Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಪ್ರತಿದಿನ ಬೆಳಗ್ಗೆ ತಪ್ಪದೆ ಪಾಲಿಸಬೇಕಾದ ನಿಯಮಗಳು..!!

Rules to be followed every morning without fail..!!

ಪ್ರತಿನಿತ್ಯ ದೈನಂದಿನ ಜೀವನದಲ್ಲಿ ಎದ್ದ ನಂತರ ಮಾಡುವ ಕೆಲಸಗಳ ಮೇಲೆ ನಮ್ಮ ಯಶಸ್ಸು ಅವಲಂಬಿತವಾಗಿರುತ್ತದೆ. ನಾವು ಬೆಳಗ್ಗೆ ಎದ್ದ ನಂತರ ಎಷ್ಟು ಆತ್ಮವಿಶ್ವಾಸದಿಂದ ಇರುತ್ತೇವೆ ಅದೇ ರೀತಿ ದಿನ ಪೂರ್ತಿ ಇರುತ್ತದೆ. ಇದನ್ನೇನಾದರೂ ನಾವು ಅಭ್ಯಾಸ ಮಾಡಿಕೊಂಡರೆ ನಮ್ಮ ಜೀವನ ಕೂಡ ಸಕ್ಸಸ್ಫುಲ್ ಆಗುತ್ತದೆ. ಬೆಳಿಗ್ಗೆ ನಾವು ಎದ್ದ ನಂತರ ಮಾಡುವ ಕೆಲಸಗಳನ್ನು ಬದಲಾಯಿಸಿಕೊಂಡರೆ ನಾವು ನಮ್ಮ ಜೀವನದಲ್ಲಿ ತುಂಬಾನೇ ಬದಲಾವಣೆಗಳನ್ನು ಕಾಣಬಹುದು. ಹಾಗಾದರೆ ಆ ಅಭ್ಯಾಸಗಳು ಯಾವುದೋ ಮತ್ತು ಅವುಗಳನ್ನು ಹೇಗೆ ಪಾಲಿಸಬೇಕು ಎಂದು ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ಮೊದಲಿಗೆ ನಾವು ನಮ್ಮ ದೇಹದಲ್ಲಿರುವ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದರೆ ಆ ದಿನವನ್ನು ನಾವು ಬಹಳ ಶಾಂತಿಯುತವಾಗಿ ಶುರು ಮಾಡಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ನಾವು ದಿನಪೂರ್ತಿ ಚುರುಕಾಗಿ ಇರುತ್ತೇವೆ. ನಾವು ಪ್ರತಿದಿನ ಬೆಳಗ್ಗೆ ಎದ್ದ ನಂತರ ಮೆಡಿಟೇಶನ್ ಅಥವಾ ಕಣ್ಣು ಮುಚ್ಚಿ ಸ್ವಲ್ಪ ಸಮಯ ಕುಳಿತುಕೊಂಡರೆ ಅದರಿಂದ ಸಾಕಷ್ಟು ರೀತಿಯ ಪ್ರಯೋಜನಗಳಿವೆ. ತುಂಬಾ ಜನ ದೊಡ್ಡ ದೊಡ್ಡ ವಿಜ್ಞಾನಿಗಳು ಬೆಳಿಗ್ಗೆ ಈ ರೀತಿ ಮಾಡುವುದರಿಂದ ಅವರು ಸಕ್ಸಸ್ ಕೊಂಡಿದ್ದಾರೆ.

ನೀವು ಕೂಡ ಬೆಳಗ್ಗೆ ಎದ್ದ ನಂತರ ಸ್ವಲ್ಪ ಸಮಯ ಮೆಡಿಟೇಶನ್ ಮಾಡುವುದರಿಂದ ಆ ಬದಲಾವಣೆಗಳನ್ನು ನಿಮ್ಮ ಜೀವನದಲ್ಲಿ ನೀವು ನೋಡಬಹುದು. ಪ್ರತಿದಿನ ಬೆಳಗ್ಗೆ ನಾವು ಸ್ವಲ್ಪ ಸಮಯ ಸೈಲೆಂಟಾಗಿ ಕೂರುವುದ್ರಿಂದ ಪರಿಸರದ ಜೊತೆಗೆ ನಾವು ಸೇರಿಕೊಳ್ಳುತ್ತೇವೆ. ಇದರಿಂದ ನಮ್ಮ ಆತ್ಮವಿಶ್ವಾಸವು ಸಹ ಜಾಸ್ತಿ ಆಗುತ್ತದೆ. ನೀವು ಜೀವನದಲ್ಲಿ ಏನಾಗಬೇಕು ಎಂದು ಅಂದುಕೊಂಡಿದ್ದೀರಾ ಅದಕ್ಕಾಗಿ ನೀವು ಏನು ಮಾಡಬೇಕು ಎಂದು ಅಂದುಕೊಂಡಿದ್ದೀರಾ ಅಂತಹ ವಿಷಯಗಳನ್ನು ನಿಮ್ಮಲ್ಲಿ ನೀವೇ ಹೇಳಿಕೊಳ್ಳುತ್ತಾ ಇರಬೇಕು. ಇದರಿಂದ ನಿಮ್ಮ ಸಬ್ ಕಾನ್ಶಿಯಸ್ ಮೈ ನೀವು ಹೇಳುತ್ತಿರುವ ವಿಷಯವನ್ನು ತೆಗೆದುಕೊಂಡು ನೀವು ಅದಕ್ಕೆ ಮಾಡಬೇಕಾದ ಬುದ್ಧಿಶಕ್ತಿ ಹಾಗೂ ಶಕ್ತಿಯನ್ನು ನಿಮಗೆ ಕೊಡುತ್ತದೆ.

