Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಚಿಕ್ಕ ಸೊಳ್ಳೆ ಗುಂಗುರು ನೋಣ ಯಾವುದು ಕೂಡ ನಿಮ್ಮ ಅಡುಗೆ ಮನೆಯಲ್ಲಿ ಇರುವುದಿಲ್ಲ ಇದನ್ನು ಬಳಸಿದರೆ..!!

If you use this, you won't have any small mosquito gnats in your kitchen..!!

ಸಾಮಾನ್ಯವಾಗಿ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ನೊಣಗಳು ಸೊಳ್ಳೆಗಳು ಜಿರಳೆಗಳು ಇವು ಇದ್ದೇ ಇರುತ್ತದೆ. ಆದರೆ ನಾವುಗಳು ಇವುಗಳನ್ನು ಓಡಿಸಲು ಅನೇಕ ರೀತಿಯ ಹಿಟ್ ಇನ್ನು ಮುಂತಾದ ಲಕ್ಷ್ಮಣರೇಕೆ ಇವುಗಳನ್ನೆಲ್ಲ ನಾವು ಉಪಯೋಗಿಸುತ್ತೇವೆ, ಆದರೂ ಸಹ ಅವುಗಳು ಬರುವುದನ್ನು ಮಾತ್ರ ಬಿಡುವುದಿಲ್ಲ. ಹಾಗಾದರೆ ಅಡುಗೆ ಮನೆಯಲ್ಲಿ ಹಾರಾಡುವ ನೊಣಗಳು ಚಿಟ್ಟೆಗಳು ಸಣ್ಣ ಸಣ್ಣ ಗುಂಗುರು ಹುಳಗಳನ್ನು ನಾವು ಮನೆಯಲ್ಲಿಯೇ ತಯಾರು ಮಾಡಿದ ಔಷಧಿಯಿಂದ ಹೋಗಲಾಡಿಸುವುದು ಹೇಗೆ ಎಂದು ತಿಳಿಯೋಣ ಬನ್ನಿ.

ಮನೆಯಲ್ಲಿ ಯಾವುದಾದರು ಒಂದು ಹಣ್ಣು ಅಥವಾ ತರಕಾರಿಗಳನ್ನು ಓಪನ್ ಮಾಡಿ ಇಟ್ಟರೆ ಸಾಕು ಅದರ ಮೇಲೆಲ್ಲಾ ಬಂದು ಸಣ್ಣ ಸಣ್ಣ ಚಿಟ್ಟೆಗಳು ಕೋರುತ್ತವೆ. ಮೊದಲಿಗೆ ನೀವು ಮಾಡಬೇಕಾಗಿರುವುದು ಏನೆಂದರೆ ಒಂದು ಬಾಟಲ್ ತೆಗೆದುಕೊಂಡು ಅದಕ್ಕೆ ಅರ್ಧದಷ್ಟು ನೀರನ್ನು ಹಾಕಿ. ನೀರು ಬಾಟಲ್ ನ ಅರ್ಧಕ್ಕೆ ಇರಬೇಕು ಜಾಸ್ತಿನೂ ಇರಬಾರದು ಕಮ್ಮಿಯೂ ಇರಬಾರದು, ಅದಕ್ಕೆ ಲಿಕ್ವಿಡ್ ಸೋಪ್ ಹಾಕಿ ನೀವು ಯಾವುದೇ ರೀತಿಯಲ್ಲಿ ಲಿಕ್ವಿಡ್ ಸೋಪ್ ಹಾಕುವಾಗ ಅದರಲ್ಲಿ ಅತಿ ಹೆಚ್ಚಾಗಿ ಸೋಪಿನ ವಾಸನೆ ಬರಬಾರದು.

