Daily Horoscope: 12 ದ್ವಾದಶ ರಾಶಿಗಳ ಪೈಕಿ ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ !!
Daily Horoscope: Check your horoscope among this 12 dwadwasha rashi!...
ಇಂದು ಜುಲೈ 11, 2023 ಮಂಗಳವಾರ, ಇಂದಿನ ದಿನ ಯಾವೆಲ್ಲಾ ರಾಶಿಗಳಿಗೆ ಯಾವೆಲ್ಲಾ ಫಲಗಳು ದೊರೆಯಲಿದೆ ಎನ್ನುವುದನ್ನು ತಿಳಿಯೋಣ ಬನ್ನಿ…
ಮೇಷ ರಾಶಿ: ಉತ್ತಮವಾದ ಆಹಾರವನ್ನು ಸೇವಿಸಿ, ಇದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಇನ್ನು ಹಣದ ಕಾರಣದಿಂದ ನಿಮ್ಮ ಸಂಬಂಧಗಳು ಕೆಡುವ ಸಾಧ್ಯತೆ ಇದೆ. ಇದರ ಬಗ್ಗೆ ಕೊಂಚ ಗಮನ ಹರಿಸಿ. ಇಂದು ನಿಮ್ಮ ಮಕ್ಕಳು ನಿಮ್ಮನ್ನು ಸಂತೋಷವಾಗಿಸಲು ತಮ್ಮ ಕೈಲಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ನಿಮ್ಮ ಎಲ್ಲಾ ಸಮಸ್ಯೆಗಳು ಒಂದೊಂದಾಗಿ ಶೀಘ್ರದಲ್ಲೇ ನಿವಾರಣೆಯಾಗಲಿದೆ.
ವೃಷಭ ರಾಶಿ: ಇಂದು ನಿಮಗೆ ನಿಮ್ಮ ಬಾಲ್ಯದ ನೆನಪುಗಳು ಕಾಡುತ್ತದೆ. ಇನ್ನು ಈ ರಾಶಿಯ ಕೆಲವು ನಿರುದ್ಯೋಗಿಗಳಿಗೆ ಇಂದು ಕೆಲಸ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ನಿಮ್ಮ ಆರ್ಥಿಕ ಪರಿಸ್ಥಿತಿ ಹಂತ ಹಂತವಾಗಿ ಸುಧಾರಿಸುತ್ತಿದ್ದು, ನಿಮ್ಮ ಎಲ್ಲಾ ಕಷ್ಟಗಳು ದೂರವಾಗಿ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಲಿದ್ದೀರಿ.
ಮಿಥುನ ರಾಶಿ: ನಿಮ್ಮ ಭಾವನೆಗಳನ್ನು ನಿಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಿ, ಇಲ್ಲವಾದರೆ ಇದರಿಂದ ನೀವು ಸಮಸ್ಯೆಗಳಿಗೆ ಸಿಲುಕುತ್ತೀರಿ. ಇಂದು ಹಣವನ್ನು ಮಿತಿ ಮೀರಿ ಕರ್ಚು ಮಾಡುವುದನ್ನು ಮಾಡಬೇಡಿ. ಹಣವನ್ನು ಉಳಿಸಲು ಪ್ರಯತ್ನಿಸಿ. ಇಂದಿನ ದಿನ ನಿಮ್ಮ ಸಂಗಾತಿಯ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯಲು ಪ್ರಯತ್ನಿಸಿ, ಈ ಮೂಲಕ ನಿಮ್ಮ ವೈವಾಹಿಕ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.
ಕರ್ಕಾಟಕ ರಾಶಿ: ಬೇರೆಯವರ ಕೆಲಸಗಳಲ್ಲಿ ನಿಮ್ಮ ಸಲಹೆಗಳನ್ನು ನೀಡದೆ ಇರುವುದು ಉತ್ತಮ. ನಿಮ್ಮ ಕೆಲಸಗಳ ಮೇಲೆ ಗಮನ ಹರಿಸಿ. ಮುಂದಿನ ದಿನಗಳಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರಬೇಕೆಂದರೆ ಇಂದಿನಿಂದಲೇ ಹಣವನ್ನು ಉಳಿಸಿ. ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಬೇರೆಯವರೊಂದಿಗೆ ಚರ್ಚಿಸುವುದನ್ನು ತಪ್ಪಿಸಿ.