ಇನ್ನೊಂದು ವಿಶೇಷ ವಿಷಯವೇನೆಂದರೆ ನೀವು ಯೋಚನೆ ಮಾಡುತ್ತಿರುವ ವಿಷಯದ ಬಗ್ಗೆ ನಿಮ್ಮ ಇಮ್ಯಾಜಿನೇಷನ್ನಿಂದ ನೀವೇ ಬಹಳ ವಿಚಿತ್ರವಾಗಿ ಕಲ್ಪನೆ ಮಾಡಿಕೊಳ್ಳುವುದು. ನಾವು ಏನನ್ನು ಸಾಧನೆ ಮಾಡಬೇಕು ಎಂದು ಅಂದುಕೊಳ್ಳುತ್ತಿರುತ್ತೇವೆ ಅದನ್ನು ನಾವು ಸಾಧನೆ ಮಾಡಿರುವ ತರಹ ಇಮ್ಯಾಜಿನೇಷನ್ ಮಾಡಿಕೊಳ್ಳಬೇಕು. ಪ್ರತಿದಿನ ಬೆಳಿಗ್ಗೆ ಎದ್ದ ನಂತರ ನಾವು ಏನನ್ನು ಸಾಧನೆ ಮಾಡಬೇಕು ಎಂದು ಅಂದುಕೊಳ್ಳುತ್ತಿರುತ್ತೇವೆ ಅದನ್ನು ನಾವು ಒಂದು ಬಾರಿ ನಮ್ಮ ಕಣ್ಣ ಮುಂದೆ ನೆನಪು ಮಾಡಿಕೊಂಡರೆ ನಮಗೆ ಸಾಕಷ್ಟು ಶಕ್ತಿ ಬರುತ್ತದೆ ಮತ್ತು ಉತ್ಸಾಹ ಬರುತ್ತದೆ.

ಪ್ರತಿದಿನ ಬೆಳಿಗ್ಗೆ ಎದ್ದು ವ್ಯಾಯಾಮ ಮಾಡುವುದರಿಂದ ಉತ್ಸಾಹ ಬರುತ್ತದೆ ಜೊತೆಗೆ ಬೆಳಿಗ್ಗೆ ಎದ್ದ ನಂತರ ಸ್ವಲ್ಪ ವ್ಯಾಯಾಮ ಹಾಗೂ ವಾಕಿಂಗ್ ಮಾಡುವುದರಿಂದ ನಮ್ಮ ದೇಹದಲ್ಲಿ ರಕ್ತ ಸಂಚಾಲನ ಸರಿಯಾದ ಕ್ರಮದಲ್ಲಿ ಆಗುತ್ತದೆ ಮತ್ತು ನಮಗೆ ಬೇಕಾದ ಪಾಸಿಟಿವ್ ಎನರ್ಜಿ ಸಿಗುತ್ತದೆ. ಇದನ್ನು ನಾವು ಪ್ರತಿದಿನ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಆರೋಗ್ಯ ಬಹಳ ತುಂಬಾನೇ ಚೆನ್ನಾಗಿರುತ್ತದೆ.

