Daily Horoscope: ಇಂದು ಗುರು ಪೂರ್ಣಿಮಾ ಇಂದಿನ ದಿನ ಯಾವೆಲ್ಲಾ ರಾಶಿಗಳಿಗೆ ಯಾವೆಲ್ಲ ಫಲಗಳು ದೊರೆಯಲಿದೆ ತಿಳಿಯಿರಿ!!
Daily Horoscope: Today is Guru Purnima, know which zodiac signs will get what results!!
ಮೇಷ ರಾಶಿ: ಇಂದಿನ ದಿನ ನಿಮ್ಮ ಆರ್ಥಿಕ ಪರಿಸ್ಥಿತಿ ಬಹಳ ಅದ್ಭುತವಾಗಿರಲಿದೆ. ಇನ್ನು ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆಗಳಿಂದ ಸಹ ಇಂದು ನೀವು ಕೊಂಚ ಮುಕ್ತಿ ಪಡೆಯುತ್ತೀರಿ. ಇನ್ನು ಇಂದಿನ ದಿನ ಕೊಂಚ ಸಮಯ ನಿಮಗಾಗಿ ಮೀಸಲಿಡಿ. ಹಾಗೆ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಸಹ ಘಮನ ಹರಿಸಿ, ಈ ಮೂಲಕ ನೀವು ಯಶಸ್ಸನ್ನು ಕಾಣುತ್ತೀರಿ. ಇನ್ನು ನಿಮ್ಮ ವೈವಾಹಿಕ ಜೀವನದಲ್ಲಿ ಸಹ ಇಂದು ನೀವು ಸಂತೋಷವನ್ನು ಕಾಣಲಿದ್ದೀರಿ.
ವೃಷಭ ರಾಶಿ: ಇಂದಿನ ದಿನ ನೀವು ಯಾವುದೇ ಕೆಲಸ ಮಾಡುವ ಮೊದಲು ನಿಮ್ಮ ಆಪ್ತರ ಅಥವಾ ಹಿರಿಯರ ಸಲಹೆ ಪಡೆದು ನಂತರ ಕೆಲಸಕ್ಕೆ ಕೈ ಹಾಕುವುದು ಒಳ್ಳೆಯದು. ಇನ್ನು ನಿಮ್ಮ ಕುಟುಂಬಸ್ಥರ ಅಗತ್ಯಗಳನ್ನು ನೀವು ಪೂರೈಸಬೇಕಾಗಿರುತ್ತದೆ. ಹಾಗೆ ಇಂದಿನ ದಿನ ಮ್ಯೂಚುವಲ್ ಫಂಡ್ಸ್ ಅಥವಾ ಶೇರ್ಸ್ ನಲ್ಲಿ ನೀವು ಹಣ ಹೂಡಿಕೆ ಮಾಡಿದರೆ ಮುಂದಿನ ದಿನಗಳಲ್ಲಿ ನಿಮಗೆ ಲಾಭದಾಯಕವಾಗಿರಲಿದೆ.
ಮಿಥುನ ರಾಶಿ: ನೀವು ಯಾವುದಾದರೂ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಅದರ ಬಗ್ಗೆ ಸಂಪೂರ್ಣವಾಗಿ ತಿಳಿದು ನಂತರ ಅದರ ಬಗ್ಗೆ ಸರಿಯಾಗಿ ಚರ್ಚಿಸಿ ನಂತರ ಹೂಡಿಕೆ ಮಾಡುವುದು ಉತ್ತಮ. ಇನ್ನು ಸಂಜೆಯ ವೇಳೆ ನಿಮ್ಮ ಸ್ನೇಹಿತರೊಂದಿಗೆ ಬಹಳ ಸಂತೋಷವಾದ ಸಮಯವನ್ನು ಕಳೆಯುತ್ತಿರಿ. ಇನ್ನು ನಿಮ್ಮ ಬಗ್ಗೆ ನೀವೇ ಕೊಂಚ ಯೋಚಿಸಿ, ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಇದು ಬಹಳ ಉತ್ತಮವಾದ ದಿನ.
