ಈ ರಾಶಿಯವರು ಸ್ವಲ್ಪ ಜಾಗೃತರಾಗಿದ್ದಾರೆ ಒಳ್ಳೆಯದು, ಅಧಿಕ ಮಾಸದಲ್ಲಿ ಶನಿ ಕಾಟ ಹೆಚ್ಚಾಗುವ ಸಾಧ್ಯತೆಗಳಿವೆ.
It is good that this Rashi is a bit conscious, there are chances of Shani Kata increasing during Leap Moon.
ಶನಿ ಗ್ರಹವು ಯಾರ ರಾಶಿ ಪ್ರವೇಶಿಸುತ್ತದೆಯೋ ಅವರ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ. ನಿಮ್ಮ ಕೆಲಸಗಳ ಆಧಾರದ ಮೇಲೆ ನಿಮ್ಮ ಫಲುಗಳನ್ನು ಶನಿ ದೇವರು ನೀಡುತ್ತಾರೆ. ಇನ್ನು ಇದೀಗ ಪ್ರಸ್ತುತ ಶನಿ ದೇವರು ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾರೆ. ಇನ್ನು ಇದೀಗ ಅಧಿಕ ಮಾಸ ಪ್ರಾರಂಭವಾಗಿದ್ದು, ಈ ಐದು ರಾಶಿಯವರ ಮೇಲೆ ಶನಿ ದೇವರ ವಕ್ರ ದೃಷ್ಟಿ ಬೀಳಲಿದೆ. ಹೌದು ಈ ಐದು ರಾಶಿಯವರು ಇನ್ನು ಮುಂದೆ ಕೊಂಚ ಜಾಗರೂಕತೆ ಇರಬೇಕು. ಏಕೆಂದರೆ ಈ ಐದು ರಾಶಿಯವರ ಅ ಶುಭ ದಿನಗಳು ಪ್ರಾರಂಭವಾಗಲಿದೆ. ಹಾಗಾದರೆ ಆ ಐದು ರಾಶಿ ಯಾವುವು ಎನ್ನುವುದನ್ನು ನೋಡೋಣ ಬನ್ನಿ….
ಕರ್ಕಾಟಕ ರಾಶಿ: ಅಧಿಕ ಮಾಸದಲ್ಲಿ ಕರ್ಕಾಟಕ ರಾಶಿಯವರು ಕೊಂಚ ಜಾಗರೂಕರಾಗಿರಬೇಕು. ನಿಮ್ಮ ಮನಸ್ಸು ನಿಮ್ಮ ಹತೋಟಿಯಲ್ಲಿರುವುದಿಲ್ಲ, ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸಿ. ಕೆಲಸದ ಜಾಗದಲ್ಲಿ ಒತ್ತಡ ಇರುತ್ತದೆ. ನೀವು ಕಷ್ಟಗಳನ್ನು ಎದುರಿಸಬೇಕಾಗಬಹುದು. ಪರಿಶ್ರಮ ಮಾಡಿದರೆ ನೀವು ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳನ್ನು ಕಾಣಲಿದ್ದೀರಿ.
ವೃಶ್ಚಿಕ ರಾಶಿ: ಈ ರಾಶಿಯವರು ಎಷ್ಟೇ ಪರಿಶ್ರಮ ಪಟ್ಟರೂ ಸಹ ಫಲಗಳನ್ನು ಕಾಣುವುದಿಲ್ಲ. ಕೆಲಸದ ಜಾಗದಲ್ಲಿ ಬಹಳ ಒತ್ತಡ ಇರುತ್ತದೆ. ಯಾವುದೇ ಕೆಲಸ ಮಾಡಿದರೂ ತೊಂದರೆಗಳನ್ನು ಎದುರಿಸಬೇಕಾಗಬಹುದು. ಅನಗತ್ಯ ಚರ್ಚೆಗಳನ್ನು ತಪ್ಪಿಸಿ. ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿ.
ಮಕರ ರಾಶಿ: ಯಾವುದೇ ಹೊಸ ಕೆಲಸ ಮಾಡುವ ಮುನ್ನ ಹಲವು ಬಾರಿ ಯೋಚಿಸಿ. ನೀವು ಮಾಡುವ ಪ್ರತಿ ಕೆಲಸದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಮನಸ್ಸು ಬಹಳ ಚಂಚಲವಾಗಿ ಉಳಿಯುವ ಸಾಧ್ಯತೆ ಇದೆ. ಇಲ್ಲ ಸಲ್ಲದ ವಿಷಯಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಪೋಷಕರ ಆರೋಗ್ಯದ ಬಗ್ಗೆ ಕೊಂಚ ಗಮನ ಹರಿಸಿ.
ಕುಂಭ ರಾಶಿ: ನಿಮ್ಮ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ಕಾಣಬಹುದು. ನಿಮ್ಮ ಅಧಿಕಾರಿಗಳ ಜೊತೆಗೆ ಹಾಗೆ ನಿಮ್ಮ ಸ್ನೇಹಿತರ ಜೊತೆಗೆ ಅನಗತ್ಯ ಚರ್ಚೆಗಳನ್ನು ತಪ್ಪಿಸಿ, ಇಲ್ಲವಾದರೆ ಇದರಿಂದ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಜೀವನವು ಬಹಳ ನೋವಿನಿಂದ ಕೂಡಿರುತ್ತದೆ, ಏನೇ ಆದರೂ ಧೈರ್ಯ ಕಳೆದುಕೊಳ್ಳಬೇಡಿ.
ಮೀನಾ ರಾಶಿ: ನಿಮ್ಮ ಮಾತಿನ ಮೇಲೆ ನಿಗಾ ಇರಲಿ, ನಿಮ್ಮ ಕಠೋರ ಮಾತಿನ ಕಾರಣದಿಂದ ನೀವು ತೊಂದರೆಗಳಿಗೆ ಸಿಲುಕುವ ಸಾಧ್ಯತೆ ಇದೆ. ಕುಟುಂಬದಲ್ಲಿ ಅನಗತ್ಯ ಚರ್ಚೆಗಳಿಂದ ಕೊಂಚ ದೂರ ಉಳಿಯಲು ಪ್ರಯತ್ನಿಸಿ. ನಿಮ್ಮ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಕೊಂಚ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.