ಸಿಂಹ ರಾಶಿ: ಇಂದು ನಿಮ್ಮ ಕೋಪ, ದ್ವೇಷ, ಅಸೂಯೆ ಇಂತಹ ನಕಾರಾತ್ಮಕ ಭಾವನೆಗಳಿಂದ ಕೊಂಚ ನಿಮ್ಮನ್ನು ನೀವು ತಡೆದಿಟ್ಟುಕೊಳ್ಳಿ. ನಿಮ್ಮ ಸಂಬಂಧಿಕರ ಜೊತೆಗೆ ಹಣದ ವಿಷಯದಲ್ಲಿ ಕೊಂಚ ಎಚ್ಚರಿಕೆ ವಹಿಸಿ. ಇನ್ನು ನಿಮ್ಮ ಮನೆಯನ್ನು ಸುಂದರವಾಗಿರಿಸಲು ಪ್ರಯತ್ನಿಸಿ. ನಿಮ್ಮ ಸಂಗಾತಿಯ ಕಾರಣದಿಂದ ಇಂದು ನೀವು ಕೊಂಚ ನಷ್ಟವನ್ನು ಅನುಭವಿಸಬಹುದು.
ಕನ್ಯಾ ರಾಶಿ: ಯೋಗ ಮತ್ತು ಧ್ಯಾನ ಮಾಡುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ. ಇಂದಿನ ದಿನದ ಕೊನೆಯಲ್ಲಿ ನೀವು ಹಣವನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಸಂಗಾತಿ ಇಂದು ನೀವು ಸಂತೋಷ ಪಡೆಯುವಂತಹ ಕೆಲಸವನ್ನು ಮಾಡುತ್ತಾರೆ. ನೀವು ಕೆಲವರ ಜೊತೆಗೆ ಇರುವಾಗ ನಿಮಗೆ ಸಂಕೋಚ ಎನಿಸಿದರೆ ಅಂತಹ ಜನರಿಂದ ದೂರ ಉಳಿಯುವುದು ಉತ್ತಮ. ಇಂದಿನ ದಿನ ನಿಮಗೆ ಕೊಂಚ ಲಾಭದಾಯಕವಾಗಿರಲಿದೆ.
ತುಲಾ ರಾಶಿ: ನಿಮ್ಮ ಮನಸ್ಸಿಗೆ ಸಂತೋಷ ಕೊಡುವ ಕೆಲಸಗಳನ್ನು ಮಾಡಲು ಇಂದಿನ ದಿನ ಅದಕ್ಕಾಗಿ ಹೆಚ್ಚಿನ ಸಮಯವನ್ನು ಮೀಸಲಿಡಿ. ರಿಯಲ್ ಎಸ್ಟೇಟ್ ಹೂಡಿಕೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಲಾಭ ಪಡೆಯಬಹುದು. ಕೆಲಸದಲ್ಲಿ ಕೊಂಚ ಒತ್ತಡವನ್ನು ಎದುರಿಸುತ್ತೀರಿ. ನಿಮ್ಮ ಸಂಗಾತಿಯ ಜೊತೆಗೆ ಅತ್ಯುತ್ತಮವಾದ ದಿನವಾಗಿರಲಿದೆ.
ವೃಶ್ಚಿಕ ರಾಶಿ: ಇಂದು ನಿಮ್ಮ ಕೋಪದ ಮೇಲೆ ಕೊಂಚ ಹಿಡಿತವಿರಲಿ. ಕೋಪದ ಕಾರಣದಿಂದ ನಿಮ್ಮ ಸಂಬಂಧಗಳು ಕೆಡುವ ಸಾಧ್ಯತೆ ಇದೆ. ಮುಂದಿನ ದಿನಗಳಿಗಾಗಿ ಇಂದಿನಿಂದಲೇ ಹಣವನ್ನು ಕೂಡಿಸಿಡಿ, ಇಲ್ಲವಾದರೆ ಮುಂದಿನ ದಿನಗಳಲ್ಲಿ ನಿಮಗೆ ಕಷ್ಟವಾಗಬಹುದು. ಇಂದು ಕೊಂಚ ಜಾಗರೂಕತೆಯಿಂದ ಇರಿ, ನೀವು ಮಾಡುವ ಕೆಲಸಕ್ಕೆ ಬೇರೆಯವರು ಗೌರವ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇಂದು ಆಧ್ಯಾತ್ಮಕ ಪುಸ್ತಕಗಳನ್ನು ಓದಲು ಪ್ರಯತ್ನಿಸಿ, ಈ ಮೂಲಕ ನಿಮ್ಮ ಅನೇಕ ಸಮಸ್ಯೆಗಳನ್ನು ನೀವು ಪರಿಹರಿಸಿಕೊಳ್ಳಬಹುದು.
ಧನು ರಾಶಿ: ನಿಮ್ಮ ಯಾವ ಕೆಲಸದಲ್ಲಿ ಸಹ ಈ ವಾರ ಅಷ್ಟಾಗಿ ಪ್ರಗತಿ ಕಾಣುವುದಿಲ್ಲ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಸಹ ಅದು ಬಹಳ ನಿಧಾನವಾಗಿ ಪಲಿತಾಂಶ ನೀಡುತ್ತದೆ. ಇನ್ನು ವಾಹನಗಳಿಂದ ಹಾಗೂ ವಿಧ್ಯುತ್ ಸಂಬಂಧಿತ ವಸ್ತುಗಳಿಂದ ನಿಮಗೆ ಖರ್ಚು ಬರುವ ಸಾಧ್ಯತೆ ಇದೆ. ಇನ್ನು ಭೂಮಿಗೆ ಸಂಬಂಧಿಸಿದ ಯಾವುದೇ ಕೆಲಸಕ್ಕೆ ನೀವು ಕೈ ಹಾಕದೆ ಇರುವುದು ಉತ್ತಮ.