ಕರ್ಕಾಟಕ ರಾಶಿ: ನಿಮ್ಮ ಸಂಗಾತಿಯ ನಿಷ್ಕಲ್ಮಶ ಮನಸ್ಸು ನೋಡಿ ನೀವು ಬಹಳ ಸಂತೋಷ ಪಡುತ್ತೀರಿ. ಇಂದಿನ ದಿನ ನಿಮ್ಮ ಆರ್ಥಿಕ ಪರಿಸ್ಥಿತಿ ಅಷ್ಟು ಲಾಭದಾಯಕವಾಗಿಲ್ಲ, ಹೀಗಾಗಿ ಹಣದ ವಿಷಯದಲ್ಲಿ ಕೊಂಚ ಎಚ್ಚರಿಕೆ ವಹಿಸುವುದು ಉತ್ತಮ. ಇನ್ನು ವಾಹನ ಚಾಲನೆ ಮಾಡುವಾಗ ಕೊಂಚ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಇನ್ನು ನೀವು ಅರ್ಧಕ್ಕೆ ನಿಲ್ಲಿಸಿದ್ದ ನಿಮ್ಮ ಎಲ್ಲಾ ಕೆಲಸಗಳನ್ನು ಇಂದು ಪೂರ್ಣಗೊಳಿಸುತ್ತೀರಿ.
ಸಿಂಹ ರಾಶಿ: ನಿಮ್ಮ ಬುದ್ಧಿ ಶಕ್ತಿಯನ್ನು ಉಪಯುಕ್ತ ಕೆಲಸಗಳಲ್ಲಿ ಬಳಸುವ ಮೂಲಕ ನೀವು ನಿಮ್ಮ ಗುರಿಯನ್ನು ಸಾಧಿಸುತ್ತೀರಿ. ನೀವು ಸಾಕಷ್ಟು ಹಣವನ್ನು ಖರ್ಚು ಮಾಡಿದ್ದರೆ, ಇಂದು ಅದರಿಂದ ತೊಂದರೆಯನ್ನು ಅನುಭವಿಸುತ್ತೀರಿ. ಇಂದು ನಿಮಗೆ ಹಣದ ಅಗತ್ಯ ಇದ್ದರೂ ಸಹ ನಿಮಗೆ ಹಣ ದೊರಕುವುದಿಲ್ಲ. ಇನ್ನು ನಿಮ್ಮ ಮಾನಸಿಕ ಸ್ಥಿತಿ ಸಹ ಇಂದು ಅಷ್ಟಾಗಿ ಚೆನ್ನಾಗಿರುವುದಿಲ್ಲ.
ಕನ್ಯಾ ರಾಶಿ: ಸಂಕಷ್ಟದ ಸಮಯದಲ್ಲಿ ನಿಮ್ಮ ಸಹಾಯಕ್ಕೆ ಕೇವಲ ನೀವು ಸಂಗ್ರಹಿಸಿರುವ ಹಣ ಮಾತ್ರ ಉಪಯೋಗಕ್ಕೆ ಬರುತ್ತದೆ, ಅನಗತ್ಯವಾಗಿ ಹಣ ಖರ್ಚು ಮಾಡದೆ, ಹಣವನ್ನು ಉಳಿಸಲು ನೋಡಿ. ಇಂದು ನಿಮ್ಮ ಎಲ್ಲಾ ಕೆಲಸದ ಒತ್ತಡಗಳಿಂದ ಕೊಂಚ ವಿಶ್ರಾಂತಿ ಸಿಗುತ್ತದೆ. ಹೊಸ ಉದ್ಯಮವನ್ನು ಶುರು ಮಾಡುವ ಯೋಚನೆಯಲ್ಲಿದ್ದರೆ, ಇಂದಿನ ದಿನ ಬಹಳ ಒಳ್ಳೆಯದು. ಇಂದು ನಿಮ್ಮ ಸಂಗಾತಿಯ ಜೊತೆಗೆ ಕೊಂಚ ಪ್ರೀತಿಯ ಸಮಯವನ್ನು ಕಳೆಯುತ್ತಿರಿ.