ಇದಕ್ಕೆ ನೀವು ಕೇವಲ ಮೂರು ಡ್ರಾಪ್ ಲಿಕ್ವಿಡ್ ಸೋಪ್ ಹಾಕಿದರೆ ಸಾಕು. ನಂತರ ಇದಕ್ಕೆ ನೀವು ಎರಡು ಚಮಚದಷ್ಟು ಸಕ್ಕರೆ ಹಾಕಿಕೊಳ್ಳಿ. ಚೆನ್ನಾಗಿ ಹಣ್ಣಾಗಿರುವ ಬಾಳೆಹಣ್ಣನ್ನು ಕಟ್ ಮಾಡಿ ಹಾಕಿಕೊಳ್ಳಬೇಕು. ನೀವು ಯಾವ ಹಣ್ಣನ್ನು ಬೇಕಾದರೂ ಹಾಕಬಹುದು ಆದರೆ ಬಾಳೆಹಣ್ಣನ್ನು ಹಾಕಿದರೆ ಬೆಸ್ಟ್ ಎಂದು ಹೇಳಬಹುದು. ನಂತರ ನೀವು ನಿಮ್ಮ ಮನೆಯಲ್ಲಿ ಹಾಳಾಗಿರುವ ಟಮೊಟೊ ಇದ್ದರೆ ಅದನ್ನು ಕೂಡ ಸೇರಿಸಿಕೊಳ್ಳಬಹುದು.

ನಂತರ ನೀವು ಅದಕ್ಕೆ ಒಂದು ಪ್ಲಾಸ್ಟಿಕ್ ಮುಚ್ಚಳವನ್ನು ಹಾಕಿ ಮುಚ್ಚಿಡಬೇಕು. ನಂತರ ನೀವು ಅದಕ್ಕೆ ಸಣ್ಣ ಸಣ್ಣ ತೂತುಗಳನ್ನು ಮಾಡಬೇಕು ಅದು ಎಷ್ಟಿರಬೇಕು ಎಂದರೆ ಸೊಳ್ಳೆ ಅಥವಾ ನೊಣಗಳು ಒಳಗಡೆ ಹೋಗುವಷ್ಟು ಮಾತ್ರ ಇರಬೇಕು. ಈಗ ನೀವು ಸೊಳ್ಳೆಗಳು ಎಲ್ಲೆಲ್ಲಿ ಜಾಸ್ತಿ ಹಾರಾಡುವ ಜಾಗ ಇರುತ್ತದೆ ಅಲ್ಲೆಲ್ಲ ಇದನ್ನು ನೀವು ಇಡಬೇಕು. ನೀವು ಇದನ್ನು ಇಡುವುದರಿಂದ ಇದರಲ್ಲಿರುವ ಅಣ್ಣಯ್ಯ ವಾಸನೆಗೆ ಅವು ಬಿದ್ದು ಒಳಗಡೆ ಹೋಗುತ್ತದೆ ಇದು ಸೋಪ್ ನೀರು ಆಗಿರುವುದರಿಂದ ಇದರಲ್ಲಿ ಸರ್ಫೇಸ್ ಟೆನ್ಶನ್ ಕಡಿಮೆ ಇರುತ್ತದೆ.

ಆಗ ಸೊಳ್ಳೆಗಳು ಇದರಿಂದ ಆಚೆ ಬರುವುದಕ್ಕೆ ಆಗುವುದಿಲ್ಲ ಈ ರೀತಿಯಾಗಿ ನಿಮ್ಮ ಅಡುಗೆ ಮನೆಯಲ್ಲಿ ಎಷ್ಟೇ ರೀತಿಯ ಸೊಳ್ಳೆಗಳಿದ್ದರೂ ಎಲ್ಲವೂ ಇದರಲ್ಲಿ ಸಿಲುಕಿಕೊಳ್ಳುತ್ತದೆ. ಇದನ್ನು ನೀವು ಇಟ್ಟ ತಕ್ಷಣ ಸೊಳ್ಳೆಗಳು ಅದರ ಒಳಗಡೆ ಹೋಗುವುದಿಲ್ಲ ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
PhotoGrid Site 1690208295404

Leave a comment