ಕೆಲ ಸ್ಟಾರ್ ನಟಿಯರು ತುಂಬಾ ವಯಸ್ಸು ಆಗಿದ್ದರೂ ಕೂಡ ಇನ್ನೂ ಮದುವೆ ಆಗದೆ ಏಕಾಂಗಿ ಜೀವನವನ್ನು ನಡೆಸುತ್ತಿದ್ದಾರೆ. ಅಂತಹ ನಟಿಯರು ಯಾರು ಎಂದು ತಿಳಿದುಕೊಳ್ಳೋಣ ಬನ್ನಿ..
ನಟಿ ಸಿತಾರಾ ಅವರು ಜೂನ್ 30 1973 ರಂದು ಜನಿಸಿದರು. ಇವರ ತಂದೆಯ ಹೆಸರು ಎ ಆರ್ ಪರಮೇಶ್ವರನ್ ನಾಯರ್ ಮತ್ತು ತಾಯಿಯ ಹೆಸರು ವಲ್ಸಲ ನಾಯರ್. ಇನ್ನೂ ಸಿತಾರಾ ಅವರು 1989 ರಲ್ಲಿ ಬಿಡುಗಡೆಯಾದ ತಮಿಳಿನ ಪುದು ಪುದು ಅರ್ಥಾಂಗಲ್ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಜೀವನವನ್ನು ಶುರು ಮಾಡಿದರು. ಇವರಿಗೆ ಈಗ 48 ವರ್ಷಗಳಾಗಿವೆ. ಆದರೆ ಕೆಲ ಕಾರಣಾಂತರಗಳಿಂದ ಇವರು ಇನ್ನೂ ವಿವಾಹ ಮಾಡಿಕೊಂಡಿಲ್ಲ.
ನಟಿ ನಗ್ಮಾ ಡಿಸೆಂಬರ್ 25 1974 ರಂದು ಜನಿಸಿದರು. ಇವರ ತಂದೆಯ ಹೆಸರು ಶ್ರೀ ಅರವಿಂದ್ ಪ್ರತಾಪ್ ಸಿಂಗ್ ಮೊರಾರ್ಜಿ ಮತ್ತು ತಾಯಿಯ ಹೆಸರು ಶಮಾ ಕಾಜಿ. ನಗ್ಮಾ ಅವರು 1990 ರಂದು ಹಿಂದಿಯ ಭಾಗಿ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು. ಇವರಿಗೆ ಈಗ 47 ವರ್ಷಗಳಾಗಿದೆ. ಆದರೂ ಇನ್ನೂ ಇವರು ಮದುವೆ ಮಾಡಿಕೊಂಡಿಲ್ಲ.
ನಟಿ ಶೋಭನಾ ಅವರು ಮಾರ್ಚ್ 21 1970 ರಂದು ಜನಿಸಿದ್ದಾರೆ. ಇವರ ತಂದೆಯ ಹೆಸರು ಚಂದ್ರ ಕುಮಾರ್ ಪಿಳ್ಳೈ ಮತ್ತು ತಾಯಿಯ ಹೆಸರು ಆನಂದಮ್ ಚಂದ್ರಕುಮಾರ್. ಶೋಭನಾ ಅವರು 1980 ರಲ್ಲಿ ಬಾಲನಟಿಯಾಗಿ ತಮಿಳಿನಲ್ಲಿ ಮಂಗಳ ನಾಯಗಿ ಎನ್ನುವ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಇನ್ನೂ ಶೋಭನಾ ಅವರಿಗೆ ಈಗ 52 ವರ್ಷಗಳಾಗಿವೆ ಆದರೂ ಕೂಡ ಇವರು ಇನ್ನೂ ಮದುವೆಯಾಗಿಲ್ಲ.
ನಟಿ ಕೌಸಲ್ಯ ಅವರು ಡಿಸೆಂಬರ್ 30 1979 ರಂದು ಜನಿಸಿದರು. ಇವರ ತಂದೆಯ ಹೆಸರು ಶಿವಶಂಕರನ್ ಮತ್ತು ತಾಯಿಯ ಹೆಸರು ಪೂರ್ಣಿಮಾ. ಕೌಸಲ್ಯ ಅವರು 1996 ರಲ್ಲಿ ಮಲಯಾಳಂನಲ್ಲಿ ಏಪ್ರಿಲ್ 19 ಎನ್ನುವ ಚಿತ್ರದ ಮೂಲಕ ಮೊದಲನೆಯದಾಗಿ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದರು. ಕೌಶಲ್ಯ ಅವರಿಗೆ ಈಗ 42 ವರ್ಷಗಳಾಗಿವೆ. ಆದರೆ ಇವರು ಕೂಡ ಇನ್ನೂ ಮದುವೆಯಾಗಿಲ್ಲ.
ನಟಿ ಲಕ್ಷ್ಮಿ ಗೋಪಾಲಸ್ವಾಮಿ ಅವರು ಜನವರಿ 7 1970 ರಂದು ಜನಿಸಿದರು. ಇವರ ತಂದೆಯ ಹೆಸರು ಎಂ ಕೆ ಗೋಪಾಲಸ್ವಾಮಿ ಮತ್ತು ತಾಯಿಯ ಹೆಸರು ಉಮಾ ಗೋಪಾಲಸ್ವಾಮಿ. ಲಕ್ಷ್ಮಿ ಅವರು 2000 ರಲ್ಲಿ ಮಲಯಾಳಂ ಒಂದು ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು. ಇವರಿಗೆ ಈಗ 52 ವರ್ಷಗಳಾಗಿವೆ ಆದರೆ ಇವರು ಮದುವೆ ಮಾಡಿಕೊಳ್ಳದೆ ಏಕಾಂಗಿ ಜೀವನವನ್ನು ನಡೆಸುತ್ತಿದ್ದಾರೆ…..