ತುಲಾ ರಾಶಿ: ಇಂದಿನ ದಿನ ಕೆಲಸದ ಒತ್ತಡ ತುಂಬಾ ಇರುತ್ತದೆ, ಆದರೆ ಅದಕ್ಕಿಂತ ಮೊದಲು ಮುಖ್ಯವಾದದ್ದು ನಿಮ್ಮ ಆರೋಗ್ಯ ಎನ್ನುವುದನ್ನು ಮರೆಯಬೇಡಿ. ಇನ್ನು ಇಂದಿನ ನಿಮ್ಮ ಆರ್ಥಿಕ ಪರಿಸ್ಥಿತಿ ಬಹಳ ಚೆನ್ನಾಗಿದೆ. ನೀವು ಯಾರಿಗಾದರೂ ಸಾಲ ನೀಡಿದ್ದರೆ, ಇಂದು ಆ ಹಣವನ್ನು ನೀವು ಮರಳಿ ಪಡೆಯುವ ಸಾಧ್ಯತೆ ಇದೆ. ನಿಮ್ಮ ಪ್ರೀತಿಪಾತ್ರರಿಗೆ ಕೊಂಚ ಸಮಯ ಕೊಡುವ ಮೂಲಕ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.
ವೃಶ್ಚಿಕ ರಾಶಿ: ಇಂದಿನ ರಾತ್ರಿ ವೇಳೆ ನೀವು ಹಣವನ್ನು ಪಡೆಯುವ ಸಾಧ್ಯತೆ ಇದೆ. ಬೇಡದ ವಿಷಯಕ್ಕೆ ಇಂದು ನೀವು ಜನರ ಜೊತೆಗೆ ವಾದ ಮಾಡಿಕೊಳ್ಳುವ ಹೆಚ್ಚಿನ ಸಾಧ್ಯತೆ ಕಂಡು ಬರುತ್ತದೆ. ಇದೇ ಕಾರಣದಿಂದ ನಿಮ್ಮ ಆಪ್ತರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಇನ್ನು ಯಾವುದಾದರೂ ಹೊಸ ವ್ಯಾಪಾರದಲ್ಲಿ ಹೂಡಿಕೆ ಮಾಡುವ ಮುನ್ನ ಬಹಳಷ್ಟು ಬಾರಿ ಯೋಚಿಸಿ ನಂತರ ಕೈ ಹಾಕುವುದು ಉತ್ತಮ. ಇನ್ನು ಕುಟುಂಬದಲ್ಲಿ ಇಂದು ಪಂಚ ಕಿರಿಕಿರಿ ಕಾಣಲಿದ್ದು ಅದರ ಕಡೆ ಕೊಂಚ ಗಮನಹರಿಸಬೇಕಾಗುತ್ತದೆ.
ಧನಸ್ಸು ರಾಶಿ: ನೀವು ಅಂದುಕೊಂಡಂತೆ ಇಂದು ನಿಮ್ಮ ಎಲ್ಲಾ ಕೆಲಸಗಳು ನಡೆಯಲಿದೆ. ನಿಮ್ಮ ಎಲ್ಲಾ ಆಸೆ ಆಕಾಂಕ್ಷಿಗಳು ಇಂದಿನ ದಿನ ಈಡೇರಲಿದೆ. ಇನ್ನು ಹಣಕಾಸಿನ ವಿಷಯದಲ್ಲಿ ಇಂದು ಬೇಡದ ವಸ್ತುಗಳನ್ನು ಖರೀದಿಸುವ ಮೂಲಕ ಅನಗತ್ಯವಾಗಿ ನಿಮ್ಮ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ. ಇನ್ನು ಅತಿ ಉತ್ಸಾಹದ ಮೂಲಕ ನೀವು ಸಂಕಷ್ಟದಲ್ಲಿ ಸಿಲುಕಿ ಕೊಳ್ಳುವ ಸಾಧ್ಯತೆ ಇದೆ.
