ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಅವರು ತಿನ್ನುವ ಆಹಾರ ಪದ್ಧತಿಯಲ್ಲಿ ಸರಿಯಾದ ಕ್ರಮ ಇಲ್ಲದ ಕಾರಣ ಸರಿಯಾದ ಸಮಯಕ್ಕೆ ತಿಂದ ಆಹಾರ ಜೀರ್ಣ ಆಗುವುದಿಲ್ಲ ಜೊತೆಗೆ ಗ್ಯಾಸ್ಟಿಕ್ ಸಮಸ್ಯೆ ಇನ್ನೂ ಕೆಲವರಿಗೆ ಅವರ ತಿಂದ ಆಹಾರ ಅಲ್ಲಿಯ ವಾಮಿಟ್ ಆಗುತ್ತದೆ ಈಗ ನಾನಾ ರೀತಿಯ ಜಂಕ್ ಫುಡ್ ಗಳನ್ನು ತಿನ್ನುವುದರಿಂದ ನಾನಾ ರೀತಿಯ ಅಜೀರ್ಣ ಸಮಸ್ಯೆ ಹೊಟ್ಟೆ ಉಬ್ಬರ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಎಲ್ಲಾ ಮನುಷ್ಯರಿಗೂ ಸಾಮಾನ್ಯ ಎಂದು ಹೇಳಿದರೆ ನಿಜಕ್ಕೂ ತಪ್ಪಾಗುವುದಿಲ್ಲ.
ಹಾಗಾದರೆ ಇಂತಹ ಕಾಯಿಲೆಗಳಿಗೆ ಕೆಮಿಕಲ್ ಗಳ ಮೊರೆ ಹೋಗದೆ ಮನೆಯಲ್ಲಿಯೇ ಔಷಧಿ ತಯಾರು ಮಾಡಿಕೊಳ್ಳಬೇಕು ಎಂದು ಇಲ್ಲಿ ಸಂಪೂರ್ಣವಾಗಿ ನೀವು ತಿಳಿದುಕೊಳ್ಳಿ. ಮೊದಲಿಗೆ ನೀವು ಒಂದು ಬಾಂಡಲಿಯಲ್ಲಿ ಜೀರಿಗೆಯನ್ನು ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಬೇಕು. ಅದು ಚೆನ್ನಾಗಿ ಸಿಡಿದು ಆದಮೇಲೆ ನೀವು ಹೊಲೆಯ ಉರಿಯನ್ನು ಕಡಿಮೆ ಮಾಡಿ ಅದಕ್ಕೆ ನೀರನ್ನು ಸೇರಿಸಿ ಒಂದು ಗ್ಲಾಸ್ ನೀರಿಗೆ ಒಂದು ಚಮಚದಷ್ಟು ಜೀರಿಗೆ ಹಾಕಿಕೊಳ್ಳಿ.
ನಂತರ ಜೀರಿಗೆ ಮತ್ತು ನೀರನ್ನು ಒಂದು ಐದು ನಿಮಿಷಗಳ ತನಕ ಚೆನ್ನಾಗಿ ಕುದಿಸಬೇಕು. ಈ ಜೀರಿಗೆ ಕಷಾಯ ಎಲ್ಲಾ ತರಹದ ಹೊಟ್ಟೆ ನೋವು, ಒಬ್ಬರ ಹಾಗೂ ಅಜೀರ್ಣ ಸಮಸ್ಯೆಗೆ ಬಹಳ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ಉಷ್ಣ ಅಜೀರ್ಣ ಹಾಗೂ ಹೊಟ್ಟೆ ಉಬ್ಬರದಿಂದ ನಿಮ್ಮ ಹೊಟ್ಟೆ ಹಾಳಾಗಿದ್ದರೆ ಆಗ ನೀವು ಜೀರಿಗೆ ಕಷಾಯವನ್ನು ಮಾಡಿಕೊಂಡು ಕುಡಿದರೆ ನಿಮಗೆ ಅನುಕೂಲವಾಗುತ್ತದೆ.
ನೀವು ನಂತರ ಒಲೆ ಕೆಡಿಸಿ ಒಂದು ನಿಮಿಷಗಳ ಕಾಲ ಹಾಗೆ ಬಿಟ್ಟರೆ ಜೀರಿಗೆ ಮತ್ತು ನೀರು ಬೇರೆ ಬೇರೆ ಆಗುತ್ತದೆ. ನಂತರ ನೀವು ಮೇಲೆ ಇರುವ ಕಷಾಯವನ್ನು ತೆಗೆದುಕೊಂಡು ಒಂದು 3 ಲೋಟಕ್ಕೆ ಹಾಕಿಕೊಳ್ಳಿ. 3 ಲೋಟಕ್ಕೆ ಯಾಕೆ ಎಂದರೆ ಇದನ್ನು ಮೂರು ರೀತಿಯಾಗಿ ಕುಡಿಯಬಹುದು. ಮೊದಲನೆಯ ಲೋಕಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿ ಕುಡಿದರೆ ಹೊಟ್ಟೆಯಲ್ಲಿರುವ ಅಜೀರ್ಣ ಸಮಸ್ಯೆ ಹಾಗೂ ಗ್ಯಾಸ್ ಸಮಸ್ಯೆ ಅದಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತದೆ.
ಎರಡನೇ ಲೋಟಕ್ಕೆ ಸ್ವಲ್ಪ ಬೆಣ್ಣೆ ಹಾಕಿ ಕುಡಿದರೆ ಉಷ್ಣ ವಾಯು ಆಗಿರುತ್ತದೆ ಜೊತೆಗೆ ಮೋಶನ್ ಸರಿಯಾಗಿ ಹೋಗುತ್ತಿರುವುದಿಲ್ಲ ಹೀಗಾಗಿ ಬೆಣ್ಣೆ ಹಾಕಿ ಕುಡಿದರೆ ಅದು ಸಹ ನಿಮಗೆ ಸಂಪೂರ್ಣವಾಗಿ ನಿಂತು ಹೋಗುತ್ತದೆ. ಇನ್ನು ಕೊನೆಯ ಲೋಟ ಅಂದರೆ 3ನೇ ಲೋಟಕ್ಕೆ ಸ್ವಲ್ಪ ಹಾಲನ್ನು ಸೇರಿಸಿ ಕುಡಿಯಿರಿ ಇದರಿಂದ ನಿಮಗೆ ಇರುವ ಸೊಂಟ ನೋವು ಅಥವಾ ದೇಹದ ಅಧಿಕ ಉಷ್ಣ ಸಮಸ್ಯೆ ಎಲ್ಲವೂ ಕೂಡ ನಿಮಗೆ ನಿವಾರಣೆ ಆಗುತ್ತದೆ.