ಮಕರ ರಾಶಿ: ಇಂದಿನ ದಿನ ನೀವು ಕೈ ಹಾಕುವ ಎಲ್ಲಾ ಕೆಲಸಗಳಲ್ಲಿ ಮೇಲು ಗೈ ಸಾಧಿಸುತ್ತೀರಿ. ನಿಮ್ಮ ಕೆಲವು ಕಠಿಣ ಮಾತುಗಳಿಂದ ನೀವು ನಿಮ್ಮ ಪ್ರೀತಿ ಪಾತ್ರರ ಮನಸ್ಸನ್ನು ನೋವಿಸಬಹುದು. ಇನ್ನು ನಿಮ್ಮ ಆರೋಗ್ಯದಲ್ಲಿ ಸಹ ಇಂದು ನೀವು ಕೊಂಚ ಚೇತರಿಕೆ ಕಾಣುತ್ತೀರಿ. ಜೊತೆಗೆ ಇಂದು ನೀವು ಕೆಲವು ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಹಾಗೆ ಬಹಳ ದಿನಗಳ ನಂತರ ನಿಮ್ಮ ಕುಟುಂಬದವರ ಜೊತೆಗೆ ಉತ್ತಮವಾದ ಸಮಯ ಕಳೆಯುತ್ತಿರಿ.
ಕುಂಭ ರಾಶಿ: ಇಂದಿನ ದಿನ ನಿಮ್ಮ ಮನೆಯ ಮಕ್ಕಳು ಮನೆಯಲ್ಲಿ ಶಾಂತಿಯುತ ವಾತಾವರಣವನ್ನು ನಿರ್ಮಿಸುತ್ತಾರೆ, ಈ ಕಾರಣದಿಂದ ಪೋಷಕರಿಗೆ ಮಕ್ಕಳ ಮೇಲೆ ಬಹಳಷ್ಟು ಹೆಮ್ಮೆ ಉಂಟಾಗುತ್ತದೆ. ಹಣಕಾಸಿನ ವಿಷಯಕ್ಕೆ ಬಂದರೆ, ಇಂದಿನ ದಿನ ನೀವು ಅಂದುಕೊಂಡ ಎಲ್ಲಾ ಕೆಲಸಗಳು ಸರಳವಾಗಿ ನಡೆಯಲಿದೆ. ಸಂಬಂಧಿಕರಿಂದ ಸಹ ಇಂದು ನೀವು ಬೆಂಬಲವನ್ನು ಕಾಣುತ್ತೀರಿ. ಅಲ್ಲದೆ ಇಂದು ಹೊಸ ವಸ್ತುಗಳನ್ನು ಖರೀದಿ ಮಾಡುವ ಯೋಗ ಈ ರಾಶಿಯವರಿಗೆ ಇದೆ
ಮೀನಾ ರಾಶಿ: ಇಂದಿನ ದಿನ ನೀವು ನಿಮ್ಮ ಸ್ನೇಹಿತರ ಜೊತೆಗೆ ಪ್ರವಾಸಕ್ಕೆ ತೆರಳುವ ಯೋಜನೆಗಳನ್ನು ಮಾಡಲಿದ್ದಿರಿ. ಇಂದು ನೀವು ಬಿಡುವಿಲ್ಲದ ಕೆಲಸಗಳಲ್ಲಿ ತೊಡಗಿ ಆಯಾಸ ಪಡುತ್ತೀರಿ. ನೀವು ಯಾವುದಾದರೂ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಅದರ ಬಗ್ಗೆ ಸಂಪೂರ್ಣವಾಗಿ ತಿಳಿದು ನಂತರ ಅದರ ಬಗ್ಗೆ ಸರಿಯಾಗಿ ಚರ್ಚಿಸಿ ನಂತರ ಹೂಡಿಕೆ ಮಾಡುವುದು ಉತ್ತಮ. ಇನ್ನು ಸಂಜೆಯ ವೇಳೆ ನಿಮ್ಮ ಸ್ನೇಹಿತರೊಂದಿಗೆ ಬಹಳ ಸಂತೋಷವಾದ ಸಮಯವನ್ನು ಕಳೆಯುತ್ತಿರಿ. ಇನ್ನು ನಿಮ್ಮ ಬಗ್ಗೆ ನೀವೇ ಕೊಂಚ ಯೋಚಿಸಿ, ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಇದು ಬಹಳ ಉತ್ತಮವಾದ ದಿನ.