ಮಕರ ರಾಶಿ: ನಿಮ್ಮ ಪ್ರೀತಿ ಪಾತ್ರರೊಂದಿಗೆ ಇಂದು ನೀವು ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ. ಇನ್ನು ನೀವು ಕೈಗೊಂಡಿರುವ ಉದ್ಯೋಗ ಕೆಲಸಗಳಲ್ಲಿ ಇಂದು ನೀವು ಒಳ್ಳೆಯ ಯಶಸ್ಸು ಕಾಣಲಿದ್ದೀರಿ. ಇನ್ನು ನೀವು ಯಾವುದೇ ಕೆಲಸ ಮಾಡುವ ಮೊದಲು ಹಿರಿಯರ ಒಪ್ಪಿಗೆ ತೆಗೆದುಕೊಳ್ಳುವುದು ಉತ್ತಮ. ಇನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಕೊಂಚ ದೂರು ಇರುವುದು ಉತ್ತಮ.
ಕುಂಭ ರಾಶಿ: ನೀವು ಸಂತೋಷವಾಗಿದ್ದರೆ, ನಿಮ್ಮ ಸುತ್ತ ಮುತ್ತಲಿನ ಜನರು ಸಹ ಸಂತೋಷವಾಗುತ್ತಾರೆ. ಇನ್ನು ವ್ಯಾಪಾರದಲ್ಲಿ ಇಂದು ನೀವು ಬಹಳ ದೊಡ್ಡ ಲಾಭವನ್ನು ಪಡೆಯಲಿದ್ದಿರಿ. ಇನ್ನು ನಿಮ್ಮ ಆರ್ಥಿಕ ಸಮಸ್ಯೆಗಳು ಸಹ ಪರಿಹಾರವಾಗಲಿದೆ. ಇಂದು ನಿಮಗೆ ಸಾಕಷ್ಟು ಉಚಿತ ಸಮಯ ಸಿಗುತ್ತದೆ, ಈ ಸಮಯವನ್ನು ನಿಮ್ಮ ಭವಿಷ್ಯದ ಏಳಿಗೆಗಾಗಿ ಬಳಸಿ. ಮುಂದಿನ ದಿನಗಳಲ್ಲಿ ನೀವು ಅಂದುಕೊಂಡದ್ದನ್ನು ಸಾಧಿಸುತ್ತೀರಿ.
ಮೀನಾ ರಾಶಿ: ಯಾವುದೇ ಕಾರಣಕ್ಕೂ ಕೋಪಕ್ಕೆ ನಿಮ್ಮ ಬುದ್ಧಿಯನ್ನು ಕೊಡಬೇಡಿ, ಇದು ನಿಮ್ಮ ಸಂಬಂಧಗಳನ್ನು ಕೆಡಿಸುತ್ತದೆ. ಇನ್ನು ಸಾಂಪ್ರದಾಯಿಕವಾದ ಹೂಡಿಕೆಗಳಲ್ಲಿ ಹೂಡಿಕೆ ಮಾಡುವುದರಿಂದ ಲಾಭ ಪಡೆಯುತ್ತೀರಿ. ಸಂಬಂಧಿಕರು ಹಾಗೆ ಸ್ನೇಹಿತರಿಂದ ಇಂದು ಅನಿರೀಕ್ಷಿತ ಉಡುಗೊರೆಗಳನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ವೈಮನಸನ್ನು ಮರೆತು ಇಂದು ನಿಮ್ಮ ಪ್ರೀತಿ ಪಾತ್ರರೊಂದಿಗೆ ಒಂದಾಗುತ್ತೀರಿ.