ಆಗ ನಮ್ಮಲ್ಲಿ ನಮಗೆ ಆತ್ಮವಿಶ್ವಾಸ ಜಾಸ್ತಿ ಆಗುತ್ತದೆ ನಾವು ತೆಗೆದುಕೊಳ್ಳುವ ನಿರ್ಧಾರ ಯಾವಾಗಲೂ ಸರಿಯಾಗಿ ಇರುತ್ತದೆ. ಆದಕಾರಣ ಪ್ರತಿದಿನ ಬೆಳಗ್ಗೆ ಸ್ವಲ್ಪ ಸಮಯದ ಕಾಲ ವ್ಯಾಯಾಮ ಮಾಡಬೇಕಾಗುತ್ತದೆ. ನಮ್ಮ ದೇಹಕ್ಕೆ ವ್ಯಾಯಾಮ ಎಷ್ಟು ಮುಖ್ಯ ನಮ್ಮ ಮೆದುಳಿಗೆ ಓದುವುದು ಸಹ ಅಷ್ಟೇ ಮುಖ್ಯ. ಪ್ರತಿದಿನ ಬೆಳಿಗ್ಗೆ ಸ್ವಲ್ಪ ಸಮಯ ಕಾಲ ನೀವು ಓದಿದರೆ ಜ್ಞಾನದ ಜೊತೆಗೆ ಜೀವನದಲ್ಲಿ ನೀವು ಅಂದುಕೊಂಡಿರುವ ಯಶಸ್ಸಿನ ಕಡೆ ಹೋಗುವ ದಾರಿ ಸಹ ನಿಮಗೆ ಸಿಗುತ್ತದೆ.

ಅದಕ್ಕಾಗಿ ಪ್ರತಿದಿನ ಬೆಳಿಗ್ಗೆ ನ್ಯೂಸ್ ಪೇಪರ್ ಅಥವಾ ಯಾವುದೋ ಒಂದು ಬುಕ್ಕನ್ನು ನೀವು ಸ್ವಲ್ಪ ಸಮಯದ ಕಾಲ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಂತರ ನೀವು ಪ್ರತಿದಿನ ಬೆಳಿಗ್ಗೆ ನಿಮ್ಮ ಐಡಿಯಾಗಳನ್ನು ನಿಮ್ಮ ಫೀಲಿಂಗ್ಸ್ಗಳನ್ನು ನಿಮ್ಮ ಯೋಚನೆಗಳನ್ನು ಒಂದು ಡೈರಿಯಲ್ಲಿ ಬರೆದಿಡುವುದು ತುಂಬಾನೇ ಒಳ್ಳೆಯದು ಇದರಿಂದ ನಾವು ಏನೆಲ್ಲಾ ಕಲಿತಿದ್ದೇವೆ ಹಾಗೂ ಏನೆಲ್ಲಾ ತಪ್ಪುಗಳನ್ನು ಮಾಡುತ್ತಿದ್ದೇವೆ ಅಂತ ಸ್ವತಹ ನಾವೇ ಕ್ಯಾಲ್ಕುಲೇಟ್ ಮಾಡಿಕೊಳ್ಳಬಹುದು. ಇದರಿಂದಾಗಿ ನಾವು ಮಾಡುತ್ತಿರುವ ಸಾಕಷ್ಟು ತಪ್ಪುಗಳ ಬಗ್ಗೆ ನಮ್ಮಯ ಕ್ಲಾರಿಟಿ ಸಿಗುತ್ತದೆ.

ನೀವು ಈ ಅಭ್ಯಾಸಗಳನ್ನು ಮಾಡಬೇಕು ಹಾಗೂ ಇದರಿಂದ ಸಿಗುವ ಲಾಭಗಳನ್ನು ನೀವು ಅನುಭವಿಸಬೇಕು ಎಂದುಕೊಂಡರೆ ನಿಮಗೆ ಯಾವ ರೀತಿ ಅನುಕೂಲಕರವಾಗಿರುತ್ತದೆ ಅದೇ ರೀತಿ ಅಭ್ಯಾಸಗಳನ್ನು ಪಾಲಿಸಿ. ನೀವು ಈ ಅಭ್ಯಾಸಗಳನ್ನು ಕನಿಷ್ಠ 10 ನಿಮಿಷ ಆದರೂ ಮಾಡಬಹುದು ಅಥವಾ 60 ನಿಮಿಷ ಆದರೂ ಸಹ ಮಾಡಬಹುದು. ನೀವು ಪ್ರತಿದಿನ ಬೆಳಿಗ್ಗೆ ವ್ಯಾಯಾಮ ಅತಿ ಹೆಚ್ಚು ಸಮಯ ಮಾಡುತ್ತೀರಿ ಎಂದುಕೊಂಡರೆ ಅದನ್ನೇ ಮಾಡಬಹುದು. ಈ ಅಭ್ಯಾಸಗಳನ್ನು ನೀವು ಬರಬರಿ 30 ದಿನಗಳ ಕಾಲ ಪಾಲಿಸಿದರೆ ಇದರಿಂದ ಸಿಗುವ ಪ್ರಯೋಜನಗಳು ನಿಮಗೆ ಗೊತ್ತಾಗುತ್ತದೆ…
PhotoGrid Site 1690206880391

Leave a comment