ ಮುಂದಿಡಿ. ಇಂದಿನ ದಿನ ನಿಮ್ಮ ಆತ್ಮವಿಶ್ವಾಸವನ್ನು ನೀವು ಮರಳಿ ಪಡೆದುಕೊಳ್ಳುತ್ತೀರಿ. ಕುಟುಂಬಸ್ಥರ ಜೊತೆ ಪಂಚ ಸಮಯ ಕಳೆಯುವ ಮೂಲಕ ನಿಮ್ಮ ಮನಸ್ಸಿಗೆ ಶಾಂತಿ ದೊರೆಯಲಿದೆ. ಇನ್ನು ಕೆಲಸದ ಜಾಗದಲ್ಲಿ ಕೊಂಚ ಒತ್ತಡದ ವಾತಾವರಣ ಇರಲಿದ್ದು, ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸಲು ಪ್ರಯತ್ನಿಸಿ.

ಮೀನಾ ರಾಶಿ: ನೀವು ಇಂದು ಹೆಚ್ಚಾಗಿ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ. ಇದರ ಬಗ್ಗೆ ನೀವು ಯೋಚಿಸದೆ ಹೋದರೆ ಮುಂದಿನ ದಿನಗಳಲ್ಲಿ ಇದರಿಂದ ಪಶ್ಚಾತಾಪ ಪಡುತ್ತೀರಿ. ಆಪ್ತರ ಸಲಹೆಗಳಿಂದ ನೀವು ನಿಮ್ಮ ವ್ಯಾಪಾರದಲ್ಲಿ ನಷ್ಟವನ್ನು ಕಾಣುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಬುದ್ದಿವಂತಿಕೆಯಿಂದ ಇರುವುದು ಉತ್ತಮ.

PhotoGrid Site 1689129810981

Leave a comment